Relationship Tips : ಒನ್ ಸೈಡೆಡ್‌ ಲವ್‌ನಲ್ಲಿ ಬಿದ್ದಿದ್ದೀರಾ ? ಪಶ್ಚಾತ್ತಾಪ ಪಡ್ಬೇಕಾಗುತ್ತೆ !

By Suvarna News  |  First Published Mar 25, 2022, 7:39 PM IST

ನಾವು ಪ್ರೀತಿ (Love)ಸುವವರಿಗಿಂತ ನಮ್ಮನ್ನು ಪ್ರೀತಿಸುವವರನ್ನು ನಾವು ಇಷ್ಟಪಡ್ಬೇಕಂತೆ. ಅನೇಕ ಬಾರಿ ನಾವೇ ಅತಿಯಾಗಿ ಪ್ರೀತಿ ಮಾಡಿರ್ತೇವೆ. ಆ ಕಡೆಯಿಂದ ಸರಿಯಾದ ಪ್ರತಿಕ್ರಿಯೆ (Response) ಬಂದಿರುವುದಿಲ್ಲ. ಅದನ್ನೇ ಏಕಪಕ್ಷೀಯ ಪ್ರೀತಿ ಅಥವಾ ಒನ್ ಸೈಡೆಡ್‌ ಲವ್ ಎನ್ನುತ್ತೇವೆ. ಆರಂಭದಲ್ಲಿ ಖುಷಿ ನೀಡುವ ಈ ಪ್ರೀತಿ ಕೊನೆಯಲ್ಲಿ ದುಃಖ (Sad) ನೀಡಬಹುದು.


ಪ್ರೀತಿ (Love) ಸುಂದರವಾದ ಭಾವನೆ (Emotion). ಪ್ರೀತಿಯಲ್ಲಿರುವವರಿಗೆ ಮಾತ್ರ ಅದ್ರ ಅಧ್ಬುತ ಅನುಭವವಾಗಿರುತ್ತದೆ. ಪ್ರೀತಿ ಎಲ್ಲವನ್ನೂ ಮರೆಸುವ ಶಕ್ತಿ ಹೊಂದಿದೆ. ಪ್ರೀತಿಸುವ ವ್ಯಕ್ತಿಯೇ ಜೀವನ (Life) ಸಂಗಾತಿಯಾಗಿ ಬಂದಾಗ ಸಂತೋಷ ನೂರುಪಟ್ಟು ಹೆಚ್ಚಾಗುತ್ತದೆ. ಜನರು ಆಗ ಜಗತ್ತು ಮರೆಯುತ್ತಾರೆ. ಸ್ವರ್ಗದಲ್ಲಿ ತೇಲುತ್ತಿರುತ್ತಾರೆ. ಆದ್ರೆ ಎಲ್ಲರ ಬಾಳಲ್ಲೂ ಇದಾಗುವುದಿಲ್ಲ. ಪ್ರೀತಿಸಿದ ವ್ಯಕ್ತಿಯೇ ಜೀವನ ಸಂಗಾತಿಯಾಗಿ ಸಿಗುವುದಿಲ್ಲ. ಇನ್ನೂ ಅನೇಕ ಬಾರಿ ನೀವು ಪ್ರೀತಿಸಿದ ವ್ಯಕ್ತಿ ನಿಮ್ಮನ್ನು ಪ್ರೀತಿಸದೆ ಇರಬಹುದು. ಇದನ್ನು ಏಕಪಕ್ಷೀಯ ಪ್ರೀತಿ ಅಥವಾ ಒನ್ ಸೈಡೆಡ್‌ ಲವ್ ಎನ್ನುತ್ತಾರೆ. ಏಕಪಕ್ಷೀಯ ಪ್ರೀತಿ ಕೇವಲ ಮದುವೆಗಿಂತ ಮೊದಲು ಆಗಬೇಕೆಂದೇನಿಲ್ಲ. ಮದುವೆಯಾದ ಜೋಡಿ ಕೂಡ ಏಕಪಕ್ಷೀಯ ಪ್ರೀತಿಯಲ್ಲಿ ಬಿದ್ದು ಒದ್ದಾಡುತ್ತಿರಬಹುದು. ಏಕಪಕ್ಷೀಯ ಪ್ರೀತಿ ಎಂದ್ರೇನು ? ಏಕಪಕ್ಷೀಯ ಪ್ರೀತಿಯಲ್ಲಿ ಬಿದ್ದವರ ಲಕ್ಷಣವೇನು ಎಂಬುದನ್ನು ನಾವಿಂದು ಹೇಳ್ತೇವೆ.

