ಬಿಲಿಯನೇರ್‌ ಮುಕೇಶ್ ಅಂಬಾನಿ ಮಿಡ್ಲ್‌ ಕ್ಲಾಸ್ ಹುಡುಗಿ ನೀತಾಗೆ ಪ್ರಪೋಸ್ ಮಾಡಿದ್ದು ಹೇಗೆ? ವೀಡಿಯೋ ವೈರಲ್‌

By Vinutha Perla  |  First Published Mar 15, 2024, 3:13 PM IST

ಬಿಲಿಯನೇರ್‌ ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಜಗತ್ತಿನ ಕೋಟ್ಯಾಧಿಪತಿ ದಂಪತಿಗಳಲ್ಲೊಬ್ಬರು. ದಂಪತಿ ಲಕ್ಸುರಿಯಸ್ ಲೈಫ್‌ಸ್ಟೈಲ್‌ನ್ನು ಹೊಂದಿದ್ದಾರೆ. ಆದ್ರೆ ಬಿಲಿಯನೇರ್ ಮುಕೇಶ್ ಅಂಬಾನಿ, ನೀತಾ ಅಂಬಾನಿಗೆ ಮದುವೆಗೆ ಹೇಗೆ ಪ್ರಪೋಸ್ ಮಾಡಿದ್ದಾರೆ ಅನ್ನೋದು ನಿಮ್ಗೆ ಗೊತ್ತಿದ್ಯಾ?


ಬಿಲಿಯನೇರ್‌ ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಜಗತ್ತಿನ ಕೋಟ್ಯಾಧಿಪತಿ ದಂಪತಿಗಳಲ್ಲೊಬ್ಬರು. ದಂಪತಿ ಲಕ್ಸುರಿಯಸ್ ಲೈಫ್‌ಸ್ಟೈಲ್‌ನ್ನು ಹೊಂದಿದ್ದಾರೆ. ಗ್ರ್ಯಾಂಡ್ ಪಾರ್ಟಿ, ಸಮಾರಂಭಗಳನ್ನು ಆಯೋಜಿಸುತ್ತಿರುತ್ತಾರೆ. ಇತ್ತೀಚಿಗೆ ಮುಕೇಶ್ ಅಂಬಾನಿ-ನೀತಾ ಅಂಬಾನಿ ತಮ್ಮ ಕಿರಿಯ ಪುತ್ರ ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್‌ ಮದುವೆಗೆ ಬರೋಬ್ಬರಿ 1000 ಕೋಟಿ ರೂ. ಖರ್ಚು ಮಾಡಿದ್ದರು. ದೇಶ-ವಿದೇಶಗಳಿಂದ ಸೆಲೆಬ್ರಿಟಿಗಳನ್ನು ಕರೆಸಿದ್ದರು. ಅಂಬಾನಿ ದಂಪತಿ ಯಾವುದೇ ಸಮಾರಂಭವಿರಲಿ ಅನ್ಯೋನ್ಯವಾಗಿ ಇರುತ್ತಾರೆ. ಆದ್ರೆ ಬಿಲಿಯನೇರ್ ಮುಕೇಶ್ ಅಂಬಾನಿ, ನೀತಾ ಅಂಬಾನಿಗೆ ಮದುವೆಗೆ ಹೇಗೆ ಪ್ರಪೋಸ್ ಮಾಡಿದ್ದಾರೆ ಅನ್ನೋದು ನಿಮ್ಗೆ ಗೊತ್ತಿದ್ಯಾ?

ಸೆಲೆಬ್ರಿಟಿ ಹೋಸ್ಟ್ ಸಿಮಿ ಗರೆವಾಲ್ ಹಳೆಯ ಸಂದರ್ಶನದಲ್ಲಿ ಮುಕೇಶ್ ಅಂವಾನಿ, ನೀತಾ ಅಂಬಾನಿ ಅವರೊಂದಿಗಿನ ಅವರ ಪ್ರೇಮಕಥೆಯ ಬಗ್ಗೆ ಮಾತನಾಡಿದರು.

Tap to resize

Latest Videos

ನೀತಾ ಎಂದಿಗೂ ಪಾದರಕ್ಷೆ ರಿಪೀಟ್ ಮಾಡಲ್ಲ! ಅಂಬಾನಿ ಕುಟುಂಬದ ಕೆಲ ವಿಲಕ್ಷಣ ಅಭ್ಯಾಸಗಳಿವು..

ಟ್ರಾಫಿಕ್‌ ಜಾಮ್‌ನಲ್ಲಿ ಪ್ರಪೋಸ್ ಮಾಡಿದ್ದ ಮುಕೇಶ್ ಅಂಬಾನಿ
ಸಂದರ್ಶನದಲ್ಲಿ, ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷರಾದ ಮುಕೇಶ್ ಅಂಬಾನಿ ಮುಂಬೈನ ಪೆಡ್ಡರ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿರುವಾಗ ನೀತಾ ಅಂಬಾನಿಗೆ ಮದುವೆಯ ಪ್ರಸ್ತಾಪವನ್ನು ಮಾಡಿದ್ದಾಗಿ ಮಾಹಿತಿ ಹಂಚಿಕೊಂಡಿದ್ದಾರೆ. ದಂಪತಿಗಳು ಮೂರು ವಾರಗಳಿಂದ ಡೇಟ್ ಮಾಡುತ್ತಿದ್ದರು. ಈಕೆಯೇ ಬಾಳ ಸಂಗಾತಿಯಾಗಲು ಸೂಕ್ತ ವ್ಯಕ್ತಿ ಎಂದು ತಿಳಿದುಕೊಂಡು ಪ್ರಪೋಸ್ ಮಾಡಿದ್ದಾಗಿ ಮುಕೇಶ್ ಅಂಬಾನಿ ತಿಳಿಸಿದ್ದಾರೆ.

