ಇವಾಗೆಲ್ಲಾ ಎಲ್‌ಕೆಜಿ ಮಕ್ಕಳು ಸಹ ನನ್ನ ಫ್ರೆಂಡ್ ಅಂತ ಹುಡುಗಿಯನ್ನು ಮನೆಗೆ ಕರೆತರ್ತಾರೆ. ಸ್ಕೂಲ್, ಕಾಲೇಜ್, ಆಫೀಸ್‌ಗೆ ಹೋಗೋ ಸಂದರ್ಭದಲ್ಲಿ ಹುಡುಗರು, ಹುಡುಗಿಯರನ್ನು ಮನೆಗೆ ಕರೆದುಕೊಂಡು ಬರೋದು ಸಾಮಾನ್ಯ. ಆದ್ರೆ ಇಲ್ಲೊಂದೆಡೆ ವಯಸ್ಸು 38 ವರ್ಷ ಆದ್ರೂ ಮಗ, ಮನೆಗೆ ಯಾರೂ ಹುಡುಗಿಯರನ್ನೇ ಕರೆತಂದಿಲ್ಲ ಅಂತ ತಾಯಿ ಆತನನ್ನು ಮನೋವೈದ್ಯರ ಹತ್ರ ಕರ್ಕೊಂಡು ಹೋಗಿದ್ದಾಳೆ.
ಇಷ್ಟಪಟ್ಟು ಸಿಂಗಲ್ ಆಗಿರೋರು ಒಂದಷ್ಟು ಮಂದಿ ಆದ್ರೆ, ಸೂಕ್ತ ಹುಡುಗ ಅಥವಾ ಹುಡುಗಿ ಸಿಗದೆ ಒಬ್ಬಂಟಿಯಾಗಿರೋದು ಇನ್ನಷ್ಟು ಮಂದಿ. ಆದ್ರೂ ಎಲ್ಲರಿಗೂ ಹುಡುಗರು ಅಥವಾ ಹುಡುಗಿಯರು ಫ್ರೆಂಡ್ಸ್ ಅಂತೂ ಇದ್ದೇ ಇರ್ತಾರೆ. ಫ್ಲರ್ಟಿಂಗ್ ಮಾಡೋ ಕೆಲವೊಬ್ಬರಿಗೆ ನಾಲ್ಕೈದು ಮಂದಿ ಗರ್ಲ್‌ಫ್ರೆಂಡ್ಸ್, ಬಾಯ್ ಫ್ರೆಂಡ್ಸ್ ಇರೋದು ಇದೆ. ಅಷ್ಟೇ ಯಾಕೆ, ಇವಾಗೆಲ್ಲಾ ಎಲ್‌ಕೆಜಿ ಮಕ್ಕಳು ಸಹ ನನ್ನ ಫ್ರೆಂಡ್ ಅಂತ ಹುಡುಗಿಯನ್ನು ಮನೆಗೆ ಕರೆತರ್ತಾರೆ. ಸ್ಕೂಲ್, ಕಾಲೇಜ್, ಆಫೀಸ್‌ಗೆ ಹೋಗೋ ಸಂದರ್ಭದಲ್ಲಿ ಹುಡುಗರು, ಹುಡುಗಿಯರನ್ನು ಮನೆಗೆ ಕರೆದುಕೊಂಡು ಬರೋದು ಸಾಮಾನ್ಯ. ಆದ್ರೆ ಇಲ್ಲೊಂದೆಡೆ ವಯಸ್ಸು 38 ವರ್ಷ ಆದ್ರೂ ಮಗ, ಮನೆಗೆ ಯಾರೂ ಹುಡುಗಿಯರನ್ನೇ ಕರೆತಂದಿಲ್ಲ ಅಂತ ತಾಯಿ ಆತನನ್ನು ಮನೋವೈದ್ಯರ ಹತ್ರ ಕರ್ಕೊಂಡು ಹೋಗಿದ್ದಾಳೆ.
