Commitment Phobia: ನಿಮ್ಮ ಸಂಗಾತಿಗೂ ಇದ್ಯಾ ಚೆಕ್ ಮಾಡ್ಕೊಳ್ಳಿ! ಗುರುತಿಸುವುದು ಹೇಗೆ?

Published : Jan 20, 2026, 07:00 PM IST
Relationship

ಸಾರಾಂಶ

ಕಮಿಟ್‌ಮೆಂಟ್‌ಗೆ ಹೆದರುವ ಸಂಗಾತಿಯೊಂದಿಗೆ ಸಂಬಂಧವನ್ನು ಮುಂದುವರಿಸುವುದು ಸವಾಲಿನ ಸಂಗತಿ. ಭವಿಷ್ಯದ ಬಗ್ಗೆ ಮಾತನಾಡಲು ಹಿಂಜರಿಯುವುದು, ಅಸ್ಪಷ್ಟ ಉತ್ತರಗಳನ್ನು ನೀಡುವುದು, ಮತ್ತು ಹಳೆಯ ಸಂಬಂಧಗಳು ಬೇಗನೆ ಮುರಿದುಬಿದ್ದಿರುವುದು ಅವರ ಪ್ರಮುಖ ಲಕ್ಷಣಗಳಾಗಿವೆ.  

ಕಮಿಟ್‌ಮೆಂಟ್‌ಗೆ ಹೆದರುವ ವ್ಯಕ್ತಿಯೊಂದಿಗೆ ಸಂಬಂಧ ಕಟ್ಟಿಕೊಳ್ಳುವುದು ಸುಲಭವಲ್ಲ. ಅವರನ್ನು ನಂಬಿ ಮುಂದುವರಿದರೆ ಬದುಕು ಮುಂದೂ ಸಾಗದೆ, ಹಿಂದೆಯೂ ಹೋಗಲಾಗದ ಸ್ಥಿತಿ ಉಂಟಾಗುತ್ತದೆ. ಹಾಗಾದರೆ, ನಿಮ್ಮ ಸಂಗಾತಿಗೆ ಕಮಿಟ್‌ಮೆಂಟ್ ಫೋಬಿಯಾ ಇದೆಯೇ ಇಲ್ಲವೇ ಎಂದು ಗುರುತಿಸುವುದು ಹೇಗೆ?

ಆತ/ಆಕೆ ಒಳ್ಳೆಯವರೇ ಆಗಿರಬಹುದು. ಆದರೆ ಜಯನಗರ ಕಡೆ ಹೋಗೋಣ ಎಂದರೆ ಅಲ್ಲಿ ಸಂಬಂಧಿಕರು ಕಾಣಿಸಿಕೊಳ್ಳಬಹುದೆಂದು ತಪ್ಪಿಸಿಕೊಳ್ಳುತ್ತಾರೆ. ಡಿನ್ನರ್‌ಗೆ ಹೋಟೆಲ್ ಪ್ಲಾನ್ ಮಾಡಿದರೆ ಸ್ನೇಹಿತರು ಬಂದು ಬಿಡ್ತಾರೋ ಎಂಬ ಭಯ. ಭವಿಷ್ಯದ ಬಗ್ಗೆ ಮಾತು ಎತ್ತಿದ ತಕ್ಷಣವೇ ವಿಷಯ ಬದಲಾಯಿಸುತ್ತಾರೆ. ಈ ಲಕ್ಷಣಗಳು ನಿಮಗೆ ಪರಿಚಿತವಾಗಿದ್ದರೆ, ನಿಮ್ಮ ಸಂಗಾತಿ ಕಮಿಟ್‌ಮೆಂಟ್ ಫೋಬಿಯಾಗಿರಬಹುದೆಂಬ ಅನುಮಾನ ಬರುತ್ತದೆ. ಹಾಗಾದರೆ ಇಂಥವರೊಂದಿಗೆ ಸಂಬಂಧ ಹೇಗೆ? ಅವರನ್ನು ನಂಬಬಹುದೇ? ಮೊದಲಿಗೆ ಅವರಿಗೆ ಈ ಸಮಸ್ಯೆ ಇದೆ ಎಂದು ತಿಳಿದುಕೊಳ್ಳುವುದು ಮುಖ್ಯ.