ಏಕಪಕ್ಷೀಯ ಸಂಬಂಧ ಎಂದರೇನು ? : ಏಕಪಕ್ಷೀಯ ಸಂಬಂಧ ಹೆಸರು ಹೇಳುವಂತೆ ಇದು ಅಸಮತೋಲನದ ಸಂಬಂಧವಾಗಿದೆ. ಇಬ್ಬರು ಸಂಗಾತಿಗಳಲ್ಲಿ ಒಬ್ಬರಿಗೆ ಮಾತ್ರ ಪ್ರೀತಿಯಿರುತ್ತದೆ. ಒಬ್ಬ ವ್ಯಕ್ತಿ ಮಾತ್ರ ಪ್ರೀತಿ ಉಳಿಸಿಕೊಳ್ಳುವ ಪ್ರಯತ್ನ ನಡೆಸುತ್ತಿರುತ್ತಾರೆ. ಇಲ್ಲವೇ ಒಬ್ಬ ವ್ಯಕ್ತಿಯ ನಿಯಂತ್ರಣಕ್ಕೊಳಗಾಗಿರುತ್ತಾರೆ. ಈ ಅಸಮತೋಲನವು ವಿವಿಧ ಕಾರಣಗಳಿಂದ ಉಂಟಾಗಬಹುದು. ಆರೋಗ್ಯಕರ ಸಂಬಂಧಕ್ಕೆ ಇದು ಒಳ್ಳೆಯದಲ್ಲ. ಕೊನೆ ಕೊನೆಗೆ ಇದು ಹಿಂಸೆಯಾಗಲು ಶುರುವಾಗುತ್ತದೆ. 

Tap to resize

Latest Videos

Relationship Tips : ಈ ವಯಸ್ಸಿನಲ್ಲಿ ಸಂಗಾತಿಗೆ ಮೋಸ ಮಾಡ್ತಾರೆ ಹುಡುಗಿಯರು

ಮಾತು ಶುರುವಾಗುವುದೇ ನಿಮ್ಮಿಂದ : ಬೆಳ್ಳಂಬೆಳಿಗ್ಗೆ ಸಂದೇಶ ಕಳುಹಿಸುವುದು, ಊಟವಾಯ್ತಾ? ತಿಂಡಿಯಾಯ್ತಾ ಎಂದು ಕೇಳುವುದ್ರಿಂದ ಹಿಡಿದು ಮನೆಯ ಯಾವುದೇ ವಿಷ್ಯವನ್ನು ಮೊದಲು ಪ್ರಾರಂಭಿಸುವುದು ನೀವಾ? ನಿಮ್ಮ ಸಂಗಾತಿ ಇದ್ರಲ್ಲಿ ಆಸಕ್ತಿ ತೋರುತ್ತಿಲ್ಲವಾ? ಸರ್ಪ್ರೈಸ್ ಗಿಫ್ಟ್, ನೈಟ್ ಪಾರ್ಟಿ ಸೇರಿದಂತೆ ಯಾವುದೇ ಖುಷಿ ನೀಡುವ ಕೆಲಸವನ್ನು ನೀವು ಹೇಳ್ದೆ ನಿಮ್ಮ ಸಂಗಾತಿ ಮಾಡುವುದಿಲ್ಲವಾ? ಹಾಗಿದ್ರೆ ಸ್ವಲ್ಪ ಎಚ್ಚೆತ್ತುಕೊಳ್ಳಿ. ನೀವು ಹಾಗೂ ನಿಮ್ಮ ಸಂಗಾತಿ ದಾರಿ ಬೇರೆ. ನೀವು ಏಕಪಕ್ಷೀಯ ಸಂಬಂಧದಲ್ಲಿದ್ದೀರಿ ಎಂಬ ಅರ್ಥವನ್ನು ಇದು ಕೊಡುತ್ತದೆ. 

ಅವರ ವೇಳಾಪಟ್ಟಿ ಸುತ್ತ ನಿಮ್ಮ ಕೆಲಸ : ನಿಮ್ಮ ಸಂಗಾತಿಗೆ ಊಟದ ಸಮಯದಲ್ಲಿ ಮಾತನಾಡಲು ಇಷ್ಟವಿಲ್ಲ ಎಂಬ ಕಾರಣಕ್ಕೆ ಬೇರೆ ಸಮಯದಲ್ಲಿ ಆತನ ಭೇಟಿಗೆ ಬರ್ತೀರಾ, ಇದಕ್ಕಾಗಿ ನಿಮ್ಮ ಮುಖ್ಯವಾದ ಕೆಲಸವನ್ನು ಬಿಟ್ಟು ಬಂದಿರುತ್ತೀರಾ, ಇಲ್ಲವೆ ನಿಮ್ಮ ಸಂಗಾತಿ ಶುಕ್ರವಾರ ಮನೆಯಲ್ಲಿರ್ತಾರೆ ಎಂಬ ಕಾರಣಕ್ಕೆ ನೀವು ಶುಕ್ರವಾರ ಸ್ನೇಹಿತರ ಭೇಟಿ ಮುಂದೂಡ್ತೀರಾ. ಪ್ರತಿ ಬಾರಿ ನೀವೇ ನಿಮ್ಮ ಸಂಗಾತಿಗಾಗಿ ಎಲ್ಲವನ್ನೂ ಸಹಿಸಿಕೊಳ್ಬೇಕು. ಆದ್ರೆ ಸಂಗಾತಿ ತಮ್ಮ ವೇಳಾಪಟ್ಟಿ ಬಿಟ್ಟು ಬರೋದಿಲ್ಲವೆಂದಾದ್ರೆ ಇದು ಕೂಡ ಏಕಪಕ್ಷೀಯ ಸಂಬಂಧವೇ ಆಗುತ್ತದೆ. ಯಾಕೆಂದ್ರೆ ಒಂದು ಸುಂದರ ಸಂಬಂಧದಲ್ಲಿ ಇಬ್ಬರೂ ಹೊಂದಾಣಿಕೆ ಮಾಡಿಕೊಳ್ಳುವುದು ಅತ್ಯಗತ್ಯ. 

