ವಿವಾಹೇತರ ಸಂಬಂಧಕ್ಕೆ ಅನೇಕ ಕಾರಣವಿರುತ್ತದೆ. ಪತಿಯಾದವನು ಮಾತ್ರವಲ್ಲ ಪತ್ನಿಯಾದವಳು ಕೂಡ ಅಕ್ರಮ ಸಂಬಂಧವನ್ನು ಬೆಳೆಸ್ತಾಳೆ. ಸಂಬಂಧ ಬೆಳೆಸುವುದಕ್ಕಿಂತ ಅದನ್ನು ಒಪ್ಪಿಕೊಳ್ಳುವುದು ಕಷ್ಟ ಎನ್ನುತ್ತಾರೆ ಕೆಲ ಮಹಿಳೆಯರು.
ಸಂಬಂಧವನ್ನು ಕಾಪಾಡಿಕೊಳ್ಳುವುದು ಯಾವಾಗ್ಲೂ ಸವಾಲಿನ ಕೆಲಸ. ಅದ್ರಲ್ಲೂ ದಾಂಪತ್ಯ ಜೀವನವನ್ನು ದೀರ್ಘಕಾಲ ಕಾಪಾಡಿಕೊಳ್ಳುವುದು ಯುದ್ಧದಂತೆ. ಸಂಗಾತಿ ಮಧ್ಯೆ ಜವಾಬ್ದಾರಿ ಇದ್ದರೆ ಸಾಲದು, ಇಬ್ಬರ ಮಧ್ಯೆ ಪ್ರೀತಿ ಕೂಡ ಇರಬೇಕು. ಕೆಲ ದಂಪತಿ ಎಲ್ಲವನ್ನೂ ಸರಿಯಾಗಿ ನಿಭಾಯಿಸಿಕೊಂಡು ಯಶಸ್ವಿಯಾಗ್ತಾರೆ. ಮತ್ತೆ ಕೆಲವರಿಗೆ ಪ್ರೀತಿ, ಜವಾಬ್ದಾರಿ ನಿಭಾಯಿಸುವುದು ಕಷ್ಟವಾಗುತ್ತದೆ. ಇಬ್ಬರಲ್ಲಿ ಒಬ್ಬರು ಅದನ್ನು ನಿರ್ಲಕ್ಷ್ಯಿಸಲು ಶುರು ಮಾಡ್ತಾರೆ. ಆಗ ದಂಪತಿ ಮಧ್ಯೆ ಪ್ರೀತಿ ಕಡಿಮೆಯಾಗುತ್ತದೆ. ಇದು ದಾಂಪತ್ಯ ದ್ರೋಹಕ್ಕೆ ದಾರಿ ಮಾಡಿಕೊಡುತ್ತದೆ. ದಂಪತಿ ನಡುವೆ ಪ್ರೀತಿಯ ಕೊರತೆ, ಗೌರವದ ಕೊರತೆ, ಪರಸ್ಪರರ ಇಚ್ಛೆ ಬಗ್ಗೆ ಕಾಳಜಿ ವಹಿಸದಿರುವುದು ಸಂಗಾತಿಯನ್ನು ವಂಚಿಸಲು ಮುಖ್ಯ ಕಾರಣವಾಗುತ್ತದೆ. ದಾಂಪತ್ಯ ದ್ರೋಹ ಅಪರಾಧ. ಸಂಗಾತಿಗೆ ಮೋಸ ಮಾಡುವುದಕ್ಕಿಂತ ಅದನ್ನು ಒಪ್ಪಿಕೊಳ್ಳುವುದು ಬಹಳ ಕಷ್ಟ. ಸಂಗಾತಿಗೆ ಮೋಸ ಮಾಡಿದ ನಂತರ ಅವರನ್ನು ಒಪ್ಪಿಕೊಳ್ಳುವುದು ಸುಲಭವಲ್ಲ ಎಂದು ಅನೇಕ ಮಹಿಳೆಯರು ಹೇಳಿದ್ದಾರೆ. ಸಂಗಾತಿಗೆ ಮೋಸ ಮಾಡಲು ಏನು ಕಾರಣ ಎಂಬುದನ್ನು ಕೂಡ ಅವರು ಹೇಳಿದ್ದಾರೆ.
