
ಪ್ರಶ್ನೆ: ನನ್ನ ವಯಸ್ಸು ಇಪ್ಪತ್ತೆಂಟು. ಪತ್ನಿಯ ವಯಸ್ಸು ಇಪ್ಪತ್ತೈದು. ಮದುವೆಯಾಗಿ ಆರು ತಿಂಗಳಾಯಿತು. ಆದರೆ ಸರಿಯಾದ ಸೆಕ್ಸ್ ನಮ್ಮ ನಡುವೆ ಇನ್ನೂ ಆಗಿಲ್ಲ. ಮದುವೆಯ ನಂತರ ಒಂದು ತಿಂಗಳು, ನನಗೆ ಭಯ ಅನ್ನುತ್ತ ಸಂಭೋಗವನ್ನು ಮುಂದೂಡಿದಳು. ನಂತರ ಆಕೆಯ ಮನವೊಲಿಸಿದೆ. ಆದರೆ ಕಾಂಡೋಮ್ ಧರಿಸಿಯೇ ಕೂಡಬೇಕು ಎಂಬ ಶರತ್ತು ವಿಧಿಸಿದಳು. ಅಂದಿನಿಂದ ಇಂದಿನವರೆಗೂ ಕಾಂಡೋಮ್ ಇಲ್ಲದೆ ಒಂದು ದಿನವೂ ಸೆಕ್ಸ್ ಮಾಡಲು ಬಿಟ್ಟಿಲ್ಲ. ಕೇಳಿದರೆ, ಪ್ರೆಗ್ನೆಂಟ್ ಆಗಿಬಿಟ್ಟರೆ ಎಂಬ ಭಯ ಅನ್ನುತ್ತಾಳೆ. ಹೆರಿಗೆಯ ನೋವನ್ನು ಊಹಿಸಿಕೊಂಡೇ ನಡುಗುತ್ತಾಳೆ. ಮಗು ಮಾಡಲು ಚೂರೂ ಇಷ್ಟವಿಲ್ಲ. ನನಗೂ ಈಗಲೇ ಮಗು ಬೇಕೆಂದಿಲ್ಲ. ಆದರೆ ಸೇಫ್ ಪೀರಿಯಡ್‌ನಲ್ಲೂ ಕಾಂಡೋಮ್ ಧರಿಸಿಯೇ ಸೆಕ್ಸ್ ಮಾಡಬೇಕೆಂದರೆ ಹೇಗೆ? ಇದರಿಂದಾಗಿ ಲೈಂಗಿಕ ಸುಖದ ಸಂಪೂರ್ಣ ಅನುಭವ ನನಗೆ ಆಗಿಯೇ ಇಲ್ಲ. ಈ ಸಮಸ್ಯೆ ಬಿಡಿಸುವುದು ಹೇಗೆ?
ಉತ್ತರ: ನಿಮ್ಮ ಅಸಮಾಧಾನ ಸಹಜವಾದದ್ದೇ. ಮದುವೆಯಾದ ಬಳಿಕ, ಆರೋಗ್ತಪೂರ್ಣ ಗಂಡು- ಹೆಣ್ಣು ಲೈಂಗಿಕ ಸುಖಕ್ಕಾಗಿ ತಹತಹಿಸುತ್ತಾರೆ. ಅತ್ಯಾಪ್ತತೆ, ರತ್ಯಾಪ್ತತೆ ಅನುಭವಿಸಲು ಹಾತೊರೆಯುತ್ತಾರೆ. ಹಾಗಾಗಿ ನಮ್ಮ ಮಧ್ಯೆ ಯಾವ ಅಡೆತಡೆಯೂ ಇರಬಾರದು ಎಂದು ಅಪೇಕ್ಷಿಸುವುದು ಸಹಜ. ಆಗ ಕಾಂಡೋಂ ಕೂಡ ಒಂದು ಕಿರಿಕಿರಿಯೇ ಆಗಿಬಿಡುತ್ತದೆ.
ಆದರೆ ನಿಮ್ಮ ಪತ್ನಿಯ ಭಯ ಯಾಕೆ, ಎಲ್ಲಿಂದ ಬಂದಿದೆ ಎಂಬುದನ್ನು ಪರಿಶೀಲಿಸಬೇಕಿದೆ. ಅವರ ಭಯ ಗರ್ಭಧಾರಣೆ, ಹೆರಿಗೆ ನೋವಿನ ಬಗ್ಗೆ ಇರುವುದೇ ಆದರೆ, ಅದಕ್ಕೊಂದು ಹೆಸರೂ ಇದೆ- ಟೋಕೋಫೋಬಿಯಾ (Tocophobia). ಇದನ್ನು ಹೊಂದಿರುವವರಲ್ಲಿ ಸೆಕ್ಸ್ ಮಾಡುತ್ತಿದ್ದರೂ ಆ ಸಂದರ್ಭದಲ್ಲಿ ಗರ್ಭ ಧರಿಸಬಹುದಾ ಎಂಬ ಆತಂಕವೇ ಅಧಿಕವಾಗಿ, ಸಂಭೋಗವನ್ನು ಆನಂದಿಸಲು ಸಾಧ್ಯ ಆಗುವುದಿಲ್ಲ. ಹೀಗಾಗಿಯೇ ಅವರು ಸದಾ ಕಾಂಡೋಂ ಧರಿಸಲು ನಿಮ್ಮಲ್ಲಿ ವರಾತ ಮಾಡುತ್ತ ಇರಬಹುದು.
