
ಮದುವೆ (Marriage) ಎಂದರೆ ಈಗಂತೂ ಬರೀ ಸೆಲೆಬ್ರೇಷನ್ (Celebration). ಮದುವೆ ಡೇಟ್ ಫಿಕ್ಸ್ ಆದಾಗಿನಿಂದ ಹಿಡಿದು, ಮದುವೆಯಾಗುವವರೆಗೂ ಒಂದಲ್ಲ ಒಂದು ರೀತಿಯ ಸಂಭ್ರಮ. ಜತೆಯಾಗಿ ಓಡಾಡುವುದು, 'ಇನ್ನು ನಿನ್ನ ಲೈಫ್ (Life)ನಿನ್ ಕೈಲಿರಲ್ಲ’ ಎಂದು ಸ್ನೇಹಿತರು ರೇಗಿಸಿದ್ರೂ ಖುಷಿ ಪಡುವುದು, ಅಲ್ಲಿ ಇಲ್ಲಿ ಬಟ್ಟೆ, ಅದೂ ಇದೂ ಖರೀದಿ, ಜತೆಯಾಗಿ ಫ್ರೆಂಡ್ಸ್ ಇನ್ವೈಟ್ (Invite) ಮಾಡುವುದು.. ಹೀಗೆ ದಿನಗಳು ಸರಿಯುವುದೇ ಗೊತ್ತಾಗುವುದಿಲ್ಲ. ಅತ್ತೆ (Mother-in-Law) ಮನೆಯ ಬಗ್ಗೆ ಆತಂಕವಿದ್ದರೂ ಗಂಡನ ಮೇಲಿನ ನಿರೀಕ್ಷೆಯಿಂದಾಗಿ ಹುಡುಗಿ (Girl) ಖುಷಿಯಲ್ಲಿರುತ್ತಾಳೆ.
ಮದುವೆಯೂ ಆಗಿ, ಹನಿಮೂನ್ (Honeymoon) ಕಾಲವೂ ಮುಗಿದ ಬಳಿಕ ಜೀವನ ನಿಜವಾದ ಹಂತಕ್ಕೆ ಬಂದಿರುತ್ತದೆ. ದೈನಂದಿನ ಬದುಕು, ಕೆಲಸಕಾರ್ಯಗಳು ಕೈ ಬೀಸಿ ಕರೆಯುತ್ತವೆ. ಅವರ ಕೆಲಸ ಅವರಿಗೆ ಎನ್ನುವ ಕಾಲದಲ್ಲಿ ಪರಸ್ಪರ ಆತ್ಮೀಯವಾಗಿರಲೂ ಸಮಯ ಸಾಲದೆ ತೊಳಲಾಡುವಂತಾಗುತ್ತದೆ. ಇದೇ ಅವಧಿಯಲ್ಲಿ ಪರಸ್ಪರ ವಿಶ್ವಾಸವಿಲ್ಲದೆ ಹೋದರೆ ಅಭದ್ರತೆ (Insecurity) ಹೆಚ್ಚಾಗುತ್ತದೆ. ಕಚ್ಚಾಟ ಶುರುವಾಗುತ್ತದೆ. 'ಜೀವನ ಇಷ್ಟೇನಾ’ ಎನ್ನಿಸಲು ಆರಂಭವಾಗುತ್ತದೆ. ಈ ಹಂತದಲ್ಲಿ ವಿಚ್ಛೇದನ(Divorce) ಕ್ಕೆ ಮೊರೆ ಹೋಗುವವರ ಸಂಖ್ಯೆ ಹೆಚ್ಚು.
