ಕಾಶಿಯಲ್ಲಿ ಹಿಂದೂ ಸಂಪ್ರದಾಯದಂತೆ ಮದ್ವೆಯಾದ ಮುಸ್ಲಿಂ ದಂಪತಿ

By Suvarna NewsFirst Published Sep 20, 2022, 10:34 AM IST
Highlights

ದಂಪತಿಗೆ ಈಗಾಗಲೇ 18 ವರ್ಷಗಳ ಹಿಂದೆ ನಿಕಾಹ್ ಆಗಿದೆ. ಮತ್ತು ಈಗಾಗಲೇ ಒಂಬತ್ತು ಮಕ್ಕಳಿದ್ದಾರೆ. ಹೀಗಿದ್ದೂ ಹಿಂದೂ ಸಂಪ್ರದಾಯಕ್ಕೆ ಮನಸೋತ ಅಮೇರಿಕಾದ ಮುಸ್ಲಿಂ ದಂಪತಿಗಳು ವಾರಣಾಸಿಯಲ್ಲಿ ಸಪ್ತಪದಿ ತುಳಿದು ಮದ್ವೆಯಾಗಿದ್ದಾರೆ. ಆ ಬಗ್ಗೆ ಇಂಟ್ರೆಸ್ಟಿಂಗ್‌ ಸ್ಟೋರಿ ಇಲ್ಲಿದೆ.

ಅಮೇರಿಕಾದ ಮುಸ್ಲಿಂ ದಂಪತಿಗಳು ಕಾಶಿಯಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದಾರೆ. ಕಿಯಾಮಾ ದಿನ್ ಖಲೀಫಾ ಮತ್ತು ಅವರ ಗೆಳತಿ ಕೇಶ ಖಲೀಫಾ ಹಿಂದೂ ಸಂಪ್ರದಾಯದಂತೆ ವಾರಣಾಸಿಯಲ್ಲಿ ಮದುವೆಯಾಗಿದ್ದಾರೆ. ಕಿಯಾಮಾ ದಿನ್ ಖಲೀಫಾ ಮತ್ತು ಅವರ ಗೆಳತಿ ಕೇಶ ಖಲೀಫಾ ಮುಸ್ಲಿಂ ಕುಟುಂಬಗಳಲ್ಲಿ ಹುಟ್ಟಿ ಬೆಳೆದರು. ಆದರೆ ಅವರು ಹಿಂದೂ ಸಂಪ್ರದಾಯದಂತೆ ಸಂಪೂರ್ಣವಾಗಿ ಸಾರ್ವಜನಿಕವಾಗಿ ಪರಸ್ಪರ ವಿವಾಹವಾದರು. ಹಿಂದೂ ವಿವಾಹ ವಿಧಿಗಳ ಪ್ರಕಾರ ಶನಿವಾರ ಈ ಪುರಾತನ ಪಟ್ಟಣದ ಪ್ರಸಿದ್ಧ ತ್ರಿಲೋಚನ ದೇವಸ್ಥಾನದಲ್ಲಿ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.  ದಂಪತಿಗೆ ಈಗಾಗಲೇ 18 ವರ್ಷಗಳ ಹಿಂದೆ ನಿಕಾಹ್ ಆಗಿದೆ. ಮತ್ತು ಈಗಾಗಲೇ ಒಂಬತ್ತು ಮಕ್ಕಳಿದ್ದಾರೆ.