ಚಿತ್ರಗಳಲ್ಲಿ ಇಂಥ ಪಾತ್ರಗಳು ನಗು ತರಿಸಬಹುದು. ಆದರೆ ನಿಜ ಜೀವನದಲ್ಲಿ ಪ್ರೀತಿಯಲ್ಲಿ ಬಿದ್ದಿದ್ದರೆ, ನೋವು ನಿಮ್ಮದೇ ಆಗುತ್ತದೆ. ಏಕೆಂದರೆ ಯಾವುದೇ ಸಂಬಂಧದ ಅಡಿಪಾಯವೇ ನಂಬಿಕೆ ಮತ್ತು ಪ್ರಾಮಾಣಿಕತೆ. ಕಮಿಟ್‌ಮೆಂಟ್ ಫೋಬಿಯಾ ಇರುವವರಲ್ಲಿ ಇದೇ ಅಂಶಗಳ ಕೊರತೆ ಕಾಣಿಸುವುದರಿಂದ ಸಂಬಂಧ ಜಟಿಲವಾಗುತ್ತದೆ. ಇದರರ್ಥ ಅವರು ಕೆಟ್ಟವರು ಎಂದಲ್ಲ. ಆದರೆ ಮಾತು ಕೊಡುವ ವಿಷಯದಲ್ಲಿ ಅವರಿಗೆ ಅವರ ಮೇಲೆಯೇ ವಿಶ್ವಾಸ ಕಡಿಮೆ. ಹಣಕಾಸಿನ ಭಯ, ಕುಟುಂಬ ಒಪ್ಪದಿರಬಹುದು ಎಂಬ ಆತಂಕ, ಇನ್ನೂ ಉತ್ತಮ ಸಂಗಾತಿ ಸಿಗಬಹುದೆಂಬ ಅಸ್ಪಷ್ಟ ನಿರೀಕ್ಷೆ. ಇವೆಲ್ಲವೂ ಅವರನ್ನು ಕಮಿಟ್ ಆಗುವುದರಿಂದ ಹಿಂದೆ ಸರಿಯುವಂತೆ ಮಾಡುತ್ತವೆ.

ಹಳೆ ಸಂಬಂಧಗಳು ಹೆಚ್ಚು ಕಾಲ ಮುಂದುವರೆಯುವುದಿಲ್ಲ

ಇಂಥ ವ್ಯಕ್ತಿಗಳ ಹಿಂದಿನ ಸಂಬಂಧಗಳೆಲ್ಲ ಸಾಮಾನ್ಯವಾಗಿ ಕೆಲ ತಿಂಗಳಲ್ಲೇ ಅಂತ್ಯ ಕಂಡಿರುತ್ತವೆ. ದೀರ್ಘಕಾಲದ ಬಾಂಧವ್ಯಕ್ಕೆ ಅವರು ಸಿದ್ಧರಾಗಿರದಿರುವುದೇ ಇದಕ್ಕೆ ಕಾರಣ. ಜೊತೆಗೆ, ತಮ್ಮ ಮಾತೇ ಅಂತ ಮೊಂಡು ಹಿಡಿದು, ಸಣ್ಣ ವಿಷಯಕ್ಕೂ ಜಗಳವಾಡುವ ಸ್ವಭಾವದಿಂದ ಸಂಬಂಧಗಳು ಬಿರುಕು ಬೀಳುತ್ತವೆ.

