24 ವರ್ಷಗಳ ಕಾಲ ‘ಸಿಸ್ಟರ್‌’ ಅಗಿದ್ದವರಿಗೆ ಚಿಗುರಿತು ಪ್ರೀತಿ: ಸನ್ಯಾಸತ್ವ ತೊರೆದು ಕ್ರೈಸ್ತ ಸನ್ಯಾಸಿ ಜತೆಗೆ ವಿವಾಹ..!

Published : Jan 04, 2023, 05:06 PM IST
24 ವರ್ಷಗಳ ಕಾಲ ‘ಸಿಸ್ಟರ್‌’ ಅಗಿದ್ದವರಿಗೆ ಚಿಗುರಿತು ಪ್ರೀತಿ: ಸನ್ಯಾಸತ್ವ ತೊರೆದು ಕ್ರೈಸ್ತ ಸನ್ಯಾಸಿ ಜತೆಗೆ ವಿವಾಹ..!

ಸಾರಾಂಶ

ಸಿಸ್ಟರ್‌ ಆಗಿದ್ದ ಮೇರಿ ಎಲಿಜಬೆತ್‌ ಈಗಾಗಲೇ 24 ವರ್ಷಗಳ ಕಾಲ ಕ್ರೈಸ್ತ ಸನ್ಯಾಸಿನಿಯಾಗಿದ್ದರು. ಈ ವೇಳೆ ರಾಬರ್ಟ್‌ ಎಂಬ ಸನ್ಯಾಸಿಯನ್ನು ಭೇಟಿಯಾದರು. 

ಇಂಟರ್‌ನೆಟ್‌ನಲ್ಲಿ (Internet) ವಿಲಕ್ಷಣ (Bizzare) ಹಾಗೂ ಅಪರೂಪದ ಪ್ರೇಮ ಸುದ್ದಿಗಳು (Love Story) ಆಗಾಗ ವೈರಲ್‌ (Viral) ಅಗುತ್ತಿರುತ್ತವೆ. ಆದರೆ, ಯುಕೆಯಲ್ಲಿ (UK) ಇತ್ತೀಚೆಗೆ ವರದಿಯಾದ ಈ ಸ್ಟೋರಿ ಅಪರೂಪವೇ ಸರಿ. ಲೌಕಿಕ ಜೀವನ ತೊರೆದಿದ್ದ ಕ್ರೈಸ್ತ ಸನ್ಯಾಸಿನಿ (Nun) ಹಾಗೂ ಕ್ರೈಸ್ತ ಸನ್ಯಾಸಿ (Monk) ಪ್ರೀತಿಯಲ್ಲಿ (Love) ಬಿದ್ದಿದ್ದು, ಇವರಿಬ್ಬರೂ ಸನ್ಯಾಸತ್ವ ಜೀವನ (Celibacy) ತೊರೆದು ಮದುವೆಯನ್ನೂ (Wedding) ಆಗಿದ್ದಾರೆ. 

ಸಿಸ್ಟರ್‌(Sister)  ಆಗಿದ್ದ ಮೇರಿ ಎಲಿಜಬೆತ್‌ (Mary Elizabeth) ಈಗಾಗಲೇ 24 ವರ್ಷಗಳ ಕಾಲ ಕ್ರೈಸ್ತ ಸನ್ಯಾಸಿನಿಯಾಗಿದ್ದರು. ಈ ವೇಳೆ ರಾಬರ್ಟ್‌ (Robert) ಎಂಬ ಸನ್ಯಾಸಿಯನ್ನು ಭೇಟಿಯಾದರು. ಅವರನ್ನು ಮೊದಲ ಬಾರಿಗೆ ಏಕಾಂತದಲ್ಲಿ ಭೇಟಿ ಮಾಡಿದ ಬಳಿಕ ತನ್ನ ಜೀವನ ತಿರುವು ತೆಗೆದುಕೊಳ್ಳುತ್ತದೆ ಎಂದು ಮೇರಿ ಎಲಿಜಬೆತ್‌ಗೆ ಹೇಗೆ ಗೊತ್ತಿರುತ್ತೆ ಹೇಳಿ. ಆದರೆ, ಇಬ್ಬರ ನಡುವೆ ಪ್ರೀತಿಯಂತೂ ಚಿಗುರಿದೆ. ಇಂಗ್ಲೆಂಡ್‌ನ ಮತ್ತೊಂದು ಭಾಗದಿಂದ ಆಗಾಗ್ಗೆ ಆ ಚರ್ಚ್‌ಗೆ ಸನ್ಯಾಸಿ ರಾಬರ್ಟ್‌ ಬರುತ್ತಿದ್ದರು ಎಂದು ತಿಳಿದುಬಂದಿದ್ದು, ಒಂದು ದಿನ ಊಟವಾದ ಬಳಿಕ ಅವರನ್ನು ಹೊರಗೆ ಬಿಡಲು ಹೇಳಲಾಯಿತು. ಆ ವೇಳೆ, ರಾಬರ್ಟ್‌ ಅವರ ತೋಳನ್ನು ಆಕಸ್ಮಿಕವಾಗಿ ಮುಟ್ಟಿದ ಬಳಿಕ ಸಿಸ್ಟರ್‌ ಮೇರಿ ಎಲಿಜಬೆತ್‌ ಅವರಿಗೆ ಶಾಕ್‌ ಹೊಡೆದಂತಾಯ್ತಂತೆ..!

