ಪ್ರೇಮಿಗಳ ದಿನದ ಉತ್ಸಾಹ ಈಗ್ಲೇ ಕಾಣಸಿಗ್ತಿದೆ. ವ್ಯಾಲಂಟೈನ್ಸ್ ಡೇ ಆಚರಣೆಗೆ ಜನರು ಸಿದ್ಧವಾಗ್ತಿದ್ದಾರೆ. ನೀವು ವಿದೇಶದಲ್ಲಿದ್ದರೆ ಅಥವಾ ಪ್ರೇಮಿಗಳ ದಿನಕ್ಕಾಗಿ ವಿದೇಶಕ್ಕೆ ಹಾರುವ ಪ್ಲಾನ್ ನಲ್ಲಿದ್ದರೆ ಅಲ್ಲಿನ ಕಾನೂನು ತಿಳಿದುಕೊಂಡಿರಿ.
ವ್ಯಾಲಂಟೈನ್ಸ್ ಡೇ ಹತ್ತಿರ ಬರ್ತಿದೆ. ಫೆಬ್ರವರಿ ಏಳರಿಂದ ವ್ಯಾಲಂಟೈನ್ಸ್ ವೀಕ್ ಶುರುವಾಗಿದೆ. ಪ್ರೇಮಿಗಳು ಈ ವಾರವನ್ನು ಅತ್ಯಂತ ಸಂತೋಷದಿಂದ ಆಚರಿಸಲು ಪ್ಲಾನ್ ಮಾಡಿದ್ದಾರೆ. ವ್ಯಾಲಂಟೈನ್ಸ್ ಡೇ ಸಮಯದಲ್ಲಿ ಕೆಲವರು ಪ್ರವಾಸದ ಪ್ಲಾನ್ ಕೂಡ ಮಾಡ್ತಾರೆ. ಇಬ್ಬರು ಒಟ್ಟಿಗೆ ಸಮಯ ಕಳೆದು, ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಇದೊಂದು ಒಳ್ಳೆ ಅವಕಾಶ. ವಿಶ್ವದ ಬಹುತೇಕ ದೇಶಗಳಲ್ಲಿ ಪ್ರೇಮಿಗಳ ದಿನವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತದೆ. ಇ ಕಾಮರ್ಸ್ ಕಂಪನಿಗಳಿಂದ ಹಿಡಿದು ಸಾಮಾನ್ಯ ಮಳಿಗೆಗಳಲ್ಲೂ ವ್ಯಾಲಂಟೈನ್ಸ್ ಸ್ಪೇಷನ್ ಆಫರ್ ಗಳಿರುತ್ತವೆ. ಹಾಗೆಯೇ ಅನೇಕ ಹೊಟೇಲ್ ಗಳಲ್ಲಿ ವಿಶೇಷ ಡಿನ್ನರ್ ವ್ಯವಸ್ಥೆ, ಕಾರ್ಯಕ್ರಮಗಳು ನಡೆಯುತ್ತವೆ. ವ್ಯಾಲಂಟೈನ್ಸ್ ಡೇಯನ್ನು ವಿರೋಧಿಸುವ ಜನರಿದ್ದಾರೆ. ಭಾರತದಲ್ಲಿ ಅದ್ರಲ್ಲೂ ಕರ್ನಾಟಕದಲ್ಲಿ ಕೆಲ ಸಂಘಟನೆಗಳು ವ್ಯಾಲಂಟೈನ್ಸ್ ಡೇ ಆಚರಣೆಯನ್ನು ವಿರೋಧಿಸುತ್ತ ಬಂದಿದೆ. ಆದ್ರೆ ಯಾವುದೇ ಕಾನೂನು ಜಾರಿಯಲ್ಲಿಲ್ಲ. ಹಾಗಾಗಿ ಜನರು ಭಾರತದಲ್ಲೂ ವ್ಯಾಲಂಟೈನ್ಸ್ ಡೇ ಆಚರಣೆ ಮಾಡ್ತಾರೆ. ನಮ್ಮ ದೇಶದಲ್ಲಿ ಸಮಸ್ಯೆ ಇಲ್ಲ ಅಂತ ನೀವು ಎಲ್ಲ ದೇಶದಲ್ಲೂ ವ್ಯಾಲಂಟೈನ್ಸ್ ಡೇ ಆಚರಣೆ ಮಾಡಬಹುದು ಅಂದಕೊಳ್ಳಬೇಡಿ. ಕೆಲ ದೇಶಗಳಲ್ಲಿ ಪ್ರೇಮಿಗಳ ದಿನವನ್ನು ನಿಷೇಧಿಸಲಾಗಿದೆ. ಈ ಬಗ್ಗೆ ಕಠಿಣ ಕಾನೂನು ಜಾರಿಯಲ್ಲಿದೆ.
