ಆಗಸ್ಟ್ ಒಂದರಂದು ಗರ್ಲ್ ಫ್ರೆಂಡ್ ಡೇ ಆಚರಣೆ ಮಾಡಲಾಗುತ್ತದೆ. ಗರ್ಲ್ ಫ್ರೆಂಡ್ ಗೆ ಒಂದು ದಿನ ಇದ್ಮೇಲೆ ಬಾಯ್ ಫ್ರೆಂಡ್ ಗೆ ಬೇಡ್ವಾ? ಹಾಗಾಗೇ ನಮ್ಮವರೆಲ್ಲ ಸೇರಿ ಶುರು ಮಾಡಿದ ದಿನ ಇದು. ಅದ್ರ ಬಗ್ಗೆ ಫುಲ್ ಡಿಟೇಲ್ ಇಲ್ಲಿದೆ.
ಬಾಯ್ ಫ್ರೆಂಡ್ ಇಲ್ಲದ ಯುವತಿಯರ ಸಂಖ್ಯೆ ಬಹಳ ಕಡಿಮೆ ಇದೆ. ಈ ಯುಗದಲ್ಲಿ ಒಬ್ಬರಾದ್ರೂ ಬಾಯ್ ಫ್ರೆಂಡ್ ಇಲ್ಲ ಅಂದ್ರೆ ಹೆಂಗೆ? ನಿಮಗೂ ಬಾಯ್ ಫ್ರೆಂಡ್ ಇದ್ರೆ ಇಂದು ಅವರನ್ನು ಖುಷಿಪಡಿಸಲು ಒಳ್ಳೆ ಅವಕಾಶವಿದೆ. ಇಂದು ರಾಷ್ಟ್ರೀಯ ಬಾಯ್ ಫ್ರೆಂಡ್ ಡೇ. ಪ್ರತಿ ವರ್ಷ ಅಕ್ಟೋಬರ್ 3 ರಂದು ಬಾಯ್ ಫ್ರೆಂಡ್ ಡೇ ಆಚರಣೆ ಮಾಡಲಾಗುತ್ತದೆ.
ನಿಮ್ಮ ಬಾಯ್ ಫ್ರೆಂಡ್ (Boy Friend) ಅಥವಾ ಪತಿಗೆ, ನಿಮ್ಮ ಮನಸ್ಸಿನ ಮಾತನ್ನು ಹೇಳಲು ಒಳ್ಳೆ ಅವಕಾಶವಿದೆ. ನೀವು ಅವರಿಗೆ ಎಷ್ಟು ಪ್ರೀತಿಸುತ್ತೀರಿ ಎಂಬುದನ್ನು ಉಡುಗೊರೆ (Gift) ಅಥವಾ ಮಾತು, ಮೆಸ್ಸೇಜ್ ಮೂಲಕ ತಿಳಿಸಬಹುದು. ನಾವಿಂದು ಬಾಯ್ ಫ್ರೆಂಡ್ ಡೇ ಯಾವಾಗ ಶುರುವಾಯ್ತು ಹಾಗೆ ನಿಮ್ಮ ಬಾಯ್ ಫ್ರೆಂಡ್ ಹೇಗಿರಬೇಕು ಎಂಬುದನ್ನು ಹೇಳ್ತೇವೆ.
ಒಂಟಿಯಾಗಿರೋರು ಅನಗತ್ಯ ಸ್ನೇಹದಿಂದ ದೂರವಿದ್ದಷ್ಟು ಒಳ್ಳೇಯದು!
ರಾಷ್ಟ್ರೀಯ (National) ಬಾಯ್ ಫ್ರೆಂಡ್ ಡೇ ಇತಿಹಾಸ : 2014ರಲ್ಲಿ ಮೊದಲ ಬಾರಿ ಬಾಯ್ ಫ್ರೆಂಡ್ ಡೇಯನ್ನು ಆಚರಿಸಲಾಯ್ತು. ಆದ್ರೆ ಇದು ಅಧಿಕೃತವಾಗಿ ಶುರುವಾಗಿದ್ದು 2016ರಲ್ಲಿ. ಈ ವರ್ಷ ಅಕ್ಟೋಬರ್ 3ರಂದು 45 ಸಾವಿರಕ್ಕೂ ಹೆಚ್ಚು ಟ್ವಿಟರ್ ರವಾನೆಯಾಯ್ತು. 2016ರ ನಂತ್ರ ಅಧಿಕೃತವಾಗಿ ರಾಷ್ಟ್ರೀಯ ಬಾಯ್ ಫ್ರೆಂಡ್ ಡೇ ಆಚರಣೆ ಜಾರಿಗೆ ಬಂತು. ಇದು ಮೊದಲು ಯುನೈಟೆಡ್ ಸ್ಟೇಟ್ಸ್ ನಲ್ಲಿ ಆಚರಣೆಗೆ ಬಂತು. ಇದು ಸಂಪೂರ್ಣ ಇಂಟರ್ನೆಟ್ ಪ್ರೇರಿತವಾಗಿದೆ. ಈ ಬಗ್ಗೆ ಯಾವುದೇ ನಿರ್ಣಯವನ್ನು ಅಂಗೀಕರಿಸಲಾಗಿಲ್ಲ ಅಥವಾ ಸರ್ಕಾರ ಅಥವಾ ವಿಶ್ವಸಂಸ್ಥೆ ಇದನ್ನು ಆಚರಿಸಲು ಯಾವುದೇ ಉಪಕ್ರಮವನ್ನು ತೆಗೆದುಕೊಂಡಿಲ್ಲ. ಇದು ಈಗ ನಿಧಾನವಾಗಿ ಪ್ರಪಂಚದಾದ್ಯಂತ ಪ್ರಸಿದ್ಧಿಯಾಗುತ್ತಿದೆ. ಗರ್ಲ್ ಫ್ರೆಂಡ್ ಡೇ ಇರುತ್ತೆ ಅಂದ್ಮೇಲೆ ಬಾಯ್ ಫ್ರೆಂಡ್ ಡೇ ಯಾಕೆ ಇರಬಾರದು ಎಂಬ ಕಾರಣಕ್ಕೆ ಶುರುವಾದ ದಿನ ಇದು.
