ಎಲ್ಲರೂ ಕನಸು ಕಾಣುವುದು ಸಹಜ. ಆದರೆ ಹೆಣ್ಣುಮಕ್ಕಳಿಗೆ ವಿಚಿತ್ರ ಕನಸು ಇದೆಯಂತೆ. ಅದೂ ಗಂಡನ ಬಗ್ಗೆ. ಇದು ನಿಜಕ್ಕೂ ವಿಚಿತ್ರವೇ. ಇಂಥ ಬಯಕೆ ನಿಮಗೂ ಬಂದಿದ್ಯಾ ನೋಡಿ...
ದೇವರೇ ಎಲ್ಲಾ ಕಷ್ಟಗಳನ್ನೂ ಈ ಹೆಣ್ಣುಜನ್ಮಕ್ಕೆ ಮಾತ್ರ ಯಾಕೆ ಕೊಟ್ಯಪ್ಪಾ ಎಂದು ಬಹುತೇಕ ಹೆಣ್ಣುಮಕ್ಕಳು ಜೀವನದ ಒಂದಿಲ್ಲೊಂದು ದಿನ ಅಂದುಕೊಳ್ಳುವುದು ಇದೆ. ಅದರಲ್ಲಿಯೂ ಮುಟ್ಟಿನ ದಿನಗಳಲ್ಲಿ ಅನುಭವಿಸುವ ಹಿಂಸೆ, ಗರ್ಭವತಿಯಾದಾಗ ಅನುಭವಿಸುವ ನೋವು, ಮನೆಯಲ್ಲಿ ಎಲ್ಲರನ್ನೂ ಸಂಭಾಳಿಸಿಕೊಂಡು ಹೋಗುವುದು ಕಷ್ಟವಾದಾಗ, ಕುಟುಂಬದ ಜವಾಬ್ದಾರಿಯೆಲ್ಲವನ್ನೂ ನಿಭಾಯಿಸಬೇಕಾದ ಪರಿಸ್ಥಿತಿ ಬಂದಾಗ, ತನ್ನ ತವರಿನಲ್ಲಿ ಎಷ್ಟೇ ನೋವಿದ್ದರೂ ಗಂಡ ಮತ್ತು ಆತನ ಕುಟುಂಬಕ್ಕಾಗಿಯೇ ಜೀವನ ಸವೆಸಬೇಕಾಗಿ ಬಂದಾಗ, ಮುದ್ದಿನಿಂದ ಬೆಳೆದು ಗಂಡನ ಮನೆ ಸೇರಬೇಕಾದಾಗ, ಹೆಣ್ಣಿನ ಮೇಲೆ ದಿನನಿತ್ಯ ನಡೆಯುತ್ತಿರುವ ಶೋಷಣೆ, ಚಿತ್ರಹಿಂಸೆ, ಅತ್ಯಾಚಾರ ಗಮನಿಸಿದಾಗ, ಪುರುಷನಷ್ಟು ಸ್ವಾತಂತ್ರ್ಯ ಸಿಗದೇ ಜೀವ ವಿಲವಿಲ ಎಂದಾಗ... ಹೀಗೆ ಹಲವಾರು ಸಂದರ್ಭಗಳಲ್ಲಿ ಪ್ರತಿಯೊಂದು ಹೆಣ್ಣಿಗೂ ಅದ್ಯಾವುದೋ ಒಂದು ಸಂದರ್ಭದಲ್ಲಾದರೂ ನಾನು ಗಂಡಾಗಿ ಹುಟ್ಟಬಾರದಿತ್ತೆ ಎಂದು ಎನಿಸುವುದು ಉಂಟು ಅಲ್ಲವೆ?
