
ಮುಂಬೈ(ಮಾ.07) ಭಾರತ ಮಾತ್ರವಲ್ಲ ವಿಶ್ವದ ಅತ್ಯಂತ ಶ್ರೀಮಂತ ದಂಪತಿ ಪಟ್ಟಿಯಲ್ಲಿ ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಮುಂಚೂಣಿಯಲ್ಲಿದ್ದಾರೆ. ಇದೀಗ ಈ ಶ್ರೀಮಂತ ಉದ್ಯಮಿ ದಂಪತಿಗಳಿಗೆ ವಿವಾಹ ವಾರ್ಷಿಕೋತ್ಸವ ಸಂಬ್ರಮ. ಮಾರ್ಚ್ 8ರಂದು ಮುಕೇಶ್ ಹಾಗೂ ನೀತಾ ಅಂಬಾನಿ 40ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸುತ್ತಿದ್ದಾರೆ. ಮಾರ್ಚ್ 8, 1985ರಲ್ಲಿ ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮುಕೇಶ್-ನೀತಾ ಅಂಬಾನಿ ವಿವಾಹ ವಾರ್ಷಿಕೋತ್ಸವ ಸಂಭ್ರಮ. ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಅವರ ಜೀವನದ ಬಗ್ಗೆ ಜನರಿಗೆ ಸಾಕಷ್ಟು ವಿಷಯ ತಿಳಿದಿದೆ. ಆದರೆ ಅವರ ವೈಯಕ್ತಿಕ ಜೀವನ, ವಿಶೇಷವಾಗಿ ಪ್ರೇಮಕಥೆಯ ಬಗ್ಗೆ ಕೆಲವೇ ಜನರಿಗೆ ತಿಳಿದಿದೆ.
ಪ್ರೇಮ ವಿವಾಹ
ಮುಕೇಶ್-ನೀತಾ ಅಂಬಾನಿ ಅವರ ವಿವಾಹವು ಪ್ರೇಮ ಮತ್ತು ವ್ಯವಸ್ಥಿತ ವಿವಾಹವಾಗಿತ್ತು. ಇಬ್ಬರ ಮೊದಲ ಭೇಟಿ ಮತ್ತು ಮುಕೇಶ್‌ರನ್ನು ನೋಡಿದ ನೀತಾ ಅಂಬಾನಿಯವರ ಪ್ರತಿಕ್ರಿಯೆ ತುಂಬಾ ಆಶ್ಚರ್ಯಕರವಾಗಿತ್ತು. ಮುಕೇಶ್ ಅಂಬಾನಿಯವರನ್ನು ನೋಡಿ ನೀತಾ ಅಚ್ಚರಿಗೊಂಡಿದ್ದರು. ಶ್ರೀಮಂತ ಉದ್ಯಮಿ ಪುತ್ರನ ಸರಳತೆ ನೀತಾಗೆ ಭಾರಿ ಮೆಚ್ಚುಗೆಯಾಗಿತ್ತು.
ಉಚಿತ ಡೇಟಾ, ಕಾಲ್, ಒಟಿಟಿ; ಇಲ್ಲಿದೆ 189 ರೂನಿಂದ ಆರಂಭಗೊಳ್ಳುವ ಟಾಪ್ 5 ಜಿಯೋ ಪ್ಲಾನ್
ಮುಕೇಶ್ ಅಂಬಾನಿ ಎದುರಿಗೆ ನಿಂತಿದ್ದರು
ನೀತಾ ಅಂಬಾನಿ ಇಂದು ದೇಶದ ಅತ್ಯಂತ ಶ್ರೀಮಂತ ಕುಟುಂಬದ ಸೊಸೆಯಾಗಿದ್ದರೂ, ತವರು ಮನೆಯ ಕಡೆಯಿಂದ ಅವರು ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದವರು. ಮುಕೇಶ್ ಅಂಬಾನಿ ಅವರನ್ನು ಅವರು ಮೊದಲ ಬಾರಿಗೆ ಭೇಟಿಯಾಗಿದ್ದು ಧೀರೂಭಾಯಿ ಅವರ ಮನೆಯಲ್ಲಿ. ಅವರು ಮುಕೇಶ್‌ರನ್ನು ಭೇಟಿಯಾಗಲು ಹೋದಾಗ, ಅವರನ್ನು ನೋಡಿ ದಂಗಾದರು. ಏಕೆಂದರೆ, ಬೆಲ್ ಬಾರಿಸಿದಾಗ ಮುಕೇಶ್ ಅವರೇ ಬಾಗಿಲು ತೆರೆದರು. ಬಿಳಿ ಶರ್ಟ್ ಮತ್ತು ಕಪ್ಪು ಪ್ಯಾಂಟ್‌ನಲ್ಲಿ ಮುಕೇಶ್ ತುಂಬಾ ಸರಳವಾಗಿ ಕಾಣುತ್ತಿದ್ದರು, ಅದನ್ನು ನೋಡಿದ ನೀತಾಗೆ ನಂಬಲು ಸಾಧ್ಯವಾಗಲಿಲ್ಲ. ಇಷ್ಟು ಶ್ರೀಮಂತ ವ್ಯಕ್ತಿಯ ಮಗ ಇಷ್ಟು ಸರಳವಾಗಿರಲು ಸಾಧ್ಯವೇ ಎಂದು ಅವರು ಕನಸಿನಲ್ಲಿಯೂ ಯೋಚಿಸಿರಲಿಲ್ಲ.