ಅಸ್ಪಷ್ಟ ಮತ್ತು ತಪ್ಪಿಸಿಕೊಳ್ಳುವ ಮಾತುಗಳು

ಇರಬಹುದು, ಇಲ್ಲದಿರಬಹುದು, ನೋಡೋಣ, ಬಹುಶಃ ಇಂಥ ಪದಗಳು ಅವರ ಮಾತಿನಲ್ಲಿ ಹೆಚ್ಚಾಗಿ ಕೇಳಿಸುತ್ತವೆ. ಸ್ಪಷ್ಟ ಉತ್ತರ ಕೊಟ್ಟು ಸಿಕ್ಕಿಬೀಳುವ ಪರಿಸ್ಥಿತಿಯನ್ನು ಅವರು ತಪ್ಪಿಸುತ್ತಾರೆ. ಅಸೌಕರ್ಯದ ಸಂದರ್ಭ ಬಂದರೆ ಯಾವುದೋ ಒಂದು ಕಾರಣ ಹೇಳಿ ಜಾರಿ ಹೋಗುವುದು ಅವರ ಅಭ್ಯಾಸ.

ತಪ್ಪು ಒಪ್ಪಿಕೊಳ್ಳದ ಮನಸ್ಥಿತಿ

ಕಮಿಟ್‌ಮೆಂಟ್‌ಗೆ ಭಯಪಡುವವರು ತಮ್ಮ ತಪ್ಪನ್ನು ಒಪ್ಪಿಕೊಳ್ಳಲು ಸಿದ್ಧರಾಗಿರುವುದಿಲ್ಲ. ಬದಲಿಗೆ, ತಪ್ಪನ್ನು ಎದುರಿನವರ ಮೇಲೆ ತಳ್ಳುತ್ತಾ ವಾದಿಸುತ್ತಾರೆ. ಸಂಬಂಧದಲ್ಲಿ 'ನನಗೆ ಸ್ವಲ್ಪ ಸ್ಪೇಸ್ ಬೇಕು' ಎಂಬ ಬೇಡಿಕೆ ಸದಾ ಅವರ ಬಾಯಲ್ಲಿ ಇರುತ್ತದೆ.

ಭವಿಷ್ಯದ ಮಾತು ಬಂದರೆ ಮೌನ

ಇಂಥ ವ್ಯಕ್ತಿಯೊಂದಿಗೆ ಇರುವ ದೊಡ್ಡ ಸವಾಲೆಂದರೆ, ನಿಮ್ಮಿಬ್ಬರ ಭವಿಷ್ಯದ ಬಗ್ಗೆ ನಿಮಗೆ ಎಂದಿಗೂ ಸ್ಪಷ್ಟತೆ ಸಿಗದು. 'ನಿನ್ನ ಜೊತೆ ಇರುತ್ತೇನೆ' ಎಂದೂ ಹೇಳಲ್ಲ, 'ಇರಲ್ಲ' ಎಂದೂ ಹೇಳದೆ ಗೊಂದಲದಲ್ಲಿಡುತ್ತಾರೆ. ಮದುವೆ ಅಥವಾ ಮುಂದಿನ ಜೀವನದ ಕುರಿತು ನೀವು ಮಾತು ಎತ್ತಿದ ತಕ್ಷಣ ವಿಷಯ ಬದಲಾಯಿಸುವಲ್ಲಿ ನಿಪುಣರು. ತಮ್ಮಿಂದಾಗಿ ನಿಮ್ಮೊಂದಿಗಿನ ಭವಿಷ್ಯದ ಕನಸುಗಳನ್ನು ಹಂಚಿಕೊಳ್ಳುವುದೇ ಇಲ್ಲ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Women Mistakes in Love: ಲವ್ವಲ್ಲಿ ಬಿದ್ದ ಹೆಣ್ಣು ಮಕ್ಕಳ ಹಣೆ ಬರಹವೇ ಇಷ್ಟು, ಮತ್ತದೇ ತಪ್ಪೆಸೆಗುತ್ತಾರೆ!
ಪತ್ನಿಗೆ ಜೀವನಾಂಶ ಕೊಡ್ಬೇಕಾಗುತ್ತೆ ಅಂತ ಸಿಂಗಾಪುರದ ಕೋಟ್ಯಾಂತರ ರೂ ವೇತನದ ಕೆಲಸ ಬಿಟ್ಟಿದ್ದ ಪತಿಗೆ ಶಾಕ್