ಇದನ್ನು ಓದಿ: 'ಪಾಕಿಸ್ತಾನದ ಮೊಗ್ಗಿನ ಮನಸು..' 52 ವರ್ಷದ ಶಿಕ್ಷಕನಿಗೆ ಮನಸ್ಸು ಕೊಟ್ಟ 20 ವರ್ಷದ ವಿದ್ಯಾರ್ಥಿನಿ!

ನನಗೆ ಆ ವೇಳೆ ನಮ್ಮಿಬ್ಬರ ನಡುವೆ ಕೆಮಿಸ್ಟ್ರಿ ಇದೆ ಎನಿಸಿತು, ನಂತರ ನನಗೆ ಸ್ವಲ್ಪ ಮುಜುಗರವಾಯಿತು. ಮತ್ತು, ಆ ವೇಳೆ ನನಗೆ ಅವರೂ ಅದೇ ರೀತಿ ಯೋಚಿಸಿದ್ರಾ ಎನಿಸಿತು. ನಂತರ, ನಾನು ಅವರನ್ನು ಹೊರಗೆ ಕಳಿಸಿದಾಗ ಸಾಕಷ್ಟು ವಿಚಿತ್ರವಾಗಿತ್ತು ಎಂದೂ ಸಿಸ್ಟರ್‌ ಆಗಿದ್ದ ಮೇರಿ ಎಲಿಜಬೆತ್‌ ಅಂತಾರಾಷ್ಟ್ರೀಯ ಸುದ್ದಿ ಮಾಧ್ಯಮ ಬಿಬಿಸಿಗೆ ಹೇಳಿಕೊಂಡಿದ್ದಾರೆ. 
ಅಲ್ಲದೆ, ಒಂದು ವಾರದ ಬಳಿಕ ಮೇರಿ ಎಲಿಜಬೆತ್‌ ಅವರು ತನ್ನ ಮನಸ್ಸಿನಲ್ಲಿ ಬಂದ ಅನುಮಾನವನ್ನು ಬಗೆಹರಿಸಿಕೊಂಡಿದ್ದಾರೆ, ಅಂದರೆ, ಮೇರಿ ಅವರಲ್ಲಿ ಉಂಟಾದ ಭಾವನೆ ರಾಬರ್ಟ್‌ ಅವರಲ್ಲೂ ಮೂಡಿತಾ ಎಂಬ ಅವರ ಅನುಮಾನ ಬಗೆಹರಿದಿದೆ. ಅದು ಹೇಗೆ ಅಂತೀರಾ..? ಸನ್ಯಾಸಿ ಆಗಿದ್ದ ರಾಬರ್ಟ್‌ ಮೇರಿ ಅವರಿಗೆ ಮೆಸೇಜ್‌ ಮಾಡಿದ್ದರಂತೆ. ಸನ್ಯಾಸತ್ವ ತೊರೆದು ತನ್ನನ್ನು ಮದುವೆಯಾಗ್ತೀಯಾ ಎಂದು ಪ್ರಪೋಸ್‌ ಮಾಡಿದ್ದರು ಎಂದೂ ಎಲಿಜಬೆತ್‌ ಹೇಳಿಕೊಂಡಿದ್ದಾರೆ.
.  
ಬಳಿಕ, ಮೇರಿ ಎಲಿಜಬೆತ್‌ ಸಹ ಇದಕ್ಕೆ ಒಪ್ಪಿ ಇಬ್ಬರೂ ಮದುವೆಯಾಗಿದ್ದಾರೆ. ರಾಬರ್ಟ್‌ ಹಾಗೂ ಎಲಿಜಬೆತ್‌ ಅವರ ಈ ವಿಚಿತ್ರ ಪ್ರೇಮ ಕಥೆ ಸಾಮಾಜಿಕ ಜಾಲತಾಣದಲ್ಲಿ ಹಲವರಿಗೆ ಮೆಚ್ಚುಗೆಯಾಗಿದ್ದು, ವೈರಲ್‌ ಆಗುತ್ತಿದೆ. ಕ್ರೈಸ್ತ ಸನ್ಯಾಸಿ ಹಾಗೂ ಸನ್ಯಾಸಿನಿಯಾಗಿದ್ದವರು ಈ ರೀತಿ ಪ್ರೀತಿಯಲ್ಲಿ ಬಿದ್ದು ಮದುವೆಯಾಗುವುದು ಒಳ್ಳೆಯದು ಎಂದು ಕೆಲವರು ಹೇಳಿಕೊಂಡಿದ್ದಾರೆ. ಅಲ್ಲದೆ, ಈ ರೀತಿ ಎಲ್ಲರಿಗೂ ಮದುವೆಯಾಗುವ ಅವಕಾಶ ದೊರೆತರೆ, ಅವರು ದೇವರ ಸೇವೆಯನ್ನು ಇನ್ನೂ ದೊಡ್ಡ ರೀತಿಯಲ್ಲಿ ಮಾಡುತ್ತಾರೆ ಎಂದೂ ಹೇಳಿದ್ದಾರೆ. 

