ಫೇಸ್‌ಬುಕ್ ಮೂಲಕ ಪ್ರೀತಿಯಾಗಿ ಮದುವೆ, 2 ವಾರ ಫಸ್ಟ್ ನೈಟ್ ಮುಂದೂಡಿದ ಪತ್ನಿಗೆ ಡಿವೋರ್ಸ್!

By Chethan Kumar  |  First Published May 28, 2024, 6:39 PM IST

ಸೋಶಿಯಲ್ ಮೀಡಿಯಾದಲ್ಲಿ ಸುಂದರ ಫೋಟೋ ನೋಡಿ ಪ್ರೀತಿ ಶುರುವಾಗಿದೆ. ಪ್ರೀತಿ ಗಾಢವಾಗಿ ಕೊನೆಗೆ ಸರಳವಾಗಿ ಮದುವೆಯೂ ನಡೆದಿದೆ. ಆದರೆ ಮದುವೆಯಾದ 2 ವಾರ ಫಸ್ಟ್ ನೈಟ್ ಮುಂದೂಡಿದ ಪತ್ನಿಗೆ ಪತಿ ಡಿವೋರ್ಸ್ ನೀಡಿದ್ದಾನೆ.  


ಇಂಡೋನೇಷಿಯಾ(ಮೇ.28) ಸೋಶಿಯಲ್ ಮೀಡಿಯಾ ಮೂಲಕ ಪರಿಚಯ, ಗೆಳೆತನ, ಪ್ರೀತಿ ಬಳಿಕ ಮದುವೆ. ಈ ಟ್ರೆಂಡ್ ಇತ್ತೀಚೆಗೆ ಹೆಚ್ಚಾಗುತ್ತಿದೆ. ಈ ರೀತಿಯ ಪ್ರೀತಿ ಮದುವೆಯಲ್ಲಿ ಮೋಸ ಹೋದವರ ಸಂಖ್ಯೆ ಹೆಚ್ಚು. ಹೀಗೆ ಫೇಸ್‌ಬುಕ್ ಮೂಲಕ ಪರಿಚಯವಾದ ಪ್ರೀತಿಯಾಗಿ ಮದುವೆ ಹಂತಕ್ಕೆ ತಲುಪಿದೆ. ಸರಳವಾಗಿ ಮದವೆಯೂ ನಡೆದಿದೆ. ತಾನು ಸಂಪ್ರದಾಯಸ್ಥ ಮುಸ್ಲಿಮ್ ಕುಟುಂಬದ ಹುಡುಗಿ ಎಂದೇ ಹೇಳಿಕೊಂಡು ಬುರ್ಖಾ ಹಾಕಿಕೊಂಡೇ ಮದುವೆ ನಡೆದಿದೆ.  ಮದುವೆಯಾದ 12 ದಿನಗಳ ಕಾಲ ಕಾದು ಕಾದು ಸುಸ್ತಾದ ಪತಿ 12ನೇ ದಿನದಂದು ಪತ್ನಿಯ ಅಸಲಿಯತ್ತು ಬಹಿರಂಗಪಡಿಸಲು ಮುಂದಾಗಿದ್ದಾನೆ. ಈ ವೇಳೆ ತನ್ನ ಪತ್ನಿ ಮಹಿಳೆ ಅಲ್ಲ, ಸಾಕ್ಷಾತ್ ಪುರುಷ ಅನ್ನೋದು ಬಹಿರಂಗವಾಗಿದೆ. ಈ ಘಟನೆ ನಡೆದಿರುವುದು ಇಂಡೋನೇಷಿಯಾದಲ್ಲಿ.

ಇಂಡೋನೇಷಿಯಾದ ಎಕೆ ಅನ್ನೋ ವ್ಯಕ್ತಿಗೆ ಫೇಸ್‌ಬುಕ್ ಮೂಲಕ ಅದಿಂದಾ ಕನ್ಜಾ ಪರಿಚಯವಾಗಿದೆ. ಅದಿಂದಾ ಹುಡುಗಿಯ ಫೋಟೋ ಪ್ರೊಫೈಲ್ ಪಿಕ್ ಹಾಕಿದ್ದ. ಈ ಫೋಟೋ ನೋಡಿ ಎಕೆಗೆ ಫುಲ್ ಲವ್ ಆಗಿದೆ. ಪರಿಚಯ ಮಾಡಿಕೊಂಡ ಎಕೆ ಆತ್ಮೀಯನಾಗಿದ್ದಾನೆ. ಅತ್ತ ಅದಿಂದಾ ಕನ್ಜಾ ಕೂಡ ಪ್ರೀತಿಯಲ್ಲಿ ಬಿದ್ದಿದ್ದಾನೆ. 

