
ಹಿರಿಯ ನಟ ನಾನಾ ಪಾಟೇಕರ್ ಅವರ ನಿಧನದ ಬಳಿಕ ನಟಿ ತನುಶ್ರೀ ದತ್ತಾ ಸದ್ದು ಮಾಡುತ್ತಿದ್ದಾರೆ. ನಟ ನಾನಾ ಪಾಟೇಕರ್ ಸತ್ತಿಲ್ಲ. ಅವರು ಬದುಕಿದ್ದಾರೆ. ಸುಟ್ಟಿದ್ದು ಅವರ ಶವವಲ್ಲ, ಡಿಎನ್ಎ ಪರೀಕ್ಷೆ ಮಾಡಿಸಬೇಕು ಎಂದು ತನುಶ್ರೀ ದತ್ತಾ ಹೇಳುತ್ತಿದ್ದಾರೆ. ಹಿಂದೂ ಸಂಸ್ಕೃತಿ ವಿರುದ್ಧವಾಗಿ ಮಧ್ಯರಾತ್ರಿ ಶವ ಸಂಸ್ಕಾರ ಮಾಡಲಾಗಿದೆ. ಶವವನ್ನು ಬಾಲಿವುಡ್ನ ಯಾರಿಗೂ ತೋರಿಸಿಲ್ಲ, ಪ್ರಾರ್ಥನೆಗೂ ಅವಕಾಶ ಕಲ್ಪಿಸಲಿಲ್ಲ ಎನ್ನುವುದು ತನುಶ್ರೀ ಆರೋಪ. ಆದರೆ ಇದೇ ನಟಿ ತನುಶ್ರೀ ದತ್ತಾ ಅವರು ನಾನಾ ಪಾಟೇಕರ್ ವಿರುದ್ಧ ಲೈಂ*ಗಿಕ ದೌರ್ಜನ್ಯದ ಕೇಸ್ ದಾಖಲು ಮಾಡಿದ್ದರು! ಅವರ ಸಾವಿನ ಬಳಿಕವೂ ನಟಿ ಇದೇ ವಿಷಯವನ್ನು ಪ್ರಸ್ತಾಪಿಸಿದ್ದರು. ನಾನು ಅವರಿಗೆ ತುಂಬಾ ಹಿಂಸೆ ಅನುಭವಿಸಿದ್ದೆ ಎಂದು 2008ರಲ್ಲಿ ನಡೆದ ಘಟನೆಯನ್ನು ತನುಶ್ರೀ ದತ್ತಾ ವಿವರಿಸಿದ್ದರು.
ನಟಿ ಮತ್ತು ಮಾಜಿ 'ಮಿಸ್ ಇಂಡಿಯಾ ಯೂನಿವರ್ಸ್' ತನುಶ್ರೀ ದತ್ತಾ, 2009ರ 'ಹಾರ್ನ್ 'ಓಕೆ' ಪ್ಲೀಸ್' (Horn 'Ok' Pleassss) ಚಿತ್ರದ ಚಿತ್ರೀಕರಣದ ವೇಳೆ ನಾನಾ ಪಾಟೇಕರ್ ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಮತ್ತು ಬೆದರಿಸಿದ್ದಾರೆ ಎಂದು ಆರೋಪಿಸಿದ್ದರು. 2018ರಲ್ಲಿ ಅವರು ಮಾಡಿದ ಈ ಆರೋಪಗಳು, ಭಾರತದ '#MeToo' ಚಳವಳಿಯಲ್ಲಿ ಮುನ್ನೆಲೆಯಲ್ಲಿ ಇತ್ತು. ನಾನಾ ಪಾಟೇಕರ್ ಈ ಆರೋಪಗಳನ್ನು ನಿರಾಕರಿಸಿದರು. 2018ರಲ್ಲಿ ನಟನ ವಿರುದ್ಧ ಎಫ್ಐಆರ್ ದಾಖಲಿಸಲಾಗಿತ್ತು. ಆದರೆ, ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ 2019ರಲ್ಲಿ ಈ ಪ್ರಕರಣವನ್ನು ಮುಕ್ತಾಯಗೊಳಿಸಲಾಯಿತು.
ಇದೀಗ ತನುಶ್ರೀ ಅವರ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ನಾನಾ ಪಾಟೇಕರ್ ಪುತ್ರ, ಪುತ್ರ ಮಲ್ಹಾರ್ ಪಾಟೇಕರ್ ಕಿಡಿ ಕಾರಿದ್ದಾರೆ. ಈ ವಿಷಯವು ಕಾನೂನುಬದ್ಧವಾಗಿ ಬಗೆಹರಿದಿದೆ. ಇದನ್ನೇಕೆ ಮತ್ತೆ ಮುನ್ನೆಲೆಗೆ ತರಲಾಗುತ್ತಿದೆ ಎಂದು ಪ್ರಶ್ನಿಸಿದ್ದಾರೆ. ನುಶ್ರೀ ದತ್ತಾ ಅವರು ಆರೋಪಗಳು ಬೆಳಕಿಗೆ ಬಂದಾಗಿನಿಂದಲೂ ತಮಗೆ ಬೆದರಿಕೆ ಸೇರಿದಂತೆ ಹಲವು ರೀತಿಯ ತೊಂದರೆಗಳು ಎದುರಾಗಿವೆ ಎಂದು ಹೇಳಿಕೊಂಡಿದ್ದಾರೆ. 'ಯಾರ ಹೆಸರನ್ನೂ ಪ್ರಸ್ತಾಪಿಸದೆ ನಾನು ಹೇಳುವುದೇನೆಂದರೆ, ಜನರು ಅನಗತ್ಯವಾಗಿ ಎತ್ತುತ್ತಿರುವ ಪ್ರಕರಣವು ಈಗಾಗಲೇ ಮುಗಿದುಹೋಗಿದೆ. ನ್ಯಾಯಾಂಗವು ಅವರಿಗೆ ಕ್ಲೀನ್ ಚಿಟ್ ನೀಡಿದೆ, ಪ್ರಕರಣ ಮುಗಿದಿದೆ, ಆದರೂ ಜನರು ಇನ್ನೂ ಮಾತನಾಡುತ್ತಲೇ ಇದ್ದಾರೆ. ಅಂತಹ ಜನರಿಗೆ ನಾನು ಏನನ್ನೂ ಹೇಳುವುದಿಲ್ಲ; ದೇವರು ಅವರಿಗೆ ಒಳ್ಳೆಯದನ್ನು ಮಾಡಲಿ' ಎಂದಿದ್ದಾರೆ.
ಆದರೆ ಕುತೂಹಲದ ವಿಷ್ಯ ಏನೆಂದರೆ, ನಾನಾ ಪಾಟೇಕರ್ ಅವರು ಸತ್ತಿಲ್ಲ ಎಂದು ಒಂದಷ್ಟು ಘಟನೆಗಳನ್ನು ತನುಶ್ರೀ ದತ್ತಾ ಹೇಳುತ್ತಿದ್ದರೂ, ಮಗ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ತನುಶ್ರೀ ಕೆಲವೊಂದುಪ್ರಶ್ನೆಗಳನ್ನು ಎತ್ತಿದ್ದು, ಅದಕ್ಕೆ ಉತ್ತರ ಸಿಗಲಿ ಎನ್ನುವುದು ನಾನಾ ಪಾಟೇಕರ್ ಅಭಿಮಾನಿಗಳ ಆಸೆಯಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.