
ನನಗೆ ಈಗ ಕೇವಲ 19 ಮಕ್ಕಳು. ಕೊನೆಯ ಮಗಳು ಈಗಷ್ಟೇ ಮಾರ್ಕೆಟ್ಗೆ ಬಂದಿದ್ದಾಳೆ. ಅವಳಿಗೆ 8-9 ತಿಂಗಳಾಗಿದ್ದು ತುಂಬಾ ಮುದ್ದಾಗಿದೆ. ಅಲ್ಹಾ ನನಗೆ ಎಲ್ಲವನ್ನೂ ಕೊಟ್ಟಿದ್ದಾನೆ. ಎಲ್ಲಾ ಮಕ್ಕಳೂ ಚೆನ್ನಾಗಿ ಬೆಳೆಯುತ್ತಿದ್ದಾರೆ. ನಾಲ್ಕು ಪತ್ನಿಯರು ಇದ್ದಾರೆ. ದಿನವೂ ಒಬ್ಬೊಬ್ಬಳ ಜೊತೆ ಇರುತ್ತೇನೆ. ಹೀಗೆ ನೆಮ್ಮದಿಯಿಂದ ಸಂಸಾರ ಸಾಗಿದೆ. ಇನ್ನೇನು ಬೇಕು ಎಂದು ಇಸ್ಲಾಮಿಕ್ ವಿದ್ವಾಂಸ, ಮುಫ್ತಿ ತಾರಿಕ್ ಮಸೂದ್ ಸಂದರ್ಶನವೊಂದರಲ್ಲಿ ಹೇಳಿದ್ದು ಅದೀಗ ವೈರಲ್ ಆಗುತ್ತಿದೆ. ಇವರು 4 ಮದುವೆಗಳಿಂದ 19 ಮಕ್ಕಳನ್ನು ಹೊಂದಿದ್ದಾರೆ, ಅದರಲ್ಲಿ ಅವರು 17 ಮಕ್ಕಳ ಜೈವಿಕ ತಂದೆ, ಮತ್ತು ಇಬ್ಬರು ಮಕ್ಕಳು ಅವರ ಪತ್ನಿಯರು ಅವರ ಹಿಂದಿನ ಮದುವೆಗಳ ಭಾಗವಾಗಿದೆ ಎನ್ನಲಾಗಿದೆ. trunicle ಎನ್ನುವ ಸೋಷಿಯಲ್ ಮೀಡಿಯಾದಲ್ಲಿ ಇವರ ಸಂದರ್ಶನ ಪ್ರಸಾರ ಆಗಿದೆ.
ಅಂದಹಾಗೆ, ಗೂಗಲ್ನಲ್ಲಿ ತಿಳಿಸಿರುವಂತೆ 50 ವರ್ಷದ ತಾರಿಕ್ ಮಸೂದ್ ಧರ್ಮೋಪದೇಶಕ ಮತ್ತು ಲೇಖಕ ಕೂಡ. ಅವರು ಕರಾಚಿಯ ಜಾಮಿಯಾ ತುರ್ ರಶೀದ್‌ನಲ್ಲಿ ದಾರ್ಸ್-ಇ ನಿಜಾಮಿ ಪಠ್ಯಕ್ರಮವನ್ನು ಅಧ್ಯಯನ ಮಾಡಿದ್ದಾರೆ. ಅಲ್ಲಿ ಅವರು ಇಸ್ಲಾಮಿಕ್ ನ್ಯಾಯಶಾಸ್ತ್ರದಲ್ಲಿ ಪರಿಣತಿ ಹೊಂದಿದ್ದಾರೆ. ಅವರು ಕರಾಚಿಯ ಮಸ್ಜಿದ್ ಅಲ್-ಫಲಾಹಿಯಾದ ಇಮಾಮ್ ಆಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಮಸೂದ್ ಅವರು ಕುಟುಂಬ ಕಾನೂನು, ಸಾಮಾಜಿಕ ನೀತಿಶಾಸ್ತ್ರ ಮತ್ತು ಸಮಕಾಲೀನ ಚರ್ಚೆಗಳ ಕುರಿತು ಉರ್ದು ಧರ್ಮೋಪದೇಶಗಳಿಗೆ ಹೆಸರುವಾಸಿಯಾಗಿದ್ದಾರೆ, ಇದು ಡಿಜಿಟಲ್ ವೇದಿಕೆಗಳಲ್ಲಿ, ವಿಶೇಷವಾಗಿ ಯೂಟ್ಯೂಬ್‌ನಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತದೆ. ಅವರ ಉಪದೇಶ ಶೈಲಿ - ಹಾಸ್ಯ, ನೇರ ಅಭಿವ್ಯಕ್ತಿ ಮತ್ತು ಸಾಮಾಜಿಕ ಸಮಸ್ಯೆಗಳ ಕುರಿತು ವ್ಯಾಖ್ಯಾನ - ಪಾಕಿಸ್ತಾನದಲ್ಲಿ ಮತ್ತು ವಲಸೆ ಸಮುದಾಯಗಳಲ್ಲಿ ಹೆಚ್ಚಿನ ಪ್ರೇಕ್ಷಕರನ್ನು ಆಕರ್ಷಿಸಿದೆ. ಶೈಕ್ಷಣಿಕ ಅಧ್ಯಯನಗಳು ಮತ್ತು ಮಾಧ್ಯಮ ವಿಶ್ಲೇಷಣೆಗಳು ಗಮನ ಸೆಳೆಯುತ್ತವೆ ಎನ್ನಲಾಗಿದೆ.
ಅವರು 'ಏಕ್ ಸೆ ಜ್ಯಾದಾ ಶಾದಿಯೋಂ ಕಿ ಜರೂರತ್ ಕ್ಯೂಂ ಅಂದರೆ ಒಂದಕ್ಕಿಂತ ಹೆಚ್ಚಿನ ಮದುವೆಯ ಅವಶ್ಯಕತೆ ಏಕಿದೆ ಎಂಬ ಪುಸ್ತಕದ ಲೇಖಕರು. ಇದರಲ್ಲಿ ಅವರು ಬಹುಪತ್ನಿತ್ವವು ಧಾರ್ಮಿಕವಾಗಿ ಅನುಮೋದಿತವಾಗಿದೆ ಮತ್ತು ಕೆಲವು ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸಬಹುದು ಎಂದು ವಾದಿಸಿದ್ದಾರೆ. ಕುಟುಂಬ ಕಾನೂನು, ಲಿಂಗ ಪಾತ್ರಗಳು, ಧರ್ಮನಿಂದನೆ ಮತ್ತು ರಾಜಕೀಯದ ಕುರಿತು ಅವರ ಅಭಿಪ್ರಾಯಗಳು ಬೆಂಬಲ ಮತ್ತು ಟೀಕೆ ಎರಡನ್ನೂ ಗಳಿಸಿವೆ ಮತ್ತು ಅವರು ಹಲವಾರು ಸಾರ್ವಜನಿಕ ವಿವಾದಗಳಿಗೆ ಗುರಿಯಾಗಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.