Best Friends : ಮತ್ತೆ ಒಂದಾದ ಈ ಸ್ನೇಹಿತರನ್ನು ನೋಡಿದ್ರೆ ನಿಮ್ಮ ಬೆಸ್ಟ್ ಫ್ರೆಂಡ್ ನೆನಪಾಗ್ತಾರೆ!

By Suvarna News  |  First Published Mar 13, 2024, 2:13 PM IST

ಸ್ನೇಹಕ್ಕೆ ಗಡಿ, ಭಾಷೆಯ ಮಿತಿಯಿಲ್ಲ. ಅದೆಷ್ಟೋ ದೂರವಿದ್ರೂ ಸ್ನೇಹ ಕಡಿಮೆ ಆಗಲು ಸಾಧ್ಯವಿಲ್ಲ. ಇದಕ್ಕೆ ಭಾರತ – ಪಾಕಿಸ್ತಾನದಲ್ಲಿ ನೆಲೆ ನಿಂತಿರುವ ಈ ಸ್ನೇಹಿತರು ಸಾಕ್ಷ್ಯ. ವೃದ್ಧಾಪ್ಯದಲ್ಲೂ ಅವರು ಕಾಪಾಡಿಕೊಂಡು ಬಂದಿರುವ ಶುದ್ಧ ಸ್ನೇಹ ಯುವಕರಿಗೆ ಮಾದರಿ. 
 


ಮಕ್ಕಳಿಂದ ಹಿಡಿದು ಯುವಕರವರೆಗೆ ಪ್ರತಿಯೊಬ್ಬರಿಗೂ ಹತ್ತಾರು ಜನ ಫ್ರೆಂಡ್ಸ್ ಇರ್ತಾರೆ. ವಾಟ್ಸ್ ಅಪ್, ಫೇಸ್ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಸ್ನೇಹಿತರ ಸಂಖ್ಯೆ ಸಾಕಷ್ಟಿರುತ್ತದೆ. ಆದ್ರೆ ಅವರೆಲ್ಲ ಹೆಸರಿಗೆ ಮಾತ್ರ. ಕೆಲವೊಮ್ಮೆ ಸಾಮಾಜಿಕ ಜಾಲತಾಣದಲ್ಲಿರುವ ಸ್ನೇಹಿತರ ಹೆಸರು, ಪರಿಚಯ ಕೂಡ ನಮಗಿರೋದಿಲ್ಲ. ಸ್ನೇಹಿತ ಒಬ್ಬನೇ ಇರಲಿ ಅವನು ಆಪ್ತವಾಗಿರಲಿ ಎಂದು ಹಿರಿಯರು ಹೇಳ್ತಾರೆ. ಬರೀ ಸಂತೋಷದಲ್ಲಿ ಮಾತ್ರವಲ್ಲ ದುಃಖದಲ್ಲಿ ನಿಮ್ಮ ಜೊತೆಗಿರುವ ಹಾಗೂ ನೀವೆಷ್ಟೇ ದಿನ ಆತನಿಂದ ದೂರವಿದ್ದರೂ ನಿಮ್ಮನ್ನು ನೆನಪಿಟ್ಟುಕೊಂಡಿರುವ, ನೀವು ಸಿಕ್ಕಾಗ ಅದೇ ಖುಷಿಯಲ್ಲಿ ಮಾತನಾಡಿಸುವ ವ್ಯಕ್ತಿ ಮಾತ್ರ ನಿಮ್ಮ ನಿಜವಾದ ಸ್ನೇಹಿತ. ಸ್ನೇಹಿತರ ಮಧ್ಯೆ ಯಾವುದೇ ಅಸೂಯೆ ಇರೋದಿಲ್ಲ. 

ಬಾಲ್ಯ (Childhood) ದಲ್ಲಿ ಸಿಗುವ ಸ್ನೇಹಿತ (Friend) ರು ಸದಾ ನೆನಪಿರುತ್ತಾರೆ. ವಯಸ್ಸು ಹೆಚ್ಚಾಗ್ತಿದ್ದಂತೆ ಜವಾಬ್ದಾರಿ ಹಿಂದೆ ಓಡುವ ಜನರು ಜೀವನ ಜಂಜಾಟದಲ್ಲಿ ಸುಸ್ತಾಗ್ತಾರೆ. ಆಗ ಅವರಿಗೆ ಭಾವನಾತ್ಮಕ ಶಕ್ತಿ ನೀಡೋದು ಸ್ನೇಹಿತರು ಮಾತ್ರ. 

