
ಒಂದು ಗಂಡಿಗೆ ಒಂದು ಹೆಣ್ಣು ಎನ್ನುವುದು ಹಿಂದೂ ಸಂಪ್ರದಾಯ. ಆದರೆ ನಾಲ್ಕು ಮಂದಿಯನ್ನು ಮದುವೆಯಾಗಲು ಇಸ್ಲಾಂ ಕಾನೂನಿನಲ್ಲಿ ಅವಕಾಶವಿದೆ. ಆದ್ದರಿಂದ ಅವರು ನಾಲ್ಕು ಮದುವೆಯನ್ನು ಆದರೆ ಅದು ಕಾನೂನುಬಾಹಿರ ಆಗುವುದಿಲ್ಲ. ನ್ಯಾಯ, ಸಮಾನತೆ ಮತ್ತು ಆರ್ಥಿಕ ಸಾಮರ್ಥ್ಯದ ಅಡಿಯಲ್ಲಿ ಅವರಿಗೆ ಕಾನೂನಿನ ಪ್ರಕಾರ ಮದುವೆಯಾಗಲು ಅನುಮತಿ ಇದೆ. ಯುದ್ಧಗಳು ಸಾಮಾನ್ಯವಾಗಿದ್ದ ದಿನಗಳಲ್ಲಿ, ಯುದ್ಧದಲ್ಲಿ ಮಡಿದವರ ವಿಧವೆಯರು ಮತ್ತು ಅನಾಥರನ್ನು ನೋಡಿಕೊಳ್ಳಲು ಈ ಪದ್ಧತಿಯನ್ನು ಪ್ರೋತ್ಸಾಹಿಸುತ್ತಾ ಬರಲಾಗಿದೆ. ಆದರೆ ಒಬ್ಬ ಪುರುಷನು ಎಲ್ಲರಿಗೂ ನ್ಯಾಯಯುತವಾಗಿರಲು ಸಾಧ್ಯವಿಲ್ಲ ಎಂದು ಭಯಪಟ್ಟರೆ, ಅವನು ಒಬ್ಬಳನ್ನು ಮಾತ್ರ ಮದುವೆಯಾಗಬೇಕು ಎಂದು ಹೇಳಲಾಗುತ್ತದೆ ಎನ್ನಲಾಗಿದೆ.
ಅದೇನೇ ಇದ್ದರೂ ಬಹುಪತ್ನಿತ್ವಕ್ಕೆ ಅವರಿಗೆ ಅವಕಾಶ ಇದೆ. ಸಾಮಾನ್ಯವಾಗಿ ಪತಿಗೆ ಇನ್ನೊಂದು ಸಂಬಂಧ ಇರುವುದೋ ಅಥವಾ ಆತ ಬೇರೆಯವಳ ಕಡೆ ವಾಲುತ್ತಿರುವುದು ಪತ್ನಿಗೆ ಗೊತ್ತಾದರೆ, ಹಿಂದೂಗಳಲ್ಲಿ ಸಾಮಾನ್ಯವಾಗಿ ಮನೆಯಲ್ಲಿ ಯುದ್ಧವೇ ನಡೆದು ಹೋಗುತ್ತದೆ. ಇದನ್ನು ಅನೈತಿಕ, ಅಕ್ರಮ ಸಂಬಂಧ ಎನ್ನಲಾಗುತ್ತದೆ. ಇದೇ ಕಾರಣಕ್ಕೆ, ವಿಚ್ಛೇದನ ಪ್ರಕರಣಗಳು ಸಾಮಾನ್ಯವಾಗಿವೆ. ಅಷ್ಟೇ ಏಕೆ, ಕೊ*ಲೆಗಳೂ ನಡೆದುಬಿಟ್ಟಿವೆ. ಆದರೆ ಮುಸ್ಲಿಂ ಸಂಪ್ರದಾಯದಲ್ಲಿ ಪತ್ನಿಯರು ಇದನ್ನು ಸಹಿಸಿಕೊಳ್ಳಬೇಕಿದೆ. ಏಕೆಂದರೆ, ಅಲ್ಲಿ ಪುರುಷರಿಗೆ ಆ ಅವಕಾಶವಿದೆ. ಆದ್ದರಿಂದ ಎಲ್ಲರೂ ಒಟ್ಟಾಗಿ ಬಾಳ್ವೆ ನಡೆಸುತ್ತಾರೆ.
