ಸಂಕಷ್ಟಕ್ಕೆ ಸಿಲುಕುತ್ತಾರಾ ಹಾರ್ದಿಕ್ ? ಸರ್ಬಿಯಾ ವಿಚ್ಛೇದನ ನಿಯಮ ಏನು?

By Roopa Hegde  |  First Published May 29, 2024, 5:53 PM IST

ಹಾರ್ದಿಕ್ ಪಾಂಡ್ಯ ಹಾಗೂ ನತಾಶಾ ಸ್ಟಾಂಕೋವಿಕ್ ಸದ್ಯ ಚರ್ಚೆಯಲ್ಲಿರುವ ದಂಪತಿ. ಇಬ್ಬರು ವಿಚ್ಛೇದನ ಪಡೆಯುತ್ತಾರೆ ಎಂಬ ಸುದ್ದಿ ತೀವ್ರ ಚರ್ಚೆಯಲ್ಲಿದೆ. ಒಂದ್ವೇಳೆ ನತಾಶಾ, ಸರ್ಬಿಯಾದಲ್ಲಿ ಕೇಸ್ ದಾಖಲಿಸಿದ್ರೆ ಏನಾಗುತ್ತೆ ಗೊತ್ತಾ?
 


ಟೀಂ ಇಂಡಿಯಾ ಆಟಗಾರ ಹಾರ್ದಿಕ್ ಪಾಂಡ್ಯ ಮತ್ತು ಪತ್ನಿ ನತಾಶಾ ಸ್ಟಾಂಕೋವಿಕ್ ವಿಚ್ಛೇದನದ ಬಗ್ಗೆ ಸಾಕಷ್ಟು ವದಂತಿಗಳು ಹಬ್ಬಿವೆ. ಸದ್ಯ ಇವರಿಬ್ಬರ ವಿಚ್ಛೇದನದ ಚರ್ಚೆ ಗಂಭೀರವಾಗಿ ನಡೆಯುತ್ತಿದೆ. ಬೇರೆಯಾಗುವ ಬಗ್ಗೆ ಹಾರ್ದಿಕ್ ಪಾಂಡ್ಯ ಅಥವಾ ಪತ್ನಿ ನತಾಶಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ವದಂತಿ ಮಧ್ಯೆಯೇ ಸಾಮಾಜಿಕ ಜಾಲತಾಣದಲ್ಲಿ ನತಾಶಾ ಇಂದು ಒಂದು ವಿಡಿಯೋ ಪೋಸ್ಟ್ ಮಾಡಿ ದೇವರಿಗೆ ಧನ್ಯವಾದ ಹೇಳಿದ್ದಾರೆ.  ಪಾಂಡ್ಯ ಕೂಡ ಟೀಂಗೆ ಮರಳಿದ್ದು, ರಾಷ್ಟ್ರೀಯ ಕರ್ತವ್ಯದಲ್ಲಿ ಎಂಬ ಪೋಸ್ಟ್ ಹಂಚಿಕೊಂಡಿದ್ದಾರೆ. ಇದಕ್ಕೆ ಸಾಕಷ್ಟು ಪ್ರತಿಕ್ರಿಯೆ ವ್ಯಕ್ತವಾಗಿದೆ.  

ನತಾಶಾ (Natasha) ಹಾಗೂ ಪಾಂಡ್ಯ (Pandya) ವಿಚ್ಛೇದನ ಪಡೆದ್ರೆ ಪಾಂಡ್ಯ ಗಳಿಕೆಯ ಎಷ್ಟು ಭಾಗವನ್ನು ಪತ್ನಿಗೆ ಜೀವನಾಂಶದ ರೂಪದಲ್ಲಿ ನೀಡ್ಬೇಕು ಎನ್ನುವ ಲೆಕ್ಕಾಚಾರದಲ್ಲಿ ಜನರಿದ್ದಾರೆ. ನತಾಶಾ ವಿಚ್ಛೇದನ (Divorce)ಎಲ್ಲಿ ನಡೆಯುತ್ತೆ ಎಂಬುದು ಇದನ್ನು ಅವಲಂಭಿಸಿದೆ. ನತಾಶಾಗೆ ಎರಡು ಕಡೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುವ ಅವಕಾಶವಿದೆ. ನತಾಶಾ ಸೆರ್ಬಿಯಾದ ಪ್ರಜೆಯಾಗಿದ್ದು ಭಾರತದಲ್ಲಿ ವಾಸಿಸುತ್ತಿದ್ದಾರೆ. ಮಾಡೆಲ್ ಆಗಿರುವ ಅವರು ಬಾಲಿವುಡ್‌ನ ಹಲವು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.  

