'ಬಾಯ್‌ಫ್ರೆಂಡ್ ಜೊತೆಗಿನ ಮೊದಲ ಆಕ್ಸಿಡೆಂಟ್'; ಫೋಟೋ ಹಂಚಿಕೊಂಡ ಯುವತಿ ಗಾಯಕ್ಕೆ ಉಪ್ಪು ಸುರಿದ ನೆಟ್ಟಿಗರು!

Published : Mar 07, 2025, 10:26 AM ISTUpdated : Mar 07, 2025, 10:32 AM IST
'ಬಾಯ್‌ಫ್ರೆಂಡ್ ಜೊತೆಗಿನ ಮೊದಲ ಆಕ್ಸಿಡೆಂಟ್'; ಫೋಟೋ ಹಂಚಿಕೊಂಡ ಯುವತಿ ಗಾಯಕ್ಕೆ ಉಪ್ಪು ಸುರಿದ ನೆಟ್ಟಿಗರು!

ಸಾರಾಂಶ

ಬೈಕ್‌ನಲ್ಲಿ ಹೋಗುವಾಗ ಆಕ್ಸಿಡೆಂಟ್ ಆದ ಪ್ರೇಮಿಗಳು ಗಾಯಗಳೊಂದಿಗೆ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ನಡೆಯಿಂದ ನೆಟ್ಟಿಗರಿಂದ ಟೀಕೆ ವ್ಯಕ್ತವಾಗಿದೆ. ಅಪಘಾತವನ್ನು ಸಂಭ್ರಮಿಸುವ ಈ ಪ್ರವೃತ್ತಿಗೆ ಜನರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಪ್ರೇಮಿಗಳ ಸೆಲೆಬ್ರೇಷನ್‌ಗೆ ಯಾವ ಘಟನೆ ಬಳಸಿಕೊಳ್ಳಬೇಕು ಗೊತ್ತಾಗೊಲ್ವಾ? ಎಲ್ಲ ಪ್ರೇಮಿಗಳು ತಮ್ಮ ಸುಂದರ ಕ್ಷಣಗಳನ್ನು ಮರೆಯದಂತೆ ಎಂದಿಗೂ ನೆನಪಿನಲ್ಲಿ ಉಳಿಯಲೆಂದು ಫೋಟೋ ಹಾಗೂ ವಿಡಿಯೋಗಳನ್ನು ಮಾಡುತ್ತಾರೆ. ಇಲ್ಲೊಬ್ಬ ಯುವತಿ ತನ್ನ ಗೆಳೆಯನೊಂದಿಗೆ ಬೈಕ್‌ನಲ್ಲಿ ಹೋಗುವಾಗ ಆಕ್ಸಿಡೆಂಟ್ ಆಗಿ ಬಿದ್ದು ಗಾಯಗೊಂಡಿದ್ದಾರೆ. ತರಚಿದ ಗಾಯದಿಂದ ಬಳಲುತ್ತಿರುವ ಇಬ್ಬರ ಫೋಟೋವನ್ನು ಸೆರೆ ಹಿಡಿದ ಯುವತಿ ಅದನ್ನು ಸಾಮಾಜಿಕ ಜಾಲತಾಣಕ್ಕೆ ಪೋಸ್ಟ್ ಮಾಡಿಕೊಂಡಿದ್ದಾರೆ. ಇದೀಗ ನೆಟ್ಟಿಗರಿಂದ ಈ ಪ್ರೇಮಿಗಳ ನಡೆಗೆ ಭಾರೀ ಟೀಕೆ ವ್ಯಕ್ತವಾಗುತ್ತಿದೆ.

ಸೋಶಿಯಲ್ ಮೀಡಿಯಾದಲ್ಲಿ ಪ್ರತಿದಿನ ಬೇರೆ ಬೇರೆ ರೀತಿಯ ಪೋಸ್ಟ್‌ಗಳು ವೈರಲ್ ಆಗುತ್ತಿರುತ್ತವೆ. ಯುವಕರು ಹಾಕುವ ಅನೇಕ ವಿಡಿಯೋಗಳು ಮತ್ತು ಫೋಟೋಗಳು ಹಿರಿಯರಿಗೆ ಇಷ್ಟವಾಗುವುದಿಲ್ಲ. ಆದರೆ, ಇಂತಹ ಪೋಸ್ಟ್‌ಗಳು ಬೇಗನೆ ವೈರಲ್ ಆಗುತ್ತವೆ. ಸಾಮಾನ್ಯವಾಗಿ, ಎಲ್ಲ ವಿಷಯಗಳನ್ನು ಲೈಟಾಗಿ ತೆಗೆದುಕೊಳ್ಳುವ ಮತ್ತು ಎಲ್ಲವನ್ನೂ ಕಂಟೆಂಟ್ ಮಾಡುವ ಅನೇಕ ಜನರನ್ನು ನಾವು ಸೋಶಿಯಲ್ ಮೀಡಿಯಾದಲ್ಲಿ ನೋಡಬಹುದು. ಈಗ ಒಂದು ಪೋಸ್ಟ್ ವೈರಲ್ ಆಗಿದೆ. ಇದರ ಬಗ್ಗೆ ದೊಡ್ಡ ಚರ್ಚೆ ನಡೆಯುತ್ತಿದೆ.

