ಒಂಟಿಯಾಗಿರೋರು ಅನಗತ್ಯ ಸ್ನೇಹದಿಂದ ದೂರವಿದ್ದಷ್ಟು ಒಳ್ಳೇಯದು!

By Suvarna News  |  First Published Oct 2, 2023, 4:46 PM IST

ಸಿಂಗಲ್ಲಾಗಿ ಬದುಕುವುದು ಕಷ್ಟವಲ್ಲ. ನೀವೊಮ್ಮೆ ಸಿಂಗಲ್ಲಾಗಿ ಬದುಕುತ್ತಿದ್ದರೆ ಆ ಭಾವನೆಯಿಂದ ಹೊರಬರುವುದು ಅಗತ್ಯ. ಏಕೆಂದರೆ, ಕಷ್ಟವೆಂದು ಕುಳಿತರೆ ಜೀವನ ನಿಲ್ಲುವುದಿಲ್ಲ. ಹೀಗಾಗಿ, ಆತ್ಮವಿಶ್ವಾಸದಿಂದ ಬದುಕನ್ನು ಎದುರಿಸಿ. ಜತೆಗೆ, ಸಿಂಗಲ್‌ ಜೀವನವನ್ನು ಹಾಳು ಮಾಡುವ ಕೆಲವು ಅಭ್ಯಾಸಗಳಿಂದ ಹೊರಬನ್ನಿ.


ಯಾವ್ಯಾವುದೋ ಕಾರಣಗಳಿಂದ ಜೀವನವನ್ನು ಏಕಾಂಗಿಯಾಗಿ ಎದುರಿಸುವ ಪ್ರಸಂಗ ಉಂಟಾಗುತ್ತದೆ. ಇಂದಿನ ದಿನಗಳಲ್ಲಂತೂ ಏಕಾಂಗಿಯಾಗಿ ಬದುಕುವವರ ಸಂಖ್ಯೆ ಅಧಿಕವಾಗಿದೆ. ಅದರಲ್ಲೂ ಕೆಲವು ಜನಾಂಗಗಳಲ್ಲಿ ಹೆಣ್ಣು ಹುಡುಗಿಯರ ಸಂಖ್ಯೆಯೇ ಗಮನಾರ್ಹವಾಗಿ ಕಡಿಮೆಯಾಗಿದ್ದು, ಹೆಚ್ಚು ಓದದ, ಹಳ್ಳಿ ಭಾಗದಲ್ಲಿಯೇ ನೆಲೆ ನಿಲ್ಲುವ ಹುಡುಗರಿಗೆ ಹುಡುಗಿ ಸಿಗುವುದು ಕಡಿಮೆಯಾಗಿದೆ. ಇನ್ನು, ಹೆಣ್ಣುಮಕ್ಕಳೂ ಸಹ ಬೇರೆ ಬೇರೆ ಕಾರಣಗಳಿಂದಾಗಿ ಒಂಟಿಯಾಗಿ ಬದುಕುವ ಪ್ರಸಂಗಗಳು ಇದ್ದೇ ಇರುತ್ತವೆ. ಸಿಂಗಲ್ಲಾಗಿ ಬದುಕುವವರ ಬಗ್ಗೆ ಜನರು ಒಂದು ರೀತಿಯ ಕರುಣೆ, ಪಶ್ಚಾತ್ತಾಪದಿಂದ ನೋಡುತ್ತಾರೆ. ಹೀಗಾಗಿ, ಅವರ ಬದುಕು ಕಷ್ಟವೇನೋ ಎನ್ನುವ ಭಾವನೆ ಮೂಡುತ್ತದೆ. ಅನಾರೋಗ್ಯದಂತಹ ಕೆಲವೇ ಸಮಯದಲ್ಲಿ ಒಂಟಿಯಾಗಿರುವುದು ಕಷ್ಟವೆನಿಸುತ್ತದೆಯೇ ವಿನಾ, ಉಳಿದ ಬೇರೆ ಸಂದರ್ಭಗಳಲ್ಲಿ ಒಂಟಿಯಾಗಿ ಬದುಕುವುದು ಕಷ್ಟವೇನೂ ಅಲ್ಲ. ಆದರೆ, ಕೆಲವರು ಅಗತ್ಯಕ್ಕಿಂತ ಹೆಚ್ಚಾಗಿ ಜೀವನವನ್ನು ಕಷ್ಟಮಾಡಿಕೊಳ್ಳುತ್ತಾರೆ. ಅವರ ಕೆಲವು ಅಭ್ಯಾಸಗಳೇ ಅದಕ್ಕೆ ಕಾರಣವಾಗಿರುತ್ತವೆ. ಅಂಥವುಗಳನ್ನು ಕೈಬಿಟ್ಟರೆ ಜೀವನದಲ್ಲಿ ನೆಮ್ಮದಿ ತಂದುಕೊಳ್ಳಬಹುದು.