Latest Videos

undefined

ನಿಮ್ಮನ್ನು ಜನ ಇಷ್ಟಪಡಬೇಕೆಂದು ಬಯಸಿದ್ರೆ… ಇವತ್ತಿಂದ್ಲೇ ಇದನ್ನ ಫಾಲೋ ಮಾಡಿ

ಸ್ನೇಹಕ್ಕೆ ರಾಜಕೀಯವಾಗ್ಲಿ, ರಾಜ್ಯ, ರಾಷ್ಟ್ರಗಳ, ಭಾಷೆಯ ಗಡಿಯಾಗ್ಲಿ ಇಲ್ಲ. ಎಷ್ಟೋ ವರ್ಷಗಳ ನಂತ್ರ ಸ್ನೇಹಿತರನ್ನು ಗುರುತಿಸಿ ಮತ್ತೆ ಕನೆಕ್ಟ್ ಆಗುವ ಜನರಿದ್ದಾರೆ. ಅದಕ್ಕೆ ಸುರೇಶ್ ಕೊಠಾರಿ ಮತ್ತು ಎಜಿ ಶಾಕಿರ್ ಉತ್ತಮ ನಿದರ್ಶನ.  ಗುಜರಾತಿ (Gujarat) ನ ದೀಸಾದಲ್ಲಿ ಒಟ್ಟಿಗೆ ಬಾಲ್ಯ ಕಳೆದವರು ಕೊಠಾರಿ ಮತ್ತು ಶಾಕಿರ್. ಆದ್ರೆ ಒಟ್ಟಿಗೆ ಬೆಳೆಯುವ ಅವಕಾಶ ಸಿಗಲಿಲ್ಲ. ಇತರ ಅನೇಕರಂತೆ, 1947 ರಲ್ಲಿ ಭಾರತ (India) ಮತ್ತು ಪಾಕಿಸ್ತಾನದ ವಿಭಜನೆಯ ಸಮಯದಲ್ಲಿ ಇವರಿಬ್ಬರು ದೂರವಾದ್ರು. ತಮ್ಮ ಕುಟುಂಬದ ಜೊತೆ ಶಾಕಿರ್ ಪಾಕಿಸ್ತಾನಕ್ಕೆ ತೆರಳಿದ್ದರು. ಅವರು ಅಲ್ಲಿ ತಲುಪುತ್ತಿದ್ದಂತೆ ಸುರೇಶ್ ಕೊಠಾರಿಗೆ ಪತ್ರ ಬರೆದಿದ್ದರು. ಆದ್ರೆ ದೇಶದ ಮಧ್ಯೆ ಇರುವ ಗಲಾಟೆ ಕಾರಣಕ್ಕೆ ಮತ್ತೆ ಇಬ್ಬರು ಸೇರಿರಲಿಲ್ಲ. ಪತ್ರ ವ್ಯವಹಾರ ಕೂಡ ಇರಲಿಲ್ಲ. ಇಬ್ಬರ ಮಧ್ಯೆ ಯಾವುದೇ ಸಂಪರ್ಕ ಇಲ್ಲದೆ ಹೋದ್ರೂ ಸ್ನೇಹ ಮಾತ್ರ ಕಡಿಮೆ ಆಗಿರಲಿಲ್ಲ. 12 ವರ್ಷದಲ್ಲಿದ್ದಾಗ ಅಂದ್ರೆ 1948ರಲ್ಲಿ ದೂರ ಆದವರು 1982ರವರೆಗೆ ಸಿಕ್ಕಿರಲಿಲ್ಲ.