ಹಿಂದೂ ಸಂಸ್ಕೃತಿಯಿಂದ ಆಕರ್ಷಿತರಾದ ದಂಪತಿ
ದಂಪತಿಗಳು (Couple) 5 ವರ್ಷಗಳ ಹಿಂದೆ ಆಧ್ಯಾತ್ಮಿಕ ಪ್ರವಾಸಕ್ಕಾಗಿ ವಾರಣಾಸಿಗೆ ಭೇಟಿ ನೀಡಿದ್ದು ಇಲ್ಲಿನ ಆಚಾರ-ವಿಚಾರವನ್ನು ಮೆಚ್ಚಿಕೊಂಡಿದ್ದರು. ವಾರಣಾಸಿಯ ಘಾಟ್‌ಗಳು, ದೇವಾಲಯಗಳು (Temples) ಮತ್ತು ಇತರ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿದಾಗ ದಂಪತಿಗಳು ಹಿಂದೂ ಸಂಸ್ಕೃತಿಯಿಂದ ಎಷ್ಟು ಆಕರ್ಷಿತರಾದರು ಎಂದರೆ ಅವರು ಹಿಂದೂ ಸಂಪ್ರದಾಯಗಳ ಪ್ರಕಾರ ಮದ್ವೆಯಾಗಬೇಕೆಂದು ಬಯಸಿದರು. 'ನಮ್ಮ ವಾರಣಾಸಿ ಪ್ರವಾಸವು (Travel) ನಿಜವಾಗಿಯೂ ಸ್ಫೂರ್ತಿದಾಯಕವಾಗಿತ್ತು. ಆದರೆ ನಾವು ಅದೇ ರೀತಿ ಮದ್ವೆಯಾಗುತ್ತೇವೆಂದು ಯಾವತ್ತೂ ಅಂದುಕೊಂಡಿರಲ್ಲಿಲ್ಲ. ಈಗ ಹಿಂದೂ ಸಂಪ್ರದಾಯದಂತೆ ಮದ್ವೆಯಾಗಿರುವುದು ಖುಷಿ ನೀಡಿದೆ' ಎಂದು ನೂತನ ದಂಪತಿ ಹೇಳಿದ್ದಾರೆ.

ತಾಜ್ ಮಹಲ್ ಪ್ರೇಮಕಥೆಯಿಂದ ಪ್ರೇರಿತ; ಆಗ್ರಾದಲ್ಲಿ ಮದುವೆಯಾದ ಮೆಕ್ಸಿಕನ್ ಜೋಡಿ

ಸಪ್ತಪದಿ ತುಳಿದು ಹಿಂದೂ ಸಂಪ್ರದಾಯದಂತೆ ಮದುವೆ
ದಂಪತಿ ತ್ರಿಲೋಚನ್ ಮಹಾದೇವ ದೇವಸ್ಥಾನದಲ್ಲಿ ಅಗ್ನಿಗೆ ಏಳು ಸುತ್ತುಗಳನ್ನು ಬಂದು ಸಪ್ತಪದಿ ತುಳಿದು ಹಿಂದೂ ಸಂಪ್ರದಾಯಗಳ ಪ್ರಕಾರ ಮದಿವೆಯಾದರು. ಕಿಯಾಮಾ ಅವರು ಹಿಂದೂ ಸಂಪ್ರದಾಯ (Hindu tradition)ದಂತೆ ಮದ್ವೆಯಾಗಿರುವ ತಮ್ಮ ನಿರ್ಧಾರಕ್ಕೆ ವಿಷಾದಿಸುವುದಿಲ್ಲ ಎಂದು ಹೇಳಿದರು. 'ಹಿಂದೂ ಸಂಪ್ರದಾಯದ ಪ್ರಕಾರ ಮದುವೆಯಾಗುವ ನಮ್ಮ ಕನಸನ್ನು ನನಸಾಗಿಸಲು ಸಹಾಯ ಮಾಡಿದ ಸ್ಥಳೀಯ ಅರ್ಚಕರಿಗೆ ಮತ್ತು ಎಲ್ಲರಿಗೂ ನಾನು ಕೃತಜ್ಞನಾಗಿದ್ದೇನೆ' ಎಂದು ಖಲೀಫಾ ಹೇಳಿದ್ದಾರೆ. ಜೀವನೋಪಾಯಕ್ಕಾಗಿ ಖಲೀಪಾ ವ್ಯಾಪಾರ ಮತ್ತು ಕೃಷಿ ಭೂಮಿಯನ್ನು ಹೊಂದಿದ್ದಾರೆ.

