ಇನ್ನೇನು ತಾಳಿ ಕಟ್ಟಬೇಕು ಅನ್ನುವಷ್ಟರಲ್ಲೇ ಮದುವೆ ನಿಂತ ಘಟನೆ ಅದೆಷ್ಟೋ ಇದೆ. ಕುಡಿದು ಬಂದಿದ್ದಾನೆ ಅನ್ನೋ ಕಾರಣಕ್ಕೂ ಮದುವೆ ನಿಂತ ಊದಾಹರಣೆ ಇದೆ. ಆದರೆ ಇಲ್ಲೊಂದು ಮದುವೆಯಲ್ಲಿ ವಧು ಬಹಳ ತಾಳ್ಮೆಯಿಂದ ಸಹಿಸಿಕೊಂಡಿದ್ದಾಳೆ. ಆದರೆ ಕಂಠಪೂರ್ತಿ ಕುಡಿದ ವರ ಈ ಲೋಕದಲ್ಲೇ ಇರಲಿಲ್ಲ. ಕೊನೆಗೆ ಬೇರೆ ದಾರಿ ಕಾಣದ ಮದುವೆ ಕ್ಯಾನ್ಸಲ್ ಮಾಡಿದ ಘಟನೆ ನಡೆದಿದೆ.
ಅಸ್ಸಾಂ(ಮಾ.11); ಎರಡೂ ಕುಟಂಬ ಒಪ್ಪಿ ಮದುವೆ ದಿನಾಂಕ ಫಿಕ್ಸ್ ಮಾಡಿದ್ದಾರೆ. ಎಲ್ಲಾ ಸಿದ್ದತೆ ಮಾಡಲಾಗಿದೆ. ಹುಡುಗನ ಕುರಿತು ಹಲವು ಬಾರಿ ಹುಡುಗಿ ಹಲವು ಪ್ರಶ್ನೆ ಕೇಳಿದ್ದಾಳೆ. ಆದರೆ ಒಳ್ಳೆ ಸಂಬಂಧ, ಒಳ್ಳೆ ಹುಡುಗ ಅನ್ನೋ ಮಾತಿನಲ್ಲೇ ಎಲ್ಲಾ ಮುಗಿಸಿದ್ದಾರೆ. ಮದುವೆ ದಿನ ಮುಹೂರ್ತದ ಸಮಯ ಮೀರುತ್ತಿದೆ. ಅಷ್ಟರಲ್ಲೇ ವರ ತೂರಾಡುತ್ತಾ ಮಂಟಪಕ್ಕೆ ಆಗಮಿಸಿದ್ದಾನೆ. ವರ ನೋಡಿದ ಹುಡುಗಿಯ ಪಿತ್ತ ನೆತ್ತಿಗೇರಿದೆ. ಆದರೆ ಎಲ್ಲವನ್ನೂ ಸಹಿಸಿಕೊಂಡು ಕೂತಿದ್ದಾಳೆ. ಮಂತ್ರಗಳು ಮೊಳಗುತ್ತಿದೆ. ಸಂಪ್ರದಾಯದ ಪ್ರಕಾರ ಒಂದೊಂದೆ ಕಾರ್ಯ ಮಾಡಬೇಕಿದೆ. ಆದರೆ ಕುಡಿದ ಅಮಲಿನಲ್ಲಿ ವರನಿಗೆ ಏನೂ ಅರ್ಥವಾಗುತ್ತಿಲ್ಲ. ಇಷ್ಟೇ ಅಲ್ಲ ನೆಟ್ಟಗೆ ಕುಳಿತುಕೊಳ್ಳಲು ಸಾಧ್ಯವಾಗುತ್ತಿಲ್ಲ. ಕೊನೆಗೆ ಅಲ್ಲೆ ಪಕ್ಕಕ್ಕೆ ವಾಲಿ ನಿದ್ರೆಗೆ ಜಾರಿದ್ದಾನೆ. ಈ ಅವಾಂತರ ನೋಡಿದ ವಧು ತನಗೆ ಈ ಸಂಬಂಧವೇ ಬೇಡ ಎಂದು ಮದುವೆ ಕ್ಯಾನ್ಸಲ್ ಮಾಡಿದ್ದಾಳೆ. ಈ ಘಟನೆ ನಡೆದಿರುವುದು ಅಸ್ಸಾಂನಲ್ಲಿ.
ನಲ್ಬಾರಿ ಜಿಲ್ಲೆಯ ಪ್ರಸೆಂಜಿತ್ ಹಲೋಯಿ ಹಾಗೂ ಆತನ ಕುಟುಂಬ ಡೀಸೆಂಟ್ ಆಗಿ ಹುಡುಗಿ ನೋಡಿ ಮದುವೆ ಫಿಕ್ಸ್ ಮಾಡಿದ್ದಾರೆ. ಹುಡುಗನ ಕುರಿತು ಅವನ ಪೋಷಕರು ಹಾಗೂ ಸಂಬಂಧಿಕರಲ್ಲೇ ಕೇಳಿದ್ದಾರೆ. ಇತ್ತ ಹುಡುಗಿಯ ಕೆಲ ಪ್ರಶ್ನೆಗಳಿಗೆ ಉತ್ತರ ಬಂದಿಲ್ಲ. ಎಲ್ಲಾ ಪ್ರಶ್ನೆಗಳಿಗೂ ಒಳ್ಳೆ ಸಂಬಂಧ, ಒಳ್ಳೆ ಹುಡುಗು. ಸುಮ್ಮನೆ ಕಾರಣ ನೋಡಿ ಒಳ್ಳೆ ಸಂಬಂಧ ಕಳೆದುಕೊಳ್ಳಬೇಡ ಅನ್ನೋ ಮಾತುಗಳು ಕೇಳಿಬಂದಿದೆ.