ಗಂಡಸಾದವರಿಗೆ ಹೆಣ್ಣಿನ ಜನ್ಮ ಎಷ್ಟು ಸುಂದರ, ಎಲ್ಲಾ ಕಡೆ ಅವರಿಗೇ ಡಿಮ್ಯಾಂಡ್, ಹೆಣ್ಣುಮಕ್ಕಳು ಒಂದು ನಗುಬೀರಿದರೆ ಸಾಕು ಎಲ್ಲಾ ಕೆಲಸ ಆಗುತ್ತದೆ, ನಾವು ಕಷ್ಟಪಟ್ಟು ಹೊರಗೆ ದುಡಿದು ಬರಬೇಕು, ಇವರು ಮನೆಯಲ್ಲಿ ಮೂರು ಹೊತ್ತು ಕುಳಿತು ತಿನ್ನುತ್ತಾರೆ... ಹೀಗೆ ಹೆಣ್ಣಿನ ಬಗ್ಗೆ ಗಂಡಸರಿಗೂ ಹಲವಾರು ರೀತಿಯ ಯೋಚನೆಗಳು ಇರುತ್ತವೆಯಾದರೂ ಹೆಂಗಸರಿಗೆ ಗಂಡಸರ ಬಗೆಗಿನ ಯೋಚನೆಗಳಿಗೆ ಹೋಲಿಸಿದರೆ ಇದು ಕಮ್ಮಿಯೇ. ಹೆಣ್ಣು-ಗಂಡು ಎಷ್ಟೇ ಸಮಾನರು ಎಂದು ಹೇಳುತ್ತಾರೆಯಾದರೂ ಎಷ್ಟೋ ವಿಷಯಗಳಲ್ಲಿ, ಎಷ್ಟೋ ಕ್ಷೇತ್ರಗಳಲ್ಲಿ ತನ್ನ ಪಾಲನ್ನು ಪಡೆಯಲು ಹೆಣ್ಣು ಹರಸಾಹಸ ಮಾಡಬೇಕು ಎನ್ನುವುದೂ ಅಷ್ಟೇ ಸತ್ಯ. ಅದರಲ್ಲಿಯೂ ಕುಟುಂಬದ ವಿಚಾರದಲ್ಲಿ ಹೆಣ್ಣು ಸಂಸಾರದ ಕಣ್ಣು, ಹೆಣ್ಣಿನಿಂದಲೇ ಎಲ್ಲವೂ, ಹೆಣ್ಣು ಭೂಮಿತಾಯಿ, ಸಹನಾಮಯಿ, ಮಾತೃಹೃದಯಿ... ಇತ್ಯಾದಿ ಇತ್ಯಾದಿ ಅತೀ ಎನಿಸುವಷ್ಟು ಬಿರುದಾಂಕಿತಗಳನ್ನು ನೀಡಿ ಎಲ್ಲವನ್ನೂ ಸಹಿಸಿಕೊಂಡು ಇರಮ್ಮಾ ಎಂದೇ ಹೇಳಲಾಗುತ್ತಿದೆ.
undefined
ಮೊಬೈಲ್ಗಾಗಿ ಪ್ರಾಣವನ್ನೇ ಪಣಕ್ಕಿಟ್ಟ ಯುವತಿ? ಕಳ್ಳರ ಹಿಂದೆ ಓಡಿದಾಕೆಯ ಭಯಾನಕ ವಿಡಿಯೋ ವೈರಲ್!
ಇವೆಲ್ಲವುಗಳಿಗಿಂತಲೂ ಭಿನ್ನ ಎನಿಸುವ ಒಂದು ಆಸೆ ಪ್ರತಿಯೊಂದು ಹೆಣ್ಣಿಗೂ ಇರುತ್ತದೆಯಂತೆ. ಅದರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯಾಗುತ್ತದೆ. ಒಂದು ಫೋಟೋ ನೂರೆಂಟು ಕಥೆಗಳನ್ನು ಹೇಳುತ್ತದೆ ಎಂಬಂತೆ ಈಗ ವೈರಲ್ ಆಗಿರೋ ಫೋಟೋ ಕೂಡ ಅದನ್ನೇ ಹೇಳುತ್ತಿದ್ದು, ಇದಕ್ಕೆ ಸಹಸ್ರಾರು ಮಂದಿ ಕಮೆಂಟ್ ಹಾಕಿದ್ದಾರೆ. ಅಷ್ಟಕ್ಕೂ ಏನಪ್ಪಾ ವಿಷ್ಯ ಎಂದರೆ ಬಹುತೇಕ ಹೆಣ್ಣುಮಕ್ಕಳಿಗೆ ತಾವು ಅನುಭವಿಸುವ ನೋವು ಸ್ವಲ್ಪನಾದ್ರೂ ಗಂಡುಮಕ್ಕಳಿಗೆ ದೇವರು ಕೊಡಬಾರದಿತ್ತಾ ಎನ್ನಿಸುವುದು ಉಂಟು. ಅದರಲ್ಲಿ ಮುಖ್ಯವಾಗಿ ಗರ್ಭ ಧರಿಸುವುದು!
