
ಏಷ್ಯಾದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ. ಅವರು ಸದಾ ಸೌಮ್ಯ, ಶಾಂತ ಮತ್ತು ಸರಳವಾಗಿ ಕಾಣಿಸಿಕೊಳ್ಳುವ ವ್ಯಕ್ತಿ. ಜನರು ಅವರನ್ನು ಶಾಂತ ಮತ್ತು ಸರಳ ಸ್ವಭಾವದಲ್ಲಿರುವಾಗ್ಲೇ ನೋಡಿದ್ದಾರೆ. ಸಣ್ಣಪುಟ್ಟ ಕೆಲಸ ಮಾಡುವ ನಮಗೆ ಕೋಪ ನೆತ್ತಿಗೇರುತ್ತಿರುತ್ತದೆ. ಅಷ್ಟೊಂದು ಜವಾಬ್ದಾರಿ ನಿರ್ವಹಿಸುವ ಮುಖೇಶ್ ಅಂಬಾನಿಗೆ ಕೋಪ ಬರಲ್ವಾ ಎನ್ನುವ ಪ್ರಶ್ನೆ ಬಹುತೇಕ ಎಲ್ಲರನ್ನು ಕಾಡೋದು ಸಾಮಾನ್ಯ.
ಕೋಪ (Anger) ಪ್ರತಿಯೊಬ್ಬರಲ್ಲೂ ಇದ್ದೇ ಇದೆ. ಕೆಲವರು ಇದನ್ನು ಅರೆ ಕ್ಷಣದಲ್ಲಿ ಹೊರ ಹಾಕಿದ್ರೆ ಮತ್ತೆ ಕೆಲವರು ನುಂಗಿಕೊಳ್ತಾರೆ. ಇನ್ನು ಕೆಲವರು ತಮ್ಮ ಶಾಂತ ಸ್ವಭಾವದಿಂದ ಕೋಪವನ್ನು ಹತ್ತಿಕ್ಕುತ್ತಾರೆ. ಇದ್ರಲ್ಲಿ ಮುಖೇಶ್ ಅಂಬಾನಿ (Mukhesh Ambani) ಕೂಡ ಸೇರಿದ್ದಾರೆ. ಮುಖೇಶ್ ಅಂಬಾನಿಗೆ ಬಹಳ ಅಪರೂಪಕ್ಕೆ ಕೋಪ ಬರುತ್ತದೆ. ಬಂದ ಕೋಪ ಕೆಲವೇ ಕ್ಷಣಗಳಲ್ಲಿ ಮಾಯವಾಗುತ್ತದೆ.
ತಮನ್ನಾರನ್ನು ಮದ್ವೆಯಾಗೋದು ನಿಜನಾ ಕೇಳಿದ್ರೆ ವಿಜಯ್ ವರ್ಮಾ ಹೀಗ್ ಹೇಳೋದಾ? ಉಫ್ ಅಂತಿದ್ದಾರೆ ಫ್ಯಾನ್ಸ್!
ನೀತಾ (Neeta) ಅಂಬಾನಿ ತಮ್ಮ ಪತಿ ಮುಖೇಶ್ ಅಂಬಾನಿಯವರನ್ನು ಈ ವಿಷ್ಯದಲ್ಲಿ ಅನೇಕ ಬಾರಿ ಹೊಗಳಿದ್ದಾರೆ. ಮುಖೇಶ್ ಅಂಬಾನಿ ತುಂಬಾ ಸೌಮ್ಯ. ಅವರು ಕೋಪಗೊಳ್ಳುವುದಿಲ್ಲ ಎಂದು ಅನೇಕ ಬಾರಿ ಹೇಳಿದ್ದನ್ನು ನಾವು ಕೇಳ್ಬಹುದು. ನೀತಾ ಅಂಬಾನಿ ಹಾಗೂ ಮುಖೇಶ್ ಅಂಬಾನಿ ಮದುವೆಯಾಗಿ ಸುಮಾರು 40 ವರ್ಷಗಳು ಕಳೆದಿವೆ. ಇಂದಿಗೂ ನೀತಾ ತಮ್ಮ ಪತಿ ಮುಖೇಶ್ ಅಂಬಾನಿಯವರನ್ನು ಹೊಗಳೋದು ನಿಲ್ಲಿಸಿಲ್ಲ. ಹಾಗಂತ ಮುಖೇಶ್ ಅಂಬಾನಿ ಕೋಪಗೊಳ್ಳೋದೇ ಇಲ್ಲ ಎಂದಲ್ಲ. ಅಪರೂಪಕ್ಕೆ ಬರುವ ಅವರ ಕೋಪವನ್ನು ಹೇಗೆ ತಣಿಸಬೇಕು ಎಂಬ ಮ್ಯಾಜಿಕ್ ನೀತಾ ಅಂಬಾನಿಗೆ ತಿಳಿದಿದೆ. ಮುಖೇಶ್ ಕೋಪಗೊಂಡಾಗ ನೀತಾ ಅಂಬಾನಿ ಅವರು ತಮ್ಮಲ್ಲಿರುವ ದಂಡವನ್ನು ಬಳಸುತ್ತಾರೆ. ಅವರ ದಂಡ ಯಾವುದು ಎಂಬುದನ್ನು ಸಂದರ್ಶನವೊಂದರಲ್ಲಿ ನೀತಾ ಅಂಬಾನಿ ಹೇಳಿದ್ದಾರೆ.
