ಅಮ್ಮಾ ಕ್ಷಮಿಸಿ ಬಿಡು, ಅಳುತ್ತಾ ಕೊನೆಯ ವಿಡಿಯೋ ಪೋಸ್ಟ್ ಮಾಡಿ ರೈಲಿಗೆ ತಲೆ ಕೊಟ್ಟ ಪತ್ರಕರ್ತೆ!

Published : Jul 25, 2024, 03:29 PM IST
ಅಮ್ಮಾ ಕ್ಷಮಿಸಿ ಬಿಡು, ಅಳುತ್ತಾ ಕೊನೆಯ ವಿಡಿಯೋ ಪೋಸ್ಟ್ ಮಾಡಿ ರೈಲಿಗೆ ತಲೆ ಕೊಟ್ಟ ಪತ್ರಕರ್ತೆ!

ಸಾರಾಂಶ

ಅಮ್ಮಾ ಕ್ಷಮಿಸಿ ಬಿಡು, ಈ ಕಪಟ ಜನರ ನಡುವೆ ನನಗೆ ಬದುಕಲು ಸಾಧ್ಯವಾಗುತ್ತಿಲ್ಲ. 5 ವರ್ಷ ಪ್ರೀತಿಸಿ ಮದುವೆಯಾದ ನನಗೆ ಸಂಗಾತಿಯೇ ಮೋಸ ಮಾಡಿದ್ದಾನೆ ಎಂದು ಖ್ಯಾತ ಪತ್ರಕರ್ತೆ ಕೊನೆಯ ವಿಡಿಯೋ ಪೋಸ್ಟ್ ಮಾಡಿ ಬದುಕು ಅಂತ್ಯಗೊಳಿಸಿದ್ದಾಳೆ.  

ಒಡಿಶಾ(ಜು.25) ಐದು ವರ್ಷ ಪ್ರೀತಿ ಎರಡೂ ಮನೆಯವರನ್ನೂ ಒಪ್ಪಿಸಿ ಮದುವೆಯಾದ ಪತ್ರಕರ್ತೆ ಇದೀಗ ಏಕಾಏಕಿ ಬದುಕು ಅಂತ್ಯಗೊಳಿಸಿದ್ದಾಳೆ. ಅಮ್ಮಾ ಕ್ಷಮಿಸಿ ಬಿಡು, ಕೊನೆಯ ಕ್ಷಣದಲ್ಲಿ ಅಳುತ್ತಾ ಕೊನೆಯ ವಿಡಿಯೋ ಪೋಸ್ಟ್ ಮಾಡಿದ ಪತ್ರಕರ್ತೆ ರೈಲಿಗೆ ತಲೆ ಕೊಟ್ಟು ಇಹಲೋಕ ತ್ಯಜಿಸಿದ ಘಟನೆ ಒಡಿಶಾದಲ್ಲಿ ನಡೆದಿದೆ. ಒಡಿಶಾದ ಖ್ಯಾತ ವೆಬ್ ಚಾನೆಲ್‌ನಲ್ಲಿ ಪತ್ರಕರ್ತೆಯಾಗಿ ಸೇವೆ ಸಲ್ಲಿಸುತ್ತಿದ್ದ ಮುಧುಮಿತಾ ಪರಿದಾ ಮೃತ ದುರ್ದೈವಿ. ಮದುವೆಯಾದ ನಾಲ್ಕೇ ತಿಂಗಳಲ್ಲಿ ಯುವ ಪತ್ರಕರ್ತೆ ದುರಂತ ಅಂತ್ಯಕಂಡಿದ್ದಾಳೆ.

