'ಅಮ್ಮನ ಮಗ'ನ ಮದ್ವೆಯಾದ್ರೆ ನಿಮ್ಮ ಲೈಫ್​ ಬರ್ಬಾದ್​: ನೂರಾರು ಕೇಸ್​ ಡಿಟೇಲ್ಸ್​ ಕೊಟ್ಟ ಮ್ಯಾಚ್​ ಮೇಕರ್​

Published : May 23, 2026, 01:08 PM IST
Couple and Mother

ಸಾರಾಂಶ

ಗಂಡನು ಮದುವೆಯಾದ ಮೇಲೂ ಅಮ್ಮನ ಮಗನಾಗಿಯೇ ಉಳಿದರೆ ದಾಂಪತ್ಯದಲ್ಲಿ ಬಿರುಕು ಮೂಡುತ್ತದೆ. ತಾಯಿಯ ಅತಿಯಾದ ಮುದ್ದಿನಿಂದ ಬೆಳೆದ ಗಂಡಸರು ಹೆಂಡತಿಯ ಪ್ರೀತಿಯ ಗಂಡನಾಗಲು ವಿಫಲರಾಗುತ್ತಾರೆ, ಇದು ಸಂಬಂಧಗಳ ವಿಚ್ಛೇದನಕ್ಕೆ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ.

ಬಹುತೇಕ ಗಂಡುಮಕ್ಕಳು ಬಯಸುವುದು ತನ್ನ ಪತ್ನಿಯಾಗಿರುವವಳು ತನ್ನ ಅಮ್ಮನ ಗುಣಗಳನ್ನು ಹೊಂದಿರಬೇಕು. ಅಮ್ಮನಂತೆಯೇ ನೋಡಿಕೊಳ್ಳಬೇಕು ಎನ್ನುವುದು. ಅದರಂತೆಯೇ ಹೆಚ್ಚಿನ ಮನೆಗಳಲ್ಲಿ ಮಗಳಿಗೂ ಇದನ್ನೇ ಹೇಳಿಕೊಟ್ಟಿರುತ್ತಾರೆ, ಗಂಡನನ್ನು ಮಗನಂತೆ ನೋಡಿಕೋ ಎಂದು. ಇವತ್ತಿನ ಪರಿಸ್ಥಿತಿಯಲ್ಲಿ ಸಂಬಂಧ ಎನ್ನುವುದು ಹೇಗಿದೆ, ಯಾವ ಪರಿಸ್ಥಿತಿ ಇದೆ ಎನ್ನುವುದು ಗೊತ್ತೇ ಇರುವ ವಿಷಯವಾಗಿದೆ. ಹೆಚ್ಚುತ್ತಿರುವ ಫ್ಯಾಮಿಲಿ ಕೋರ್ಟ್​ಗಳ ಸಂಖ್ಯೆ ನೋಡಿದ್ರೆ ಅದರಲ್ಲಿ ಡಿವೋರ್ಸ್ ಕೇಸ್​ಗಳೇ ತುಂಬಿಹೋಗಿರುತ್ತವೆ. ಇವುಗಳಲ್ಲಿ ಹೆಚ್ಚಿನವು ಕ್ಷುಲ್ಲಕ ಕಾರಣಕ್ಕೆ ಡಿವೋರ್ಸ್​ ಪಡೆದಿರುವುದು, ಅದರಲ್ಲಿ ಮುಖ್ಯವಾಗಿ ಪತಿ-ಪತ್ನಿಯ ನಡುವೆ ಯಾವುದೋ ಚಿಕ್ಕ ವಿಷಯಕ್ಕೆ ಹೊಂದಾಣಿಕೆ ಇಲ್ಲದೇ ಇರುವುದೇ ಆಗಿದೆ.

ಅಮ್ಮನ ಮಗನ ಮದ್ವೆಯಾದ್ರೆ...

