
ಹಲವು ಪ್ರಕರಣಗಳಲ್ಲಿ ಡಿವೋರ್ಸ್ ನಂತರ ಪತಿ ಪತ್ನಿ ಹಾವು ಮುಂಗುಸಿಗಳಂತಾಗಿರುತ್ತಾರೆ. ಡಿವೋರ್ಸ್ ನಂತರವೂ ಮಕ್ಕಳ ಕಸ್ಟಡಿ ವಿಚಾರಕ್ಕೆ ಗಂಡ ಹೆಂಡತಿ ಮಧ್ಯೆ ಜಗಳ ಕೋರ್ಟ್ ಕೇಸ್ ಅಂತ ಅಲೆದಾಡೋದು ಇದೆ. ಆದರೆ ಅನೇಕ ಸೆಲೆಬ್ರಿಟಿ ಜೋಡಿಗಳು ಇದಕ್ಕಿಂತ ತುಂಬಾ ವಿಭಿನ್ನ. ಡಿವೋರ್ಸ್ ನಂತರವೂ ಅವರು ಸ್ನೇಹಿತರಂತೆ ವರ್ತಿಸುತ್ತಾರೆ. ಗಂಡನ ಅಥವಾ ಹೆಂಡತಿ ಕುಟುಂಬದ ಜೊತೆ ಒಂದು ಒಳ್ಳೆಯ ಬಾಂಧವ್ಯ ಇರುತ್ತದೆ. ಹೋಗಿ ಬರುವುದು ಮಾಡುವ ಮೂಲಕ ಅವರ ಕುಟುಂಬದ ಕ್ಷೇಮ ವಿಚಾರಿಸುವ ಮೂಲಕ ಹಗೆತನ ಸಾಧಿಸದೇ ಖುಷಿಯಾಗಿ ಇರುವ ಪ್ರಯತ್ನ ಮಾಡುತ್ತಾರೆ. ಹಾಗೆಯೇ ಈಗ ಹಾರ್ದಿಕ್ ಪಾಂಡ್ಯಾ ಮಾಜಿ ಪತ್ನಿ ನತಾಶಾ ಅವರು ಡಿವೋರ್ಸ್ ನಂತರವೂ ಹಾರ್ದಿಕ್ ಕುಟುಂಬದ ಜೊತೆ ಉತ್ತಮ ಒಡನಾಟವನ್ನು ಹೊಂದಿದ್ದಾರೆ.
ಹೌದು ಕ್ರಿಕೆಟರ್ ಹಾರ್ದಿಕ್ ಪಾಂಡ್ಯ ತನ್ನ ಮೊದಲ ಪತ್ನಿ ನತಾಶಾ ಜೊತೆಗಿನ ವಿಚ್ಛೇದನದ ನಂತರ ತನ್ನ ಹೊಸ ಗರ್ಲ್‌ಫ್ರೆಂಡ್ ಮಹಿಕಾ ಶರ್ಮಾ ಜೊತೆ ತಿರುಗಾಡ್ತಾ ಲೈಮ್ ಲೈಟ್‌ನಲ್ಲಿ ಇರೋದು ಗೊತ್ತೇ ಇದೆ. ಆದರೆ ಹಾರ್ದಿಕ್ ಮಾಜಿ ಪತ್ನಿ ನತಾಶಾ ಮಾತ್ರ ಮಗನನ್ನು ಕರೆದುಕೊಂಡು ಮಗ ಆಗಸ್ತ್ಯನ ಅಪ್ಪನ ಮನೆಯ ಸಂಬಂಧಿಗಳನ್ನು ಅಂದರೆ ಹಾರ್ದಿಕ್ ಪಾಂಡ್ಯಾನ ಕುಟುಂಬಸ್ಥರನ್ನು ಭೇಟಿ ಮಾಡಿದ್ದಾರೆ. ಇದರ ಫೋಟೋ ವೀಡಿಯೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಆ ಫೋಟೋಗಳು ಈಗ ವೈರಲ್ ಆಗಿವೆ.
ನತಾಶ ಮಗ ಆಗಸ್ತ್ಯನ ಜೊತೆ ಹಾರ್ದಿಕ್ ಪಾಂಡ್ಯಾನ ಸೋದರಿ, ತಾಯಿ ಹಾಗೂ ಅಜ್ಜಿ, ಸೋದರ ಕುನಾಲ್ ಪಾಂಡ್ಯ ಕುಟುಂಬವನ್ನು ಭೇಟಿ ಮಾಡಿದ್ದು, ಅವರ ಜೊತೆ ಖುಷಿ ಕ್ಷಣಗಳನ್ನು ಕಳೆದಿದ್ದಾರೆ. ಈ ಫೋಟೋಗಳನ್ನು ನತಾಶಾ ಭಾನುವಾರ ಹಂಚಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಗುಜರಾತ್‌ನ ವಡೋದರಾದಲ್ಲಿ ಅವರು ಹಾರ್ದಿಕ್ ಕುಟುಂಬಸ್ಥರನ್ನು ಭೇಟಿ ಮಾಡಿದ್ದಾರೆ. ಪ್ರಸ್ತುತ ಹಾರ್ದಿಕ್ ಅವರು ಐಪಿಎಲ್‌ನಲ್ಲಿ ಬ್ಯುಸಿಯಾಗಿದ್ದು, ಮುಂಬೈ ಇಂಡಿಯನ್ಸ್ ತಂಡದ ಪರ ಆಡುತ್ತಿದ್ದಾರೆ. ಹಾಗೆಯೇ ಹಾರ್ದಿಕ್ ಸೋದರ ಕುನಾಲ್ ಪಾಂಡ್ಯಾ ಆರ್‌ಸಿಬಿ ಪರ ಐಪಿಎಲ್‌ನಲ್ಲಿ ಆಡುತ್ತಿದ್ದಾರೆ.
