ಸಂಗಾತಿಗಳ ಒಪ್ಪಿಗೆ ಮೇರೆಗೆ ಸಂಗಾತಿಗಳನ್ನು ಅದಲು – ಬದಲು ಮಾಡಿಕೊಳ್ಳುವುದಕ್ಕೆ ಸ್ವಾಪ್ ಪಾರ್ಟರ್ ಎಂದು ಕರೆಯಲಾಗುತ್ತದೆ. ವಿದೇಶದಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ಇದನ್ನು ಭಾರತದಲ್ಲಿ ಒಪ್ಪಿಕೊಳ್ಳೋದು ಕಷ್ಟಸಾಧ್ಯ. ಹಾಗೆ ಮುಂದೆ ಇದ್ರ ಪರಿಣಾಮ ಎದುರಿಸಲು ಸಂಗಾತಿ ಸಿದ್ಧವಿರಬೇಕಾಗುತ್ತದೆ.
ವೈವಾಹಿಕ ಜೀವನ ಸುಖದಿಂದ ಕೂಡಿರಬೇಕು ಅಂದ್ರೆ ಅದಕ್ಕೊಂದಿಷ್ಟು ಮಸಾಲೆ ಬೆರೆಸ್ಲೇಬೇಕು. ಒಂದೇ ರೀತಿಯ ಜೀವನ ಅನೇಕರಿಗೆ ಬೋರ್ ಆಗಿರುತ್ತೆ. ದಾಂಪತ್ಯ ಜೀವನ ಯಾವಾಗ್ಲೂ ಹೊಸದಾಗಿಯೇ ಇರಬೇಕೆಂದು ಬಯಸುವ ಜನರು ಒಂದಿಷ್ಟು ಹೊಸ ಹೊಸ ಪ್ರಯೋಗಗಳನ್ನು ಮಾಡ್ತಾರೆ. ಸೆಕ್ಸ್ ಲೈಫ್ ಕೂಡ ಅನೇಕರಿಗೆ ಬೇಸರ ತರಿಸಲು ಶುರುವಾಗಿರುತ್ತದೆ. ಒಂದೇ ನೀರಸ ಭಂಗಿ ಅಥವಾ ಪ್ರತಿ ದಿನ ಒಂದೇ ಸ್ಥಳದಲ್ಲಿ ಶಾರೀರಿಕ ಸಂಬಂಧ ಬೆಳೆಸಿದ್ರೆ ಅದು ಬರೀ ದೈಹಿಕ ಸುಖಕ್ಕೆ ಮೀಸಲಾಗುತ್ತದೆ. ಶಾರೀರಿಕ ಸಂಬಂಧ ಕೂಡ ಸದಾ ಆಕರ್ಷಕ ಹಾಗೂ ಉತ್ಸಾಹದಿಂದ ಕೂಡಿರಬೇಕು ಎನ್ನುವ ಕಾರಣಕ್ಕೆ ಅನೇಕರು ಹೊಸ ಪ್ರಯತ್ನಕ್ಕೆ ಮುಂದಾಗ್ತಾರೆ. ಆದ್ರೆ ಇಲ್ಲೊಬ್ಬನ ಪತ್ನಿ ಮಾಡಲು ಹೊರಟಿರುವ ಕೆಲಸ ಮಾತ್ರ ದಂಗಾಗಿಸುವಂತಿದೆ.
