ಫ್ರೆಂಡ್ಸ್ ಜೊತೆ ಟ್ರಿಪ್ ಹೋದ ಹೆಂಡ್ತಿ, ಏನೇನೋ ಮಾಡ್ಕೊಂಡಳಂತೆ!

By Suvarna NewsFirst Published Apr 29, 2022, 5:50 PM IST
Highlights

ಗಂಡ (Husband) ಹೆಂಡ್ತಿ ಮೇಲೆ, ಹೆಂಡ್ತಿ (Wife) ಗಂಡನ ಮೇಲೆ ಅನುಮಾನ ಪಡೋದು ಹೊಸದೇನಲ್ಲ. ಇಲ್ಲೊಬ್ಬ ಪತಿ ಮಹಾಶಯನಿಗೂ ಇದೇ ಸಮಸ್ಯೆಗೆ (Problem) ಎದುರಾಗಿದೆ. ಹೆಂಡ್ತಿ ಸ್ನೇಹಿತೆಯರ ಜತೆ ಟ್ರಿಪ್‌ಗೆ (Trip) ಹೋಗಿದ್ಲು. ಆದ್ರೆ ಅಲ್ಲಿ ಹುಡುಗಿಯರೇ ಸೇರ್ಕೊಂಡು ಬೇರೇನೋ ಮಾಡಿದ್ದಾರೆ ಅನ್ನೋ ಅನುಮಾನ ಗಂಡನದ್ದು.

ಇವತ್ತಿನ ಸಮಾಜ (Society)ದಲ್ಲಿ ಅನೈತಿಕತೆ ಎಂಬುದು ಅಚ್ಚರಿಪಡುವ ವಿಷಯವಾಗಿ ಉಳಿದಿಲ್ಲ. ಎಲ್ಲರೂ ಇದನ್ನು ಸಾಮಾನ್ಯವಾಗಿ ಕಾಣುತ್ತಿದ್ದಾರೆ. ಮೊದಲ್ಲೆಲ್ಲಾ ಸಂಬಂಧ (Relatioship)ಗಳಿಗೆ ಅತಿ ಹೆಚ್ಚು ಮೌಲ್ಯವಿತ್ತು. ಆದರೆ ಇವತ್ತಿನ ದಿನಗಳಲ್ಲಿ ಯಾವ ಸಂಬಂಧವೂ ನಿಜವಾದ ಅರ್ಥವನ್ನು ಉಳಿಸಿಕೊಂಡಿಲ್ಲ. ತಾಯಿ, ಮಗ, ಸ್ನೇಹಿತ, ಗಂಡ ಎಲ್ಲಾ ಸಂಬಂಧಗಳಲ್ಲೂ ಸುಲಭವಾಗಿ ಮೋಸ ನಡೆಯುತ್ತದೆ. ಗಂಡನ ತಮ್ಮನನ್ನೇ ಮದುವೆಯಾಗುವುದು, ಮಾವನ ಜತೆ ಓಡಿಹೋಗುವುದು, ಶಿಕ್ಷಕನ ಜತೆ ವಿದ್ಯಾರ್ಥಿಯ ಸರಸ. ಹೀಗೆ ಎಂಥಾ ಘಟನೆಗಳು ಬೇಕಾದ್ರೂ ಇವತ್ತಿನ ಕಾಲದಲ್ಲಿ ನಡೆಯುತ್ತವೆ.

ಅಕ್ಕನ ಗಂಡನ (Husband) ಮೇಲೆ ತಂಗಿ ಕಣ್‌ ಹಾಕೋದು, ಅಣ್ಣನ ಹೆಂಡ್ತಿ ಮೇಲೆ ಮೈದುನನಿಗೆ ಪ್ರೀತಿ, ಸ್ನೇಹಿತನ ಪತ್ನಿ ಜತೆ ಗಂಡನ ಲವ್ವಿಡವ್ವಿ ಇದ್ಯಾವುದೂ ಈಗ ಶಾಕಿಂಗ್ ನ್ಯೂಸ್ ಆಗಿ ಉಳಿದಿಲ್ಲ. ಅದರಲ್ಲೂ ಅನೈತಿಕ ಸಂಬಂಧ (Extra marital Affairs) ಇಟ್ಟುಕೊಳ್ಳೋದ್ರಲ್ಲಿ ಹೆಂಗಸರ ಪ್ರಮಾಣವೇ ಹೆಚ್ಚು ಎಂಬುದು ಇತ್ತೀಚಿನ ಅಧ್ಯಯನ (Study)ದಿಂದ ಬಯಲಾಗಿದೆ. ಹೀಗಾಗಿಯೇ ಪುರುಷರು ಸಹಜವಾಗಿಯೇ ಹೆಂಗಸರ ಮೇಲೆ ಸಣ್ಣಪುಟ್ಟ ಕಾರಣಕ್ಕೂ ಅನುಮಾನ ಪಡುತ್ತಿದ್ದಾರೆ. ಡ್ಯಾನ್ಸ್, ಯೋಗ ಕ್ಲಾಸ್, ಬ್ಯೂಟಿ ಪಾರ್ಲರ್, ಜಿಮ್, ಆಫೀಸ್ ಹೀಗೆ ಎಲ್ಲಿಗೆ ಹೋಗಿ ಬಂದರೂ ಮಹಿಳೆಯನ್ನು ಅನುಮಾನದ ದೃಷ್ಟಿಯಲ್ಲಿ ನೋಡುತ್ತಿದ್ದಾರೆ. 