ಇದನ್ನೂ ಓದಿ: Love Story: ತಂದೆ ಶವದ ಮುಂದೆ ಅಳ್ತಿದ್ದವಳಿಗೆ ಪ್ರಪೋಸ್‌ ಮಾಡಿದ ಹುಡುಗ

ಕ್ರೈಸ್ತ ಸನ್ಯಾಸಿ ಹಾಗೂ ಸನ್ಯಾಸಿನಿಯಾಗಿದ್ದವರಿಗೆ ಮದುವೆಯಾಗುವ ಅವಕಾಶ ನೀಡಬೇಕು.. ಆಗ ಚರ್ಚ್‌ ಅನ್ನು ಸೇವೆ ಮಾಡುವ ಅವರ ಪಾತ್ರದಲ್ಲಿ ಇನ್ನೂ ಹೆಚ್ಚು ಖುಷಿಯಾಗಿರುತ್ತಾರೆ ಎಂದು ಮತ್ತೊಬ್ಬರು ಇದಕ್ಕೆ ಕಾಮೆಂಟ್‌ ಮಾಡಿದ್ದಾರೆ.  ಇನ್ನೊಂದೆಡೆ, ಅವರಿಬ್ಬರ ಈ ವಿಚಿತ್ರ ಪ್ರೇಮಕಥೆಯನ್ನು ಚಿತ್ರವನ್ನಾಗಿ ಮಾಡಬೇಕೆಂದೂ ಒಬ್ಬರು ಬರೆದುಕೊಂಡಿದ್ದಾರೆ. ‘’ಅವರ ಈ ಸ್ವೀಟ್‌ ಸ್ಟೋರಿಯನ್ನು ಆಧರಿಸಿ ಯಾರಾದರೂ ಚಲನಚಿತ್ರ ಮಾಬೇಕೆಂದು’’ ಬಳಕೆದಾರರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.  

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಾವಿರ ಕೋಟಿ ಕುಬೇರ 'ಮಹಾಪುರುಷ'ನಿಗೆ ಡಿವೋರ್ಸ್ ಕೊಡ್ತಾರಾ ಈ ನಟಿ? ಇದೆಂಥ ಶಾಕಿಂಗ್ ಮ್ಯಾಟರ್!
ತಾಳಿ ಕಟ್ಟು ಮೊದಲು ಬಿಗ್ ಟ್ವಿಸ್ಟ್ ಕೊಟ್ಟ ವರ, 8ನೇ ವಚನದೊಂದಿದೆ ಮದುವೆ ವಿಡಿಯೋ