ದೇವಸ್ಥಾನದ ಅರ್ಚಕ ರವಿಶಂಕರ್ ಗಿರಿ ಅವರ ಪ್ರಕಾರ, ದಂಪತಿಗಳು 40ರ ಹರೆಯದವರಾಗಿದ್ದು, ಅವರು ಈಗಾಗಲೇ ಮುಸ್ಲಿಂ ಸಂಪ್ರದಾಯದ ಪ್ರಕಾರ ಮದುವೆಯಾಗಿದ್ದಾರೆ. ವರ ಕಿಯಾಮಾ ದಿನ್ ಖಲೀಫಾ ಅವರು ಒಂಬತ್ತು ಮಕ್ಕಳ ತಂದೆ ಎಂದು ಹೇಳಿದರು. ತನ್ನ ಅಜ್ಜ ಭಾರತೀಯ ಮೂಲದ ಹಿಂದೂ ಎಂದು ಕೇಶ ಖಲೀಫಾ ಹೇಳಿದ್ದಾರೆ. ವಿವಾಹದ (Marriage) ಎಲ್ಲಾ ವಿಧಿವಿಧಾನಗಳು ಹಿಂದೂ ಪದ್ಧತಿಯಂತೆ ನೆರವೇರಿದೆ ಎಂದು ದಂಪತಿ ಜತೆಗಿದ್ದ ಪಂಡಿತ್ ಗೋವಿಂದ ಶಾಸ್ತ್ರಿ ತಿಳಿಸಿದ್ದಾರೆ.

Koppal: ಹಿಂದೂ ಸಂಪ್ರದಾಯದಂತೆ ಮುಸ್ಲಿಂ ವ್ಯಕ್ತಿಯ ಅಂತ್ಯಕ್ರಿಯೆ

ಸನಾತನ ಧರ್ಮದ ಪ್ರಕಾರ ಮದುವೆ ಆಯೋಜನೆ
ವಾರಣಾಸಿಗೆ ಭೇಟಿ ನೀಡಿದಾಗ, ಖಲೀಫಾ ತನ್ನ ಮಾರ್ಗದರ್ಶಕ ರಾಹುಲ್ ಕುಮಾರ್ ದುಬೆ ಅವರೊಂದಿಗೆ ವಿಷಯಗಳನ್ನು ಚರ್ಚಿಸಿದರು, ಅವರು ಮದುವೆಯನ್ನು ಆಯೋಜಿಸಲು ಸಹಾಯ ಮಾಡಿದರು. 'ನಾವು ಪ್ರತಿನಿತ್ಯ ಅನೇಕ ವಿದೇಶಿ ಪ್ರವಾಸಿಗರನ್ನು ಭೇಟಿಯಾಗುತ್ತೇವೆ. ಆದರೆ ದಂಪತಿಗಳು ಹಿಂದೂ ಸಂಪ್ರದಾಯದಂತೆ ಮದುವೆಯಾಗಲು ಬಯಸಿದ್ದಾರೆ ಮತ್ತು ಅದರ ಬಗ್ಗೆ ಗಂಭೀರವಾಗಿರುವುದನ್ನು ನಾನು ತಿಳಿದಾಗ, ನಾನು ಅವರಿಗೆ ಸಹಾಯ ಮಾಡಲು ಯೋಚಿಸಿದೆ' ಎಂದು ರಾಹುಲ್ ಕುಮಾರ್‌ ಹೇಳಿದರು. ಸನಾತನ ಧರ್ಮದ ಪ್ರಕಾರ ಮದುವೆ ಆಯೋಜಿಸಲಾಗಿದೆ ಎಂದು ದುಬೆ ಹೇಳಿದ್ದಾರೆ. ಎಲ್ಲಾ ವಿಧಿವಿಧಾನಗಳನ್ನು ಕ್ರಮಬದ್ಧವಾಗಿ ಅನುಸರಿಸಲಾಯಿತು.

ಮದುವೆಯ ದಿನದಂದು ದಂಪತಿಗಳು ಪಾಸ್‌ಪೋರ್ಟ್ ಮತ್ತು ವೀಸಾ ಹೊಂದಿಲ್ಲದ ಕಾರಣ, ಅವರು ತಮ್ಮ ಮದುವೆ ನೋಂದಣಿ ಪ್ರಮಾಣಪತ್ರವಿಲ್ಲದೆ ಹೋಗಬೇಕಾಯಿತು. ಆದಾಗ್ಯೂ, ಅವರು ಮದುವೆ ನೋಂದಣಿಗೆ ಅಗತ್ಯವಾದ ದಾಖಲೆಗಳನ್ನು ಸಲ್ಲಿಸಿದ ನಂತರ ಪ್ರಮಾಣಪತ್ರವನ್ನು ಪಡೆದರು.

click me!