
ಜೋಧಪುರ (ಮಾ.6): ಲಿವ್‌ಇನ್ ರಿಲೇಷನ್‌ಷಿನ್‌ಷಿಪ್ ಬಗ್ಗೆ ಹೈಕೋರ್ಟ್ ಕಠಿಣ ತೀರ್ಪು (Court decision) ನೀಡಿದೆ. ರಾಜಸ್ಥಾನದ ಉಚ್ಚ ನ್ಯಾಯಾಲಯದ (Rajasthan High Court) ಜೋಧಪುರ ಪೀಠವು ಇತ್ತೀಚೆಗೆ ಪ್ರಮುಖ ಪ್ರಕರಣದಲ್ಲಿ ಮಹತ್ವದ ತೀರ್ಪು ನೀಡಿದೆ. ಇದಲ್ಲಿ ಒಬ್ಬ ವ್ಯಕ್ತಿ ತನ್ನ ಮದುವೆಯಾದ ಸಹೋದರಿಯ ಕುರಿತಾಗಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಕೆ ಮಾಡಿದ್ದ. ಅರ್ಜಿದಾರ ಹೇಳಿರುವ ಪ್ರಕಾರ, ತನ್ನ ಸಹೋದರಿಯನ್ನು ಆಕೆಯ ಭಾವ ಅಕ್ರಮವಾಗಿ ಬಂಧಿಸಿಟ್ಟಿದ್ದಾರೆ ಎಂದು ಆರೋಪಿಸಿದ್ದ. ಆದರೆ, ನ್ಯಾಯಾಲಯವು ಪ್ರಕರಣವನ್ನು ಆಳವಾಗಿ ಪರಿಶೀಲಿಸಿದಾಗ, ಅರ್ಜಿದಾರ ಸ್ವತಃ ತನ್ನ ಸಹೋದರಿಯೊಂದಿಗೆ ಲಿವ್‌ಇನ್ ರಿಲೇಷನ್‌ಷಿಪ್‌ನಲ್ಲಿದ್ದ ಎನ್ನುವುದು ತಿಳಿದುಬಂದಿದೆ.
ಜೋಧ್‌ಪುರ ಹೈಕೋರ್ಟ್ ನ್ಯಾಯಾಧೀಶರು ಹೇಳಿದ್ದೇನು..
ನ್ಯಾಯಾಲಯವು ಅರ್ಜಿಯನ್ನು ಅನುಚಿತವೆಂದು ಹೇಳಿದೆ. ನ್ಯಾಯಮೂರ್ತಿ ಚಂದ್ರಶೇಖರ್ ಮತ್ತು ನ್ಯಾಯಮೂರ್ತಿ ಮದನ್ ಗೋಪಾಲ್ ವ್ಯಾಸ್ ಅವರ ವಿಭಾಗೀಯ ಪೀಠವು ಅರ್ಜಿಯನ್ನು ತಿರಸ್ಕರಿಸಿತು ಮಾತ್ರವಲ್ಲದೆ, ಅರ್ಜಿದಾರನಿಗೆ 10,000 ರೂಪಾಯಿ ದಂಡವನ್ನು ವಿಧಿಸಿದೆ. ಭಾರತೀಯ ಸಂವಿಧಾನವು ಅನೈತಿಕ ಸಂಬಂಧಗಳನ್ನು ಗುರುತಿಸುವುದಿಲ್ಲ ಮತ್ತು ಅಂತಹ ಪ್ರಕರಣಗಳಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಸಲ್ಲಿಸಲು ಅನುಮತಿ ಇಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಸಂವಿಧಾನದ ಮಿತಿಗಳನ್ನು ಉಲ್ಲಂಘಿಸಲು ಸಾಧ್ಯವಿಲ್ಲ. ಭಾರತದ ಸಂವಿಧಾನವು ಸ್ವಾತಂತ್ರ್ಯ ಮತ್ತು ಹಕ್ಕುಗಳನ್ನು ರಕ್ಷಿಸುತ್ತದೆ, ಆದರೆ ಅನೈತಿಕ ಸಂಬಂಧಗಳನ್ನು ಗುರುತಿಸಲು ಅನುಮತಿಸುವುದಿಲ್ಲ ಎಂದು ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಹೇಳಿದೆ. ಇಂತಹ ಸಂಬಂಧಗಳು ಭಾರತೀಯ ಸಮಾಜ ಮತ್ತು ಕುಟುಂಬ ಮೌಲ್ಯಗಳಿಗೆ ವಿರುದ್ಧವೆಂದು ಪರಿಗಣಿಸಲಾಗುತ್ತದೆ.