ಅದೇನೇ ಇದ್ದರೂ, ಹೆಚ್ಚಿನ ಸಂಬಂಧಗಳು ಹಾಳಾಗುತ್ತಿರುವುದಕ್ಕೆ ಕಾರಣ, ಗಂಡನಾದವ ಮದುವೆಯಾದ ಮೇಲೂ ಅಮ್ಮನ ಮಗನಾಗಿಯೇ ಇರುವುದು ಎನ್ನುತ್ತಾರೆ ಖ್ಯಾತ ಮ್ಯಾಚ್​ ಮೇಕರ್​ ಆನಂದ್​ ಅವರು. ಈಗ ಹೇಳಿಕೇಳಿ ಒಂದೇ ಮಗು ಇರುವ ಕಾಲ. ಇಬ್ಬರು ಇದ್ದರೂ ಒಂದು ಗಂಡುಮಗ ಇದ್ದರಂತೂ ಮುಗಿದೇ ಹೋಯ್ತು. ಹೆಚ್ಚಿನ ಅಮ್ಮಂದಿರಿಗೆ ಗಂಡು ಮಗುವಿನ ಕೈಯಲ್ಲಿ ಏನೂ ಕೆಲಸ ಮಾಡಿಸುವುದಿಲ್ಲ. ಕೆಲಸ ಮಾಡಿಸುವುದು ದೂರದ ಮಾತು ಅವರ ಪ್ರತಿಯೊಂದು ಚಿಕ್ಕಪುಟ್ಟ ಕೆಲಸವನ್ನೂ ತಾವೇ ಮುಂದೆ ನಿಂತು ಮುತುವರ್ಜಿ ವಹಿಸಿ ಮಾಡುವುದು ಉಂಟು. ಏಕೆಂದರೆ ಮಗ ಕುಲದೀಪಕ ಅಲ್ವಾ? ಮಗಳು ಎಷ್ಟೆಂದ್ರೂ ಕೊಟ್ಟ ಹೆಣ್ಣು....ಎನ್ನುವ ಮನಸ್ಥಿತಿ ಇಂದಿನ ಬಹುತೇಕ ಅಪ್ಪ-ಅಮ್ಮಂದಿರಿಗೆ ಇದ್ದದ್ದೇ. ಅದಕ್ಕಾಗಿಯೇ ಮಗನನ್ನು ಅದೆಷ್ಟು ಮುದ್ದು ಮಾಡುತ್ತಾರೆ ಎಂದರೆ, ಒಂದು ಚಿಕ್ಕಪುಟ್ಟ ಕೆಲಸವನ್ನೂ ಅವನ ಕೈಯಲ್ಲಿ ಮಾಡಿಸುವುದಿಲ್ಲ.

ಅಮ್ಮನ ಸೆರಗು ಹಿಡಿಯುವ ಮುದ್ದು ಗಂಡುಗಳು

ಇಂಥ ಗಂಡುಮಕ್ಕಳು ಅಮ್ಮನ ಪರಾವಲಂಬಿಯಾಗಿಬಿಡುತ್ತಾರೆ. ಎಲ್ಲದ್ದಕ್ಕೂ ಅಮ್ಮಾ ಅಮ್ಮಾ ಎಂದು ಮದುವೆಯಾದ್ರೂ ಅಮ್ಮನ ಸೆರಗು ಹಿಡಿದೇ ಹೋಗಬೇಕು. ಅಷ್ಟಕ್ಕೂ ಸೈಕಾಲಾಜಿಯ ಪ್ರಕಾರ ಹೆಚ್ಚಿನ ಅಮ್ಮಂದಿರಿಗೆ ಅದರಲ್ಲಿಯೂ ಒಂದೇ ಮಗ ಇರುವ ಅಮ್ಮನಿಗೆ, ಆ ಪ್ರೀತಿಯನ್ನು ತನ್ನ ಸೊಸೆಯೊಂದಿಗೆ ಹಂಚಿಕೊಳ್ಳಲು ಸಾಧ್ಯವೇ ಆಗದ ಮಾತು. ಅರ್ಥಾತ್​ ಒಂದು ವೇಳೆ ಮದುವೆಯಾದ ಮೇಲೆ ತನ್ನ ಮುದ್ದಿನ ಕಂದ ಹೆಂಡ್ತಿಯ ಮಾತು ಕೇಳಿಬಿಟ್ಟರೆ ಅದನ್ನು ಅಮ್ಮ ಸಹಿಸಿಕೊಳ್ಳಲು ಸಾಧ್ಯವೇ ಇರುವುದಿಲ್ಲ. ಅದು ಕೆಲವೊಮ್ಮೆ ಸಿಕ್ಕಾಪಟ್ಟೆ ಸಿಲ್ಲಿ ವಿಷ್ಯ ಎನ್ನಿಸುವುದೂ ಉಂಟು. ಅಮ್ಮನ ಮಗನಾದ್ರೆ ಇದೇ ಹಣೆಬರಹ. ಬಂದ ಹೆಂಡತಿ ಎಷ್ಟು ಎಂದು ನೋಡ್ತಾಳೆ, ಎಲ್ಲ ವಿಷ್ಯಕ್ಕೂ ಅಮ್ಮ ಅಮ್ಮ ಎಂದು ಮದುವೆಯಾದ ಮೇಲೆ ಹೋಗುವ ಈ ಮುದ್ದಿನ ಅಮ್ಮನ ಮಗ ಎಂದಿಗೂ ಹೆಂಡತಿಯ ಪ್ರೀತಿಯ ಗಂಡ ಆಗುವುದೇ ಇಲ್ಲ, ಅದಕ್ಕೆ ಕಾರಣನೇ ಈ ಮುದ್ದಿನ ಅಮ್ಮ.