'ನೀತಾ ನಿಜವಾಗಿಯೂ ನಾನು ನೋಡಿದ ಮೊದಲ ಹುಡುಗಿ. ಆಗಲೇ ನಾನು ಈಕೆಯೇ ನನ್ನ ಜೀವನ ಸಂಗಾತಿ ಎಂದು ನಿರ್ಧರಿಸಿದ್ದೆ. ಒಮ್ಮೆ ನಾವು ಪೆದ್ದಾರ್ ರಸ್ತೆಯಲ್ಲಿ ಹೋಗುತ್ತಿದ್ದಾಗ, ನೀತಾ, ನೀನು ನನ್ನನ್ನು ಮದುವೆಯಾಗುತ್ತೀಯಾ. ಯೆಸ್ ಅಥವಾ ನೋ ಹೇಳು ಎಂದು ಕೇಳಿದ್ದೆ' ಎಂದು ಮುಕೇಶ್ ಅಂಬಾನಿ ಹೇಳಿದರು.

ಅಬ್ಬಬ್ಬಾ ..39ನೇ ವಿವಾಹ ವಾರ್ಷಿಕೋತ್ಸವಕ್ಕೆ ಅಂಬಾನಿ ದಂಪತಿ ಕಟ್‌ ಮಾಡಿದ ಗೋಲ್ಡನ್‌ ಕೇಕ್‌ ಹೇಗಿದೆ ನೋಡಿ!

ಯೆಸ್‌ ಅಥವಾ ನೋ ಹೇಳದೆ ಗಾಡಿ ಚಲಾಯಿಸಲ್ಲ ಎಂದಿದ್ದ ಬಿಲಿಯನೇರ್‌
'ಮುಕೇಶ್ ಪ್ರಪೋಸ್ ಮಾಡಿದಾಗ ಟ್ರಾಫಿಕ್ ಜಾಮ್ ಆಗಿತ್ತು. ಜನರು ಗಾಡಿ ಚಲಾಯಿಸುವಂತೆ ಹಾರ್ನ್ ಹಾಕುತ್ತಿದ್ದರು. ಗಾಡಿ ಮುಂದಕ್ಕೆ ತೆಗೆದುಕೊಂಡು ಹೋಗಿ ಎಂದು ನಾನು ಮುಕೇಶ್‌ಗೆ ಹೇಳಿದೆ. ಆದರೆ ಅವರು ಹೌದು ಅಥವಾ ಇಲ್ಲ ಎಂದು ಹೇಳಿ, ನಾನು ಕಾರನ್ನು ಚಲಿಸುವುದಿಲ್ಲ' ಎಂದು ಹೇಳಿದರು ಎಂದು ನೀತಾ ಅಂಬಾನಿ ತಿಳಿಸಿದ್ದಾರೆ. ಕೊನೆಗೆ ತಾನು ಪ್ರಪೋಸ್‌ಗೆ ಓಕೆ ಹೇಳಿದ್ದಾಗಿ ನೀತಾ ಅಂಬಾನಿ ಹೇಳಿದರು. ನಂತರ, ನೀತಾ ಅಂಬಾನಿ ತನ್ನ ಪತಿಯನ್ನು ಪ್ರಶ್ನಿಸಿದರು, ಮದುವೆ ಪ್ರಸ್ತಾಪವನ್ನು ತಿರಸ್ಕರಿಸಿದರೆಏನು ಮಾಡುತ್ತಿದ್ದೀರಿ ಎಂದು, ಇದಕ್ಕೆ ಪ್ರತಿಯಾಗಿ ನಾನು ಕಾರಿನಲ್ಲಿ ಮನೆಯವರೆಗೆ ಬಿಡುತ್ತಿದ್ದೆ, ಮತ್ತೆ ನಾವಿಬ್ಬರೂ ಸ್ನೇಹಿತರಾಗೇ ಉಳಿಯುತ್ತಿದ್ದೆವು ಎಂದು ಮುಕೇಶ್ ಅಂಬಾನಿ ಹೇಳಿದರು.

1985ರಲ್ಲಿ ಮುಕೇಶ್ ಅಂಬಬಾನಿ-ನೀತಾ ಅಂಬಾನಿ ಮದುವೆ ನಡೆಯಿತು. ದಂಪತಿಗಳಿಗೆಆಕಾಶ್, ಇಶಾ ಮತ್ತು ಅನಂತ್ ಎಂಬ ಮೂವರು ಮಕ್ಕಳಿದ್ದಾರೆ. ಆಕಾಶ್ ಮತ್ತು ಇಶಾ ಮದುವೆಯಾಗಿ ಮಕ್ಕಳನ್ನು ಹೊಂದಿದ್ದರೆ, ಅನಂತ್ ಅಂಬಾನಿ ರಾಧಿಕಾ ಮರ್ಚೆಂಟ್ ಅವರನ್ನು ಈ ವರ್ಷ ಜುಲೈನಲ್ಲಿ ಮದುವೆ ಆಗಲಿದ್ದಾರೆ.

click me!