ಹೌದು, ಮದುವೆಯಾದ ಎರಡು-ಮೂರು ತಿಂಗಳಲ್ಲಿ ಬಹಳಷ್ಟು ಜನರಿಗೆ ತಮ್ಮ ಜೀವನ ಮೊದಲಿನಂತಿಲ್ಲ ಎನ್ನುವ ಹಳಹಳಿಕೆ ಶುರುವಾಗುತ್ತದೆ. ಮೊದಲಿನ ಸ್ವಾತಂತ್ರ್ಯ, ಯಾರ ಹಂಗಿಲ್ಲದೆ ಸುತ್ತಾಡಿದ್ದ ದಿನಗಳನ್ನು ಹುಡುಗಿಯರು ಮಿಸ್ ಮಾಡಿಕೊಳ್ಳುತ್ತಾರೆ. ಎಲ್ಲಕ್ಕಿಂತ ಮಿಗಿಲಾಗಿ, ಅಡುಗೆ ಮನೆಯ ಸಹವಾಸವೂ ಆರಂಭವಾಗಿ, 'ಸಾಕಪ್ಪಾ ಸಾಕು’ ಎನ್ನುವಂತಾಗುತ್ತದೆ. ಹೀಗಾಗಿ, ಮದುವೆಯಾದ ನಾಲ್ಕು ತಿಂಗಳೊಳಗೆ ಡಿವೋರ್ಸ್ ಗೆ ಅರ್ಜಿ ಹಾಕುವವರ ಸಂಖ್ಯೆ ಹೆಚ್ಚಾಗುತ್ತಿವೆ. ಇಂಥ ಸಮಸ್ಯೆ ಭಾರತದಲ್ಲಿ ಮಾತ್ರ ಎನ್ನುವಂತಿಲ್ಲ. ವಿದೇಶಗಳಲ್ಲೂ ಅವರ ಕುಟುಂಬಗಳಲ್ಲಿ ಅವರದ್ದೇ ಆದ ಸಮಸ್ಯೆಗಳಿರುತ್ತವೆ. ಗಂಡ-ಹೆಂಡತಿ (Husband-Wife)) ನಡುವೆ ಹೊಂದಾಣಿಕೆಯ ಸಮಸ್ಯೆ ಎಲ್ಲ ದೇಶಗಳಲ್ಲೂ ಇದೆ. ಹೀಗಾಗಿ, ಅಲ್ಲಿ ಅನೇಕರು ಕಂಡುಕೊಂಡಿರುವ ಮಾರ್ಗವೆಂದರೆ, ಗಂಡ-ಹೆಂಡತಿ ಪರಸ್ಪರ ದೂರ ದೂರ ವಾಸಿಸುವುದು!
ಗರ್ಭಕೋಶ ಶಸ್ತ್ರಚಿಕಿತ್ಸೆ ನಂತ್ರ Sex Life ಹೇಗಿರುತ್ತೆ?
ಅಮೆರಿಕ(America) ದಲ್ಲಿ ಬರೋಬ್ಬರಿ 50 ಲಕ್ಷಕ್ಕೂ ಅಧಿಕ ದಂಪತಿ ಬೇರೆ ಬೇರೆ ಸ್ಥಳಗಳಲ್ಲಿ ವಾಸಿಸುತ್ತಾರೆ ಎಂದರೆ ಅಚ್ಚರಿಯಾಗಬಹುದು. ಇತ್ತೀಚೆಗೆ ಈ ಟ್ರೆಂಡ್ ಅನ್ನು ಭಾರತದಲ್ಲೂ ಕಾಣಬಹುದು. ಪತ್ನಿ ಆಕೆಯ ತವರಲ್ಲಿ, ಪತಿ ತನ್ನ ಮನೆಯಲ್ಲಿ ಇರುವ ವ್ಯವಸ್ಥೆಯನ್ನೂ ಕಾಣಬಹುದು. ಒಂದೇ ನಗರದಲ್ಲಿದ್ದುಕೊಂಡೂ ಬೇರೆ ಮನೆಯಲ್ಲಿ ವಾಸ್ತವ್ಯ ಹೂಡುವ ದಂಪತಿಗಳೂ ಇದ್ದಾರೆ. ಅಕ್ಕಪಕ್ಕದ ನಗರಗಳಲ್ಲಿ ವಾಸಿಸುವ ಪತಿ-ಪತ್ನಿಯರೂ ಇದ್ದಾರೆ. ಅವರು ವಾರಾಂತ್ಯಗಳಲ್ಲಿ ಮಾತ್ರ ಭೇಟಿಯಾಗುವ ದಂಪತಿ. ಇಂತಹ ಸಂಸಾರಿಗಳ ಸಂಖ್ಯೆ ಯುರೋಪ್ (Europe), ಕೆನಡಾ (Canada), ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾ, ಅಮೆರಿಕಗಳಲ್ಲಿ ಹೆಚ್ಚುತ್ತಿದೆಯಂತೆ. ಅಲ್ಲಿನ ಶೇ.10ರಷ್ಟು ದಂಪತಿ (Couple) ಬೇರೆ ಬೇರೆ ವಾಸಿಸುವುದಕ್ಕೆ ಮೊರೆ ಹೋಗಿದ್ದಾರಂತೆ.
