ಮದುವೆ ಎಂಬ ವಿಷ್ಯ ಬಂದಾಗ ಎಲ್ಲರೂ ಗಂಭೀರವಾಗ್ತಾರೆ. ಇದು ಹುಡುಗಾಟಿಕೆ ವಿಷ್ಯವಲ್ಲ. ಯಾಕೆಂದ್ರೆ ಜೀವನ ಪರ್ಯಂತ ಒಟ್ಟಿಗೆ ಇರಬೇಕು. ಕುಟುಂಬ ನಿರ್ವಹಣೆಗೆ ಸಮರ್ಥವಾಗಿರಬೇಕು. ಪ್ರೀತಿ ಜೊತೆ ಅದು ತುಂಬಿದ್ರೆ ಮಾತ್ರ ಮ್ಯಾರೇಜ್ ಗೆ ಓಕೆ ಎನ್ನುತ್ತಾರೆ ಹುಡುಗಿಯರು.
ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು ಎನ್ನುವ ಮಾತಿದೆ. ಮದುವೆ ಮಾಡೋದು ಈಗಿನ ದಿನಗಳಲ್ಲಿ ಸುಲಭದ ಮಾತಲ್ಲ. ಹಿಂದೆ ಗಂಡಿಗೆ ಹೆಣ್ಣು ಸಿಗ್ತಿತ್ತು. ಆದ್ರೆ ಹೆಣ್ಣು ಹೆತ್ತವರಿಗೆ ಮದುವೆ ಮಾಡೋದು ಕಷ್ಟವಾಗಿತ್ತು. ಆದ್ರೀಗ ಗಂಡು ಹೆತ್ತವರಿಗೆ ಮದುವೆ ಮಾಡೋದು ದೊಡ್ಡ ಸವಾಲಾಗಿದೆ. ಮಗನ ಮದುವೆಗೆ ವಧು ಸಿಗೋದು ಕಷ್ಟವಾಗಿದೆ.
ಮದುವೆ (Marriage) ಗೆ ಪ್ರೀತಿ, ಗೌರವ (Respect), ಮನೆತನ ಮಾತ್ರವಲ್ಲ ಹಣ ಕೂಡ ಮುಖ್ಯ. ಹಿಂದಿನಿಂದಲೂ ಸಂಸ್ಕಾರವಂತ ಹುಡುಗಿ ಹಾಗೂ ಹಣವಂತ ಹುಡುಗನ ಹುಡುಕಾಟ ನಡೆಯುತ್ತ ಬಂದಿದೆ. ಮಹಿಳೆ, ಪುರುಷನ ಸಮಾನ ದುಡಿಯುತ್ತಿದ್ದಾಳೆ ನಿಜ. ಆದ್ರೆ ಮದುವೆಯಾದ್ಮೇಲೆ ಆಕೆ ದುಡಿಯಬೇಕೆಂಬ ನಿಯಮವಿಲ್ಲ. ಆದ್ರೆ ಪುರುಷರು ಕೆಲಸ (Work) ಬಿಡಲು ಸಾಧ್ಯವಿಲ್ಲ. ಪುರುಷ ಗಳಿಸಿದ್ರೆ ಮಾತ್ರ ಕುಟುಂಬ ನಿರ್ವಹಣೆ ಸಾಧ್ಯ ಎಂದು ನಂಬಲಾಗಿದೆ. ಹಾಗಾಗಿಯೇ ಪುರುಷನಿಗೆ ಹೆಚ್ಚು ಗಳಿಸುವಂತೆ ಒತ್ತಡ ಹೇರಲಾಗುತ್ತದೆ. ಭಾರತೀಯ ಮ್ಯಾಟ್ರಿಮೋನಿಯಲ್ ಸೈಟ್ Shaadi.com ಪ್ರಕಟಿಸಿದ ಇಂಡಿಯಾಸ್ ಮೋಸ್ಟ್ ಎಲಿಜಿಬಲ್ ನ ಮೊದಲ ಆವೃತ್ತಿಯ ಡೇಟಾ ಪ್ರಕಾರ, ಭಾರತೀಯ ಹುಡುಗಿಯರು ಮದುವೆಗೆ ಮುನ್ನ ಹುಡುಗನ ಸಂಬಳದ ಪಟ್ಟಿ ನೋಡ್ತಾರಂತೆ. ಹೆಚ್ಚು ಗಳಿಸುವ ಹುಡುಗ, ಹುಡುಗಿಯರ ಆಯ್ಕೆಯಲ್ಲಿ ಮೊದಲಿರ್ತಾನೆ ಎಂದು ವರದಿಯಲ್ಲಿ ಹೇಳಲಾಗಿದೆ. ನಿಮಗೂ ಈವರೆಗೆ ಮದುವೆಯಾಗಿಲ್ಲವೆಂದ್ರೆ ನಿಮ್ಮ ಸಂಬಳ ಕಾರಣವಾಗಿರಬಹುದು ನೋಡಿ.