Tap to resize

Latest Videos

ಮಹಿಳೆಯನ್ನು ಮೂಡ್‌ಗೆ ತರಲು ಸಂಗಾತಿ ಮಾಡಬೇಕೇನು?

ನತಾಶಾ, ಸರ್ಬಿಯಾದಲ್ಲಿ ಕೇಸ್ ದಾಖಲಿಸಿದ್ರ ಹಾರ್ದಿಕ್ ಪಾಂಡ್ಯ ಸಮಸ್ಯೆ ಹೆಚ್ಚಾಗಲಿದೆ. ಸರ್ಬಿಯಾದ ಪ್ರಜೆಯಾಗಿರುವುದರಿಂದ ನತಾಶಾ ಅಲ್ಲಿ ಪ್ರಕರಣ ದಾಖಲಿಸುವ ಸಾಧ್ಯತೆ ಇದೆ. ಇಂತಹ ಪರಿಸ್ಥಿತಿಯಲ್ಲಿ ಸರ್ಬಿಯಾ ಕೋರ್ಟ್ ಯಾವುದೇ ತೀರ್ಪು ನೀಡಿದರೂ ಹಾರ್ದಿಕ್ ಅದನ್ನು ಒಪ್ಪಿಕೊಳ್ಳಲೇಬೇಕು. ಆದರೆ, ಅದು ಅಷ್ಟು ಸುಲಭವಲ್ಲ ಎಂದು ತಜ್ಞರು ಹೇಳಿದ್ದಾರೆ.

ಭಾರತದ ಬದಲು ಸರ್ಬಿಯಾ ಯಾಕೆ? : ಇಂಥ ಪ್ರಶ್ನೆಯೊಂದು ನಿಮ್ಮನ್ನು ಕಾಡಬಹುದು. ನತಾಶಾ ಭಾರತದಲ್ಲಿ ಪ್ರಕರಣ ದಾಖಲಿಸಿದರೆ ಇಲ್ಲಿನ ಕಾನೂನಿನ ಪ್ರಕಾರ ಹಾರ್ದಿಕ್ ಆಸ್ತಿಯಿಂದ ಹೆಚ್ಚಿನ ಪ್ರಮಾಣದ ಪರಿಹಾರ ಸಿಗೋದಿಲ್ಲ. ನತಾಶಾ, ಜೀವನ ನಿರ್ವಹಣೆಗೆ ಬೇಡಿಗೆ ಇಡಬಹುದು. ಆದ್ರೆ ಆ ಮೊತ್ತ ಹಾರ್ದಿಕ್ ಮೇಲೆ ಹೆಚ್ಚು ಪರಿಣಾಮ ಬೀರುವುದಿಲ್ಲ. 

ಅದೇ ಸರ್ಬಿಯಾದಲ್ಲಿ ನತಾಶಾ ವಿಚ್ಛೇದನ ಪ್ರಕರಣ ದಾಖಲಿಸಿದ್ರೆ ಜೀವನಾಂಶವಾಗಿ ಭಾರೀ ಪ್ರಮಾಣದ ಪರಿಹಾರ ಕೇಳಬಹುದು.  ಒಂದು ವೇಳೆ ಹಾರ್ದಿಕ್ ಸರ್ಬಿಯಾ ಕೋರ್ಟ್‌ಗೆ ಹಾಜರಾಗದಿದ್ದರೆ ಅಥವಾ ಕೋರ್ಟ್ ನೋಟಿಸ್‌ಗೆ ಪ್ರತಿಕ್ರಿಯೆ ನೀಡದಿದ್ದರೆ, ಅಲ್ಲಿನ ನ್ಯಾಯಾಲಯವು ನತಾಶಾ ಪರವಾಗಿ ತೀರ್ಪು ನೀಡಬಹುದು. ಸರ್ಬಿಯಾ ಕೋರ್ಟ್ ಯಾವುದೇ ತೀರ್ಪು ನೀಡಿದರೂ ಹಾರ್ದಿಕ್ ಅದನ್ನು ಒಪ್ಪಿಕೊಳ್ಳಲೇಬೇಕು. ಇಲ್ಲದಿದ್ದರೆ ಅವರ ವಿರುದ್ಧ ಭಾರತದಲ್ಲೂ ಪ್ರಕರಣ ದಾಖಲಾಗಬಹುದು.