ಆತನಿಗೆ ಈಗ 40 ವರ್ಷ. ಮದುವೆ (Marriage) ಯಾಗಿ 10 ವರ್ಷ ಕಳೆದಿದೆ. ತಂದೆ- ತಾಯಿ ಹುಡುಗಿ ನೋಡಿ ಮದುವೆ ಮಾಡಿದ್ದರಂತೆ. ಇದು ಅರೇಂಜ್ ಮ್ಯಾರೇಜ್ (Arrange Marriage) ಎನ್ನುವ ವ್ಯಕ್ತಿ, ದಾಂಪತ್ಯದಲ್ಲಿ ಯಾವುದೇ ಸಮಸ್ಯೆಯಿಲ್ಲ ಎನ್ನುತ್ತಾನೆ. ಪತ್ನಿಯನ್ನು ಅತಿಯಾಗಿ ಪ್ರೀತಿಸುವ ವ್ಯಕ್ತಿಗೆ, ಪತ್ನಿಯ ಹೊಸ ಬಯಕೆ ತಲೆನೋವು ತಂದಿದೆ. ದಾಂಪತ್ಯದಲ್ಲಿ ಹೊಸತನ ಬಯಸುವ ಪತ್ನಿ ತನ್ನ ಮಹತ್ವದ ನಿರ್ಧಾರವೊಂದನ್ನು ಹೇಳಿದ್ದಾಳೆ. ಆಕೆ ಒಂದು ರಾತ್ರಿ ಮಟ್ಟಿಗೆ ಸಂಗಾತಿ ಬದಲಿಸಲು ಮುಂದಾಗಿದ್ದಾಳೆ. ಪತ್ನಿಯ ಈ ಬಯಕೆ ಕೇಳಿದ ನಂತ್ರ ಪತಿ ನಿದ್ರೆ ಬಿಟ್ಟಿದ್ದಾನೆ. ದಾಂಪತ್ಯದಲ್ಲಿ ಹೊಸ ಪ್ರಯೋಗ ಓಕೆ. ಆದ್ರೆ ಸಂಗಾತಿ ಬದಲಿಸುವುದು ಯಾಕೆ ಎಂಬುದು ಆತನ ಪ್ರಶ್ನೆ. ಪತ್ನಿ ಮನಸ್ಸು ಬದಲಿಸೋದು ಹೇಗೆ ಎಂಬುದು ನನಗೆ ಅರ್ಥವಾಗ್ತಿಲ್ಲ. ಸಂಗಾತಿ ಅದಲು ಬದಲು ಎಂಬುದನ್ನು ಕೇಳಿದ್ದೆ ಆದ್ರೆ ಅದು ಹೇಗೆ ನಡೆಯುತ್ತದೆ ಎಂಬುದು ನನಗೆ ತಿಳಿದಿಲ್ಲ. ಈ ಬಗ್ಗೆ ನೆನಪು ಮಾಡಿಕೊಂಡ್ರೆ ಭಯವಾಗುತ್ತದೆ ಎನ್ನುವ ವ್ಯಕ್ತಿ, ಪತ್ನಿಯನ್ನು ಹಂಚಿಕೊಳ್ಳಲು ನನಗೆ ಮನಸ್ಸಿಲ್ಲ ಎಂದಿದ್ದಾನೆ. ಈ ಬಗ್ಗೆ ಪತ್ನಿಗೆ ಕೇಳಿದ್ರೆ, ಭಯ ಬೇಡ, ದಾಂಪತ್ಯದಲ್ಲಿ ಮಸಾಲೆ ಬೆರೆಸಲು ಹೀಗೆ ಮಾಡ್ತಿದ್ದೇನೆ. ಅದ್ರಿಂದ ನಮ್ಮಿಬ್ಬರ ಸಂಬಂಧ (Relationship) ಗಟ್ಟಿಯಾಗುತ್ತೆ ಎನ್ನುತ್ತಾಳಂತೆ.