ಮುಖೇಶ್ ಅಂಬಾನಿ ಶಾಂತವಾಗೋದು ಹೇಗೆ ಗೊತ್ತಾ? : ಮುಖೇಶ್ ಅಂಬಾನಿ ಕೋಪಗೊಂಡಾಗ ಅವರನ್ನು ಶಾಂತಗೊಳಿಸುವ ಮಂತ್ರದಂಡ ಮಗಳು ಇಶಾ ಅಂಬಾನಿ. ಮುಖೇಶ್ ಅಂಬಾನಿ ಎಷ್ಟೇ ಅಸಮಾಧಾನ ಅಥವಾ ಕೋಪಗೊಂಡರೂ ಇಶಾ ಅವರನ್ನು ನಿಮಿಷಗಳಲ್ಲಿ ಶಾಂತಗೊಳಿಸುತ್ತಾರೆ. ಇಶಾ ಒಮ್ಮೆ ಪಪ್ಪು ಎಂದು ಕರೆದರೆ ಸಾಕು ಮುಖೇಶ್ ಅಂಬಾನಿ ಕೋಪ ಬರ್ರನೆ ಇಳಿದು ಹೋಗುತ್ತದೆ ಎನ್ನುತ್ತಾರೆ ನೀತಾ ಅಂಬಾನಿ. ಮುಖೇಶ್ ಅಂಬಾನಿಗೆ ಮಗಳೆಂದ್ರೆ ಪ್ರಾಣ. ಇಶಾ ಕೂಡ ಆಗಾಗ್ಗೆ ತನ್ನ ತಂದೆಯ ಕೈ ಹಿಡಿದು ನಿಲ್ಲೋದನ್ನು ನೀವು ಕಾಣಬಹುದು. ಇಶಾ ಈಗ ತಾಯಿಯಾಗಿದ್ದರೂ ಮುಖೇಶ್ ಅಂಬಾನಿಗೆ ಇಶಾ ಇನ್ನೂ ಮುದ್ದು, ಪುಟ್ಟ ಮಗಳು. ಇಶಾ ತಮ್ಮ ಅವಳಿ ಮಕ್ಕಳ ಹುಟ್ಟುಹಬ್ಬದ ಸಂದರ್ಭದಲ್ಲಿ ತಂದೆ ಮುಖೇಶ್ ಅಂಬಾನಿ ಜೊತೆ ಕಾಣಿಸಿಕೊಂಡಿದ್ದರು. ಅವರಿಬ್ಬರು ಫೋಟೋಕ್ಕೆ ಫೋಸ್ ನೀಡಿದ್ದರು. ಮುಕೇಶ್ ಅಂಬಾನಿ ಉತ್ತಮ ಉದ್ಯಮಿ ಮಾತ್ರವಲ್ಲ. ಅವರು ತಮ್ಮ ಮಕ್ಕಳಿಗೆ ಸಮಯವನ್ನು ನೀಡೋದ್ರಲ್ಲಿ ಹಿಂದೆ ಬಿದ್ದಿಲ್ಲ. ಉತ್ತಮ ತಂದೆ ಎಂಬ ಹೆಗ್ಗಳಿಕೆ ಪಡೆದಿದ್ದಾರೆ.
ಮಗನಿಗೆ ಆಸ್ತಿ ಕೊಟ್ಟು ಕೆಟ್ಟೆ; ನಾನು ರಸ್ತೆಯಲ್ಲಿದ್ರೇನೆ ಅವನಿಗೆ ಖುಷಿ: ರೇಮಂಡ್ಸ್ ಸಂಸ್ಥಾಪಕ ಬೇಸರ
ಮುಖೇಶ್ ಅಂಬಾನಿಗೆ ಮಾತ್ರವಲ್ಲ ತಾಯಿ ನೀತಾ ಅಂಬಾನಿಗೂ ಇಶಾ ಅಂದ್ರೆ ತುಂಬಾ ಇಷ್ಟ. ಹಿಂದೆ ಸಂದರ್ಶನವೊಂದರಲ್ಲಿ ನೀತಾ ಅಂಬಾನಿ, ತನ್ನ ಗಂಡು ಮಕ್ಕಳಿಗೆ ನೀಡಿದ ಸ್ಥಾನವನ್ನೇ ಮಗಳು ಇಶಾಗೆ ನೀಡಿರೋದಾಗಿ ಹೇಳಿದ್ದರು. ಹೆಣ್ಣು ಮಕ್ಕಳು ಯಾವಾಗ್ಲೂ ಮನೆಯ ಸೌಭಾಗ್ಯವಾಗಿರ್ತಾರೆ. ಎಲ್ಲರಿಗೂ ಹೆಣ್ಣು ಮಕ್ಕಳ ಮೇಲೆ ವಿಶೇಷ ಪ್ರೀತಿ ಇರುತ್ತದೆ. ಅದ್ರಲ್ಲೂ ತಂದೆಗೆ ಮಗಳ ಮೇಲೆ ಒಂದು ಕೈ ಹೆಚ್ಚೇ ಪ್ರೀತಿ ಇರುತ್ತೆ ಅಂದ್ರೆ ತಪ್ಪಲ್ಲ. ಬಹುತೇಕ ಅಪ್ಪಂದಿರು ಮಗನಿಗಿಂತ ಮಗಳ ಮೇಲೆ ಹೆಚ್ಚಿನ ಪ್ರೀತಿ, ಭರವಸೆ ಹೊಂದಿರುತ್ತಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.