ರಿಲಯನ್ಸ್ ಇಂಡಸ್ಟ್ರೀಸ್‌ನ ಚೇರ್ಮನ್ ಮುಖೇಶ್ ಅಂಬಾನಿ ಕಿರಿಯ ಮಗ ಅನಂತ್ ಅಂಬಾನಿಯ ಮದುವೆ ಮಾಡಿದ ಖುಷಿಯಲ್ಲಿದ್ದಾರೆ. ಬರೋಬ್ಬರಿ 5 ಸಾವಿರ ಕೋಟಿಗಿಂತ ಹೆಚ್ಚಿನ ವೆಚ್ಚದಲ್ಲಿ ಕಿರಿಯ ಮಗನ ಮದುವೆ ಮಾಡಿದ್ದಾರೆ.
ದೇಶದ ಹಾಗೂ ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿರುವ ರಿಲಯನ್ಸ್ ಇಂಡಸ್ಟ್ರೀಸ್‌ನ ಚೇರ್ಮನ್ ಮುಖೇಶ್ ಅಂಬಾನಿ ಮಗನ ಮದುವೆ ಮಾಡಿದ ಖುಷಿಯಲ್ಲಿದ್ದಾರೆ. ಕಿರಿಯ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ವಿವಾಹ ಸಮಾರಂಭ ಅದ್ದೂರಿಯಾಗಿ ನಡೆದಿದೆ. ಅಂದಾಜು 5 ಸಾವಿರ ಕೋಟಿ ರೂಪಾಯಿ ಹಣವನ್ನು ಮದುವೆಗಾಗಿ ಖರ್ಚು ಮಾಡಲಾಗಿದೆ. ದೇಶದ ವಿದೇಶದ ಗಣ್ಯರು ಈ ಮದುವೆಯಲ್ಲಿ ಭಾಗವಹಿಸಿದ್ದರು. ಇದರ ನಡುವೆ ಮುಖೇಶ್ ಅಂಬಾನಿಯ ಇಬ್ಬರು ಸೊಸೆಯಂದಿರ ಮೂಲಗಳನ್ನು ಹುಡುಕುವ ಕೆಲಸ ಆರಂಭವಾಗಿದೆ. ಅಚ್ಚರಿಯ ವಿಚಾರ ಏನೆಂದರೆ, ಮುಖೇಶ್ ಅಂಬಾನಿಯ ಇಬ್ಬರೂ ಸೊಸೆಯಂದಿರುವ ಕೂಡ ಅವರ ಪತಿಗಿಂತ ಒಂದು ವರ್ಷ ದೊಡ್ಡವರಾಗಿದ್ದಾರೆ. ಹೌದು ಡೈಮಂಡ್ ಉದ್ಯಮಿಯ ಪುತ್ರಿ ಶ್ಲೋಕಾ ಮೆಹ್ತಾರನ್ನು ಆಕಾಶ್ ಅಂಬಾನಿ ವಿವಾಹವಾಗಿದ್ದರೆ, ಅನಂತ್ ಅಂಬಾನಿ ಪತ್ನಿಯಾಗಿರುವ ರಾಧಿಕಾ ಮರ್ಚೆಂಟ್ ಕೂಡ ಉದ್ಯಮಿಯ ಪುತ್ರಿ. ಇವರಿಬ್ಬರೂ ಕೂಡ ವಯಸ್ಸಿನಲ್ಲಿ ಅಂಬಾನಿಯ ಪುತ್ರರಿಗಿಂತ ದೊಡ್ಡವರಾಗಿದ್ದಾರೆ.
