ಭಾರತದ ಪುರುಷರ ಜೊತೆ ತಾವ್ಯಾಕೆ ಡೇಟಿಂಗ್ ಮಾಡಲ್ಲ ಎನ್ನುತ್ತಲೇ ಇಲ್ಲಿಯ ಪುರುಷರ ಬಗ್ಗೆ ಮೂರು ಕಾರಣ ಕೊಟ್ಟ ಸಂಬಂಧ ತರಬೇತುದಾರಳ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ಸಂಬಂಧ ಮತ್ತು ಜೀವನ ತರಬೇತುದಾರಳು ಎಂದು ಹೇಳಿಕೊಂಡಿರುವ ಚೇತನಾ ಚಕ್ರವರ್ತಿ ಎನ್ನುವ ಯುವತಿಯೊಬ್ಬಳು ಭಾರತದ ಯುವಕರಿಗೆ ಡೇಟಿಂಗ್, ರೊಮಾನ್ಸ್ ಸೇರಿದಂತೆ ಹಲವು ವಿಷಯಗಳಲ್ಲಿ ಏನೂ ತಿಳಿಯುವುದಿಲ್ಲ ಎನ್ನುತ್ತಲೇ ಅವರ ವಿರುದ್ಧ ಕೆಲವು ಮಾತನಾಡಿದ್ದಾರೆ. ಇದರಿಂದ ಸೋಷಿಯಲ್ ಮೀಡಿಯಾದಲ್ಲಿ ಯುವತಿಯ ವಿರುದ್ಧ ಯುವಕರು ರೊಚ್ಚಿಗೆದ್ದಿದ್ದು ಥಹರೇವಾರಿ ಕಮೆಂಟ್ ಹಾಕುತ್ತಿದ್ದಾರೆ. ಅಷ್ಟಕ್ಕೂ ಈ ಯುವತಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಭಾರತದ ಯುವಕರ ಜೊತೆ ತಾವೇಕೆ ಡೇಟಿಂಗ್ ಮಾಡುವುದಿಲ್ಲ ಎಂಬ ಶೀರ್ಷಿಕೆ ಕೊಟ್ಟು ಮಾತನಾಡಿದ್ದಾರೆ. ಅದರಲ್ಲಿ ಭಾರತದ ಯುವಕರ ವಿರುದ್ಧ ಕೆಲವೊಂದು ಹೇಳಿಕೆ ನೀಡಿದ್ದಾರೆ. ಈ ವಿಡಿಯೋ ಸಕತ್ ವೈರಲ್ ಆಗಿದ್ದು, ಯುವತಿಯ ವಿರುದ್ಧ ಭಾರತದ ಹಲವರು ಓಪನ್ ಚಾಲೆಂಜ್ ಕೊಡುತ್ತಿದ್ದಾರೆ.
ಅಂದಹಾಗೆ, ಇದರಲ್ಲಿ ಚೇತನಾ ಹೇಳಿದ್ದೇನೆಂದರೆ, ಪ್ರಪಂಚದ ಪ್ರತಿಯೊಬ್ಬ ವ್ಯಕ್ತಿಗೂ ಅವರದ್ದೇ ಆದ ಇಷ್ಟ ಮತ್ತು ಕಷ್ಟಗಳು ಇರುತ್ತವೆ. ಕೆಲವೊಂದನ್ನು ಅವರು ಇಷ್ಟಪಡುತ್ತಾರೆ, ಕೆಲವೊಂದನ್ನು ಇಷ್ಟಪಡದೇ ಇರಬಹುದು. ತಮ್ಮ ಇಷ್ಟಾನಿಷ್ಟಕ್ಕೆ ತಕ್ಕಂತೆ ಅವರಿಗೆ ಬೇಕಾದಂತೆ ಜೀವನಶೈಲಿ ರೂಪಿಸಿಕೊಳ್ಳುತ್ತಾರೆ. ಅದು ಸರಿಯಾದರೂ, ನಾವು ಸಮಾಜ, ವ್ಯಕ್ತಿಗಳು ಅಥವಾ ದೇಶವಾಸಿಗಳ ಬಗ್ಗೆ ಸಾರ್ವಜನಿಕವಾಗಿ ಮಾತನಾಡುವಾಗ, ಇಂಥ ವಿಷಯಗಳು ಕೂಡ ಖಂಡಿತವಾಗಿಯೂ ಚರ್ಚೆಗೆ ಕಾರಣವಾಗುತ್ತದೆ ಎನ್ನುವ ಮೂಲಕ ತಾನು ಭಾರತೀಯ ಹುಡುಗರೊಂದಿಗೆ ಏಕೆ ಡೇಟ್ ಮಾಡುವುದಿಲ್ಲ ಎಂಬುದಕ್ಕೆ ಕಾರಣ ಕೊಟ್ಟಿದ್ದಾರೆ ಈಕೆ.
