ಸಂಗಾತಿ ಹುಡುಕಲು ಆ್ಯಪ್, ಕ್ಲಬ್‌ಗೆ ಹೋಗಬೇಕಿಲ್ಲ, ಇಲ್ಲಿ ಪಿಂಕ್ ಬಾಸ್ಕೆಟ್ ಹಿಡಿದು ಶಾಪಿಂಗ್ ಮಾಡಿದ್ರೆ ಸಾಕು

Published : Jul 14, 2026, 12:15 PM IST
Finland Pink Basket Trend Replaces Dating Apps

ಸಾರಾಂಶ

ನೀವು ಸಿಂಗಲ್ ಆಗಿದ್ದೀರಾ, ನನಗೂ ಒಬ್ಬ ಗೆಳೆಯಬೇಕು, ಗೆಳತಿ ಬೇಕು ಅಂತಾ ಅನಿಸುತ್ತಿದೆಯಾ ಯಾಕೋ ಇಂದು? ಹಾಗಿದ್ರೆ ನೀವು ಡೇಟಿಂಗ್ ಆ್ಯಪ್, ಬಾರ್, ಕ್ಲಬ್, ಮ್ಯಾಟ್ರಿಮೋನಿ ಸೈಟ್ ಹುಡುಕಬೇಕಿಲ್ಲ. ಇಲ್ಲಿ ಪಿಂಕ್ ಬಾಸ್ಕೆಟ್ ಹಿಡಿದು ಶಾಪಿಂಗ್ ಮಾಡಿದರೆ ಸಾಕು

ಪ್ರಣಯ ಹಕ್ಕಿಗಳು ಕೈ ಕೈ ಹಿಡಿದು ಸುತ್ತಾಡುವಾಗ, ಬೈಕ್, ಕಾರಿನಲ್ಲಿ ಜೊತೆಯಾಗಿ ಪ್ರಯಣ ಮಾಡುವಾಗ ನನಗೂ ಒಬ್ಬ ಗೆಳೆಯಬೇಕು, ಗೆಳತಿ ಬೇಕು ಎಂದು ಸಿಂಗಲ್ ಇದ್ದವರಿಗೆ ಅನಿಸದೇ ಇರದು. ನಮ್ ಜೀವನ ರೀಲ್ಸ್ ನೋಡಿಯೇ ಮುಗಿದು ಹೋಯ್ತಲ್ಲಾ ಎಂದು ಕೊರಗುವವರು ಇದ್ದಾರೆ. ರೆಡಿ ಟು ಮಿಂಗಲ್ ಅಂತಾ ಡೇಟಿಂಗ್ ಆ್ಯಪ್, ಕ್ಲಬ್, ಬಾರ್ ಸೇರಿದಂತೆ ಹಲವು ಪ್ರಯತ್ನಗಳನ್ನು ಮಾಡುವುದು, ಇದಕ್ಕಾಗಿ ಖರ್ಚು ಮಾಡಿ ಸುಸ್ತಾದವರೂ ಇದ್ದಾರೆ, ಮೋಸ ಹೋದವರು ಇದ್ದಾರೆ. ಆದರೆ ಇಲ್ಲೊಂದು ವಿಶೇಷ ಪ್ರಯತ್ನವನ್ನು ಸೂಪರ್ ಮಾರ್ಕೆಟ್ ಮಾಡಿದೆ. ನೀವು ಸಂಗಾತಿ ಹುಡುಗಲು ಡೇಟಿಂಗ್ ಆ್ಯಪ್, ಕ್ಲಬ್, ಬಾರ್, ಮ್ಯಾಟ್ರಿಮೋನಿ ಸೈಟ್ ಹುಡುಕಬೇಕಿಲ್ಲ. ಜಸ್ಟ್ ಈ ಸೂಪರ್ ಮಾರ್ಕೆಟ್‌ಗೆ ಹೋಗಿ ಪಿಂಕ್ ಬಾಸ್ಕೆಟ್ ಹಿಡಿದು ಶಾಪಿಂಗ್ ಮಾಡಿದರೆ ಸಾಕು. ನಿಮ್ಮ ಕನಸು ನನಸಾಗಲಿದೆ.

ಯಾರೆಲ್ಲಾ ಸಿಂಗಲ್ ಇದ್ದೀರಾ?

