
ವಯಸ್ಸು ನಲವತ್ತಾದ್ಮೇಲೆ ಮದುವೆಗೆ ಮುಂದಾದ್ರೆ ನಮ್ಮಲ್ಲಿ ಮೂಗು ಮರಿಯೋರೇ ಹೆಚ್ಚು. ಇಷ್ಟು ವಯಸ್ಸಿನಲ್ಲಿ ಮದುವೆಯಾ ಎಂದು ಹುಬ್ಬೇರಿಸ್ತಾರೆ. ಮಾತುಗಳು ಏನೇ ಇರಲಿ, ತಮ್ಮ ಇಳಿ ವಯಸ್ಸಿನಲ್ಲಿ ಸಂಗಾತಿಯನ್ನು ಬಯಸಿ ಮದುವೆಯಾದವರ ಸಂಖ್ಯೆ ಸಾಕಷ್ಟಿದೆ. ಕೆಲ ಬಾಲಿವುಡ್ ಸ್ಟಾರ್ಸ್ ಕೂಡ 50ರ ಗಡಿದಾಟಿದ ಮೇಲೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮತ್ತೆ ಕೆಲವರು ಎರಡನೇಯ, ಮೂರನೇಯ ಮದುವೆಯಾಗಿದ್ದಾರೆ. ಸದ್ಯ ಸೌದಿ ಅರೇಬಿಯಾದ 90 ವರ್ಷದ ನಾಸಿರ್ ಬಿನ್ ಸುದ್ದಿಯಲ್ಲಿದ್ದಾರೆ.
ಕೆಲವೇ ದಿನಗಳ ಹಿಂದೆ ಸೌದಿ ಅರೇಬಿಯಾ (Saudi Arabia) ದ ನಾಸಿರ್ ಬಿನ್ ಐದನೇ ಮದುವೆಯಾಗಿ ವಿಶ್ವದಾದ್ಯಂತ ಚರ್ಚೆಗೆ ಬಂದಿದ್ದಾರೆ. ನಾಸಿರ್ ಬಿನ್ ಹೆಸರು ಕೂಡ ಮದುವೆ (Marriage) ಯಂತೆ ದೊಡ್ಡದಿದೆ. ನಾಸಿರ್ ಬಿನ್ (Nasir Bin ) ನಿಜವಾದ ಹೆಸರು ನಾಸಿರ್ ಬಿನ್ ದಹೀಮ್ ಬಿನ್ ವಾಕ್ ಅಲ್ ಮುರ್ಷಿದಿ ಅಲ್ ಒಟೈಬಿ ಅಫೀಫ್.
ಸರ್ಕಾರಿ ಕೆಲಸವಿರೋ ಹುಡುಗನ ರಿಜೆಕ್ಟ್ ಮಾಡಿ ಪಿಕಪ್ ಚಾಲಕನನ್ನು ಮದ್ವೆಯಾದ ಯುವತಿ
ನಾಸಿರ್ ಬಿನ್‌ಗೆ ಅನೇಕ ಮಕ್ಕಳು, ಮೊಮ್ಮಕ್ಕಳಿದ್ದಾರೆ. ದೇವರ ನಾಮ ಸ್ಮರಣೆ ಮಾಡ್ತಾ ಕೊನೆ ದಿನಗಳನ್ನು ಎಣಿಸಬೇಕಿದ್ದ ನಾಸಿರ್ 90ನೇ ವಯಸ್ಸಿನಲ್ಲಿ ಮದುವೆಯಾಗಿದ್ದಾರೆ. ಈ ವಯಸ್ಸಿನಲ್ಲೂ ಮಕ್ಕಳ ಬಯಕೆ ಅವರಿಗಿದೆ. ವೃದ್ಧಾಪ್ಯದಲ್ಲಿ ದಾಂಪತ್ಯಕ್ಕೆ ಕಾಲಿಟ್ಟ ನಾಸಿರ್ ಬಿನ್, ಯುವಕರಿಗೆ ಮದುವೆಯಾಗುವಂತೆ ಸಲಹೆ ನೀಡಿದ್ದಾರೆ. ಮದುವೆಯಿಂದ ಆಗುವ ಲಾಭಗಳನ್ನು ಅವರು ಹೇಳಿದ್ದಾರೆ. ಅದ್ರಲ್ಲಿ ಕೆಲವು ನಂಬಿಕೆಯನ್ನು ಆಧರಿಸಿದ್ರೆ ಮತ್ತೆ ಕೆಲವು ಸಂತೋಷದ ಜೀವನಕ್ಕೆ ಸಂಬಂಧಿಸಿವೆ.
ಸಂದರ್ಶನದಲ್ಲಿ ಮಾತನಾಡಿದ್ದ ನಾಸಿರ್, ತಾನು ಮತ್ತೆ ಮದುವೆಯಾಗಲು ಬಯಸ್ತೇನೆ ಎಂದಿದ್ದಾರೆ. ಇಸ್ಲಾಂ ಧರ್ಮಕ್ಕೆ ಬದ್ಧವಾಗಿ ಮದುವೆಯಾಗ್ತಿದ್ದೇನೆ ಎಂದಿದ್ದ ಅವರು, ಮದುವೆ ಸಾಂತ್ವಾನ, ಪ್ರಾಪಂಚಿಕ ಸುಖ ನೀಡುತ್ತದೆ ಎಂದಿದ್ದಾರೆ. ಮದುವೆ ಪ್ರಯೋಜನವನ್ನು ವಿವರಿಸಿದ ನಾಸಿರ್ ಬಿನ್, ಹನಿಮೂನ್ ಬಗ್ಗೆ ನನಗೆ ಸಂತೋಷವಿದೆ ಎಂದಿದ್ದಾರೆ. ದಾಂಪತ್ಯ ಮದುವೆಯಾಗೋದನ್ನು ತಡೆಯಲು ಸಾಧ್ಯವಿಲ್ಲ ಎಂದು ನಾಸಿರ್ ಹೇಳಿದ್ದಾರೆ.