Relationship Tips: ಹುಡುಗಿ ಹುಡುಗನಿಂದ ನಿಜಕ್ಕೂ ಬಯಸೋದೇನು?
ನೀನೊಂದು ತೀರ, ನಾನೊಂದು ತೀರ...
ಬೆಳಗ್ಗೆ ತಿಂಡಿ ತಿನ್ನುವ ಮುನ್ನ ಹಲ್ಲುಜ್ಜಲೇಬೇಕೆನ್ನುವುದು ನಿಮ್ಮ ನಿಯಮವಾಗಿದ್ದರೆ, ನಿಮ್ಮ ಪತಿ ಬೆಳಗ್ಗೆ ಹಲ್ಲುಜ್ಜುವ ಅಭ್ಯಾಸ ಹೊಂದಿಲ್ಲ ಎಂದಿಟ್ಟುಕೊಳ್ಳಿ. ನಿಮಗೆ ಏನನಿಸುತ್ತದೆ? ಇದಷ್ಟೇ ಅಲ್ಲ, ಬೆವರಿದ ಬಟ್ಟೆಗೇ ಮತ್ತೆ ಸೆಂಟು ಪೂಸಿ ಧರಿಸುವ ಅಭ್ಯಾಸವಿರುವವರು, ಖಾಸಗಿಯಾಗಿ ತೀರ ಕೊಳಕುತನ (Uunhygienic) ಮೆಂಟೇನ್ ಮಾಡುವವರು, ರಾತ್ರಿ ಮೂರು ಲೋಕ ಕೇಳಿಸುವಂತೆ ಗೊರಕೆ (Snoring) ಹೊಡೆಯುವವರು.. ಇಂಥವರ ಸಂಗಾತಿಗಳೆಲ್ಲ ಅದ್ಯಾವ ಪಾಪ ಮಾಡಿದ್ದಾರೆ! ಇಂತಹ ಕಾರಣಕ್ಕೆ ಅದೆಷ್ಟೋ ಸಂಸಾರಗಳು ಮುರಿದು ಬೀಳುತ್ತಿವೆ. ಆದರೆ, ತೀರ ಮುರಿದುಕೊಳ್ಳಲು ಮನಸ್ಸಾಗದೆ ಇದ್ದರೆ, ದೂರ ಬದುಕುವುದು ವಾಸಿ. ಈ ಮನಸ್ಥಿತಿ ಇದೀಗ ವ್ಯಾಪಕವಾಗುತ್ತಿದೆ.
ಬೇರೆ ಬೇರೆ ಸ್ಥಳಗಳಲ್ಲಿ ಉನ್ನತ ಉದ್ಯೋಗಗಳಲ್ಲಿರುವ ದಂಪತಿಗೆ ಇದು ಅನಿವಾರ್ಯ. ಆದರೆ, ಕುಟುಂಬದಲ್ಲಿ ಹೊಂದಾಣಿಕೆ (Adjustment) ಎನ್ನುವುದು ಸಮಸ್ಯೆಯಾದಾಗಲೂ ದೂರ ಬದುಕುವ ಹೊಸ ಮಾರ್ಗ ಈಗ ಸೃಷ್ಟಿಯಾಗಿದೆ.
ಯಾರಿಗೆಲ್ಲ ಈ ಪದ್ಧತಿ ಆಪ್ತ?
ಮದುವೆಯಾಗುವುದಕ್ಕೆ ಹಿಂಜರಿಯುವ ಅಥವಾ ಮದುವೆಗೆ ಮಾನಸಿಕವಾಗಿ ಸಿದ್ಧವಾಗಿಲ್ಲದ ಯುವಜನತೆ (Youngsters) ಕುಟುಂಬದಲ್ಲಿ ಭಿನ್ನಾಭಿಪ್ರಾಯ, ಅಂತರ್ ಧರ್ಮೀಯ (Inter-Religon) ಮದುವೆಗಳಾದಾಗ, ಮಧ್ಯವಯಸ್ಸು ಮೇಲ್ಪಟ್ಟ ದಂಪತಿ ದೂರ ದೂರ ವಾಸಿಸುವುದು ವಿದೇಶಗಳಲ್ಲಿ ಹೆಚ್ಚಾಗಿದೆಯಂತೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.