Tap to resize

Latest Videos

undefined

ರೀಲ್ಸ್‌ ಮಾಡೋದ ತಡೆದಿದ್ದೇ ತಪ್ಪಾಯ್ತು, ಬೆಂಗಳೂರಲ್ಲಿದ್ದ ಗಂಡನ ಮೇಲೆ ಹೀಗೆ ರಿವೇಂಜ್ ತಗೊಳ್ಳದಾ?

ಅದಿಂದಾ ಕನ್ಜಾ ಯುವಕ. ಆದರೆ ಹುಡುಗಿಯ ಧ್ವನಿಯಲ್ಲಿ ಮಮಿಕ್ರಿ ಮಾಡಿ ಮಾತನಾಡುತ್ತಿದ್ದ. ಕೊನೆಗೆ ಎಕೆ ಮದು ಪ್ರಪೋಸ್ ಮುಂದಿಟ್ಟ. ಇದಕ್ಕೂ ಅದಿಂದಾ ಒಕೆ ಎಂದಿದ್ದ. ತಾನು ಸಂಪ್ರದಾಯಸ್ಥ ಮುಸ್ಲಿಮ್ ಕುಟುಂಬದ ಹುಡುಗಿ. ಹೀಗಾಗಿ ಬುರ್ಖಾ ತೆಗೆಯಲ್ಲ ಎಂದಿದ್ದಾನೆ. ಇತ್ತ ಪ್ರೀತಿಯಲ್ಲಿ ಬಿದ್ದ ಎಕೆಗೆ ಎಲ್ಲವೂ ಒಕೆ.

ಮನೆಯವರ ಕುರಿತು ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ. ಮದುವೆಗೆ ಮನೆಯವರು ಒಪ್ಪುವುದಿಲ್ಲ. ಹೀಗಾಗಿ ಬೇರೆ ಕಡೆ ತೆರಳಿ ಮದುವೆಯಾಗೋಣ ಎಂದು ಅದಿಂದಾ ಹೇಳಿದ್ದಾನೆ. ಇತ್ತ ಮದುವೆ ದಿನದಂದ ಹುಡುಗಿಯಂತೆ ಮೇಕ್ ಅಪ್ ಮಾಡಿಕೊಂಡು ಬಂದ ಅದಿಂದಾ ಬುರ್ಖಾ ಹಾಕಿಕೊಂಡೇ ಮದುವೆಯಾಗಿದ್ದಾನೆ.

ಮದುವೆಯಾಗಿ ಪತ್ನಿಯನ್ನು ಮನೆಗೆ ಕರೆದುಕೊಂಡು ಬಂದ ಎಕೆ ಮೊದಲ ರಾತ್ರಿಗೆ ತಯಾರಿ ಮಾಡಿದ್ದಾನೆ. ಆದರೆ ಪೀರಿಯೆಡ್ಸ್ ಎಂದು ಹೇಳಿ ನಾಲ್ಕೈದು ದಿನ ತಳ್ಳಿದ್ದಾನೆ. ಇತ್ತ 5 ದಿನಗಳ ಬಳಿಕ ತಲೆನೋವು ಎಂದು ಒಂದರೆಡು ದಿನ ತಳ್ಳಿದ್ದಾನೆ. ಹೀಗೆ 12 ದಿನ ತಳ್ಳಿದ್ದಾನೆ. ಈ ವೇಳೆ ಪತಿ ಎಕೆಗೆ ಅನುಮಾನ ಹುಟ್ಟಿದೆ. ಈಕೆ ಒಂದು ಬಾರಿ ನೀಡಿದ್ದ ವಿಳಾಸ ಹಿಡಿದು ತೆರಳಿದ್ದಾನೆ. 

ಹದಿನಾರರಲ್ಲೇ ಪ್ರೀತಿಗೆ ಬಿದ್ದ ಮಗ, ಪಾಲಕರ ರಿಯಾಕ್ಷನ್ ಹೇಗಿದ್ದರೆ ಒಳ್ಳೇದು?

ವಿಳಾಸ ಪತ್ತೆ ಹಚ್ಚಿದಾಗ ಅಚ್ಚರಿಯಾಗಿದೆ. ಕಾರಣ ಅದಿಂದಾ ಯುವಕ. ಯುವತಿ ಅಲ್ಲ. ಇಷ್ಟೇ ಅಲ್ಲ ಮಂಗಳಮುಖಿ ಕೂಡ ಅಲ್ಲ. ಪಕ್ಕಾ ಯುವಕ. ಆದರೆ ಸುಮ್ಮನೆ ಏನೋ ಮಾಡಲು ಹೋಗಿ ಪುರುಷನ ಜೊತೆ ಪ್ರೀತಿಯಲ್ಲಿ ಬಿದ್ದು ಫಜೀತಿ ಅನುಭವಿಸಿದ್ದಾನೆ. ಇತ್ತ 12ನೇ ದಿನಕ್ಕೆ ಏಕೆ ಪತ್ನಿಗೆ ಡಿವೋರ್ಸ್ ನೀಡಿದ್ದಾನೆ.
 

click me!