Divorce Tricks: ನಿಮ್ಮಿಂದ ದೂರವಾಗೋಕೆ ಸಂಗಾತಿ ಈ ತಂತ್ರ ಅನುಸರಿಸ್ತಾ ಇರ್ಬೋದು

ಇಲ್ಲೊಬ್ಬ ಪತಿ ಮಹಾಶಯನಿಗೂ ಇದೇ ಸಮಸ್ಯೆಗೆ ಎದುರಾಗಿದೆ. ಹೆಂಡ್ತಿ ಸ್ನೇಹಿತೆಯರ ಜತೆ ಟ್ರಿಪ್‌ಗೆ ಹೋಗಿದ್ಲು. ಆದ್ರೆ ಅಲ್ಲಿ ಹುಡುಗಿಯರೇ ಸೇರ್ಕೊಂಡು ಬೇರೇನೋ ಮಾಡಿದ್ದಾರೆ ಅನ್ನೋ ಅನುಮಾನ ಗಂಡನದ್ದು. ಲೆಸ್ಬಿಯನ್ ಕಾನ್ಸೆಪ್ಟ್ ಇತ್ತೀಚಿಗೆ ಅಪರಿಚಿತವಾಗೇನೂ ಉಳಿದಿಲ್ಲ. ಹುಡುಗಿಯರು ಹುಡುಗಿಯರ ಜತೆಗೆ ಸಂಬಂಧವಿಟ್ಟುಕೊಳ್ಳುತ್ತಾರೆ. ಹೀಗಾಗಿಯೇ ಗಂಡನಿಗೆ ತನ್ನ ಆಪ್ತ ಸ್ನೇಹಿತೆಯರ ಜತೆ ಟ್ರಿಪ್‌ಗೆ ಹೋದ ಗಂಡನ ಮೇಲೆ ಅನುಮಾನ ಮೂಡಿದೆ.

ಪ್ರಶ್ನೆ: ನನ್ನ ಹೆಂಡತಿ ಇತ್ತೀಚೆಗೆ ಮಾರಿಷಸ್‌ಗೆ ತನ್ನ ಹುಡುಗಿಯರ ತಂಡದ ಜೊತೆ ಪ್ರವಾಸಕ್ಕೆ ಹೋಗಿದ್ದಳು. ಅಂದಿನಿಂದ ನಾನು ಅವಳ ಸ್ನೇಹಿತರಿಂದ ಎಲ್ಲಾ ರೀತಿಯ ಕಥೆಗಳನ್ನು ಕೇಳುತ್ತಿದ್ದೇನೆ. ನಾನು ಅನುಮೋದಿಸದ ರೀತಿಯ ವಿನೋದದಲ್ಲಿ ಅವರು ತೊಡಗಿಸಿಕೊಂಡಿರುವಂತೆ ತೋರುತ್ತಿದೆ. ನನ್ನ ಹೆಂಡತಿ ಪ್ರವಾಸದ ಬಗ್ಗೆ ವಿವರವಾಗಿ ಮಾತನಾಡುವುದನ್ನು ತಪ್ಪಿಸುತ್ತಾಳೆ. ಆ ಬಗ್ಗೆ ಪದೇ ಪದೇ ಕೇಳಿದರೆ ವಿಷಯಗಳನ್ನು ಮರೆಮಾಚುತ್ತಾಳೆ. ನಾನೇನು ಮಾಡಬಹುದು ?

ಪತಿಗೆ ಪತ್ನಿಯ ಕುರಿತು ಇರುವ ಈ ಗೊಂದಲದ ಪ್ರಶ್ನೆಗೆ ಗುರಗಾಂವ್‌ನ ಹೋಲಿಸ್ಟಿಕ್ ಮೆಡಿಸಿನ್, ಆರ್ಟೆಮಿಸ್ ಆಸ್ಪತ್ರೆ,ಯ  ಸಂಬಂಧ, ಜೀವನಶೈಲಿ ಮತ್ತು ಒತ್ತಡ ನಿರ್ವಹಣೆ ತಜ್ಞೆ, ಡಾ.ರಚನಾ ಕೆ. ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ.