ನೀತಾರನ್ನು ನೋಡಿದ ತಕ್ಷಣ ಧೀರೂಭಾಯಿ-ಕೋಕಿಲಾಬೆನ್ ಸೊಸೆಯೆಂದು ಪರಿಗಣಿಸಿದರು
ಮುಕೇಶ್ ಅಂಬಾನಿಯವರ ತಂದೆ-ತಾಯಿ ನೀತಾರನ್ನು ಮೊದಲ ನೋಟದಲ್ಲೇ ತಮ್ಮ ಸೊಸೆಯೆಂದು ಪರಿಗಣಿಸಿದರು. ನೀತಾ ತರಬೇತಿ ಪಡೆದ ನೃತ್ಯಗಾರ್ತಿ. ಅವರು 20 ವರ್ಷದವರಿದ್ದಾಗ, ನವರಾತ್ರಿಯ ಸಂದರ್ಭದಲ್ಲಿ ಮುಂಬೈನ ಬಿರ್ಲಾ ಮಾತೋಶ್ರೀಯಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಲು ಆಯ್ಕೆಯಾದರು. ಈ ಕಾರ್ಯಕ್ರಮಕ್ಕೆ ರಿಲಯನ್ಸ್‌ನ ಸಂಸ್ಥಾಪಕ ಧೀರೂಭಾಯಿ ಅಂಬಾನಿ ಮತ್ತು ಅವರ ಪತ್ನಿ ಕೋಕಿಲಾಬೆನ್ ಕೂಡ ಆಗಮಿಸಿದ್ದರು. ನೀತಾ ಮೇಲೆ ಅವರ ಕಣ್ಣು ಬಿದ್ದ ತಕ್ಷಣ, ಅವರು ತಮ್ಮ ಹಿರಿಯ ಮಗನಿಗೆ ಆಕೆಯನ್ನು ಮನಸ್ಸಿನಲ್ಲಿಯೇ ಇಷ್ಟಪಟ್ಟರು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನೀತಾ ಅವರ ಪ್ರದರ್ಶನವನ್ನು ನೋಡಿದ ನಂತರ, ಧೀರೂಭಾಯಿ ಅಂಬಾನಿ ನೀತಾ ಮತ್ತು ಅವರ ತಂದೆಯನ್ನು ತಮ್ಮ ಕಚೇರಿಗೆ ಕರೆಸಿಕೊಂಡರು. ಈ ಸಮಯದಲ್ಲಿ, ಧೀರೂಭಾಯಿ ನೀತಾ ಅವರನ್ನು ಹಲವು ಪ್ರಶ್ನೆಗಳನ್ನು ಕೇಳಿದರು. ನಂತರ ನೀತಾ ಅವರ ಮನಸ್ಸನ್ನು ತಿಳಿಯಲು, ನನ್ನ ಮಗನನ್ನು ಭೇಟಿಯಾಗಲು ಇಷ್ಟಪಡುತ್ತೀಯಾ ಎಂದು ಕೇಳಿದರು. ನೀತಾ ಒಪ್ಪಿಕೊಂಡ ನಂತರ ಒಂದು ದಿನ ಅವರ ಮನೆಗೆ ಹೋದರು. ಬೆಲ್ ಬಾರಿಸಿದ ನಂತರ ಬಾಗಿಲು ತೆರೆದಾಗ, ಬಿಳಿ ಶರ್ಟ್ ಮತ್ತು ಕಪ್ಪು ಪ್ಯಾಂಟ್ ಧರಿಸಿದ ವ್ಯಕ್ತಿಯೊಬ್ಬ ನಿಂತಿದ್ದ. ಆತ ನೀತಾ ಕಡೆಗೆ ಕೈ ಚಾಚಿ, "ಹಾಯ್! ನಾನು ಮುಕೇಶ್" ಎಂದರು. ಇಷ್ಟು ಶ್ರೀಮಂತ ವ್ಯಕ್ತಿಯ ಮಗನ ಸರಳತೆಯನ್ನು ನೋಡಿ ನೀತಾ ಒಂದು ಕ್ಷಣ ಚಕಿತಗೊಂಡರು. ನಂತರ ಹಲವಾರು ಭೇಟಿಗಳ ನಂತರ ನೀತಾ ಮುಕೇಶ್ ಅಂಬಾನಿ ಅವರನ್ನು ಮದುವೆಯಾಗಲು ನಿರ್ಧರಿಸಿದರು ಮತ್ತು ಇಬ್ಬರೂ ಮಾರ್ಚ್ 8, 1985 ರಂದು ವಿವಾಹವಾದರು.
ಸಾವಿರಾರು ಕೋಟಿ ರೂ ನಷ್ಟದ ಬೆನ್ನಲ್ಲೇ ಶಾಕ್ ಕೊಟ್ಟ ಮುಕೇಶ್ ಅಂಬಾನಿ, ತಟ್ಟಲಿದೆ ಬಿಸಿ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.