undefined
ಹೈಕೋರ್ಟ್ನಿಂದ ಸಂಸದೆ ಕಂಗನಾಗೆ ನೋಟಿಸ್: ಸಂಸದೆ ಸ್ಥಾನಕ್ಕೆ ಎದುರಾಯ್ತಾ ಸಂಕಟ?
ಭಾರತದ ಯುವಕರ ಜೊತೆ ಡೇಟಿಂಗ್ ಮಾಡದೇ ಇರುವುದಕ್ಕೆ ಮೂರು ಕಾರಣಗಳನ್ನು ಚೇತನಾ ಕೊಟ್ಟಿದ್ದಾರೆ. ಅವೆಂದರೆ, ಭಾರತೀಯ ಪುರುಷರಿಗೆ ಹೇಗೆ ಮಾತನಾಡಬೇಕೆಂದು ತಿಳಿದಿಲ್ಲ. ಬಹುಶಃ ಅವರಿಗೆ ಹೇಗೆ ಮಾತನಾಡಬೇಕು ಎನ್ನುವುದನ್ನು ಕಲಿಸಲಾಗಿಲ್ಲ ಎಂದು ತೋರುತ್ತದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಈ ಯುವಕರಿಗೆ ಹೇಗೆ ಮಾತನಾಡಬೇಕು ಎನ್ನುವುದು ತಿಳಿಯದ ಪರಿಸ್ಥಿತಿ ತಲೆದೋರಿದಾ, ಅಥವಾ ಯಾವುದೇ ವಿಷಯದ ಬಗ್ಗೆ ಚರ್ಚಿಸಲು ಅವರು ಅಸಮರ್ಥರಾದಾಗ ಅವರು ತಮ್ಮ ಎದುರು ಇರುವ ಮಹಿಳೆಯರ ಮೇಲೆ ಗೂಬೆ ಕುಳ್ಳರಿಸಲು ಶುರು ಮಾಡತ್ತಾರೆ. ತಮ್ಮ ಮುಂದೆ ಇರುವ ಮಹಿಳೆಯನ್ನು ಅತಾರ್ಕಿಕ ಮತ್ತು ಆಕ್ರಮಣಕಾರಿ ಎಂದು ಕರೆಯಲು ಪ್ರಾರಂಭಿಸುತ್ತಾರೆ. ಜೊತೆಗೆ, ತಮಗೆ ಏನೂ ಹೇಳಲು ತೋಚದಿದ್ದಾಗ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ ಎಂಬ ಆರೋಪ ಚೇತನಾ ಮಾಡಿದ್ದಾರೆ.