ಆ್ಯಂಕರ್ ಅನುಶ್ರೀಗೆ ಆ ಗುಟ್ಟು ಹೇಳದ ರಕ್ಷಿತ್ ಶೆಟ್ಟಿ, ಸಾಯಿ ಪಲ್ಲವಿ ಬಗ್ಗೆ ಮೌನವಾಗಿದ್ದೇಕೆ?

ಸರ್ಬಿಯಾದಲ್ಲಿ ವಿಚ್ಛೇದನ ಸುಲಭವಲ್ಲ : ತಕ್ಷಣ ಸರ್ಬಿಯಾ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ನಿರ್ಧಾರ ಪ್ರಕಟವಾಗಲು ಸಾಧ್ಯವಿಲ್ಲ. ಇದಕ್ಕೂ ಒಂದಿಷ್ಟು ನಿಯಮವಿದೆ. ಯಾಕೆಂದ್ರೆ ಹಾರ್ದಿಕ್ ಮತ್ತು ನತಾಶಾ ಭಾರತದಲ್ಲಿ ವಿವಾಹವಾಗಿದ್ದರು. ಹಾಗಾಗಿ ವಿಚ್ಛೇದನದ ಮೊದಲ ನಿರ್ಧಾರವನ್ನು ಭಾರತೀಯ ನ್ಯಾಯಾಲಯ ನೀಡಬೇಕೆಂಬುದು ನಿಯಮವಿದೆ. ಈ ನಿರ್ಧಾರ ಪ್ರಶ್ನಿಸಿ ನತಾಶಾ ಸರ್ಬಿಯನ್ ನ್ಯಾಯಾಲಯವನ್ನು ಸಂಪರ್ಕಿಸಬಹುದು. ಸೆರ್ಬಿಯಾದಲ್ಲಿ ವಿದೇಶಿಯರೊಂದಿಗೆ ವಿಚ್ಛೇದನ ಪಡೆಯುವ ನಿಯಮ ಭಿನ್ನವಾಗಿದೆ. ಸೆರ್ಬಿಯಾದಲ್ಲಿ ವಿಚ್ಛೇದನ ಕಾನೂನಿನ ಪ್ರಕಾರ, ಸರ್ಬಿಯಾದ ಪ್ರಜೆ ತನ್ನ ದೇಶದಲ್ಲಿ ಬೇರೆ ದೇಶದ ಪ್ರಜೆಯನ್ನು ಮದುವೆಯಾಗಿದ್ದರೆ, ಅಲ್ಲಿ ಮದುವೆ ನೋಂದಣಿಯನ್ನು ಮಾಡಬೇಕಾಗುತ್ತದೆ. ಮದುವೆ ನೋಂದಣಿಯ ಪ್ರತಿಯನ್ನು ಆ ದೇಶದ ರಾಯಭಾರ ಕಚೇರಿಗೆ ಸಲ್ಲಿಸಬೇಕು. ಇದರ ನಂತರ, ಸರ್ಬಿಯಾದ ಪ್ರಜೆಯು ಆ ಮದುವೆಯನ್ನು ತನ್ನ ಪ್ರದೇಶದಲ್ಲಿಯೂ ನೋಂದಾಯಿಸಿಕೊಳ್ಳಬೇಕು. ನತಾಶಾ ಈ ಕೆಲಸ ಮಾಡಿದ್ದಾರೋ ಇಲ್ಲವೋ ಎಂಬ ಮಾಹಿತಿ ಇಲ್ಲ. ಮಾಡದಿದ್ದರೆ ಹಾರ್ದಿಕ್‌ಗೆ ಸ್ವಲ್ಪ ಸಮಾಧಾನ ಸಿಗಬಹುದು. ಪರಸ್ಪರ ಒಪ್ಪಂದದ ಮೂಲಕವೂ ಇವರು ಸಮಸ್ಯೆ ಬಗೆಹರಿಸಿಕೊಳ್ಳಲು ಅವಕಾಶವಿದೆ. 
 

click me!