ಆಕಾಶ್ ಅಂಬಾನಿ 1991 ಅಕ್ಟೋಬರ್ 23 ರಂದು ಜನಿಸಿದವರಾಗಿದ್ದರೆ ಅವರ ಪತ್ನಿಶ್ಲೋಕ್ ಮೆಹ್ತಾ 1990ರ ಜುಲೈ 11 ರಂದು ಜನಿಸಿದವರಾಗಿದ್ದಾರೆ. ಅಂದರೆ, ಆಕಾಶ್ ಅಂಬಾನಿಗಿಂತ ಶ್ಲೋಕ್ ಮೆಹ್ತಾ 15 ತಿಂಗಳು ಹಿರಿಯವರಾಗಿದ್ದಾರೆ. ಇನ್ನು ಮುಖೇಶ್ ಅಂಬಾನಿಯವರ ಕಿರಿಯ ಪುತ್ರ ಅನಂತ್ ಅಂಬಾನಿ ಜನಿಸಿದ್ದು 1995 ಏಪ್ರಿಲ್ 10 ರಂದು. ಇವರ ಪತ್ನಿಯಾಗಿರುವ ರಾಧಿಕಾ ಮರ್ಚೆಂಟ್ 1994ರ ಡಿಸೆಂಬರ್ 18 ರಂದು ಜನಿಸಿದವರಾಗಿದ್ದಾರೆ. ಅಂದರೆ, ಅನಂತ್ ಅಂಬಾನಿಗಿಂತ ರಾಧಿಕಾ ಮರ್ಚೆಂಟ್ ಅಂದಾಜು 4 ತಿಂಗಳು ಹಿರಿಯವರಾಗಿದ್ದಾರೆ.
ಆಕಾಶ್ ಅಂಬಾನಿ ಹಾಗೂ ಶ್ಲೋಕ್ ಮೆಹ್ತಾ 2019ರ ಮಾರ್ಚ್ 9 ರಂದು ವಿವಾಹವಾಗಿದ್ದರು. ಅಂಬಾನಿ ಕುಟುಂಬದ ಸೊಸೆಯಾದ ಬಳಿಕ ಶ್ಲೋಕ್ ಮೆಹ್ತಾ ಮನೆಮಾತಾಗಿದ್ದಾರೆ. ಶ್ಲೋಕಾ ಮೆಹ್ತಾ ಅವರು ಪ್ರಸಿದ್ಧ ವಜ್ರ ವ್ಯಾಪಾರಿ ರಸೆಲ್ ಮೆಹ್ತಾ ಮತ್ತು ಮೋನಾ ಮೆಹ್ತಾ ಅವರ ಪುತ್ರಿ. ರಸೆಲ್ ಮೆಹ್ತಾ ಅವರು ರೋಸಿ ಬ್ಲೂ ಮಾಲೀಕರಾಗಿದ್ದಾರೆ, ಇದು ವಿಶ್ವದ ಅತಿದೊಡ್ಡ ಆಭರಣ ಕಂಪನಿಗಳಲ್ಲಿ ಒಂದಾಗಿದೆ. ರೋಸಿ ಬ್ಲೂ ಬೆಲ್ಜಿಯಂ, ಇಸ್ರೇಲ್, ಜಪಾನ್, ಹಾಂಗ್ ಕಾಂಗ್, ಯುಎಸ್ಎ ಮತ್ತು ಚೀನಾ ಸೇರಿದಂತೆ 12 ದೇಶಗಳಲ್ಲಿ ಕಚೇರಿಗಳನ್ನು ಹೊಂದಿದೆ. ಶ್ಲೋಕಾ ಮೆಹ್ತಾ ಅವರ ಕುಟುಂಬವು ಸುಮಾರು USD 300 ಮಿಲಿಯನ್ ನಿವ್ವಳ ಮೌಲ್ಯವನ್ನು ಹೊಂದಿದೆ. ವರದಿಗಳ ಪ್ರಕಾರ, ಶ್ಲೋಕಾ ಮೆಹ್ತಾ ಅವರ ನಿವ್ವಳ ಮೌಲ್ಯ ಸುಮಾರು USD 18 ಮಿಲಿಯನ್ ಆಗಿದೆ.