Relationship Tips : ಬೆಸ್ಟ್ ಫ್ರೆಂಡ್ ಪತಿ ಹೀಗೆ ಮಾಡಿದ್ರೆ ಹೇಳೋದ್ಯಾರಿಗೆ ?

ನಿಮ್ಮ ಜೀವನದ ಬಗ್ಗೆ ಅತಿ ಕಡಿಮೆ ಆಸಕ್ತಿ : ಇದನ್ನು ಅನೇಕರು ನಿರ್ಲಕ್ಷ್ಯಿಸುತ್ತಾರೆ. ಆದ್ರೆ ಇದು ಬಹಳ ಮುಖ್ಯವಾದದ್ದು. ಸಾಮಾನ್ಯವಾಗಿ ಸಂಬಂಧದಲ್ಲಿರುವವರು ಪರಸ್ಪರರ ಬಗ್ಗೆ ತಿಳಿದುಕೊಳ್ಳಲು ಬಯಸ್ತಾರೆ. ನಮ್ಮ ಸಂಗಾತಿ ಜೀವನದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲದಲ್ಲಿರುತ್ತಾರೆ. ಆದ್ರೆ ನಿಮ್ಮ ಸಂಗಾತಿ ನಿಮ್ಮ ಬಗ್ಗೆ ನೀವು ಹೇಳ್ತಿದ್ದರೂ ಅದನ್ನು ಸರಿಯಾಗಿ ಕೇಳದೆ ಹೋದ್ರೆ ಅಥವಾ ತನಗೆ ಇದು ಬೇಡ ಎನ್ನುವ ಸ್ಥಿತಿಯಲ್ಲಿದ್ದರೆ ಇದು ಏಕಪಕ್ಷೀಯ ಸಂಬಂಧದ ಸಂಕೇತವಾಗಿರುವ ಸಾಧ್ಯತೆಯಿದೆ.

ಪದೇ ಪದೇ ಕ್ಷಮೆ : ಸಾಮಾನ್ಯವಾಗಿ ಯಾರನ್ನಾದರೂ ಪ್ರೀತಿಸಿದರೆ ನೀವು ಆ ವ್ಯಕ್ತಿಗೆ ಹಲವು ಬಾರಿ ಕ್ಷಮೆ ಕೇಳ್ತೇವೆ. ಪ್ರೀತಿಸಿದ ವ್ಯಕ್ತಿ ಬೇಸರ ಮಾಡಿಕೊಳ್ತಾರೆ ಎಂಬ ಕಾರಣಕ್ಕೆ ತಪ್ಪಿಲ್ಲದೆ ಹೋದ್ರೂ ಕ್ಷಮೆ ಕೇಳ್ತಿರುತ್ತೇವೆ. ಪ್ರೀತಿಯಲ್ಲಿ ನೋವು ಮತ್ತು ಕ್ಷಮೆ ಸಾಮಾನ್ಯ. ಆದ್ರೆ ಎಲ್ಲ ಸಂದರ್ಭದಲ್ಲೂ ನೀವೂ ಕ್ಷಮೆ ಕೇಳುತ್ತಿದ್ದರೆ ಅದು ಸಂಬಂಧ ಹಾಳು ಮಾಡುತ್ತದೆ. ಇಬ್ಬರೂ ತಪ್ಪುಗಳನ್ನು ಒಪ್ಪಿಕೊಂಡು ನಡೆಯಬೇಕು. ಆದ್ರೆ ಒಬ್ಬರು ಮಾತ್ರ ತಪ್ಪುಗಳನ್ನು ಮೈಮೇಲೆ ಹಾಕಿಕೊಳ್ತಿದ್ದರೆ ಅದು ಏಕಪಕ್ಷೀಯ ಪ್ರೀತಿಯಾಗುತ್ತದೆ.

click me!