ನೋವಿನ ಕಮೆಂಟ್ಸ್​

ಹಲವು ಬಾರಿ ಇದೇ ವಿಷಯ ಬೃಹದಾಕಾರವಾಗಿ ಬೆಳೆದು ಬಿಡುತ್ತದೆ. ಇಂದಿನ ಹೆಚ್ಚಿನ ಹೆಣ್ಣುಮಕ್ಕಳು ಅತ್ತೆ-ಮಾವ ತಮ್ಮ ಜೊತೆ ಇರಬಾರದು ಎಂದಾಗ ಅವರ ಮೇಲೆ ಕೋಪ ಬರುವುದು ಸಹಜವೇ. ಆದರೆ ಅಮ್ಮನ ಮುದ್ದಿನ ಮಗ ಇದ್ದರೆ, ಅಂಥ ಹೆಣ್ಣಿನ ಪಾಡು ದೇವರಿಗೇ ಪ್ರೀತಿ ಎಂದಿದ್ದಾರೆ ಮ್ಯಾಚ್​ ಮೇಕರ್​ ಆನಂದ್​ ಅವರು. ಇಂಥ ಮುದ್ದಿನ ಮಗನನ್ನು ಯಾವುದೇ ಕಾರಣಕ್ಕೂ ಹೆಂಡತಿಯ ಜೊತೆ ಸೇರಲು ಬಿಡುವುದೇ ಇಲ್ಲ ಎಂದಿರುವ ಅವರ ಮಾತಿಗೆ ನೂರಾರು ಹೆಣ್ಣುಮಕ್ಕಳು ತಮ್ಮ ನೋವನ್ನು ಕಮೆಂಟ್ಸ್​ನಲ್ಲಿ ತೋಡಿಕೊಂಡಿರುವುದೇ ಸಾಕ್ಷಿಯಾಗಿದೆ. ಮಗನಿಗೆ ಮದುವೆ ಮಾಡಿಸಬೇಕು, ಆದರೆ ಆತ ಹೆಂಡತಿ ಹೇಳಿದಂತೆ ಕೇಳಬಾರದು, ಸಂಪೂರ್ಣವಾಗಿ ತನ್ನ ವಶದಲ್ಲಿ ಇರಬೇಕು ಎಂದು ಬಯಸುವ ಈ ಅಮ್ಮಂದಿರಿಗೆ ತಾವು ಹಾಗೆ ಯಾಕೆ ಮಾಡ್ತಿದ್ದೇವೆ ಎನ್ನುವುದು ತಿಳಿದೇ ಇರುವುದಿಲ್ಲ. ಉದ್ದೇಶಪೂರ್ವಕವಾಗಿ ಅವರು ಹಾಗೆ ಮಾಡದಿದ್ದರೂ ಅವರ ಮನಸ್ಥಿತಿ ಅವರನ್ನು ಹಾಗೆ ಮಾಡಿಸುತ್ತದೆ. ಆದ್ದರಿಂದ ನಿಮ್ಮ ಲೈಫ್​ ಚೆನ್ನಾಗಿ ಇರಬೇಕು ಎಂದರೆ ಇಂಥ ಅಮ್ಮನ ಮಗನಿಗೆ ಮಾತ್ರ ಮದುವೆಯಾಗಬೇಡಿ ಎನ್ನುತ್ತಾರೆ ಅವರು.

ಅಷ್ಟಕ್ಕೂ ಮದುವೆಗೆ ಮುನ್ನ ಗಂಡಾಗಲಿ, ಹೆಣ್ಣಾಗಲಿ ಎಂಥವರು ಎಂದು ತಿಳಿಯುವುದು ಕಷ್ಟವೇ. ಹಾಗೆನೇ ಇಂದು ಹೆಣ್ಣುಮಕ್ಕಳ ಡಿಮಾಂಡ್​ಗಳು ಕೂಡ ಗಗನಕ್ಕೆ ಏರಿರುತ್ತವೆ. ಅತ್ತೆ-ಮಾವನಿಂದ ಗಂಡನನ್ನು ದೂರ ಮಾಡಲು ಕೆಲವರು ಬಯಸುವುದೂ ಇದೆ ಎನ್ನಿ. ಆದರೆ, ಸದ್ಯ ಇಲ್ಲಿ ಹೇಳ್ತಿರೋದು ಅಮ್ಮನ ಮಗನ ಬಗ್ಗೆ ಮಾತ್ರ.

 

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ತುಳು ಸಂಪ್ರದಾಯಕ್ಕೆ ಮನಸೋತ ನಟಿ ಕರಿಷ್ಮಾ: ಮಂಗಳೂರು ಸ್ಟೈಲ್​ನಲ್ಲಿ ಸೀಮಂತ- ವಿಡಿಯೋ ವೈರಲ್​
Jr NTR, ಪ್ರಭಾಸ್ ಇಬ್ಬರೂ ಅಲ್ಲ! ನಯನತಾರಾ ಬೆಸ್ಟ್ ಫ್ರೆಂಡ್ ಯಾರು ಗೊತ್ತಾ?