Marriage Life : ದಾಂಪತ್ಯ ಹಾಳ್ಮಾಡುತ್ತೆ ಈ ಕೆಟ್ಟ ಅಭ್ಯಾಸ

ಉತ್ತರ: ಸಂಗಾತಿಯ ಬಗ್ಗೆ ನಿಮಗೆ ಅನುಮಾನವಿದ್ದರೆ, ಅದು ಒತ್ತಡ ಮತ್ತು ಕಿರಿಕಿರಿಗೆ ಕಾರಣವಾಗಬಹುದು. ಮಾತ್ರವಲ್ಲ ಈ ಗೊಂದಲ ನಿಮ್ಮಿಬ್ಬರ  ಸಂಬಂಧವನ್ನು ಮುರಿಯಬಹುದು. ನೀವು ಈ ಸಮಸ್ಯೆಯನ್ನು ಹೇಗೆ ಬಗೆಹರಿಸಬಹುದು ಎಂಬ ವಿಧಾನ ಇಲ್ಲಿದೆ.

1) ದಾಂಪತ್ಯದಲ್ಲಿ ನಂಬಿಕೆ ಮುಖ್ಯ: ದಾಂಪತ್ಯ ಜೀವನ ಚೆನ್ನಾಗಿರಬೇಕಾದರೆ ನಿಮ್ಮ ಸಂಗಾತಿಯನ್ನು ನಂಬಿರಿ. ಇದು ವೈವಾಹಿಕ ಜೀವನದಲ್ಲಿ ಅನುಸರಿಸಬೇಕಾದ ಮೊದಲ ಹೆಜ್ಜೆಯಾಗಿದೆ. ನಿಮ್ಮ ಸಂಗಾತಿಯೊಂದಿಗೆ ಮುಕ್ತವಾಗಿ ಮಾತನಾಡಿ ಮತ್ತು ನಿಮ್ಮ ಗೊಂದಲ, ಪ್ರಶ್ನೆ, ಸಮಸ್ಯೆಯ ಬಗ್ಗೆ ಅವರನ್ನು ಶಾಂತವಾಗಿ ಕೇಳಿ ಉತ್ತರ ಪಡೆಯಿರಿ.

2) ಅನುಮಾನಕ್ಕೆ ಕಾರಣವೇನು ತಿಳಿದುಕೊಳ್ಳಿ: ಈ ಅಪನಂಬಿಕೆ ಮತ್ತು ಅನುಮಾನಗಳು ಎಲ್ಲಿಂದ ಉದ್ಭವಿಸುತ್ತವೆ ಎಂಬುದನ್ನು ಕಂಡುಹಿಡಿಯಿರಿ, ನಿಜವಾದ ಸಮಸ್ಯೆ ಬೇರೆ ಇದ್ದರೆ, ನೀವು ಅದನ್ನು ಪರಿಹರಿಸಬೇಕು. ನಿಮ್ಮ ಸಂಗಾತಿಯ ಬಗ್ಗೆ ನಿಮಗೆ ನಂಬಿಕೆ ಮೂಡುತ್ತಿಲ್ಲವಾಗಿದ್ದರೆ, ನಿಮಗ್ಯಾಕೆ ಹಾಗೆ ಆಗುತ್ತಿದೆ ಎಂಬುದನ್ನು ಕಂಡುಹಿಡಿಯುವುದು ಮುಖ್ಯವಾಗಿದೆ. ನಿಮಗೆ ಯಾವುದೇ ತಾರ್ಕಿಕ ಕಾರಣವಿಲ್ಲದಿದ್ದರೆ, ಅದನ್ನು ಬಿಟ್ಟುಬಿಡಿ.

3) ಅನುಮಾನ ಪಡಬೇಡಿ: ಎಲ್ಲವನ್ನೂ ಅನುಮಾನದ ದೃಷ್ಟಿಯಲ್ಲಿ ನೋಡುವುದನ್ನು ಬಿಟ್ಟುಬಿಡಿ. ಆಶಾದಾಯಕವಾಗಿ ಯೋಚಿಸಿ. ಕೆಲವು ಹಂತದಲ್ಲಿ ನಿಮ್ಮಲ್ಲಿ ಮೂಡಿರುವ ಕೆಟ್ಟ ಆಲೋಚನೆಗಳೇ ನಿಮ್ಮಲ್ಲಿ ಅನುಮಾನಗಳನ್ನು ಹುಟ್ಟುಹಾಕುತ್ತವೆ. ಹೀಗಾಗಿ ಸಂಗಾತಿ ಟ್ರಿಪ್ ಬಗ್ಗೆ ತಾನಾಗಿಯೇ ಹೇಳುವ ವರೆಗೂ ಸುಮ್ಮನಿರಿ. ಅವರೇ ಸಂಪೂರ್ಣ ವಿವರವನ್ನು ಬಿಡಿಸಿ ಹೇಳಿದಾಗ ನಿಮ್ಮ ಅನುಮಾನ ಬಗೆಹರಿಯುತ್ತದೆ.

click me!