ಫೋಟೋದಲ್ಲಿ ಒಬ್ಬ ಯುವತಿ ತನ್ನ ಬಾಯ್‌ಫ್ರೆಂಡ್ ಜೊತೆ ಫೋಟೋ ಹಂಚಿಕೊಂಡಿದ್ದಾಳೆ. 'ಇದು ನಮ್ಮ ಮೊದಲ ಆಕ್ಸಿಡೆಂಟ್' ಎಂದು ಫೋಟೋಗೆ ಕ್ಯಾಪ್ಷನ್ ಹಾಕಿದ್ದಾಳೆ. ಫೋಟೋದಲ್ಲಿ ಹುಡುಗನ ತಲೆಗೆ ಬ್ಯಾಂಡೇಜ್ ಹಾಕಲಾಗಿದೆ. ಹುಡುಗಿಯ ಹಣೆಯ ಮೇಲೂ ಬ್ಯಾಂಡೇಜ್ ಇದೆ. ಇಬ್ಬರೂ ಸೇರಿ ಮಿರರ್ ಸೆಲ್ಫಿ ತೆಗೆದು ಹಂಚಿಕೊಂಡಿದ್ದಾರೆ. 'ಬಾಯ್‌ಫ್ರೆಂಡ್ ಜೊತೆಗಿನ ಮೊದಲ ಆಕ್ಸಿಡೆಂಟ್' ಎಂದು ಫೋಟೋ ಪೋಸ್ಟ್ ಮಾಡಿದ್ದಾರೆ. ಬೇಗ ಗುಣಮುಖರಾಗಿ ಎಂದು ಕಮೆಂಟ್ ಮಾಡುವ ಬದಲು, ಜನ ಕಾಮಿಡಿ ಕಮೆಂಟ್ ಹಾಕಿದ್ದಾರೆ.

ಇದನ್ನೂ ಓದಿ: ಸಾಲ ಮಾಡಿ, ಚಿನ್ನ ಅಡವಿಟ್ಟು 70 ದೋಣಿ ಖರೀದಿಸಿದ್ದೆ: ಕುಂಭಮೇಳದಲ್ಲಿ ಇದೆಲ್ಲವನ್ನೂ ಮೀರಿ ಲಾಭ ಬಂದಿದೆ.

'ಕಂಗ್ರಾಜುಲೇಷನ್ಸ್, ಕಪಲ್ ಗೋಲ್ಸ್, ನೆಕ್ಸ್ಟ್ ಲೆವೆಲ್ ಡೇಟಿಂಗ್, ಮುಂದಿನದಕ್ಕೆ ಕಾಯ್ತಾ ಇದೀವಿ' ಎಂದು ಜನ ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು 'ಮೊದಲ ಅಪಘಾತ ವಾರ್ಷಿಕೋತ್ಸವದ ಶುಭಾಶಯಗಳು, ನಾನು ಮರೆಯುವ ಮೊದಲೇ ನಿಮಗೆ ಶುಭಾಶಯ' ಎಂದಿದ್ದಾರೆ. ಮತ್ತೊಬ್ಬರು, 'ಮೊದಲ ಭೇಟಿ, ಮೊದಲ ಪ್ರೇಮ ನಿವೇದನೆ, ಮೊದಲ ಮುತ್ತಿನ ದಿನಾಂಕ ಸೇರಿ ಕೆಲವು ವಿಶೇಷ ಸಂದರ್ಭಗಳನ್ನು ನೆನಪಿಟ್ಟುಕೊಂಡು ಸಂಭ್ರಮಿಸುತ್ತಾರೆ. ಆದರೆ, ನೀವು ಮೊದಲ ಆಕ್ಸಿಡೆಂಟ್ ಅನ್ನು ಹೀಗೆ ಸಂಭ್ರಮಿಸುತ್ತಿದ್ದೀರಲ್ಲಾ' ಎಂದು ಕಾಮೆಂಟ್ ಮಾಡಿದ್ದಾನೆ.  ಅದೇ ಸಮಯದಲ್ಲಿ, ಯುವಕರು ಎಲ್ಲದಕ್ಕೂ ತಮಾಷೆಯಾಗಿ ಮತ್ತು ಪಕ್ವತೆ ಇಲ್ಲದೆ ಪ್ರತಿಕ್ರಿಯಿಸುತ್ತಾರೆ ಎಂದು ಕೆಲವರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ರಾಜರ ಕಾಲದ ಚಿನ್ನದ ನಾಣ್ಯ ಪತ್ತೆ: ರಾತ್ರಿಯಿಡೀ ಟಾರ್ಚ್ ಹಿಡಿದು ಭೂಮಿ ಅಗೆಯುತ್ತಿರುವ ಗ್ರಾಮಸ್ಥರು!

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಳಗೆದ್ದು .. ನಾಚುತ್ತಲೇ ಮಲಗುವ ಕೋಣೆಯ ರಹಸ್ಯ ಬಹಿರಂಗಪಡಿಸಿದ ಪಿಗ್ಗಿ
ಫೋಟೋ ಹಂಚಿಕೊಂಡು 'ಡಾರ್ಲಿಂಗ್‌..' ಎಂದು ಬರೆದ ಸಾರಾ ತೆಂಡುಲ್ಕರ್‌