ಮದುವೆಯಾದ್ಮೇಲೂ ಒಂಟಿಯಾಗಿರ್ತಾರೆ ಇವರು… ಜನಪ್ರಿಯವಾಗ್ತಿದೆ ಹೊಸ ಸ್ಟೈಲ್!
ಈ ದಿನದಂದು ಹುಡುಗಿಯರು ತಮ್ಮ ಬಾಯ್ ಫ್ರೆಂಡ್ ಜೊತೆ ಇರಲು ಬಯಸ್ತಾರೆ. ಅವರಿಗೆ ತಮ್ಮ ಪ್ರೀತಿ ವ್ಯಕ್ತಪಡಿಸ್ತಾರೆ. ಅವರಿಗೆ ತಮ್ಮ ಜೀವನದಲ್ಲಿ ವಿಶೇಷ ಸ್ಥಾನವಿದೆ ಎಂಬುದನ್ನು ತೋರಿಸಲು ಈ ದಿನವನ್ನು ಅವರು ಆಚರಣೆ ಮಾಡ್ತಾರೆ.
ಬಾಯ್ ಫ್ರೆಂಡ್ ಹೇಗಿರಬೇಕು? : ಬಾಯ್ ಫ್ರೆಂಡ್ ಅಂದ್ರೆ ಪ್ರೇಮಿ ಎಂದೇ ಅರ್ಥ ಬರುತ್ತದೆ. ಆದ್ರೆ ನಿಮ್ಮ ಬಾಯ್ ಫ್ರೆಂಡ್ ನಿಮ್ಮ ಸ್ನೇಹಿತನಾಗಿರೋದು ಕೂಡ ಮುಖ್ಯ. ಎಲ್ಲ ಸಂದರ್ಭದಲ್ಲೂ ಆತ ನಿಮ್ಮ ಜೊತೆಗಿಬೇಕಾಗುತ್ತದೆ. ಹಾಗಾಗಿ ಬಾಯ್ ಫ್ರೆಂಡ್ ಆಯ್ಕೆ ಮಾಡಿಕೊಳ್ಳುವ ವೇಳೆ ಕೆಲವೊಂದು ವಿಷ್ಯಗಳನ್ನು ಗಮನಿಸಬೇಕು.
ಕಾಳಜಿ ಇರುವ ಬಾಯ್ ಫ್ರೆಂಡ್ : ನಿಮಗೆ ಆದ್ಯತೆ ನೀಡುವ ವ್ಯಕ್ತಿ ನಿಮ್ಮ ಜೀವನದಲ್ಲಿ ಬಂದ್ರೆ ಬಹಳ ಒಳ್ಳೆಯದು. ನಿಮ್ಮ ಆಸೆ, ಕನಸುಗಳನ್ನು ಗೌರವಿಸುವ ವ್ಯಕ್ತಿ ಅವನಾಗಿರಬೇಕು. ನಿಮ್ಮ ಬಗ್ಗೆ ಸದಾ ಆತನಿಗೊಂದು ಕಾಳಜಿ ಇರಬೇಕು. ನಿಮ್ಮ ಜೊತೆ ತಂದೆ- ತಾಯಿ, ಕುಟುಂಬ, ಸ್ನೇಹಿತರನ್ನು ಗೌರವಿಸುವ ಸ್ವಭಾವ ಅವನಿಗಿರಬೇಕು.
ರೋಮ್ಯಾಂಟಿಕ್ ಬಾಯ್ ಫ್ರೆಂಡ್ : ಯಾವುದೇ ಒಂದು ಸಂಬಂಧ ಗಟ್ಟಿಯಾಗ್ಬೇಕೆಂದ್ರೆ ರೋಮ್ಯಾನ್ಸ್ ಕೂಡ ಮುಖ್ಯ. ಭಾವನಾತ್ಮಕವಾಗಿ ಹಾಗೂ ಶಾರೀರಿಕವಾಗಿ ರೋಮ್ಯಾಟಿಂಕ್ ಆಗಿರುವ ವ್ಯಕ್ತಿ ನಿಮ್ಮ ಬಾಯ್ ಫ್ರೆಂಡ್ ಆಗಿದ್ರೆ ನಿಮ್ಮ ಜೀವನದಲ್ಲಿ ಸದಾ ಒಂದು ಹೊಸತನವಿರುತ್ತದೆ.
ತಮಾಷೆ ವ್ಯಕ್ತಿತ್ವ : ಸದಾ ಮುಖ ಗಂಟು ಹಾಕಿಕೊಂಡು ಓಡಾಡುವ ವ್ಯಕ್ತಿ ಜೊತೆ ನೀವು ಜೀವನ ಮಾಡೋದು ಕಷ್ಟ. ತಮಾಷೆ ಮಾಡ್ತಾ, ದುಃಖ, ನೋವಿನ ಸಂದರ್ಭದಲ್ಲಿ ನಿಮ್ಮನ್ನು ನಗಿಸುತ್ತ, ತನ್ನ ಸುತ್ತಮುತ್ತಲಿನವರ ಸಂತೋಷ ಬಯಸುವ ವ್ಯಕ್ತಿಯನ್ನು ಬಾಯ್ ಫ್ರೆಂಡ್ ಮಾಡಿಕೊಳ್ಳೋದು ಒಳ್ಳೆಯದು.