'ಸಹೋದರ ಮತ್ತು ಸಹೋದರಿಯ ನಡುವಿನ ಸಂಬಂಧವು ಅಮಾನ್ಯ' ಎಂದು ನ್ಯಾಯಾಲಯ ಹೇಳಿದ್ದು, ಲಿವ್ ಇನ್ ಬಗ್ಗೆ ಕಾನೂನು ದೃಷ್ಟಿಕೋನ ಭಾರತದಲ್ಲಿ ಸಹಜೀವನದ ಸಂಬಂಧಕ್ಕೆ ಕಾನೂನು ಮಾನ್ಯತೆ ಇದೆ, ಆದರೆ ಇದು ವಯಸ್ಕರು, ಅವಿವಾಹಿತರು ಮತ್ತು ಸಮ್ಮತಿಯಿಂದ ವಾಸಿಸುವ ಪುರುಷ ಮತ್ತು ಮಹಿಳೆಗೆ ಮಾತ್ರ ಅನ್ವಯಿಸುತ್ತದೆ. ಯಾವುದೇ ಸಂಬಂಧವು ವಿವಾಹ ಸಂಸ್ಥೆಗೆ ಧಕ್ಕೆ ತಂದರೆ ಅಥವಾ ಸಾಮಾಜಿಕ ಮತ್ತು ನೈತಿಕ ಮೌಲ್ಯಗಳಿಗೆ ವಿರುದ್ಧವಾಗಿದ್ದರೆ, ಅದನ್ನು ಕಾನೂನಿನ ರಕ್ಷಣೆ ಪಡೆಯಲು ಸಾಧ್ಯವಿಲ್ಲ. ಈ ಪ್ರಕರಣದಲ್ಲಿ, ಭಾರತೀಯ ಒಪ್ಪಂದ ಕಾಯ್ದೆಯ ಸೆಕ್ಷನ್ 23 ಅನ್ನು ಉಲ್ಲೇಖಿಸಿ ನ್ಯಾಯಾಲಯವು ಅರ್ಜಿದಾರ ಮತ್ತು ಆತನ ಸಹೋದರಿಯ ನಡುವಿನ ಸಂಬಂಧವು 'ಮೊದಲಿನಿಂದಲೂ ಅಮಾನ್ಯ' ಎಂದು ಹೇಳಿದೆ.
ಧಾರಾವಾಹಿಯಲ್ಲಿ ಅಣ್ಣ-ತಂಗಿ, ನಿಜ ಜೀವನದಲ್ಲಿ ಗಂಡ-ಹೆಂಡತಿಯಾದ ಕನ್ನಡದ ಜೋಡಿ, ಹನಿಮೂನ್‌ಗೆ ಮಾತ್ರ ಕಂಡೀಷನ್!
ಅನೈತಿಕ ಕೃತ್ಯಗಳನ್ನು ಕಾನೂನುಬದ್ಧಗೊಳಿಸಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶರು ಹೇಳಿದರು. ಈ ತೀರ್ಪಿನ ಮೂಲಕ, ಕಾನೂನನ್ನು ದುರುಪಯೋಗಪಡಿಸಿಕೊಂಡು ಅನೈತಿಕ ಕೃತ್ಯಗಳನ್ನು ಕಾನೂನುಬದ್ಧಗೊಳಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಯಾವುದೇ ಮಹಿಳೆ ತನ್ನ ವಿವಾಹದಿಂದ ತೃಪ್ತರಾಗದಿದ್ದರೆ, ಅವರು ಕಾನೂನು ಪ್ರಕ್ರಿಯೆಯನ್ನು ಅನುಸರಿಸಬೇಕು, ಕಾನೂನುಬಾಹಿರ ಮಾರ್ಗಗಳನ್ನು ಆಶ್ರಯಿಸಬಾರದು ಎಂದು ನ್ಯಾಯಾಲಯವು ಹೇಳಿದೆ.
ಪಿಯು ಕಾಲೇಜಿಗೆ ಹೋಗುವ ತಂಗಿಯನ್ನು 7 ತಿಂಗಳ ಗರ್ಭಿಣಿ ಮಾಡಿದ ಅಣ್ಣ!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.