ಉಜ್ಜೇಕಿಸ್ತಾನ್ : 2012 ರವರೆಗೆ ಉಜ್ಬೇಕಿಸ್ತಾನ್‌ನಲ್ಲಿ ಪ್ರೇಮಿಗಳ ದಿನವನ್ನು ಆಚರಿಸಲಾಗ್ತಾ ಇತ್ತು. ನಂತ್ರ ಈ ಇಸ್ಲಾಮಿಕ್ (Islamic) ದೇಶದಲ್ಲಿ ಬದಲಾವಣೆ ತರಲಾಯ್ತು. ಶಿಕ್ಷಣ (Education) ಸಚಿವಾಲಯ ಮತ್ತು ನೈತಿಕ ಮೌಲ್ಯಗಳ ಪ್ರಚಾರವನ್ನು ನೋಡಿಕೊಳ್ಳುವ ಇಲಾಖೆ, ಪ್ರೇಮಿಗಳ ದಿನ ಆಚರಣೆಯನ್ನು ನಿಷೇಧಿಸಲು ನಿರ್ಧರಿಸಿತು. ಇದು ಕಾನೂನುಬಾಹಿರವಲ್ಲ. ಆದರೆ ಈ ದಿನವನ್ನು ಉಜ್ಬೇಕಿಸ್ತಾನ್‌ನ ವೀರ ಬಾಬರ್‌ನ ಜನ್ಮದಿನವನ್ನಾಗಿ ಆಚರಣೆ ಮಾಡಲಾಗುತ್ತದೆ.
ತಂದೆಯೊಂದಿಗೆ ಕುಣಿದ ಮಧುಮಗಳು, ಅಪ್ಪನಿಗೆ ಒತ್ತರಿಸಿ ಬಂತು ಅಳು; ಹೃದಯ ಕರಗಿಸುವ ವಿಡಿಯೋ
ಮಲೇಷ್ಯಾ : ಮಲೇಷ್ಯಾದಲ್ಲೂ ವ್ಯಾಲಂಟೈನ್ಸ್ ಡೇ ಆಚರಣೆ ಮಾಡುವಂತಿಲ್ಲ. 2005 ರಲ್ಲಿ ವ್ಯಾಲಂಟೈನ್ಸ್ ಡೇ ಆಚರಣೆ ಮಾಡದಂತೆ ಫತ್ವಾ ಹೊರಡಿಸಲಾಗಿದೆ. ಜನರು ಕದ್ದು ಮುಚ್ಚಿ ವ್ಯಾಲಂಟೈನ್ಸ್ ಡೇ ಆಚರಣೆ ಮಾಡುತ್ತಾರೆಯೇ ವಿನಃ ಬಹಿರಂಗವಾಗಿ ಇಲ್ಲಿ ಪ್ರೇಮಿಗಳ ದಿನ ಆಚರಣೆ ಮಾಡುವಂತಿಲ್ಲ. ಒಂದ್ವೇಳೆ ಸಿಕ್ಕಿಬಿದ್ರೆ ಜೈಲೂಟ ಗ್ಯಾರಂಟಿ.
ಈ ರಾಜ್ಯದಲ್ಲಿ ಇನ್ಮುಂದೆ ಲಿವ್ ಇನ್ ಸಂಬಂಧ ನೋಂದಣಿ ಕಡ್ಡಾಯ, ಇಲ್ಲದಿದ್ರೆ ಜೈಲು ಗ್ಯಾರಂಟಿ!