ಮದುವೆ (Marriage)ಯಾಗಿ ಜೀವನದಲ್ಲಿ ಸೆಟಲ್ ಆಗುವ ಒತ್ತಡವನ್ನು ಭಾರತದಲ್ಲಿರುವ ಯುವಕ, ಯುವತಿಯರು ಹೆಚ್ಚು ಅನುಭವಿಸುತ್ತಾರೆ. ಪೋಷಕರು, ಸಂಬಂಧಿಕರು ಈ ಒತ್ತಡ (Pressure)ವನ್ನು ಅವರ ಮೇಲೆ ಹೇರುತ್ತಾರೆ. ಆದರೆ, ಹೆತ್ತವರು ಮತ್ತು ಸಂಬಂಧಿಕರು ಮದುವೆಯಾಗಲು ಪಟ್ಟುಬಿಡದ ಈ ಪ್ರವೃತ್ತಿ ನಮ್ಮ ದೇಶಕ್ಕೆ ಮಾತ್ರ ಸೀಮಿತವಾಗಿಲ್ಲ. ಚೀನಾದಲ್ಲಿ, ಒಬ್ಬ ಮಹಿಳೆ ತನ್ನ 38 ವರ್ಷದ ಒಂಟಿ ಮಗನ ಬಗ್ಗೆ ತುಂಬಾ ಕಾಳಜಿ ವಹಿಸಿದಳು. ವಯಸ್ಸು 38 ವರ್ಷವಾದರೂ ಯಾರೊಬ್ಬನನ್ನೂ ಪ್ರೀತಿಸಿದ ಮಗನ (Son) ಮನಸ್ಥಿತಿಯಿಂದ ಗಾಬರಿಗೊಂಡು ಅವನನ್ನು ಪರೀಕ್ಷಿಸಲು ಮನೋವೈದ್ಯಕೀಯ ಆಸ್ಪತ್ರೆಗೆ ಕರೆದೊಯ್ಯಲು ನಿರ್ಧರಿಸಿದಳು.
undefined
ಮದ್ವೆಯಾಗು, ಮದ್ವೆಯಾಗು ಅಂತಾರೆ ಮನೆಯಲ್ಲಿ, ಒಲ್ಲದ ಹೆಣ್ಣು ಒತ್ತಡ ನಿಭಾಯಿಸಿಕೊಳ್ಳೋದು ಹೇಗೆ?
ತಪಾಸಣೆಗಾಗಿ ಮಾನಸಿಕ ಆಸ್ಪತ್ರೆಗೆ ಮಗನನ್ನು ಕರೆದೊಯ್ದ ತಾಯಿ
ಸೌತ್ ಚೀನಾ ಮಾರ್ನಿಂಗ್ ಪೋಸ್ಟ್‌ನ ವರದಿಯ ಪ್ರಕಾರ, ಮಹಿಳೆ 2020 ರಿಂದ ಪ್ರತಿ ವರ್ಷ ಮನೋವೈದ್ಯಕೀಯ ಆಸ್ಪತ್ರೆಯಲ್ಲಿ ತಪಾಸಣೆಗಾಗಿ ತನ್ನ ಮಗನನ್ನು ಕರೆದುಕೊಂಡು ಹೋಗುತ್ತಿದ್ದಳು. ಮಧ್ಯ ಚೀನೀ ಪ್ರಾಂತ್ಯದ ಹೆನಾನ್‌ನ ವಾಂಗ್ ಎಂಬ ವ್ಯಕ್ತಿ ಇತ್ತೀಚೆಗೆ ತನ್ನ ಸಂಕಟವನ್ನು ವೀಡಿಯೊದಲ್ಲಿ ಹಂಚಿಕೊಂಡಿದ್ದಾನೆ, ಇದು ದೇಶದ ಸಾಮಾಜಿಕ ಮಾಧ್ಯಮ ವೆಬ್‌ಸೈಟ್‌ಗಳಲ್ಲಿ ವೈರಲ್ ಆಗಿದ್ದು, ಮದುವೆಯಾಗಲು ಒತ್ತಡದ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ. ವೀಡಿಯೊದಲ್ಲಿ, ವಾಂಗ್ , ತಾನೆಂದು ಹುಡುಗಿಯರನ್ನು ಮನೆಗೆ ಕರೆ ತರಲ್ಲಿಲ್ಲ. ಇದರಿಂದ ತಾಯಿ ತನ್ನ ಮಾನಸಿಕ ಸ್ಥಿತಿಯ (Mental health) ಬಗ್ಗೆ ಭಯಗೊಂಡಿದ್ದಾರೆ ಎಂದು ಹೇಳಿದನು.