ಈಗ ನತಾಶ ಹಾರ್ದಿಕ್ ಕುಟುಂಬಸ್ಥರನ್ನು ಭೇಟಿ ಮಾಡಿ ಅವರೊಂದಿಗೆ ಕಾಲ ಕಳೆದಿರುವುದಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗ್ತಿದೆ. ಪರಸ್ಪರ ಡಿವೋರ್ಸ್ ಪಡೆದಿದ್ದರೂ ನತಾಶ ಗಂಡನ ಮನೆಯ ಬಾಂಧವ್ಯವನ್ನು ಮರೆತಿಲ್ಲ ಎಂದು ಅನೇಕರು ಕಾಮೆಂಟ್ ಮಾಡ್ತಿದ್ದಾರೆ. ಇಂತಹ ದೃಶ್ಯಗಳನ್ನು ಯಾರೂ ತೋರಿಸುವುದಿಲ್ಲ ಎಂದು ಬರೆದು ಒಬ್ಬರು ನತಾಶ ಹಂಚಿಕೊಂಡ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿತಾರೆ: ಸಿದ್ದು ಪರ ಪರಮೇಶ್ವರ್ ಬ್ಯಾಟಿಂಗ್
ಇವರು ಮತ್ತೆ ಜೊತೆಯಾಗುತ್ತಿದ್ದಾರಾ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇವರು ರಹಸ್ಯವಾಗಿ ಡೇಟಿಂಗ್ ಮಾಡ್ತಿರಬೇಕು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇತ್ತೀಚೆಗೆ ಹಾರ್ದಿಕ್ ಹಾಗೂ ನತಾಶ ಪುತ್ರ ಅಗಸ್ತ್ಯನನ್ನು ಹಾರ್ದಿಕ್ ಗರ್ಲ್‌ಫ್ರೆಂಡ್ ಮಹಿಕಾ ಶರ್ಮಾ ಕರೆದುಕೊಂಡು ಹೋಗುತ್ತಿರುವ ವೀಡಿಯೋಗಳಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಕಳೆದ ಫೆಬ್ರವರಿಯಲ್ಲಿ ಮಾಜಿ ಪತ್ನಿ ನತಾಶಾ ಹಾಗೂ ಮಗ ಆಗಸ್ತ್ಯನಿಗಾಗಿ ಹಾರ್ದಿಕ್ ಪಾಂಡ್ಯ ದುಬಾರಿ ಮೊತ್ತದ ಲ್ಯಾಂಡ್ ರೋವರ್ ಡಿಫೆಂಡರ್ ಕಾರನ್ನು ಉಡುಗೊರೆಯಾಗಿ ನೀಡಿದ್ದರು. ಈ ವಿಚಾರವೂ ಕೂಡ ಇಂಟರ್‌ನೆಟ್‌ನಲ್ಲಿ ಸಂಚಲನ ಸೃಷ್ಟಿಸಿತ್ತು. ಸುಮಾರು 4 ಕೋಟಿ ರೂ. ಮೌಲ್ಯದ ಐಷಾರಾಮಿ ಎಸ್‌ಯುವಿ, ಲ್ಯಾಂಡ್ ರೋವರ್ ಡಿಫೆಂಡರ್ ಇದಾಗಿದೆ. ನತಾಶಾ ಹಾಗೂ ಹಾರ್ದಿಕ್ ಜುಲೈ 2024 ರಲ್ಲಿ ಅಧಿಕೃತವಾಗಿ ಬೇರ್ಪಟ್ಟಿದ್ದು, ಮಗ ಆಗಸ್ತ್ಯನನ್ನು ಇಬ್ಬರು ನೋಡಿಕೊಳ್ಳುತ್ತಾರೆ. ಆದರೆ ಹಾರ್ದಿಕ್ ಹೆಚ್ಚಾಗಿ ಕ್ರಿಕೆಟ್‌ನಲ್ಲಿ ಬ್ಯುಸಿಯಾಗಿರುವುದರಿಂದ ಹೆಚ್ಚಿನ ಸಮಯವನ್ನು ಆಗಸ್ತ್ಯ ಅಮ್ಮನ ಜೊತೆಗೆ ಕಳೆಯುತ್ತಾನೆ.
ಇದನ್ನೂ ಓದಿ: ಬೈಕ್ ಗೆ ಗುದ್ದಿದ ಬುಲೇರೋ ಗೂಡ್ಸ್ ವಾಹನ : ಅರಣ್ಯ ಇಲಾಖೆಯ ಇಬ್ಬರು ವಾಚರ್ಸ್ ಸಾವು
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.