ಸೂಪರ್ ಮಾರ್ಕೆಟ್‌ನಲ್ಲಿ ಸಾಮಾನ್ಯ ಕಪ್ಪು, ಗ್ರೇ, ನೀಲಿ ಬಾಸ್ಕೆಟ್ ಇಟ್ಟಿರುತ್ತಾರೆ. ಇಲ್ಲೂ ಕೂಡ ಈ ಬಣ್ಣದ ಬಾಸ್ಕೆಟ್ ಜೊತೆ ಪಿಂಕ್ ಬಾಸ್ಕೆಟ್ ಇಡಲಾಗಿದೆ. ಯಾರೆಲ್ಲಾ ಸಿಂಗಲ್ ಆಗಿದ್ದೀರಿ, ಯಾರು ಮಿಂಗಲ್ ಆಗಲು ರೆಡಿ ಇದ್ದೀರಿ ಅವರು ಮಾತ್ರ ಈ ಪಿಂಕ್ ಬಾಸ್ಕೆಟ್ ಹಿಡಿದು ತಮಗೆ ಬೇಕಾದ ವಸ್ತುಗಳನ್ನು ಶಾಪಿಂಗ್ ಮಾಡಬಹುದು. ತರಕಾರಿಯಿಂದ ಹಿಡಿದು ಯಾವುದೇ ವಸ್ತುಗಳ ಶಾಪಿಂಗ್ ಒಕೆ. ಇಂತಿಷ್ಟೇ ಶಾಪಿಂಗ್ ಮಾಡಬೇಕು ಎಂದಿಲ್ಲ. ನೀವು ಅತೀ ಸುಲಭವಾಗಿ ಸಂಗಾತಿಯನ್ನು ಹುಡುಕಲು ಸಾಧ್ಯವಿದೆ. ಆದರೆ ಈ ಆಫರ್,ಹಾಗೂ ಸೌಲಭ್ಯ ಇರೋದು ಫಿನ್‌ಲ್ಯಾಂಡ್‌ನಲ್ಲಿ.

ಪಿಂಕ್ ಬಾಸ್ಕೆಟ್ ಹಿಡಿದರೆ ಸಂಗಾತಿ ಸಿಕ್ತಾರ

ಪಿಂಕ್ ಬಾಸ್ಕೆಟ್ ಹಿಡಿದ ತಕ್ಷಣಕ್ಕೆ ನಿಮ್ಮ ಸುತ್ತ ಸಂಗಾತಿಗಳು ಬಂದು ನಿಲ್ಲುವುದಿಲ್ಲ, ಅಥವಾ ಪ್ರಪೋಸಲ್ ಬರುವುದಿಲ್ಲ. ಫಿನ್‌ಲ್ಯಾಂಡ್‌ನ ಅತೀ ದೊಡ್ಡ ಕೆ ಸೂಪರ್ ಮಾರ್ಕೆಟ್, ಎಸ್ ಸೂಪರ್ ಮಾರ್ಕೆಟ್‌ನಲ್ಲಿ ಮಾತ್ರ ಈ ಸೌಲಭ್ಯವಿದೆ. ಈ ಎರಡು ಮಳಿಗೆಗಳಲ್ಲಿ ತಮಗೆ ಸಂಗಾತಿ ಬೇಕು ಎಂದವರು ಪಿಂಕ್ ಬಾಸ್ಕೆಟ್ ಹಿಡಿದು ಶಾಪಿಂಗ್ ಮಾಡಬೇಕು. ಹೀಗೇ ರೀತಿ ಯಾರೆಲ್ಲಾ ಸಿಂಗಲ್ ಆಗಿದ್ದು, ಓಪನ್ ಸಂಗಾತಿ ಹುಡುಕಾಟಕ್ಕೆ ರೆಡಿ ಇದ್ದವರು ಇದೇ ಬಾಸ್ಕೆಟ್ ಹಿಡಿದು ಶಾಪಿಂಗ್ ಮಾಡುತ್ತಾರೆ. ಪಿಂಕ್ ಬಾಸ್ಕೆಟ್ ಹಿಡಿದವರು ಭೇಟಿಯಾಗಿ ಮಾತುಕತೆ ನಡೆಸಬಹುದು, ನಂಬರ್ ಬದಲಾಯಿಸಿ ಚಾಟಿಂಗ್ ಶುರುಮಾಡಬಹುದು. ಹೀಗೆ ಹಲವರು ಸಂಗಾತಿ ಹುಡುಕಿದ್ದಾರೆ.