ಪಾಕಿಸ್ತಾನ : ನಮ್ಮ ನೆರೆ ರಾಷ್ಟ್ರ ಪಾಕಿಸ್ತಾನದಲ್ಲೂ ನೀವು ವ್ಯಾಲಂಟೈನ್ಸ್ ಡೇ ಆಚರಣೆ ಮಾಡುವಂತಿಲ್ಲ. ಇಸ್ಲಾಮಿಕ್ ಮೌಲ್ಯಗಳಿಗೆ ಇದು ವಿರುದ್ಧ ಎಂದು ಅಲ್ಲಿನ ಜನರು ಭಾವಿಸ್ತಾರೆ. 2018ರಲ್ಲಿ ಪ್ರೇಮಿಗಳ ದಿನ ಆಚರಣೆಯನ್ನು ನಿಷೇಧಿಸಲಾಗಿದೆ. ಈ ಬಗ್ಗೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದ್ದರೂ ಅಲ್ಲಿನ ಕೋರ್ಟ್, ವ್ಯಾಲಂಟೈನ್ಸ್ ಡೇ ಆಚರಣೆಯನ್ನು ನಿಷೇಧಿಸಿದೆ.
ಸೌದಿ ಅರೇಬಿಯಾ : ಸೌದಿ ಅರೇಬಿಯಾದಲ್ಲಿ ವ್ಯಾಲಂಟೈನ್ಸ್ ಡೇ ಗೆ ಸಂಬಂಧಿಸಿದಂತೆ ಬದಲಾವಣೆ ಕಾಣಬಹುದು. ಆರಂಭದಿಂದಲೇ ಇಲ್ಲಿ ಪ್ರೇಮಿಗಳ ದಿನವನ್ನು ಆಚರಣೆ ಮಾಡಲಾಗ್ತಾ ಇರಲಿಲ್ಲ. ಅದಕ್ಕೆ ಸಂಬಂಧಿಸಿದ ವಸ್ತು, ಉಡುಗೊರೆ ಸಿಗ್ತಿರಲಿಲ್ಲ. ಆದ್ರೆ ಕಳೆದ ಕೆಲ ವರ್ಷಗಳಿಂದ ವ್ಯಾಲಂಟೈನ್ಸ್ ಡೇ ಆಚರಣೆ ನಿಧಾನವಾಗಿ ಶುರುವಾಗಿದೆ. ಸಾರ್ವಜನಿಕ ಕಾರ್ಯಕ್ರಮ ನಡೆಯದೆ ಹೋದ್ರೂ ಪ್ರೇಮಿಗಳ ದಿನಕ್ಕೆ ಸಂಬಂಧಿಸಿದ ವಸ್ತುಗಳು ಹಾಗೂ ಉಡುಗೊರೆ ಸಿಗ್ತಿದೆ.
ಇರಾನ್ : ಮುಸ್ಲಿಂ ರಾಷ್ಟ್ರಗಳಲ್ಲಿ ಒಂದಾಗಿರುವ ಇರಾನ್ ಕೂಡ ಪ್ರೇಮಿಗಳ ದಿನದ ವಿರೋಧಿಯಾಗಿದೆ. 2010ರಲ್ಲಿ ವ್ಯಾಲಂಟೈನ್ಸ್ ಡೇ ಆಚರಣೆಯನ್ನು ನಿಷೇಧಿಸಲಾಗಿದೆ. ಪಾಶ್ಚಿಮಾತ್ಯ ನಾಗರಿಕತೆಯನ್ನು ಉತ್ತೇಜಿಸುವ ಕೆಲಸ ಇದು ಎಂದು ಅಲ್ಲಿನ ಸರ್ಕಾರ ನಂಬಿದೆ. ನಿಮಗೆ ಇರಾನ್ ನಲ್ಲಿ ಪ್ರೇಮಿಗಳ ದಿನಕ್ಕೆ ಸಂಬಂಧಿಸಿದ ವಸ್ತು ಅಥವಾ ಉಡುಗೊರೆ ಸೇರಿದಂತೆ ಯಾವುದೂ ಸಿಗೋದಿಲ್ಲ.