•    ಚಟ (Bad Habit) ಮಾಡಬೇಡಿ
ಯಾರಿಗಾದರೂ ಯಾವುದೇ ಚಟವಿದ್ದರೆ ಏಕಾಂಗಿಯಾಗಿದ್ದರೂ (Single), ಸಂಸಾರವಿದ್ದರೂ (Family) ಜೀವನ (Life) ಕಷ್ಟವೇ ಆಗುತ್ತದೆ. ಒಂಟಿಯಾಗಿ ಬದುಕುವವರು ಚಟ ಮಾಡಿದರೆ ಅದಕ್ಕೆ ಕೊನೆಯೇ ಇಲ್ಲವಾಗಬಹುದು. ಹೀಗಾಗಿ, ಯಾವುದೇ ಚಟಕ್ಕೆ ದಾಸರಾಗಿದ್ದರೆ ಮೊಟ್ಟಮೊದಲು ಅದನ್ನು ಬಿಡಲು ಯತ್ನಿಸಬೇಕು. ಇದು ವ್ಯಕ್ತಿಯೊಬ್ಬ ತನ್ನ ಜೀವನವನ್ನು ಮತ್ತಷ್ಟು ಕಷ್ಟ (Harder) ಮಾಡಿಕೊಳ್ಳುವ ಮೊದಲ ಕಾಣಿಕೆ.

Latest Videos

undefined

ಮುಖಕ್ಕೆ ಹೊಡೆದ ಹಾಗೆ ಮಾತನಾಡೋ, ಸೂಕ್ಷ್ಮತೆ ಇಲ್ಲದ ಮಂದಿಯಿಂದ ದೂರವಿದ್ದರೆ ಒಳ್ಳೇದು!

•    ಸ್ವಮರುಕದಿಂದ (Self Pity) ಆಚೆ ಬನ್ನಿ
ಒಂಟಿಯಾಗಿದ್ದೀರಿ ಎನ್ನುವುದು ಅಪರಾಧವಲ್ಲ. ನೀವು ಯಾವುದೇ ಅಪರಾಧ (Crime) ಮಾಡಿಲ್ಲ. ಹೀಗಾಗಿ, ಸ್ವಮರುಕದಿಂದ ಕೊರಗುವುದು ಬೇಡ. ಇದರಿಂದ ಬದುಕು ಮತ್ತಷ್ಟು ನೀರಸವೆನಿಸುತ್ತದೆ, ಕಷ್ಟವಾಗುತ್ತದೆ. “ನಾನೆಷ್ಟು ಒಳ್ಳೆಯ ವ್ಯಕ್ತಿ, ನನಗೇ ಹೀಗಾಗಬೇಕೆ?ʼ ಎನ್ನುವ ಮರುಕದಿಂದ ದೂರವಿರಿ. 

•    ಗುರಿ, ಏಳಿಗೆಯತ್ತ (Development) ಗಮನ
ನಿಮ್ಮ ವಾರಗೆಯವರು ಮದುವೆಯಾಗಿ, ಮಕ್ಕಳನ್ನು ಹೊಂದಿದರು ಎನ್ನುವ ಕತೆಗಳಲ್ಲಿ ಆಸಕ್ತರಾಗದೇ ನಿಮ್ಮ ಗುರಿಯ (Aim) ಕಡೆಗೆ ಗಮನ ಹರಿಸಿ. ವೃತ್ತಿಯಲ್ಲಿ (Profession) ಏಳಿಗೆಯನ್ನು ನೋಡಿ. ಹಾಗೆಂದು ಕೇವಲ ವೃತ್ತಿ ಬದುಕಿನ ಚಕ್ರದಲ್ಲಿ ಮುಳುಗಬೇಡಿ. ಮಾನಸಿಕ ಉತ್ತೇಜನಕ್ಕೆ (Mental Stimuli) ಹವ್ಯಾಸಗಳನ್ನು ಬಿಡಬೇಡಿ. ಜತೆಗೇ, ಮದುವೆಯಾಗುವ ಇಚ್ಛೆಯಿದ್ದರೆ ಆತ್ಮವಿಶ್ವಾಸದಿಂದ ಸಂಗಾತಿಯ (Partner) ಹುಡುಕಾಟವನ್ನು ಕೈಬಿಡಬೇಡಿ. 