ತಜ್ಞರ ಸಲಹೆ : ಭಾರತೀಯ ಸಮಾಜದಲ್ಲಿ (Indian society) ಸಂಗಾತಿ ಹಂಚಿಕೊಳ್ಳುವುದು ಅಪರಾಧ. ಇದು ಮಾನಸಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ. ಜೊತೆಗೆ ಪತಿ – ಪತ್ನಿ ಸಂಬಂಧ ಮೊದಲಿನಂತೆ ಇರಲು ಸಾಧ್ಯವಿಲ್ಲ ಎನ್ನುತ್ತಾರೆ ತಜ್ಞರು. ಪತ್ನಿ ನಿಮ್ಮ ಮುಂದಿಟ್ಟ ಆಫರ್ ಸ್ವೀಕರಿಸುವ ಬಗ್ಗೆ ಯಾವುದೇ ಆತುರ ಬೇಡ ಎಂದು ತಜ್ಞರು ಹೇಳಿದ್ದಾರೆ. ಭಾವನೆಗಳನ್ನು ಹಿಡಿತದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ. ಪತಿ – ಪತ್ನಿ ಸಂಬಂಧಕ್ಕೆ ಮಸಾಲೆ ಬೆರೆಸಲು ಅನೇಕ ಮಾರ್ಗಗಳಿವೆ. ಸಂಗಾತಿ ಅದಲು ಬದಲು ಮಾಡುವುದು ಸೂಕ್ತ ಮಾರ್ಗವಲ್ಲವೆಂದು ತಜ್ಞರು ಸಲಹೆ ನೀಡಿದ್ದಾರೆ.
ಗಂಡ ಶಾರ್ಟ್ ಸ್ಕರ್ಟ್, ರೆಡ್ ಲಿಪ್‌ಸ್ಟಿಕ್ ಹಾಕ್ಲೇಬಾರ್ದು ಅಂತಾನೆ! ಏನ್ಮಾಡ್ಲಿ ?
ಸಂಗಾತಿ ಬದಲಿಸೋದು ಸಂಬಂಧವನ್ನು ಗಟ್ಟಿಗೊಳಿಸುತ್ತೆ ಎಂದು ನಿಮ್ಮ ಪತ್ನಿ ಹೇಳಿರಬಹುದು. ಆದ್ರೆ ನಮ್ಮ ಸಮಾಜ ಇದನ್ನು ಒಪ್ಪಲು ಸಾಧ್ಯವೇ ಇಲ್ಲ. ನಿಮ್ಮ ಪತ್ನಿ ನಿಮ್ಮ ಬಳಿ ಈ ವಿಷ್ಯ ಹೇಳಿದ್ದಾಳೆಂದ್ರೆ ನಿಮ್ಮಿಬ್ಬರ ಸಂಬಂಧ ಗಟ್ಟಿಯಾಗಿದೆ ಎಂದೇ ಅರ್ಥ. ಹೀಗಿರುವಾಗ ನೀವು ಇನ್ನೊಮ್ಮೆ ಇದ್ರ ಬಗ್ಗೆ ಆಲೋಚನೆ ಮಾಡ್ಬೇಕು ಎನ್ನುತ್ತಾರೆ ತಜ್ಞರು.
Real Story: ನನ್ನ ಹೆಂಡ್ತಿ ಗರ್ಭಿಣಿ ಆದ್ರೆ ಮಗು ನನ್ನದಲ್ಲ!
ಸದ್ಯ ನಿಮ್ಮ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುವ ಅಗತ್ಯವಿದೆ. ನಿಮ್ಮಿಬ್ಬರ ಮಧ್ಯೆ ರೋಮ್ಯಾನ್ಸ್ (Romance) ಕಡಿಮೆಯಾಗಿದೆ. ಹಾಗಾಗಿಯೇ ಪತ್ನಿ ಈ ಬಗ್ಗೆ ಆಲೋಚನೆ ಮಾಡಿರುವ ಸಾಧ್ಯತೆ ಹೆಚ್ಚಿದೆ. ಇಂಥ ಸಂದರ್ಭದಲ್ಲಿ ಆಕೆಯನ್ನು ಒಲಿಸಿಕೊಳ್ಳುವ ಪ್ರಯತ್ನ ನಿಮ್ಮಿಂದ ಆಗ್ಬೇಕು. ಪತ್ನಿ ಬಗ್ಗೆ ಯಾವುದೇ ಅನುಮಾನವಿಲ್ಲದೆ ಆಕೆಯನ್ನು ಸ್ವೀಕರಿಸಿ ಎಂದು ತಜ್ಞರು ಹೇಳಿದ್ದಾರೆ.