ಪ್ರೀತಿ ಅತಿಯಾದಾಗ ಹೀಗೆ ಆಗೋದು? ಕಾರ್‌ನಲ್ಲಿಯೇ ಮುಖಕ್ಕೆ ಪಟ ಪಟ ಅಂತ ಹೊಡೆದಾಡಿಕೊಂಡ ಗಂಡ ಹೆಂಡತಿ

By Mahmad Rafik  |  First Published Sep 9, 2024, 3:15 PM IST

ಕಾರ್‌ನಲ್ಲಿ ಕುಳಿತು ಒಬ್ಬರಿಗೊಬ್ಬರು ಕೆನ್ನೆ ಸವರುತ್ತಾ ರೊಮ್ಯಾನ್ಸ್ ಮಾಡುತ್ತಿದ್ದರು. ಆದರೆ ಈ ಪ್ರೀತಿ ಕೆಲವೇ ಸೆಕೆಂಡ್‌ನಲ್ಲಿ ಜಗಳವಾಗಿ ಬದಲಾಗಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.


ನವದೆಹಲಿ: ಪ್ರೀತಿ ಅತಿಯಾದಾಗ ಏನಾಗುತ್ತೆ ಎಂಬುದಕ್ಕೆ ಇದುವೇ ಸಾಕ್ಷಿ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಪ್ರೀತಿಯಿಂದ ಮುದ್ದಾಡುತ್ತಿದ್ದ ಜೋಡಿ ಹೇಗೆ ಕಿತ್ತಾಡಿಕೊಂಡಿದೆ ಎಂಬುದನ್ನು ನೋಡಬಹುದು. ಒಬ್ಬರಿಗೊಬ್ಬರು ಕೆನ್ನೆ ಸವರುತ್ತಾ ಇಬ್ಬರೂ ಪ್ರೀತಿಯನ್ನು ಹಂಚಿಕೊಳ್ಳುತ್ತಿದ್ದರು. ಆದ್ರೆ ಕೆಲವೇ ಸೆಕೆಂಡ್‌ಗಳಲ್ಲಿ ಇಬ್ಬರು ಕಿತ್ತಾಡಿಕೊಳ್ಳುವ ಸನ್ನವೇಶ ಎದುರಾಗಿದೆ. ಹಾಗಾದ್ರೆ ಈ ಜೋಡಿ ಹೀಗೆ ಕ್ಯಾಮೆರಾ ಮುಂದೆ ಜಗಳ ಮಾಡಿಕೊಂಡಿದ್ದೇಕೆ ಎಂಬುದರ ಮಾಹಿತಿ ಇಲ್ಲಿದೆ. 

ಇನ್ನೂ ಈ ವಿಡಿಯೋ ನೋಡಿದ ನೆಟ್ಟಿಗರು ಪುಣ್ಯಕ್ಕೆ ಕಾರ್ ಚಲಿಸುತ್ತಿರಲಿಲ್ಲ. ಕಾರ್ ಚಲಿಸುತ್ತಿದ್ದರೆ ಖಂಡಿತ ಅಪಘಾತ ಆಗುತ್ತಿತ್ತು. ಕೆಲವೊಮ್ಮೆ ಏನೂ ಕಾರಣ ಇಲ್ಲದೇ ಜಗಳ ಹೇಗೆ ನಡೆಯುತ್ತೆ ಎಂಬುದಕ್ಕೆ ಇದು ಒಳ್ಳೆಯ ಉದಾಹರಣೆಯಾಗಿದೆ. ಈ ವಿಡಿಯೋವನ್ನು ತಮಾಷೆಗಾಗಿ ಮಾಡಲಾಗಿದೆ ಎಂದು ವರದಿಯಾಗಿದೆ. ಹಾಗಾಗಿ ಈ ವಿಡಿಯೋವನ್ನು ನೋಡಿ ಆನಂದಿಸಿ. ಇಬ್ಬರ ಮಧ್ಯೆ ಅಂತಹ ಜಗಳವೇನೂ ನಡೆದಿಲ್ಲ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಆದರೂ ನೆಟ್ಟಿಗರು ಮಾತ್ರ ಇವರಿಬ್ಬರನ್ನು ಗಂಡ ಹೆಂಡತಿ ಎಂದೇ ಪರಿಗಣಿಸಿ ಪೋಸ್ಟ್‌ಗೆ ಕಮೆಂಟ್ ಮಾಡುತ್ತಿದ್ದಾರೆ.

Tap to resize

Latest Videos

undefined

ಇಡೀ ಊರಿನ ಮುಂದೆಯೇ ಗಂಡ-ಹೆಂಡತಿ ಬಟ್ಟೆ ಬಿಚ್ಚಿ, ಗ್ರಾಮಸ್ಥರಿಂದ ನೀಚ ಕೆಲಸ; ಇವರಿಗೆ ಇದೇ ಶಿಕ್ಷೆ ಅಂದ್ರು!