ಹೌದು. ಗರ್ಭಧಾರಣೆ ಎನ್ನುವುದು ಪ್ರತಿಯೊಂದು ಹೆಣ್ಣಿನ ಕನಸು. ಅಮ್ಮನಾಗುವ ಹೊತ್ತದು. ತನ್ನದೇ ಕರುಳಬಳ್ಳಿಯನ್ನು, ಇನ್ನೊಂದು ಜೀವಸೆಲೆಯನ್ನು ಭೂಮಿಯ ಮೇಲೆ ತರುವ ಆ ಜವಾಬ್ದಾರಿ, ವಿಶೇಷ ಅನುಭೂತಿ ಈ ಪ್ರಸವ ಎನ್ನುವುದು ಸುಳ್ಳಲ್ಲ. ಆದರೆ ಆ ಒಂಬತ್ತು ತಿಂಗಳು ಎಲ್ಲ ಹೆಣ್ಣುಗಳ ಬಾಳಲ್ಲಿ ಸುಲಭವಾಗಿರುವುದಿಲ್ಲ. ತನ್ನೊಳಗೆ ಇನ್ನೊಂದು ಜೀವ ಬೆಳೆಯುತ್ತಿದೆ ಎಂದಾಗ ತನ್ನ ಎಲ್ಲಾ ಕಾರ್ಯಒತ್ತಡಗಳ ಜೊತೆ ಅದನ್ನು ನಿಭಾಯಿಸುವುದು ಸುಲಭದ ಮಾತಲ್ಲ. ಅದೆಷ್ಟೋ ಮನೆಗಳಲ್ಲಿ ಗಂಡನ ಸಪೋರ್ಟ್ ಕೂಡ ಇರುವುದಿಲ್ಲ. ಗರ್ಭಧಾರಣೆ ಮಾತ್ರವಲ್ಲದೇ, ಮಗುವನ್ನು ಹೆತ್ತ ಬಳಿಕವೂ ಶರೀರದಲ್ಲಿ ಆಗುವ ಬದಲಾವಣೆ, ಮಾನಸಿಕವಾಗಿ ಆಗುವ ಬದಲಾವಣೆ ಎಲ್ಲದಕ್ಕೂ ಹೊಂದಿಕೊಂಡು ಮನೆಯನ್ನೂ ನೋಡಿಕೊಳ್ಳುವುದು ಹೇಳುವಷ್ಟು ಸುಲಭದ ಮಾತೂ ಅಲ್ಲ. ಈ ಕಾರಣಕ್ಕಾಗಿಯೇ ದೇವರು ಗಂಡ-ಹೆಂಡತಿ ಇಬ್ಬರಿಗೂ ಮಗುವನ್ನು ಹೇರುವಂತೆ ಮಾಡಬೇಕಿತ್ತು ಎಂದು ಎಷ್ಟೋ ಹೆಣ್ಣುಮಕ್ಕಳು ಅಂದುಕೊಂಡರೆ, ಅದಕ್ಕಿಂತಲೂ ಹೆಚ್ಚಾಗಿ ಗಂಡನೇ ಗರ್ಭಧಾರಣೆ ಮಾಡಿದ್ದರೆ ಎಷ್ಟು ಚೆನ್ನಾಗಿತ್ತು. ನಾನು ಆತನ ಆರೈಕೆಯನ್ನು ಮಾಡುವಂತಾಗಿದ್ದರೆ ಎಷ್ಟು ಚೆಂದ ಎಂದು ಕನಸು ಕಾಣುತ್ತಾರಂತೆ. ಇದರದ್ದೇ ಫೋಟೋ ಈಗ ವೈರಲ್ ಆಗಿದೆ. ಒಂದೇ ದಿನದಲ್ಲಿ ನಾಲ್ಕೈದು ಸಾವಿರ ಕಮೆಂಟ್ಸ್, ಶೇರ್ ಆಗಿರುವುದನ್ನು ನೋಡಿದರೆ, ಇದೆಷ್ಟು ಮಹಿಳೆಯರ ಕನಸು ಎಂದು ಎನ್ನಿಸದೇ ಇರಲಾರದು. ನೀವು ಏನಂತೀರಿ?
ಹಸಿಬಿಸಿ ದೃಶ್ಯದ ಬಳಿಕ 'ಪೆನ್ಡ್ರೈವ್'ನಲ್ಲಿ ಬಿಗ್ಬಾಸ್ ತನಿಷಾ! ಥೋ ಥೋ... ವಿಡಿಯೋ ವೈರಲ್