ಮಹಿಳೆ (Woman) ಯೊಬ್ಬಳು ತನ್ನ ಅನುಭವವನ್ನು ಸಾಮಾಜಿಕ ಜಾಲತಾಣ (Social Network) ದಲ್ಲಿ ಹಂಚಿಕೊಂಡಿದ್ದಾಳೆ. ಆಕೆ ಒಬ್ಬ ಹುಡುಗನ ಜೊತೆ ಸಂಬಂಧದಲ್ಲಿ ಇದ್ದಳಂತೆ. ಆದ್ರೆ ಆತ ಹತ್ತಿರ ಬಂದಾಗ ಆಕೆ ಅಸಮಾಧಾನ ಎದುರಿಸುತ್ತಿದ್ದಳಂತೆ. ಕೆಲ ವರ್ಷಗಳ ಕಾಲ ನಾವಿಬ್ಬರು ಸಂಬಂಧ (Relationship) ದಲ್ಲಿ ಇದ್ದೆವು. ಆದ್ರೆ ನಾನು ಸಂಪೂರ್ಣ ಮನಸ್ಸಿನಿಂದ ಆತನನ್ನು ಒಪ್ಪಿಕೊಂಡಿರಲಿಲ್ಲ. ಆತನಿಗೆ ಮೋಸ ಮಾಡ್ತಿದ್ದೆ. ಅಸಲಿ ವಿಷ್ಯ ಏನಂದ್ರೆ ನನಗೆ ಹುಡುಗರಿಗಿಂತ ಹುಡುಗಿಯರು ಹೆಚ್ಚು ಇಷ್ಟವಾಗ್ತಿದ್ದರು. ಇದನ್ನು ನಾನು ಕೊನೆಯಲ್ಲಿ ಅರ್ಥ ಮಾಡಿಕೊಂಡೆ ಎನ್ನುತ್ತಾಳೆ ಮಹಿಳೆ.
ಇನ್ನೊಬ್ಬ ಮಹಿಳೆ ತನ್ನ ಪತಿಗೆ ನಾನು ಮೋಸ ಮಾಡಿದ್ದು ನಿಜ ಎಂದು ಒಪ್ಪಿಕೊಂಡಿದ್ದಾಳೆ. ನನಗೆ ನಮ್ಮಿಬ್ಬರ ಸಂಬಂಧದಲ್ಲಿ ಖುಷಿ ಇರಲಿಲ್ಲ. ನನ್ನ ಸಂಗಾತಿ ಹತ್ತಿರ ಬಂದ್ರೆ ಭಯವಾಗ್ತಾ ಇತ್ತು. ಇದು ಕೂಡ ಆತನಿಗೆ ಮೋಸ ಮಾಡಲು ಒಂದು ಕಾರಣವಾಗಿತ್ತು. ನಮ್ಮ ಅಕ್ರಮ ಸಂಬಂಧದ ಬಗ್ಗೆ ಪತಿಗೆ ತಿಳಿಯಲಿ ಎಂದು ನಾನು ಬಯಸಿದ್ದೆ. ನಮ್ಮಿಬ್ಬರನ್ನು ದೂರ ಮಾಡಲು ಇದು ನೆರವಾಗಲಿದೆ ಎಂದು ನಾನು ನಂಬಿದ್ದೆ ಎಂದು ಮಹಿಳೆ ಹೇಳಿದ್ದಾಳೆ.