Parenting Tips : ಎಷ್ಟೇ ಕಿರುಚಿದ್ರೂ ಮಕ್ಕಳು ಮಾತು ಕೇಳ್ತಿಲ್ವಾ? ಅದಕ್ಕಿಲ್ಲಿದೆ ಸೂಪರ್, ಸಿಂಪಲ್ ಟಿಪ್ಸ್
ಮದುವೆ ಬಗ್ಗೆ ನಾಸಿರ್ ನೀಡಿದ ಸಲಹೆ ಏನು? :
• ಎಲ್ಲ ಯುವಕರಿಗೂ ಮದುವೆಯಾಗುವಂತೆ ಸಲಹೆ ನೀಡಿದ ನಾಸಿರ್, ವೈವಾಹಿಕ ಜೀವನವು ಶಾಂತಿ ಮತ್ತು ಸಮೃದ್ಧಿಯ ಮಾರ್ಗವಾಗಿದೆ ಎಂದಿದ್ದಾರೆ. ತಮ್ಮ ಆರೋಗ್ಯಕ್ಕೆ ಪ್ರಮುಖ ಕಾರಣ ಮದುವೆ ಎಂದು ಐದನೇ ಮದುವೆಯಾದ ನಾಸಿರ್ ಹೇಳಿದ್ದಾರೆ.
• 90ನೇ ವರ್ಷದಲ್ಲಿ ಐದನೇ ಮದುವೆಯಾದ ನಾಸಿರ್ ಹೇಳುವ ಮಾತಿನಲ್ಲೂ ಸತ್ಯವಿದೆ. ನಾಸಿರ್ ಪ್ರಕಾರ, ಸಂತೃಪ್ತ ಜೀವನಕ್ಕೆ ಮದುವೆ ಬೆಸ್ಟ್. ಅನೇಕ ಸಮೀಕ್ಷೆಗಳೂ ಇದಕ್ಕೆ ಒಪ್ಪಿವೆ. ಸಂಶೋಧನೆಯೊಂದರ ಪ್ರಕಾರ, ಮದುವೆ ಮತ್ತು ಮಾನಸಿಕ ಆರೋಗ್ಯದ ನಡುವೆ ಬಲವಾದ ಸಂಬಂಧವಿದೆ. ಬ್ಯಾಚುಲರ್ ಗಿಂತ 22ರಿಂದ 26 ವರ್ಷದಲ್ಲಿ ಮದುವೆಯಾಗಿ ಸಂಸಾರ ನಡೆಸುತ್ತಿರುವ ಜನರು ತೃಪ್ತ ಹಾಗೂ ಸಂತೋಷದ ಜೀವನ ನಡೆಸುತ್ತಿದ್ದಾರೆ ಎಂಬುದು ಬಹಿರಂಗವಾಗಿದೆ.
ಸಂಶೋಧನೆಯನ್ನು ಗಮನಿಸಿದ್ರೆ ನಾಸಿರ್ ಬಾಬಾ ಹೇಳಿದ ಹೇಳಿಕೆಯಲ್ಲಿ ಯಾವುದೇ ಸುಳ್ಳಿಲ್ಲ ಎನ್ನುವುದು ಸ್ಪಷ್ಟಗಾಗುತ್ತದೆ.
ಮದುವೆಯಿಂದ ಆಗುತ್ತೆ ಇಷ್ಟೆಲ್ಲ ಲಾಭ : ಮದುವೆಯಾದ್ರೆ ಸಮಸ್ಯೆಗಳು ಸುತ್ತಿಕೊಳ್ಳುತ್ತದೆ ಎಂದು ಯುವಜನತೆ ನಂಬಿದ್ದಾರೆ. ಆದ್ರೆ ಮದುವೆ ನಂತ್ರ ಜವಾಬ್ದಾರಿ ಜೊತೆ ಸಂತೋಷದ ಜೀವನ ನಿಮ್ಮದಾಗುತ್ತದೆ. ಕೆಟ್ಟ ಚಟಗಳಿಂದ ಜನರು ದೂರವಿರ್ತಾರೆ ಎಂದು ಸಂಶೋಧನೆಗಳು ಹೇಳಿವೆ. ಒಂಟಿಯಾಗಿರುವ ವ್ಯಕ್ತಿಗಳು ಆಲ್ಕೊಹಾಲ್, ಧೂಮಪಾನ ಚಟಕ್ಕೆ ಬೀಳೋದು ಹೆಚ್ಚು. ಜಂಟಿಯಾಗಿರುವವರು ನಿಯಂತ್ರಣ ಕಲಿತಿರುತ್ತಾರೆ ಎಂದು ವರದಿಯೊಂದು ಹೇಳಿದೆ.
ವೈವಾಹಿಕ ಜೀವನ ಹಾಗೂ ಮರಣದ ಮಧ್ಯೆಯೂ ನಂಟಿದೆ ಎಂಬುದನ್ನ ವರದಿಯೊಂದು ಸ್ಪಷ್ಟಪಡಿಸಿದೆ. ಮದುವೆಯಾಗದ ಜನರಿಗಿಂತ ಮದುವೆಯಾದ 50, 60 ಮತ್ತು 70 ವರ್ಷದ ಜನರು ಹೆಚ್ಚು ವರ್ಷ ಬದುಕುತ್ತಾರೆ ಎಂದು ಸಂಶೋಧನೆ ಹೇಳಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.