ಅಮ್ಮಾ ಕ್ಷಮಿಸಿಬಿಡು,  ನನ್ನ ನಿರ್ಧಾರದ ಕುರಿತು ತೀವ್ರ ವಿಷಾಧ ವ್ಯಕ್ತಪಡಿಸುತ್ತಿದ್ದೇನೆ. ಎಲ್ಲರಲ್ಲೂ ಕ್ಷಮೆ ಕೇಳುತ್ತಿದ್ದೇನೆ. ಈ ಜಗತ್ತಿನಲ್ಲಿ ಈ ರೀತಿಯ ಕಪಟ ವ್ಯಕ್ತಿಗಳಿದ್ದಾರೆ ಅನ್ನೋದು ಗೊತ್ತಿರಲಿಲ್ಲ. 5 ವರ್ಷಗಳ ಕಾಲ ಪ್ರೀತಿ, ಎಲ್ಲರನ್ನೂ ಒಪ್ಪಿಸಿ ಮದುವೆಯಾಗಿದ್ದೇನೆ. ಮಾರ್ಚ್ 1 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದೆ. ಆದರೆ ನಾನು ಪ್ರೀತಿ, ನನ್ನ ಕೈಹಿಡಿದ ಸಂಗಾತಿಯೇ ನನಗೆ ಮೋಸ ಮಾಡಿದ್ದಾನೆ. ಆತನಿಗೆ ಬೇರೊಬ್ಬ ಮಹಿಳೆ ಜೊತೆ ಸಂಬಂಧವಿದೆ. ರಾತ್ರಿಯೆಲ್ಲಾ ಫೋನ್ ಮೂಲಕ ಮಾತನಾಡುತ್ತಾನೆ. ನನ್ನ ಗೆಳತಿಯರು, ಆತನ ಗೆಳೆತಿಯರ ಜೊತೆಗೂ ರಾತ್ರಿ 112 ಗಂಟೆಯಲ್ಲೂ ಮಾತನಾಡುತ್ತಾನೆ. ಈ ವಿಚಾರ ನನಗೆ ತಿಳಿಯುತ್ತಿದ್ದಂತೆ ಆತನ ಪ್ರಶ್ನೆ ಮಾಡಿದ್ದೇನೆ. ಈ ವೇಳೆ ನಿನ್ನ ಜೊತೆ ಬದುಕಲು ಸಾಧ್ಯವಿಲ್ಲ ಎಂದಿದ್ದಾನೆ. ನಾನು ಪ್ರೀತಿಸಿ ಮದುವೆಯಾದ ವ್ಯಕ್ತಿಯೇ ಹಿಗೇಂದಾಗ ನನ್ನ ಮುಂದೆ ಬೇರೆ ಆಯ್ಕೆ ಇಲ್ಲ ಎಂದು ಅಳುತ್ತಾ ಮಧುಮಿತಾ ಪರಿದಾ ವಿಡಿಯೋ ಪೋಸ್ಟ್ ಮಾಡಿದ್ದಾಳೆ.

ರೋಬೋಟ್‌ಗೂ ತಟ್ಟಿದ ಕೆಲಸದ ಒತ್ತಡ, ಖಿನ್ನತೆ, ಕಟ್ಟಡದ ಮೇಲಿನಿಂದ ಜಿಗಿದು ರೋಬೋ ಆತ್ಮಹತ್ಯೆ!

ಕೊನೆಯ ವಿಡಿಯೋ ಪೋಸ್ಟ್ ಮಾಡಿದ ಮಧುಮಿತಾ ಭುವನೇಶ್ವರ ನಗರದ ಬಾಪೂಜಿ ನಗರ ನಿಲ್ದಾಣ ಪಕ್ಕದಲ್ಲಿ ರೈಲು ಹಳಿಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾಳೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ರೈಲ್ವೇ ಪೊಲೀಸರು ಮೃತದೇಹ ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಇದೀಗ ಭುವನೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. 

 

 

ಮಾರ್ಚ್ 1 ರಂದು ಮಧುಮಿತಾ ಪರಿದಾ ಬಹುಕಾಲದ ಗೆಳೆಯನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ಮದುವೆಯಾದ ಬೆನ್ನಲ್ಲೇ ತನ್ನ ಬಹುಕಾಲದ ಗೆಳೆಯನಿಗೆ ಮತ್ತೊಂದು ಸಂಬಂಧವಿದೆ ಅನ್ನೋದು ತಿಳಿದಿದೆ. 5 ವರ್ಷಗಳ ಕಾಲ ಪ್ರೀತಿಸಿದ ಮಧುಮಿತಾ ಹಲವು ಸವಾಲು, ವಿರೋಧದ ನಡುವೆ ಮದುವೆಯಾಗಿದ್ದರು. ಆದರೆ ಕಳೆದ 5 ವರ್ಷದಲ್ಲಿ ಮಧುಮಿತಾ ಜೊತೆ ಮಾತ್ರವಲ್ಲ, ಬೇರೊಬ್ಬಳ ಜೊತೆಗೂ ಈತ ಸಂಬಂಧ ಇಟ್ಟುಕೊಂಡಿದ್ದ ಎಂದು ಮಧುಮಿತಾ ಆರೋಪಿಸಿದ್ದಾಳೆ.

ಸಚಿನ್ ತೆಂಡೂಲ್ಕರ್ ಸೆಕ್ಯೂರಿಟಿ ಗಾರ್ಡ್ ದುರಂತ ಅಂತ್ಯ, ಕುತ್ತಿಗೆ ಸೀಳಿದ ಗುಂಡು!
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
Bigg Boss ಭವ್ಯಾ ಗೌಡ ಮದ್ವೆ ಅವಿನಾಶ್​ ಶೆಟ್ಟಿ ಜೊತೆನಾ? Karna ನಿಧಿಯ ಅಸಲಿ ಗುಟ್ಟೇನು? ನಟ ಹೇಳಿದ್ದೇನು?