Women Health: ಗರ್ಭಿಣಿ ಪತ್ನಿ ಬಗ್ಗೆ ಪತಿ ತಿಳಿದಿರ್ಲೇಬೇಕು ಈ ಸಂಗತಿ
ಪತಿ ನನಗೆ ಸಮಯ ನೀಡ್ತಿರಲಿಲ್ಲ ಎಂದು ಮಾತು ಶುರು ಮಾಡಿದ ಮಹಿಳೆಯೊಬ್ಬಳು ಆತನಿಗೆ ಮೋಸ ಮಾಡಿದ್ದನ್ನು ಹೇಳಿದ್ದಾಳೆ. ಪತಿ ನನ್ನನ್ನು ಪ್ರೀತಿ ಮಾಡ್ತಿರಲಿಲ್ಲ. ಮನೆಯಲ್ಲಿರುವ ಒಂದು ವಸ್ತುವಂತೆ ನನ್ನನ್ನು ನೋಡ್ತಿದ್ದ. ಅದು ನನಗೆ ಇಷ್ಟವಾಗ್ತಿರಲಿಲ್ಲ. ಪತಿಯಿಂದ ದೂರವಾಗಲು ನಾನು ಬಯಸಿದ್ದೆ. ನನಗೆ ಪ್ರೀತಿಸುವ ವ್ಯಕ್ತಿ ಬೇಕಿತ್ತು. ಪತಿಯಿಂದ ಬೇರ್ಪಡುವ ಸಂದರ್ಭದಲ್ಲಿ ನನ್ನನ್ನು ಪ್ರೀತಿಸುವ ವ್ಯಕ್ತಿ ನನಗೆ ಸಿಕ್ಕಿದ್ದ ಎನ್ನುತ್ತಾಳೆ ಮಹಿಳೆ.
ಪತಿಯಿಂದ ಇನ್ನೂ ಬೇರೆಯಾಗದ ಮಹಿಳೆಯೊಬ್ಬಳು ಈಗ್ಲೂ ಮೋಸ ಮಾಡ್ತಿದ್ದೇನೆ ಎಂಬುದನ್ನು ಒಪ್ಪಿಕೊಂಡಿದ್ದಾಳೆ. ಪತಿಯ ಮೇಲೆ ಕಿಂಚಿತ್ತೂ ಪ್ರೀತಿಯಿಲ್ಲ. ನಾನು ಬೇರೆ ಪುರುಷನ ಜೊತೆ ಸಂಬಂಧದಲ್ಲಿದ್ದೇನೆ. ಆತನಿಗೂ ಮದುವೆಯಾಗಿದೆ. ಆತನನ್ನು ಅತಿಯಾಗಿ ಪ್ರೀತಿಸುವ ಕಾರಣ ಆತನನ್ನು ಬಿಡಲು ಸಾಧ್ಯವಾಗ್ತಿಲ್ಲ. ನಮ್ಮಿಬ್ಬರ ಸಂಬಂಧ ಗಟ್ಟಿಯಾಗಿದೆ. ಆದ್ರೆ ಪತಿಗೆ ವಿಚ್ಛೇದನ ನೀಡುವ ಸ್ಥಿತಿಯಲ್ಲಿ ನಾನಿಲ್ಲ ಎನ್ನುತ್ತಾಳೆ ಆಕೆ.
ಈ ದೇಶದಲ್ಲಿ ಹೆಂಡ್ತಿ ಬರ್ತ್‌ಡೇ ಮರೆತ್ರೆ ಜೈಲೂಟ ಗ್ಯಾರಂಟಿ !
ಈ ಮಹಿಳೆ ವಿಚಿತ್ರವಾದ ಹೇಳಿಕೆ ನೀಡಿದ್ದಾಳೆ. ಆಕೆ ಪತಿ, ಬೇರೆ ಮಹಿಳೆಯರನ್ನು ನಗಸ್ತಿದ್ದನಂತೆ. ಅದನ್ನು ನೋಡ್ತಿದ್ದ ಪತ್ನಿಗೆ ಕೋಪ ಬರ್ತಾಯಿತ್ತಂತೆ. ಪತಿ ಈ ಚಟವನ್ನು ಬಿಡಿಸಲು ಸಾಧ್ಯವಾಗ್ಲಿಲ್ಲವಂತೆ. ಹಾಗಾಗಿ ಪತಿಗೆ ಮೋಸ ಮಾಡುವ ನಿರ್ಧಾರ ತೆಗೆದುಕೊಂಡಳಂತೆ. ಇನ್ನೊಂದು ಸಂಬಂಧದಲ್ಲಿರುವ ನನಗೆ ಈಗ ಖುಷಿಯಾಗ್ತಿದೆ. ಪತಿಗೆ ಮೋಸ ಮಾಡ್ತಿದ್ದೇನೆ ಎಂಬ ಭಾವನೆ ಬರೋದಿಲ್ಲ ಎನ್ನುತ್ತಾಳೆ ಆಕೆ.