ನೀತಾ ಅಂಬಾನಿಗಿದೆ ಎರಡು ಆಸೆ, ಕಿರಿ ಸೊಸೆ ಮೇಲೆ ಪ್ರೀತಿ ತೋರಿ ಮಾದರಿಯಾದ ನೀತಾ!

By Roopa Hegde  |  First Published May 28, 2024, 1:36 PM IST

ನೀತಾ ಅಂಬಾನಿ ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಕೊನೆ ಮಗ ಅನಂತ್ ಅಂಬಾನಿ ಫ್ರೀ ವೆಡ್ಡಿಂಗ್ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯುತ್ತಿದೆ. ಈಗಾಗಲೇ ಮೊದಲ ಫ್ರೀ ವೆಡ್ಡಿಂಗ್ ಮುಗಿದಿದ್ದು, ನೀತಾ ಅಂಬಾನಿ ಸೊಸೆಯನ್ನು ಪ್ರೀತಿಯಿಂದ ಸ್ವಾಗತಿಸಿ ಎಲ್ಲರ ಗಮನ ಸೆಳೆದಿದ್ದಾರೆ.
 


ಮಕ್ಕಳು ಎಷ್ಟೇ ಇರಲಿ, ತಾಯಿ ತನ್ನ ಪ್ರತಿ ಮಕ್ಕಳ ಮದುವೆ ಬಗ್ಗೆ ತನ್ನದೇ ಕನಸು ಕಂಡಿರುತ್ತಾಳೆ. ಮಕ್ಕಳ ಮದುವೆಯನ್ನು ಹೀಗೆ ಮಾಡ್ಬೇಕು, ಹಾಗೆ ಮಾಡ್ಬೇಕು ಎನ್ನುವ ಕನಸನ್ನು ಅವರು ಹೊಂದಿರುತ್ತಾರೆ. ಭಾರತದ ಶ್ರೀಮಂತ ಮಹಿಳೆಯರಲ್ಲಿ (Indian Rich Women) ಒಂದಾದ ಮುಖೇಶ್ ಅಂಬಾನಿ ಪತ್ನಿ ನೀತಾ ಅಂಬಾನಿ ಕೂಡ ಇದ್ರಲ್ಲಿ ಹಿಂದೆ ಬಿದ್ದಿಲ್ಲ. ನೀತಾ ಅಂಬಾನಿ ಈಗಾಗಲೇ ತಮ್ಮಿಬ್ಬರು ಮಕ್ಕಳ ಮದುವೆಯನ್ನು ಅದ್ಧೂರಿಯಾಗಿ ಮಾಡಿದ್ದಾರೆ. ಈಗ ಕಿರಿಯ ಮಗ ಅನಂತ್ ಅಂಬಾನಿ ಮದುವೆ ಸಂಭ್ರಮ ಶುರುವಾಗಿದೆ.  ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆ ಜುಲೈನಲ್ಲಿ ಲಂಡನ್‌ನಲ್ಲಿ ನಡೆಯುವ ಸಾಧ್ಯತೆ ಇದೆ. ಮದುವೆಗೂ ಮುನ್ನ 2ನೇ ಫ್ರೀ ವೆಡ್ಡಿಂಗ್ (Pre Wedding Functions) ಕಾರ್ಯಕ್ರಮಗಳು ನಡೆಯುತ್ತಿದೆ. ಈಗಾಗಲೇ ಮೊದಲ ಫ್ರೀ ವೆಡ್ಡಿಂಗ್ ಮುಗಿದಿದ್ದು, ಹಡಗಿನಲ್ಲಿ ಎರಡನೇ ಫ್ರೀ ವೆಡ್ಡಿಂಗ್ ನಡೆಯುತ್ತಿದೆ. 

ಮೊದಲ ಫ್ರೀ ವೆಡ್ಡಿಂಗ್‌ನಲ್ಲಿ ಪಾಲ್ಗೊಂಡಿದ್ದ ನೀತಾ ಅಂಬಾನಿ ತಮ್ಮ ಎರಡು ಆಸೆಯನ್ನು ಎಲ್ಲರ ಮುಂದಿಟ್ಟಿದ್ದರು. ಸೊಸೆ ಬಗ್ಗೆ ತಮಗಿರುವ ಅಭಿಪ್ರಾಯ ಹೊರಹಾಕಿದ್ದರು. ನೀತಾ ಅಂಬಾನಿ ಪ್ರೀತಿಯ ಮಾತುಗಳನ್ನು ಹೇಳಿ ಎಲ್ಲರೂ ಭಾವುಕರಾದರು.  

Tap to resize

Latest Videos

ಹದಿನಾರರಲ್ಲೇ ಪ್ರೀತಿಗೆ ಬಿದ್ದ ಮಗ, ಪಾಲಕರ ರಿಯಾಕ್ಷನ್ ಹೇಗಿದ್ದರೆ ಒಳ್ಳೇದು?

ನೀತಾ ಅಂಬಾನಿ (Nita Ambani) ಮೊದಲ ಕನಸು : ಅನಂತ್ ಅಂಬಾನಿ (Anant Ambani), ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿಯವರ ಕಿರಿಯ ಮಗ. ಕೊನೆ ಮಗನ ಮದುವೆ (Marriage) ಯನ್ನು ತನ್ನ ಮೂಲ ಗುಜರಾತಿನಲ್ಲಿ ಮಾಡುವ ಆಸೆಯನ್ನು ನೀತಾ ಹೊಂದಿದ್ದರು. ಗುಜರಾತ್ ನಾವು ಬಂದ ಸ್ಥಳ. ಅಲ್ಲಿ ಮುಖೇಶ್ ಮತ್ತು ಅವರ ತಂದೆ ರಿಫೈನರಿ ನಿರ್ಮಿಸಿದ್ದರು. ಅಲ್ಲಿ ಮದುವೆ ಮಾಡುವ ಆಸೆ ಇತ್ತು ಎಂದು ನೀತಾ ಅಂಬಾನಿ ಭಾಷಣದಲ್ಲಿ ಹೇಳಿದ್ದರು. ಅನಂತ್ ಮತ್ತು ರಾಧಿಕಾ ಅವರ ಮೊದಲ ವಿವಾಹ ಪೂರ್ವ ಕಾರ್ಯಕ್ರಮ ಕೂಡ ಗುಜರಾತ್‌ನ ಜಾಮ್‌ನಗರದಲ್ಲಿ ನಡೆದಿದೆ. 