ವ್ಯಾಪಾರ ಹೆಚ್ಚಿಸಿಕೊಂಡ ಸೂಪರ್ ಮಾರ್ಕೆಟ್

ಈ ಹೊಸ ಪ್ರಯತ್ನದಿಂದ ಎಷ್ಟು ಮಂದಿ ಸಂಗಾತಿ ಹುಡುಕುವಲ್ಲಿ ಯಶಸ್ವಿಯಾಗಿದ್ದಾರೆ, ಯಾರ ರಿಲೇಶನ್‌ಶಿಪ್ ಮದುವೆ ಅರ್ಥ ಪಡೆದಿದೆ ಅನ್ನೋ ಕುರಿತು ಸ್ಪಷ್ಟ ಅಂಕಿ ಅಂಶಗಳು ಲಭ್ಯವಿಲ್ಲ. ಆದರೆ ಈ ಪ್ರಯೋಗದಿಂದ ಸೂಪರ್ ಮಾರ್ಕೆಟ್ ವ್ಯಾಪಾರ ಹೆಚ್ಚಾಗಿದೆ.ಯುವ ಸಮೂಹ ಇಲ್ಲಿ ಶಾಪಿಂಗ್ ಮಾಡಲು ಬರುತ್ತಿದ್ದಾರೆ. ಹಲವು ಬಾರಿ ಪಿಂಕ್ ಬಾಸ್ಕೆಟ್ ಹಿಡಿದು ಇಷ್ಟವಾದರ ಸಂಗಾತಿ ನೋಡಲು, ಮಾತನಾಡಿಸಲು ಹೆಚ್ಚಿನ ಶಾಪಿಂಗ್ ಮಾಡುತ್ತಿದ್ದಾರೆ.

ಈ ತರ ಒಂದು ಮ್ಯಾಟ್ರೇ ಗೊತ್ತಿರಲಿಲ್ಲ

ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದ್ದಂತೆ ಫಿಲ್‌ಲ್ಯಾಂಡ್‌ನಲ್ಲಿ ಕೆಲ ವರ್ಷಗಳಿಂದ ನೆಲೆಸಿರುವ ಹಲವರು ಪ್ರತಿಕ್ರಿಯಿಸಿದ್ದಾರೆ. ಈ ರೀತಿಯ ಒಂದು ಆಯ್ಕೆ ಇದೆ ಅನ್ನೋ ವಿಷಯವೇ ಗೊತ್ತಿರಲಿಲ್ಲ. ಫಿನ್‌ಲ್ಯಾಂಡ್‌ನಲ್ಲಿ ಪುರುಷರು ಮಹಿಳೆಯರನ್ನು ಅಪ್ರೋಚ್ ಆಗಲ್ಲ, ಇಲ್ಲಿ ಮಹಿಳೆಯರೇ ಪುರುಷರಿಗೆ ಪ್ರಪೋಸ್ ಮಾಡಬೇಕು, ಅಪ್ರೋಚ್ ಮಾಡಬೇಕು. ಆದರೆ ಪಿಂಕ್ ಬಾಸ್ಕೆಟ್ ಹೊಸ ಸಂಪ್ರದಾಯ ಹುಟ್ಟು ಹಾಕಿದೆ ಎಂದು ಹಲವರು ಹೇಳಿದ್ದಾರೆ.

 

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಾಜ್ಯಸಭಾ ಸಂಸದನ ಕೈ ಹಿಡಿಯುತ್ತಿರುವ ಮಾಡೆಲ್ ಕೈನಾತ್ ಧರ್ ಯಾರು? ಗೂಗಲ್‌ನಲ್ಲಿ ಭಾರಿ ಸರ್ಚ್
ಆಸ್ಟ್ರೇಲಿಯಾಕ್ಕೆ ಹಾರಿದ ಆಮೀರ್​ ಖಾನ್​: ಇನ್ನೂ ನಿಂತಿಲ್ಲ 5 ಕೋಟಿ ಉಂಗುರದ ಚರ್ಚೆ- ಏನಿದರ ವಿಶೇಷತೆ