ಈಗ ಇಲ್ಲೊಂದು ವೈರಲ್ ವಿಡಿಯೋದಲ್ಲಿ, ಒಬ್ಬ ವ್ಯಕ್ತಿ ತನ್ನ ನಾಲ್ವರು ಪತ್ನಿಯರನ್ನು ಪರಿಚಯ ಮಾಡಿಸಿಕೊಡುತ್ತಿರುವ ರೀತಿ ಸೋಷಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗಿದೆ. ಇವಳು ನನ್ನ ಕಸಿನ್. ಅವಳನ್ನು ಮೊದಲು ಮದುವೆಯಾದೆ. ಈಕೆ ಎರಡನೆಯವಳು, ಫೋನ್ನಲ್ಲಿ ರಾಂಗ್ ನಂಬರ್ ಕನೆಕ್ಟ್ ಆಯಿತು. ಹಾಗೆ ಮಾತನಾಡುತ್ತಾ ಲವ್ ಆಯಿತು. ಮದುವೆಯವರೆಗೂ ವಿಷಯ ಮುಟ್ಟಿತು. ಆಕೆ ಎರಡನೆಯ ಪತ್ನಿಯಾಗಿ ಬರಲು ಒಪ್ಪಿದಳು. ಆದರೆ ಮೊದಲ ಪತ್ನಿಗೆ ಸಿಟ್ಟು ಬಂದಿತು. ಆದರೂ ಹೇಗೋ ಅವಳನ್ನು ಓಲೈಸಿ ಎರಡನೆಯ ಮದುವೆಯಾದೆ ಎಂದು ಈ ವಿಡಿಯೋದಲ್ಲಿ ಆ ವ್ಯಕ್ತಿ ಹೇಳುತ್ತಿದ್ದಾರೆ.
ಮೂರನೆಯವಳು, ಎರಡನೆಯವಳ ಸ್ನೇಹಿತೆ. ಅವಳು ತನ್ನ ಸ್ನೇಹಿತೆಯನ್ನು ನಾನು ಪ್ರೀತಿ ಮಾಡುವುದನ್ನು ನೋಡಿ ನನಗೆ ಮನಸೋತಳು. 3ನೇ ಪತ್ನಿಯಾಗಿ ಬರಲು ಒಪ್ಪಿಕೊಂಡಳು. ಅವಳಿಗೆ ನಾನು ತುಂಬಾ ಇಷ್ಟವಾದೆ, ನನಗೂ ಅವಳು ಇಷ್ಟವಾದಳು. ಆದ್ದರಿಂದ ಮದುವೆಯಾದೆ ಎಂದಿದ್ದಾರೆ. ಇನ್ನು ಒಂದು ಹಂತದಲ್ಲಿ ಈ ಮೂವರೂ ಪತ್ನಿಯರ ಜೊತೆ ಜಗಳವಾದ ಕಾರಣ, 4ನೇಯವಳನ್ನು ಮದುವೆಯಾದೆ ಎಂದಿದ್ದಾರೆ ಈ ಪತಿರಾಯ! 2ನೆಯ ಮದುವೆಯಾದಾಗ, ಮೊದಲಿನವಳಿಗೆ ಹೇಗೆ ಎನ್ನಿಸಿತು ಎಂದು ಅವರನ್ನೇ ಪ್ರಶ್ನಿಸಿದಾಗ, ನನಗೆ ತುಂಬಾ ಕೋಪ ಬಂದಿತ್ತು. ಆದರೂ ಇವರು ಹೇಗೋ ನನ್ನನ್ನು ಓಲೈಸುವಲ್ಲಿ ಸಫಲರಾದರು. ನಾನು ಒಪ್ಪಿಗೆ ಕೊಟ್ಟೆ ಎಂದಿದ್ದಾರೆ. trunicle ಇನ್ಸ್ಟಾಗ್ರಾಮ್ನಲ್ಲಿ ಇದನ್ನು ಪೋಸ್ಟ್ ಮಾಡಲಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.