
ಫೋನ್‌ಪೇನಿಂದ ಅಕ್ರಮ ಸಂಬಂಧ ಇರೋದು ಪತ್ನಿಗೆ ಗೊತ್ತಾಗಿದೆ. ಹೌದು, ದಕ್ಷಿಣ ಚೀನಾದಲ್ಲಿ ಓರ್ವ ವ್ಯಕ್ತಿ ಗರ್ಭನಿರೋಧಕ ಮಾತ್ರೆಗಳಿಗಾಗಿ ಫೋನ್‌ಪೇ ಮಾಡಿದ್ದಾರೆ. ಇದರಿಂದ ಅಫೇರ್ ವಿಷಯ ಬಹಿರಂಗ ಆಗಿದೆ.
ಮೆಡಿಕಲ್ ಶಾಪ್ ಸಿಬ್ಬಂದಿ ಆ ಪುರುಷನ ಪತ್ನಿಯನ್ನು ಕಾಂಟ್ಯಾಕ್ಟ್ ಮಾಡಿದ್ದಾರೆ. ಈ ಘಟನೆಯು ಗುವಾಂಗ್‌ಡಾಂಗ್‌ನ ಯಾಂಗ್‌ಜಿಯಾಂಗ್‌ನಲ್ಲಿರುವ ದಶೆನ್‌ಲಿನ್ ಫಾರ್ಮಸಿಯ ಪಿಂಗ್‌ಗಾಂಗ್ ಶಾಖೆಯಲ್ಲಿ ನಡೆದಿದೆ. ಆ ವ್ಯಕ್ತಿ ಗರ್ಭನಿರೋಧಕ ಮಾತ್ರೆ ತಗೊಂಡು ಹಣವನ್ನು ಫೋನ್‌ಪೇ ಮಾಡಲು ಮುಂದಾಗಿದ್ದಾರೆ. ಆಗ ಅಫೇರ್ ವಿಷಯ ಬಹಿರಂಗ ಆಗಿದೆ. ತಾಂತ್ರಿಕವಾಗಿ ಸಮಸ್ಯೆ ಬಂದಿದ್ದು, ಹಣ ಪಾವತಿ ಆಗಿಲ್ಲ. ಆ ವ್ಯಕ್ತಿ ಶಾಪ್‌ನಿಂದ ಹೊರಗಡೆ ಹೋಗಿದ್ದಾರೆ. ಆದರೆ ಆ ವ್ಯಕ್ತಿಯ ಮೇಂಬರ್‌ಶಿಪ್ ಕಾರ್ಡ್‌ನಿಂದ ಫೋನ್ ನಂಬರ್ ಗೊತ್ತಾಗಿದ್ದು, ಆ ಫೋನ್‌ಗೆ ಫಾರ್ಮಸಿಯವರು ಕರೆ ಮಾಡಿದ್ದಾರೆ. ಆಗ ಪತ್ನಿ ರಿಸೀವ್ ಮಾಡಿದ್ದಾರೆ.
ನನ್ನ ಗಂಡ ಏನು ಖರೀದಿ ಮಾಡಿದ್ದಾರೆ? ಎಷ್ಟಾಗಿದೆ ಅಂತೆಲ್ಲ ಪತ್ನಿಯು ವಿಚಾರಿಸಿದ್ದಾಳೆ. ಆಗ ಅದು ಗರ್ಭನಿರೋಧಕ ಮಾತ್ರೆಗಳು ಎಂದು ಸ್ಪಷ್ಟವಾಗಿ ಗೊತ್ತಾಗಿದೆ. ಆಗ ಗಂಡನಿಗೆ ಅಫೇರ್ ಇರೋದು ಗೊತ್ತಾಗಿದೆ. ಆ ದಂಪತಿ ಮದುವೆಯಾಗಿ ಎಷ್ಟು ವರ್ಷ ಆಗಿದೆ? ಲವ್ ಮ್ಯಾರೇಜ್? ಅರೇಂಜ್ ಮ್ಯಾರೇಜ್ ಎಂಬ ಬಗ್ಗೆಯೂ ಮಾಹಿತಿ ಬಹಿರಂಗವಾಗಿಲ್ಲ.
ಫಾರ್ಮಸಿಯಿಂದ ನನ್ನ ಅಫೇರ್ ಗೊತ್ತಾಗಿ, ವೈವಾಹಿಕವಾಗಿ ಸಮಸ್ಯೆ ಆಗಿದೆ. "ಈಗ ನನ್ನ ಪತ್ನಿಗೆ ನನ್ನ ಅಫೇರ್ ಗೊತ್ತಾಗಿದೆ, ಎರಡು ಕುಟುಂಬಗಳಿಗೂ ಬೇಸರ ಆಗಿದೆ. ನಿಮ್ಮ ಫಾರ್ಮಸಿ ಇದರ ಜವಾಬ್ದಾರಿಯನ್ನು ಹೊರುತ್ತದೆಯಾ?" ಎಂದು ಆ ಪುರುಷ ಸಿಟ್ಟಾಗಿದ್ದಾನೆ.
ಗುಳಿಗೆ ಖರೀದಿ ಮಾಡಿದ್ದು, ಫಾರ್ಮಸಿ ಜೊತೆಗೆ ಪತ್ನಿ ಮಾತನಾಡಿದ್ದನ್ನು ಕೂಡ ಆತ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾನೆ. ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳೋದು ತುಂಬ ಕಷ್ಟ. ಒಂದು ವೇಳೆ ಆ ಪುರುಷನ ಖಾಸಗಿತನವನ್ನು ಮೆಡಿಕಲ್ ಶಾಪ್ ಬಹಿರಂಗ ಮಾಡಿದ್ದರೆ ಕಾನೂನು ಕ್ರಮ ಕೈಗೊಳ್ಳಬೇಕು.
ಕಾನೂನು ಕ್ರಮ ಕೈಗೊಳ್ಳಲು ಬಯಸಿದರೆ, ಫಾರ್ಮಸಿಯು ಮಾಹಿತಿ ಬಹಿರಂಗಪಡಿಸುವುದು, ಮದುವೆ ಮುರಿಯೋದರ ಹಿಂದಿನ ನಡುವೆ ಸಂಬಂಧ ಇರೋದನ್ನು ಸಾಕ್ಷ್ಯ ಸಮೇತ ಹೇಳಬೇಕಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.