ಆಕಾಶ್ ಅಂಬಾನಿ ಅವರ ಸಹೋದರಿ ಇಶಾ ಅಂಬಾನಿ ಸಂದರ್ಶನವೊಂದರಲ್ಲಿ ಶ್ಲೋಕಾ ಮೆಹ್ತಾ "ಯಾವಾಗಲೂ ನಮಗೆ ಕುಟುಂಬದ ಭಾಗವಾಗಿದ್ದಾರೆ" ಎಂದು ಹೇಳಿದ್ದರು. ಇಶಾ ಅಂಬಾನಿ ಮತ್ತು ಶ್ಲೋಕಾ ಮೆಹ್ತಾ ಉತ್ತಮ ಸ್ನೇಹಿತರು. ಆಕಾಶ್ ಅಂಬಾನಿ ಮತ್ತು ಶ್ಲೋಕಾ ಮೆಹ್ತಾ ಮೂರು ದಿನಗಳ ವಿವಾಹ ನಡೆದಿತ್ತು. ಮುಂಬೈ ಮತ್ತು ಸ್ವಿಟ್ಜರ್ಲೆಂಡ್‌ನ ಸೇಂಟ್ ಮೊರಿಟ್ಜ್‌ನಲ್ಲಿ ವಿವಾಹ ಕಾರ್ಯಕ್ರಮ ನಡೆದಿದ್ದವು.
ರಾಧಿಕಾ ಮರ್ಚೆಂಟ್ ಆಪ್ತ ಸ್ನೇಹಿತೆ ಜಾನ್ವಿ ಕಪೂರ್ ಅಂಬಾನಿ ಕುಟುಂಬಕ್ಕೆ ಹತ್ತಿರದ ಸಂಬಂಧಿ, ಹೇಗೆ ಗೊತ್ತಾ!
ಶ್ಲೋಕಾ ಮೆಹ್ತಾ ಫ್ಯಾಷನಿಸ್ಟ್ ಆಗಿದ್ದು, ಕುಟುಂಬದ ಕಾರ್ಯಕ್ರಮಗಳಲ್ಲಿ ಅವರು ಸೊಗಸಾದ ಭಾರತೀಯ ಬಟ್ಟೆಗಳನ್ನು ಧರಿಸುತ್ತಾರೆ. ಶ್ಲೋಕಾ ಹಲವಾರು ಆಭರಣ ಸೆಟ್‌ಗಳನ್ನು ಹೊಂದಿದ್ದಾರೆ ಮತ್ತು ಆಕರ್ಷಕ ಬ್ಯಾಗ್‌ಗಳ ಉತ್ತಮ ಸಂಗ್ರಹವನ್ನು ಸಹ ಹೊಂದಿದ್ದಾರೆ. ಧೀರೂಭಾಯಿ ಅಂಬಾನಿ ಇಂಟರ್‌ನ್ಯಾಶನಲ್ ಸ್ಕೂಲ್‌ನಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ್ದ ಶ್ಲೋಕಾ ಮೆಹ್ತಾ ನ್ಯೂಜೆರ್ಸಿಯ ಪ್ರಿನ್ಸ್‌ಟನ್ ವಿಶ್ವವಿದ್ಯಾಲಯದಿಂದ ಮಾನವಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ. ಅವರು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಮತ್ತು ಪೊಲಿಟಿಕಲ್ ಸೈನ್ಸ್‌ನಿಂದ ಕಾನೂನು ಪದವಿಯನ್ನು ಗಳಿಸಿದ್ದಾರೆ.
ಅಂಬಾನಿ ಕುಟುಂಬದ ಮುದ್ದಿನ ಶ್ವಾನ ತಿರುಗಾಡಲು 4 ಕೋಟಿಮೌಲ್ಯದ ಮರ್ಸಿಡಿಸ್ ಕಾರು ಖರೀದಿ!