ಪ್ರತಿ ವರ್ಷದಂತೆ ಫೆಬ್ರವರಿ 4ರಂದು ಅವರನ್ನು ಹೆನಾನ್ ಪ್ರಾಂತೀಯ ಮನೋವೈದ್ಯಕೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಈ ಬಾರಿ ಅನಿರೀಕ್ಷಿತವಾದದ್ದು ಸಂಭವಿಸಿದೆ. ಮನೋವೈದ್ಯರು ತಮ್ಮ ಮಗನಿಗೆ ಅನಾರೋಗ್ಯವಿಲ್ಲ ಮತ್ತು ಅವಳಿಗೆ ಸಮಸ್ಯೆ (Problem) ಇದೆ ಎಂದು ಹೇಳಿದರು. ವಾಂಗ್ ಅವರ ತಾಯಿಯು ತನ್ನ ಮಗನನ್ನು ಮದುವೆಯಾಗುವಂತೆ ಒತ್ತಾಯಿಸುವ ಮಾನಸಿಕ ಅಸ್ವಸ್ಥತೆಯನ್ನು ಹೊಂದಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಇದೆಂಥಾ ವಿಚಿತ್ರ ಸಂಪ್ರದಾಯ, ಕುಟುಂಬದ ಎಲ್ಲಾ ಸಹೋದರರು ಒಬ್ಬಳನ್ನೇ ಮದ್ವೆಯಾಗ್ತಾರೆ!
ನಾನು ಅವಿವಾಹಿತ ವ್ಯಕ್ತಿಯಾಗಿರಬಾರದು ಎಂದು ನಾನು ಸಾಕಷ್ಟು ಹುಡುಗಿಯರಿಗಾಗಿ ಹುಡುಕಾಟ ನಡೆಸಿದ್ದೇನೆ. ಆದರೆ ಇನ್ನೂ ಜೀವನ ಸಂಗಾತಿಯಾಗಬಹುದಾದ ಸೂಕ್ತ ವ್ಯಕ್ತಿಯನ್ನು ಭೇಟಿ ಮಾಡಿಲ್ಲ. ಇದು ನನ್ನ ತಾಯಿಯನ್ನು ಚಿಂತೆಗೀಡು ಮಾಡಿದೆ. ನಾನು ಮದುವೆಯಾಗದ ಕಾರಣ ನನ್ನ ಅಮ್ಮನಿಗೆ ನಿದ್ರೆ ಬರುವುದಿಲ್ಲ, ಹಾಗಾಗಿ ನಾನು ತುಂಬಾ ಅಸಮಾಧಾನಗೊಂಡಿದ್ದೇನೆ' ಎಂದು ವಾಂಗ್ ತಿಳಿಸಿದರು. ಟೆನಿಸ್ ತರಬೇತುದಾರರಾಗಿ ಕೆಲಸ ಮಾಡುವ ವಾಂಗ್, ತಮ್ಮನ್ನು ಎಲ್ಲರೂ 'ಸೂಪರ್ ಓಲ್ಡ್ ಸಿಂಗಲ್ ಮ್ಯಾನ್" ಎಂಬ ಕರೆಯುತ್ತಾರೆ ಎಂದು ಬಹಿರಂಗಪಡಿಸಿದರು. ಮಾತ್ರವಲ್ಲ ಬೀಜಿಂಗ್‌ನಲ್ಲಿರುವ ಮನೆಯೊಂದರ ಡೌನ್ ಪೇಮೆಂಟ್‌ಗಾಗಿ ಅವರು ಸಾಕಷ್ಟು ಹಣವನ್ನು ಉಳಿಸಿಲ್ಲ. ಹೀಗಾಗಿ ಯಾರು ನನ್ನನ್ನು ಮದುವೆಯಾಗಲು ಬಯಸುತ್ತಿಲ್ಲ ಎಂದರು.