ಈ 6 ವಿಷ್ಯಗಳನ್ನು ಮರೆತ್ರೆ, ಲವ್ ಮ್ಯಾರೇಜ್ ಆದ್ರೂ ಸಂಬಂಧ ಉಳಿಯೋದಿಲ್ಲ
ದಾಂಪತ್ಯದಲ್ಲಿ ಹಣದ ಪಾತ್ರ : ದಂಪತಿಗೆ ಮಾತ್ರವಲ್ಲ ಎಲ್ಲರಿಗೂ ಜೀವನ ನಡೆಸಲು ಹಣ ಬೇಕು. ಬರೀ ಪ್ರೀತಿ, ಗೌರವವಿದೆ ಜೀವನ ನಡೆಸೋಣ ಎಂಬ ಮಾತನ್ನು ಸಿನಿಮಾದಲ್ಲಿ ಕೇಳಲು ಚೆಂದವೇ ಹೊರತು, ವಾಸ್ತವಕ್ಕೆ ಇದು ದೂರವಾಗಿದೆ. ಮದುವೆ ನಂತ್ರ ವೆಚ್ಚ ಹೆಚ್ಚಾಗುತ್ತದೆ. ಹಾಗಾಗಿಯೇ ಮದುವೆಗೆ ಮುನ್ನ ವರ ಎಷ್ಟು ಸಂಪಾದನೆ ಮಾಡ್ತಾನೆ ಎಂಬುದನ್ನು ವಧು ಮನೆಯವರು ಸೂಕ್ಷ್ಮವಾಗಿ ಪರಿಶೀಲನೆ ನಡೆಸ್ತಾರೆ.
ವಿಚ್ಛೇದನಕ್ಕೆ (Divorce) ಕಾರಣವಾಗ್ತಿದೆ ಹಣ : ವ್ಯಕ್ತಿಯೊಬ್ಬನ ಆರ್ಥಿಕ ಪರಿಸ್ಥಿತಿ ಆತನ ದಾಂಪತ್ಯ ಮುರಿದು ಬೀಳಲು ಕಾರಣವಾದ ಎಷ್ಟೋ ಉದಾಹರಣೆ ನಮ್ಮಲ್ಲಿದೆ. ಕುಟುಂಬ, ಮಕ್ಕಳ ನಿರ್ವಹಣೆಗೆ ಹಣದ ಅಗತ್ಯವಿದೆ. ಅದು ಲಭ್ಯವಿಲ್ಲದೆ ಹೋದಾಗ ಗಲಾಟೆ ಶುರುವಾಗುತ್ತದೆ. ಇದೇ ಜಗಳ ವಿಚ್ಛೇದನಕ್ಕೆ ಬಂದು ನಿಲ್ಲುತ್ತದೆ. ಈಗಿನ ಕಾಲದಲ್ಲಿ ಪುರುಷನ ಸಮಾನವಾಗಿ ಮಹಿಳೆ ದುಡಿಯುತ್ತಿದ್ದಾಳೆ. ಆದ್ರೆ ಆಕೆ ತನಗಿಂತ ಕಡಿಮೆ ಗಳಿಸುವ ಗಂಡನನ್ನು ಒಪ್ಪಿಕೊಳ್ಳುವುದಿಲ್ಲ. ತನಗಿಂತ ಹೆಚ್ಚು ಹಣವಂತ ವ್ಯಕ್ತಿಯನ್ನು ಪತಿಯಾಗಿ ಆಯ್ಕೆ ಮಾಡಿಕೊಳ್ಳಲು ಬಯಸ್ತಾಳೆ.