ನೀತಾ ಅಂಬಾನಿ ಎರಡನೇ ಆಸೆ : ಕಲೆ ಮತ್ತು ಸಂಗೀತದಲ್ಲಿ ಅಪಾರ ಆಸಕ್ತಿ ಹೊಂದಿದ್ದ ನೀತಾ ಅಂಬಾನಿ, ಇಡೀ ಆಚರಣೆ ಕಲೆ ಮತ್ತು ಸಂಸ್ಕೃತಿಗೆ ಗೌರವ ನೀಡುವಂತಿರಬೇಕು ಎಂಬ ಆಸೆ ಹೊಂದಿದ್ದಾರೆ. ಕಾರ್ಯಕ್ರಮದಲ್ಲಿ ತಮ್ಮೆರಡು ಆಸೆಯನ್ನು ಅವರು ಹಂಚಿಕೊಂಡಿದ್ದಾರೆ. 

ರಾಧಿಕಾ ಬಗ್ಗೆ ನೀತಾ ಅಂಬಾನಿ ಹೇಳಿದ್ದೇನು?: ಕಿರಿ ಮಗನ ಕೈ ಹಿಡಿಯಲಿರುವ ರಾಧಿಕಾರನ್ನು ನೋಡ್ತಿದ್ದಂತೆ ನೀತಾ ಅಂಬಾನಿ ಖುಷಿಯಾಗಿದ್ದರು. ನಾನು ಮೊದಲ ಬಾರಿ ರಾಧಿಕಾರನ್ನು ನೋಡ್ತಿದ್ದಂತೆ ಅನಂತ್ ಗೆ ಅತ್ಯುತ್ತಮ ಜೀವನ ಸಂಗಾತಿ (Life Partner), ಪರಿಪೂರ್ಣ ಸಂಗಾತಿ ಸಿಕ್ಕಿದ್ದಾರೆ ಅನ್ನಿಸ್ತು. ನೃತ್ಯದ ಮೇಲಿರುವ ನನ್ನ ಪ್ರೀತಿಯನ್ನು ಹಂಚಿಕೊಳ್ಳಲು ನನಗೆ ಇನ್ನೊಬ್ಬಳು ಮಗಳು ಸಿಕ್ಕಿದ್ದಾಳೆ ಎಂದು ನೀತಾ ಹೇಳಿದ್ರು. 

ಮಾತು ಮುಂದುವರೆಸಿದ ನೀತಾ ಅಂಬಾನಿ, ರಾಧಿಕಾ, ನಾವು ನಿಮ್ಮನ್ನು ಅಂಬಾನಿ ಮಗಳಾಗಿ ನಮ್ಮ ಕುಟುಂಬಕ್ಕೆ ಪ್ರೀತಿಯಿಂದ ಸ್ವಾಗತಿಸುತ್ತೇವೆ. ನೀನು ಕೇವಲ ಅನಂತನ ಜೊತೆಗಾರರಲ್ಲ, ಪ್ರೀತಿಯ ಮಗಳು, ತಂಗಿ, ಚಿಕ್ಕಮ್ಮ, ಮತ್ತು ನಮ್ಮೆಲ್ಲರ ಜೀವನದ ಬೆಳಕು ಎನ್ನುವ ಮೂಲಕ ನೀತಾ ಅನೇಕ ಅತ್ತೆಯಂದಿರಿಗೆ ಸ್ಫೂರ್ತಿಯಾದ್ರು. 

ಆನ್‌ಲೈನ್‌ನಲ್ಲಿ ಭೇಟಿಯಾದ ಹುಡುಗಿ ಜೊತೆ ಯುವಕನ ವಿವಾಹ, 12 ದಿನದ ಮೇಲೆ ಗೊತ್ತಾಯ್ತು ಆಕೆ ಅವಳಲ್ಲ ಅವನು!

ಮಗ ಬಲಶಾಲಿ ಎಂದ ನೀತಾ : ನೀತಾ ಅಂಬಾನಿ ತಮ್ಮ ಭಾಷಣದಲ್ಲಿ ಮಗ ಅನಂತ್ ಬಗ್ಗೆಯೂ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ. ಅನಂತ್, ನೀನು ನಮಗೆ ದೇವರ ಕೊಡುಗೆ. ನನ್ನ ಮನಸ್ಸು ಪ್ರೀತಿ ಮತ್ತು ಹೆಮ್ಮೆಯಿಂದ ತುಂಬಿದೆ. ನೀನು ವಯಸ್ಸಿನಲ್ಲಿ ಚಿಕ್ಕವನಾಗಿರಬಹುದು ಆದರೆ ನೀನು ದೊಡ್ಡ ಮನಸ್ಸು ಹೊಂದಿರುವೆ, ನೀನು ಕರುಣಾಮಯಿ, ಆದರೆ ಬಲಶಾಲಿ ಎನ್ನುತ್ತ ನೀತಾ ಮಗನ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದರು. 

click me!