ನಾವು ಫಸ್ಟ್ ನಾವ್ ಫಸ್ಟ್ ..ಫೋಟೋ ಹುಚ್ಚಿಗೆ ರಣರಂಗವಾದ ಮದ್ವೆ ಮನೆ!
ಎಲ್ಲರ ಒಪ್ಪಿಗೆ ಮೇರೆಗೆ ಮದುವೆ ಫಿಕ್ಸ್ ಮಾಡಲಾಗಿದೆ. ಆದರೆ ಮದುವೆ ದಿನ ಹುಡುಗು ಹಾಗೂ ಆತನ ಕುಟುಂಬದ ಅಸಲಿಯತ್ತು ಬಹಿರಂಗವಾಗಿದೆ. ಮುಹೂರ್ತ ಸಮೀಪಿಸುತ್ತಿದ್ದಂತೆ ಹುಡುಗನ ಕಡೆಯವರು ಮಂಟಪಕ್ಕೆ ಆಗಮಿಸಿದ್ದಾರೆ. ಕಾರಿನಿಂದ ಕಂಠಪೂರ್ತಿ ಕುಡಿದ ಹುಡುಗನಿಗೆ ಕಾರಿನಿಂದ ಇಳಿಯಲು ಸಾಧ್ಯವಾಗುತ್ತಿಲ್ಲ. ಗೆಳೆಯರ ನೆರವಿನಿಂದ ಕಾರಿನಿಂದ ಇಳಿದ ಹುಡುಗ, ತೂರಾಡುತ್ತಾ ಮಂಟಪಕ್ಕೆ ಆಗಮಿಸಿದ್ದಾನೆ.
ಇತ್ತ ಹುಡುಗನ ತಂದೆಯ ಪರಿಸ್ಥಿತಿ ಕೂಡ ಇದಕ್ಕಿಂತ ಭಿನ್ನವಾಗಿರಲಿಲ್ಲ. ಮಂಟಪಕ್ಕೆ ಆಗಮಿಸಿದ ವರನಿಗೆ ಹಲವು ಕ್ರಮಗಳನ್ನು ಮಾಡಬೇಕಿತ್ತು. ಆದರೆ ವರನಿಗೆ ಒಂದೂ ಕ್ರಮ ಮಾಡಲು ಸಾಧ್ಯವಾಗುತ್ತಿಲ್ಲ. ಮಂತ್ರಗಳು ಮೊಳಗುತ್ತಿದೆ. ಆದರೆ ವರನಿಗೆ ಏನೂ ಅರ್ಥವಾಗುತ್ತಿಲ್ಲ. ಕುಂತಲ್ಲೇ ವಾಲುತ್ತಿದ್ದ. ಅರ್ಚಕರು ಬೇಗ ಬೇಗನೆ ಮಂತ್ರ ಪಠಿಸಿದ್ದಾರೆ. ಕ್ರಮಗಳನ್ನು ಬಹುತೇಕ ಮುಗಿಸಿದ್ದಾರೆ. ಆದರೆ ವರನ ಕಂಡೀಷನ್ ಬಿಗಡಾಯಿಸಿದೆ. ಅಲ್ಲೆ ಪಕ್ಕಕ್ಕೆ ವಾಲಿದ. ಬಳಿಕ ಅಲ್ಲೆ ನಿದ್ರೆಗೆ ಜಾರಿದ್ದಾನೆ.
90ರ ವೃದ್ಧನಿಗೆ ಬಂತು ಸಾಲು ಸಾಲು ಮದುವೆ ಪ್ರಪೋಸಲ್, ಕಾರಣ ಇದು!
ಈ ಅವಾಂತರಗಳನ್ನು ನೋಡಿದ ವಧು ಆಕ್ರೋಶಗೊಂಡಿದ್ದಾಳೆ. ತನಗೆ ಈ ಸಂಬಂಧವೇ ಬೇಡ ಎಂದು ವೇದಿಕೆಯಿಂದಲೇ ಹೊರನಡೆದಿದ್ದಾಳೆ. ಮದುವೆ ರದ್ದಾಗಿದೆ. ಹುಡುಗನ ಕಡೆಯವರಲ್ಲಿ ಶೇಕಡಾ 90 ರಷ್ಟು ಮಂದಿ ಕುಡಿದಿದ್ದಾರೆ. ಮದುವೆ ದಿನವೇ ಈ ರೀತಿ ಬಂದರೆ ಉಳಿದ ದಿನದ ಗತಿಯೇನು? ಎಂದು ವಧು ದೂರು ನೀಡಿದ್ದಾಳೆ. ಇಷ್ಟೇ ಅಲ್ಲ ಮದುವೆಗೆ ಆಗಿರುವ ಖರ್ಚು ನೀಡುವಂತೆ ಬೇಡಿಕೆ ಇಟ್ಟಿದ್ದಾಳೆ.