3 Month Rule: ಈ ಫಾರ್ಮುಲಾ ಬಗ್ಗೆ ತಿಳ್ಕೊಂಡ್ರೆ ಬ್ರೇಕಪ್ ಬಳಿಕ ಮುಂದೇನು ಅನ್ನೋದು ತಿಳಿಯುತ್ತೆ!
ಮದುವೆಯಾದ್ಮೇಲೆ ಪುರುಷರೇ ಏಕೆ ಸಂಪಾದನೆ ಮಾಡ್ಬೇಕು? : ಇದು ಈಗಿನ ನಿಯಮವಲ್ಲ. ಅನಾದಿಕಾಲದಿಂದಲೂ ಈ ನಿಮಯ ಜಾರಿಯಲ್ಲಿದೆ. ಮಹಿಳೆ ಮನೆ ಕೆಲಸ ನೋಡಿಕೊಳ್ಳಬೇಕು, ಪುರುಷ ಹೊರಗೆ ದುಡಿದು ಬರಬೇಕೆಂಬ ಪದ್ಧತಿಯಿದೆ. ಈಗ್ಲೂ ಇದನ್ನು ಪಾಲಿಸಿಕೊಂಡು ಬರಲಾಗಿದೆ. ಪುರುಷ ಮನೆಯಲ್ಲಿರುವ, ಪತ್ನಿ ಹೊರಗೆ ದುಡಿಯುವು ಒಂದೊಂದು ಪ್ರಕರಣ ನಮ್ಮ ಕಣ್ಣಿಗೆ ಬಿದ್ರೂ ಸಮಾಜ ಅದನ್ನು ಒಪ್ಪುವುದಿಲ್ಲ. ಸಮಾಜವಿರಲಿ ಕುಟುಂಬಸ್ಥರೇ ಇದಕ್ಕೆ ಸಮ್ಮತಿ ಸೂಚಿಸುವುದಿಲ್ಲ.
ಹುಡುಗಿ ಸಿಗ್ಬೇಕೆಂದ್ರೆ ನೀವು ಎಷ್ಟು ಸಂಪಾದನೆ ಮಾಡ್ಬೇಕು? : ಈ ಪ್ರಶ್ನೆ ಏಳೋದು ಸಹಜ. ಆರ್ಥಿಕವಾಗಿ ಸದೃಢನಾಗಿರಬೇಕೆಂದ್ರೆ ಎಷ್ಟು ಸಂಪಾದನೆ ಮಾಡ್ಬೇಕು ಎಂಬ ಪ್ರಶ್ನೆಗೂ ಉತ್ತರ ಇಲ್ಲಿದೆ. ಭಾರತದ ಬಹುತೇಕ ಹುಡುಗಿಯರು ವಾರ್ಷಿಕವಾಗಿ 7 ಲಕ್ಷದಿಂದ 10 ಲಕ್ಷ ರೂಪಾಯಿ ಸಂಪಾದನೆ ಮಾಡುವ ಹುಡುಗನನ್ನು ಹೆಚ್ಚು ಇಷ್ಟಪಡ್ತಾರಂತೆ. ವಾರ್ಷಿಕ ಸ್ಲ್ಯಾಬ್ ಇದಕ್ಕಿಂತ ಹೆಚ್ಚು- ಕಡಿಮೆಯಾದ್ರೆ ಪುರುಷರ ಅರ್ಹತೆಯಲ್ಲಿ ಕೂಡ ಹೆಚ್ಚು, ಕಡಿಮೆಯಾಗುತ್ತದೆ. ವಾರ್ಷಿಕ 30 ಲಕ್ಷಕ್ಕಿಂತ ಹೆಚ್ಚು ಆದಾಯವಿರುವ ಹುಡುಗನನ್ನು ಮದುವೆಯಾಗಲು ಹುಡುಗಿಯರು ಮೊದಲ ಆದ್ಯತೆ ನೀಡ್ತಾರಂತೆ. ಆರ್ಥಿಕವಾಗಿ ಬಲ ಹೊಂದಿರುವ ಜೊತೆಗೆ ತನ್ನ ಆಸೆ – ಆಕಾಂಕ್ಷೆಗಳಿಗೆ ಮನ್ನಣೆ ನೀಡುವ ಹುಡುಗನನ್ನು ಹುಡುಗಿಯರು ಹೆಚ್ಚು ಇಷ್ಟಪಡ್ತಾರೆಂದು ವರದಿಯಲ್ಲಿ ಹೇಳಲಾಗಿದೆ.