•    ಸಂಸಾರಿಗರೊಂದಿಗೆ ಬೆರೆಯಿರಿ
ಕೆಲವು ಜನರಿರುತ್ತಾರೆ. ಅವರು ತಮ್ಮ ಸ್ನೇಹಿತರು (Friends) ಅಥವಾ ನೆಂಟರಿಷ್ಟರ ಮನೆಗಳಿಗೆ ಹೋಗುವುದಿಲ್ಲ. ಸಮಾರಂಭಗಳಲ್ಲಿ ಭಾಗಿಯಾಗುವುದಿಲ್ಲ. ಆದರೆ, ಅವರ ಒಡನಾಟವೂ (Relation) ಭಾರೀ ಮುಖ್ಯ. ನಿಮಗೆ ವಿಶ್ವಾಸವಿರುವವರ ಕಷ್ಟಗಳಲ್ಲಿ ಭಾಗಿಯಾಗುವ ಮನಸ್ಸಿದ್ದರೆ ಖಂಡಿತ ಹಿಂಜರಿಯಬೇಡಿ. ಇದರಿಂದ ನಿಮ್ಮದೇ ವ್ಯಕ್ತಿತ್ವ (Personality) ಬೆಳಗುತ್ತದೆ.

•    ಅನಗತ್ಯದ ಸ್ನೇಹ ಬೇಡ
ಸಿಂಗಲ್ಲಾಗಿ ಇದ್ದೀರಿ ಎಂದು ತಿಳಿದರೆ ಸಾಕು, ನಿಮ್ಮ ಸ್ನೇಹ ಮಾಡಲು ಅನೇಕರು ಆಸಕ್ತಿ ತೋರಬಹುದು. ಆದರೆ, ಯಾವುದೇ ಕಾರಣಕ್ಕೂ ಮರೆಯಬೇಡಿ. ಮಹಿಳೆಯರಿಗೆ (Woman) ಈ ಸಮಸ್ಯೆ ಹೆಚ್ಚು. ಸ್ನೇಹವಾದ ಮಾತ್ರಕ್ಕೆ ಮನೆಗೆ ಆಹ್ವಾನಿಸಬೇಡಿ. ಆಹ್ವಾನಿಸುವುದಿದ್ದರೆ ಸ್ನೇಹ ಬಳಗದ ಕುಟುಂಬವನ್ನು ಆಹ್ವಾನಿಸಿ. ಪುರುಷರೂ ಅಷ್ಟೆ, ಯಾರದ್ದಾದರೂ ಸ್ನೇಹ ಮಾಡಿ ಮೋಸ ಹೋಗಬೇಡಿ.

 

Relationship Tips: ನಿಮ್ಮಲ್ಲಿ ಅತಿಯಾದ ಸ್ವತಂತ್ರ ಧೋರಣೆ ಇದ್ರೆ ಸಂಬಂಧದಲ್ಲಿ ಈ ತಪ್ಪನ್ನ ಮಾಡ್ತಾನೇ ಇರ್ತೀರಾ!

•    ಜನ ಪ್ರಶ್ನಿಸಿದರೆ ಆತಂಕ ಬೇಡ
ಕೆಲವು ಜನ ಇತರರ ಜೀವನದ ಬಗ್ಗೆ ಸಾಕಷ್ಟು ಕುತೂಹಲ ಹೊಂದಿರುತ್ತಾರೆ. ಹೀಗಾಗಿ, ಅವರು ಕೇಳುವ ಪ್ರಶ್ನೆಗಳ ಬಗ್ಗೆ ಕಿರಿಕಿರಿ (Irritate) ಮಾಡಿಕೊಳ್ಳಬೇಡಿ. ರೇಗಿದಂತೆ ಮಾತನಾಡಬೇಡಿ. ಸುತ್ತಿಬಳಸಿ ಪ್ರಶ್ನೆ ಮಾಡಿದರೂ ರಕ್ಷಣಾತ್ಮಕವಾಗಿ ವರ್ತಿಸಬೇಡಿ. ಪದೇ ಪದೆ ಖಾಸಗಿ ವಿಚಾರ ಪ್ರಶ್ನಿಸಿದರೆ ನಿಜವನ್ನೇ ಹೇಳಿ, ಯಾವುದೇ ಕಾರಣಕ್ಕೂ ಸುಳ್ಳು ಹೇಳಬೇಡಿ. ಮದುವೆಯಾಗುವ (Marriage) ಇಚ್ಛೆಯಿದ್ದರೆ ಅಂಥವರ ಬಳಿ “ನಾನಿನ್ನೂ ಸಿಂಗಲ್.‌ ಯಾವುದಾದರೂ ಸಂಬಂಧದ ಪ್ರಸ್ತಾವವಿದ್ದರೆ ತಿಳಿಸಿʼ ಎಂದು ನೇರವಾಗಿ ಹೇಳುವುದು ಉತ್ತಮ. ಅವರು ಒಂದೋ ಸುಮ್ಮನಿರುತ್ತಾರೆ ಅಥವಾ ಪ್ರಾಮಾಣಿಕ ನಡೆನುಡಿಯವರಾಗಿದ್ದರೆ ಏನಾದರೂ ಪ್ರಯತ್ನಿಸಬಹುದು.

 


 

click me!