ಕೆಲವರು ಈ ವಿಡಿಯೋಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಕಮೆಂಟ್ ಮಾಡಿದ್ದಾರೆ. ಇಂತಹ ವಿಡಿಯೋಗಳು ಕೌಟುಂಬಿಕ ಕಿರುಕುಳಕ್ಕೆ ಪ್ರೋತ್ಸಾಹ ನೀಡುತ್ತವೆ. ಇದು ನಿಮಗೆ ತಮಾಷೆಯ ವಿಡಿಯೋ ಆಗಿರಬಹುದು. ಬೇರೆ ಬೇರೆ ಶೀರ್ಷಿಕೆಯಡಿಯಲ್ಲಿ ವಿಡಿಯೋ ಶೇರ್ ಮಾಡಿಕೊಳ್ಳಬಹುದು. ಈ ರೀತಿಯಾದಾಗ ವಿಡಿಯೋ ಅನರ್ಥಗಳು ಉಂಟಾಗಬಹುದು. ಆದ್ದರಿಂದ ಸೋಶಿಯುಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಕಂಟೆಂಟ್ ಆಯ್ಕೆ ಮಾಡಿಕೊಳ್ಳುವಾಗ ತುಂಬಾ ಎಚ್ಚರಿಕೆಯಿಂದಿರಬೇಕು ಎಂದು ನೆಟ್ಟಿಗರು ಸಲಹೆ ನೀಡಿದ್ದಾರೆ.
 
ವೈರಲ್ ವಿಡಿಯೋದಲ್ಲಿ ಏನಿದೆ?
ಕಾರ್ ಮುಂಭಾಗದ ಆಸನದಲ್ಲಿ ಗಂಡ ಹೆಂಡತಿ ಜೊತೆಯಾಗಿ ಕುಳಿತಿರುತ್ತಾರೆ. ಮಡದಿ ಗಂಡನ ಭುಜಕ್ಕೆ ಒರಗಿ ಕುಳಿತಿರುತ್ತಾಳೆ. ಆಗ ಮಡದಿ ಕೆನ್ನೆ ಮೇಲೆ ಗಂಡ ಮೃದುವಾಗಿ ತಟ್ಟುತ್ತಾನೆ. ಕ್ರಿಯೆಗೆ ಪ್ರತಿಕ್ರಿಯೆ ಎಂಬಂತೆ ಮಡದಿಯೂ ಗಂಡನ ಕೆನ್ನೆ ತಟ್ಟುತ್ತಾಳೆ. ನಂತರ ಗಂಡ ಸ್ಗಲ್ಪ ಜೋರಾಗಿಯೇ ಕೆನ್ನೆಗೆ ತಟ್ಟಿದ್ದಾನೆ. ಇದಕ್ಕೆ ಹೆಂಡತಿಯೂ ಹಾಗೆಯೇ ಮಾಡಿದ್ದಾಳೆ. ಕನ್ನೆ ತಟ್ಟೋದು ಏಟು ಆಗಿ ಬದಲಾಗುತ್ತಿದ್ದಂತೆ ಇಬ್ಬರ ಮಧ್ಯೆ ಜಗಳ ಶುರುವಾಗಿದ್ದು, ದಂಪತಿ ಮುಖಕ್ಕೆ ಪಟಪಟ ಅಂತ ಹೊಡೆದಾಡಿಕೊಂಡಿದ್ದಾರೆ. @thakuraman1111 ಎಕ್ಸ್ ಖಾತೆಯಲ್ಲಿ ವಿಡಿಯೋ ಶೇರ್ ಮಾಡಿಕೊಳ್ಳಲಾಗಿದ್ದು, 9.85 ಲಕ್ಷಕ್ಕೂ ಅಧಿಕ ವ್ಯೂವ್ ಬಂದಿವೆ. 100ಕ್ಕೂ ಅಧಿಕ ಕಮೆಂಟ್‌ಗಳು ಬಂದಿವೆ.

ಒಂದೇ ಹುಡುಗಿಯನ್ನ ಮದುವೆ ಆಗ್ತಾರೆ ಕುಟುಂಬದ ಎಲ್ಲಾ ಸೋದರರು : ಹೀಗೆ ನಿರ್ಧಾರವಾಗುತ್ತೆ ಏಕಾಂತದ ಸಮಯ!

ऐसे ही झगड़ा हो जाता है बीना बात के 😂😂😂 pic.twitter.com/2RQXNSZI7c

— महादेव 🙏🚩 (@thakuraman1111)
click me!