35 ವರ್ಷದ ನಂತ್ರ ಮೊದಲ ಭೇಟಿ : ಸುರೇಶ್ ಕೊಠಾರಿ ಮತ್ತು ಎಜಿ ಶಾಕಿರ್ಗೆ 35 ವರ್ಷದ ನಂತ್ರ ಭೇಟಿಯಾಗುವ ಅವಕಾಶ ಸಿಕ್ಕಿತ್ತು. ನ್ಯೂಯಾರ್ಕ್ ನಲ್ಲಿ ಕಾಮನ್ ಸ್ನೇಹಿತನ ಆಹ್ವಾನದ ಮೇರೆಗೆ ಇಬ್ಬರೂ ನ್ಯೂಯಾರ್ಕ್ ಗೆ ಹೋಗಿದ್ದರು. ಕೆಲವೇ ಗಂಟೆ ಒಟ್ಟಿಗಿದ್ದ ಅವರಿಗೆ 2023ರವರೆಗೆ ಮತ್ತೆ ತಾವು ಭೇಟಿಯಾಗ್ತೇವೆ ಎನ್ನುವ ನಿರೀಕ್ಷೆ ಇರಲಿಲ್ಲ. ಆದ್ರೆ ರೀಯೂನಿಯನ್ ಅಮೆರಿಕಾದಲ್ಲಿ ನಡೆಯಿತು. ಸುರೇಶ್ ಕೊಠಾರಿ ಮೊಮ್ಮಗಳ ಸಹಾಯದಿಂದ ಇಬ್ಬರು ಮತ್ತೆ ಭೇಟಿಯಾಗಿದ್ದಲ್ಲದೆ, ಒಂದು ವಾರವನ್ನು ಒಟ್ಟಿಗೆ ಕಳೆದಿದ್ದರು. ಉತ್ತಮ ಸ್ನೇಹ, ರಾಜಕೀಯ ಗಲಾಟೆ, ಗಡಿ ಗಲಾಟೆಯಿಂದ ದೂರವಾಗಲು ಸಾಧ್ಯವಿಲ್ಲ ಎಂಬುದನ್ನು ಅವರು ಸ್ಪಷ್ಟಪಡಿಸಿದ್ದರು. ಸುರೇಶ್ ಕೊಠಾರಿಯ ಮೊಮ್ಮಗಳು ಮೇಗನ್ ಕೊಠಾರಿ, ಈ ಇಬ್ಬರು ಸ್ನೇಹಿತರ ಮಿಲನದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಅವರ ಸ್ನೇಹದ ಕಥೆಯನ್ನು ಹೇಳಿದ್ದರು. 

ಮಗಳ ಬಾಯ್‌ಫ್ರೆಂಡ್ ಜೊತೆ ಫೋಸ್ ನೀಡಲು ನಿರಾಕರಿಸಿದ ಬೋನಿ ಕಪೂರ್

ಅವರಿಬ್ಬರು ಭೇಟಿಯಾಗಿ ಗಂಟೆಗಟ್ಟಲೆ ಮಾತನಾಡಿದ್ದಲ್ಲದೆ, ಒಬ್ಬರನ್ನೊಬ್ಬರು ಅಪ್ಪಿಕೊಂಡು ತಮ್ಮ ಸ್ನೇಹ ವ್ಯಕ್ತಪಡಿಸಿದ್ದರು. ಈ ವಿಡಿಯೋ ನೋಡಿದ ಜನರು ಭಾವುಕರಾಗಿದ್ದು ಸುಳ್ಳಲ್ಲ. ಮೇಗನ್ ಕೊಠಾರಿ, ಆರು ದಿನಗಳ ಹಿಂದೆ ಈ ವಿಡಿಯೋ ಹಂಚಿಕೊಂಡು ಅದಕ್ಕೆ ಶೀರ್ಷಿಕೆ ನೀಡಿದ್ದಾರೆ. ಏಪ್ರಿಲ್ 2024 ರಂದು ನ್ಯೂಜೆರ್ಸಿಯಲ್ಲಿ ನನ್ನ ಅಜ್ಜನ 90 ನೇ ಹುಟ್ಟುಹಬ್ಬದಂದು ಇಬ್ಬರೂ ಸ್ನೇಹಿತರು ಮತ್ತೆ ಭೇಟಿಯಾಗುತ್ತಾರೆ ಎಂದು ಬರೆದಿದ್ದಾರೆ. 
 

click me!