ಇದರಿಂದ ಪಾರಾಗಲು ಇರುವ ದಾರಿ ಅಂದ್ರೆ, ಸದ್ಯಕ್ಕೆ ನಿಮಗೆ ಮಗು ಮಾಡಿಕೊಳ್ಳುವ ಯಾವುದೇ ಉದ್ದೇಶ ಇಲ್ಲ ಎಂದು ಆಕೆಗೆ ನೀವು ಖಚಿತಪಡಿಸಬೇಕು. ಮಾತಿನಲ್ಲಿ ಮಾತ್ರವಲ್ಲ. ಕ್ರಿಯೆಯಿಂದಲೂ ತೋರಿಸಬೇಕು. ಆಕೆಯ ಪೀರಿಯೆಡ್ಸ್ ನಂತರದ ಹತ್ತು ದಿನಗಳಿಂದ ಇಪ್ಪತ್ತು ದಿನಗಳ ಅವಧಿಯಲ್ಲಿ ಕಾಂಡೋಂ ಅಥವಾ ಬೇರ್ಯಾವುದೇ ಗರ್ಭನಿರೋಧ ಕ್ರಮಗಳಿಲ್ಲದೆ ಆಕೆಯನ್ನು ಸಮೀಪಿಸಬೇಡಿ. ಸೇಫ್ಟಿ ಪೀರಿಯಡ್‌ನಲ್ಲೂ ಹೆಚ್ಚಿನ ಎಚ್ಚರಿಕೆ ಬಳಸಿಕೊಂಡೇ ಸೆಕ್ಸ್ ಮಾಡುವುದಾಗಿ ಖಚಿತಪಡಿಸಿ. ಇದರಿಂದ ಅವರಿಗೆ ಧೈರ್ಯ ಮೂಡಬಹುದು.
#Feelfree: ಪುರುಷರ ಮನಸ್ಸಿಗೂ ಶಿಶ್ನಕ್ಕೂ ಏನು ಸಂಬಂಧ..?
ಗರ್ಭದ ಭಯ ಅಲ್ಲದೆ ಅವರಲ್ಲಿ ಬೇರ್ಯಾವುದಾದರೂ ಭಯ ಇದೆಯಾ ಎಂಬುದನ್ನೂ ಪರಿಶೀಲಿಸಿ. ಉದಾಹರಣೆಗೆ, ಇನ್‌ಫೆಕ್ಷನ್ ಆಗುವ ಭಯ ಇತ್ಯಾದಿ. ಹಾಗೇನಾದರೂ ಇದ್ದರೆ ಗೈನಕಾಲಜಿಸ್ಟ್ ಅಥವಾ ಲೈಂಗಿಕ ತಜ್ಞರ ಸಲಹೆ ಕೌನ್ಸೆಲಿಂಗ್ ಅಗತ್ಯವಾದೀತು.
ಪ್ರಶ್ನೆ: ನನ್ನ ಶಿಶ್ನ ನಿಮಿರಿದಾಗ ಬಲಗಡೆಗೆ ಬಾಗುತ್ತದೆ. ಇದರಿಂದ ಮುಂದೆ ಸಹಜ ಲೈಂಗಿಕ ಕ್ರಿಯೆ ನಡೆಸಲು ಸಾಧ್ಯವೇ?
ಉತ್ತರ: ನೂರರಲ್ಲಿ ಇಪ್ಪತ್ತು ಮಂದಿ ಗಂಡಸರ ಶಿಶ್ನ ಅಲ್ಪಸ್ವಲ್ಪ ಬಾಗಿಯೇ ಇರುತ್ತದೆ ಎಂದು ಅಧ್ಯಯನಗಳು ಹೇಳಿವೆ. ನಿಮ್ಮಸೆಕ್ಸ್ ಸುಖಕ್ಕೆ ಏನೂ ತೊಂದರೆಯಿಲ್ಲ.
#Feelfree: ನಾನು ಒಂಟಿ, ಸೆಕ್ಸ್ ಟಾಯ್ಸ್ ಬಳಸಬಹುದೇ?
ಪ್ರಶ್ನೆ: ಪೋರ್ನ್‌ನಲ್ಲಿ, ಕೆಲವು ಗಂಡಸರ ಶಿಶ್ನ ತೊಂಬತ್ತು ಡಿಗ್ರಿಗಿಂತಲೂ ಹೆಚ್ಚಿಗೆ ಮೇಲಕ್ಕೆ ನಿಮಿರಿರುವುದು ಕಾಣಿಸುತ್ತದೆ. ಸರಿಯಾದ ಲೈಂಗಿಕ ಸುಖಕ್ಕೆ ಹೀಗೆ ಮೇಲ್ಮುಖವಾಗಿ ಬಾಗುವುದು ಅಗತ್ಯವೇ?
ಉತ್ತರ: ಅದೇನೂ ಅವಶ್ಯಕತೆ ಇಲ್ಲ. ತೊಂಬತ್ತು ಡಿಗ್ರಿ ವರೆಗೆ ನಿಮಿರಿದರೆ ಸಾಕಷ್ಟಾಯಿತು.
#Feelfree: ಸೆಕ್ಸ್‌ಗೆ ಮೊದಲು ಅಲ್ಲಿಗೆ ಸ್ಯಾನಿಟೈಸರ್ ಹಚ್ಕೋ ಅಂತಾಳೆ.!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.