ಇದು ಒಂದು ಕಾರಣವಾದರೆ, ಎರಡನೆಯದ್ದು ಅವರು ಹೇಳಿದ್ದು ಭಾರತದ ಪುರುಷರಿಗೆ ರೊಮಾನ್ಸ್, ಡೇಟಿಂಗ್ ಎಲ್ಲಾ ಏನು ಎನ್ನುವುದೇ ಗೊತ್ತಿಲ್ಲ ಎನ್ನುವುದು! ಭಾರತದವರಿಗೆ ರೊಮಾನ್ಸ್ ಎಂದರೆ ಏನು ಎನ್ನುವುದೇ ಗೊತ್ತಿಲ್ಲ ಎನ್ನುವುದು ಅವರ ಅಭಿಪ್ರಾಯ. ಭಾರತೀಯ ಪುರುಷರಿಗೆ ಪ್ರಣಯ ಅರ್ಥವಾಗುವುದಿಲ್ಲ ಎಂದು ಚೇತನಾ ಹೇಳಿದ್ದಾರೆ. ಭಾರತೀಯ ಪುರುಷರಿಗೆ ಪ್ರಣಯ ಎಂದರೆ ತಿಂಗಳಿಗೊಮ್ಮೆ ಊಟಕ್ಕೆಂದು ಒಂದು ಸಲ ಡೇಟಿಂಗ್ಗೆ ಹೋಗುವುದು ಅಷ್ಟೇ. ಆದರೆ ರೊಮಾನ್ಸ್ ಎನ್ನುವುದು ಪ್ರತಿದಿನವೂ ನಡೆಯುತ್ತದೆ. ಚಿಕ್ಕ ಪುಟ್ಟ ಸನ್ನೆಗಳಿಂದಲೂ ರೊಮಾನ್ಸ್ ಮಾಡಬಹುದು ಎನ್ನುವುದು ಅವರಿಗೆ ಗೊತ್ತೇ ಇಲ್ಲ. ಇದು ಭಾರತೀಯ ಹುಡುಗರಿಗೆ ಅರ್ಥವಾಗುವುದಿಲ್ಲ ಎಂದಿದ್ದಾರೆ! ರೊಮಾನ್ಸ್ ಎಂದರೆ ಮಹಿಳೆಯನ್ನು ಪ್ರತಿ ಕ್ಷಣವೂ ಕೇರ್ ಮಾಡುವುದು ಎಂದು ಇಲ್ಲಿಯವರಿಗೆ ತಿಳಿದಿಲ್ಲ. ಭಾರಿ ಭಾರಿ ಉಡುಗೊರೆಗಳನ್ನು ತಂದುಕೊಟ್ಟು ತಾವು ಶ್ರೀಮಂತ ಎಂದು ತೋರಿಸಿಕೊಳ್ಳುವುದು ರೊಮಾನ್ಸ್ ಅಲ್ಲ ಎಂದಿದ್ದಾರೆ.
ಮೂರನೆಯದ್ದಾಗಿ, ಭಾರತದ ಪುರುಷರಿಗೆ ಮನೆಯನ್ನು ಹೇಗೆ ನೋಡಿಕೊಳ್ಳಬೇಕು ಎನ್ನುವುದು ತಿಳಿದಿಲ್ಲ. ಮನೆಯ ನಿರ್ವಹಣೆ ಮಾಡುವುದು ಎಂದರೆ ಅರ್ಧಂಬರ್ಧ ಏನೇನೋ ಮಾಡಿದಂತಲ್ಲ. ಮನೆಯ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕು. ಆದರೆ ಇದು ಭಾರತದ ಪುರುಷರಿಗೆ ತಿಳಿದಿಲ್ಲ. ನೀವೂ ಆ ಮನೆಯಲ್ಲಿಯೇ ಇದ್ದೀರಿ ಎನ್ನುವುದನ್ನು ಮೊದಲು ತಿಳಿದುಕೊಳ್ಳಿ. ಏನೋ ಕೆಲಸ ಮಾಡಿ ನಿಮ್ಮ ಪಾರ್ಟನರ್ಗೆ ಫೇವರ್ ಮಾಡುತ್ತಿದ್ದೇನೆ ಎಂದುಕೊಳ್ಳುವುದು ಮನೆಯ ಜವಾಬ್ದಾರಿ ಹೊತ್ತುಕೊಂಡಂತೆ ಅಲ್ಲ ಎಂದಿದ್ದಾರೆ. ಇದಕ್ಕೆ ಹಲವರು ಟೀಕೆ ವ್ಯಕ್ತಪಡಿಸಿದ್ದಾರೆ. ಕೆಲವರು ನೀವು ಹೇಳಿದ ರೀತಿಯಲ್ಲಿ ಇರಬಹುದು. ಆದರೆ ಒಂದಿಷ್ಟು ಜನರನ್ನು ನೋಡಿ ಇಡೀ ಭಾರತದ ಯುವಕರು, ಪುರುಷರು ಸರಿಯಿಲ್ಲ ಎಂದು ಸಾರಾಸಗಟಾಗಿ ಭಾರತದ ಹೆಸರನ್ನು ಹಾಳು ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸುತ್ತಿದ್ದಾರೆ. ರೊಮಾನ್ಸ್ ವಿಷಯದಲ್ಲಿ ಯುವಕರು ಈ ಯುವತಿಗೆ ಚಾಲೆಂಜೂ ಹಾಕಿದ್ದಾರೆ.