ಮೂಡುಬಿದಿರಿ ಇನ್ಸ್‌ಪೆಕ್ಟರ್ ಸಂದೇಶ್‌ ಕಾಮಕಾಂಡ: 8 ವರ್ಷ ತಾಯಿಯೊಂದಿಗೆ ಸಂಬಂಧ, ಈಗ ಮಗಳ ಮೇಲೂ ಕಣ್ಣು? ಆಡಿಯೋ ವೈರಲ್

Published : Mar 16, 2026, 05:35 PM IST
Moodbidri inspector Sandesh

ಸಾರಾಂಶ

ಮೂಡುಬಿದಿರೆ ಇನ್ಸ್‌ಪೆಕ್ಟರ್ ಸಂದೇಶ್, ಮಹಿಳೆಯೊಂದಿಗೆ 8 ವರ್ಷ ಅನೈತಿಕ ಸಂಬಂಧವಿಟ್ಟುಕೊಂಡು ಇದೀಗ ಆಕೆಯ ಮಗಳ ಮೇಲೂ ಕಣ್ಣು ಹಾಕಿರುವ ಆರೋಪ ಎದುರಿಸುತ್ತಿದ್ದಾರೆ. ಸಂತ್ರಸ್ತ ಮಹಿಳೆ ಇನ್ಸ್‌ಪೆಕ್ಟರ್ ಜೊತೆ ಮಾತನಾಡಿರುವ ಆಡಿಯೋ ವೈರಲ್ ಆಗಿದೆ. ಗೃಹ ಸಚಿವರಿಗೆ ₹50 ಲಕ್ಷ ಕೊಟ್ಟು ಪೋಸ್ಟಿಂಗ್ ಆರೋಪ.

ದಕ್ಷಿಣ ಕನ್ನಡ (ಮಾ.16): ಅರೆಸ್ಟ್ ಮಾಡಿದ ಗಂಡನನ್ನು ಬಿಡುಗಡೆ ಮಾಡುವುದಕ್ಕೆ 25 ಲಕ್ಷ ರೂ. ಕೊಡು ಇಲ್ಲವೇ, ನೀನು ನನ್ನೊಂದಿಗೆ ಮಲಗು ಎಂದು ಡಿಮ್ಯಾಂಡ್ ಮಾಡಿದ್ದ ಮೂಡುಬಿದಿರೆ ಇನ್ಸ್‌ಪೆಕ್ಟರ್ ಸಂದೇಶ್ ಅವರ ಮತ್ತೊಂದು ಆಡಿಯೋ ವೈರಲ್ ಆಗಿದೆ. ಸುಮಾರು 8 ವರ್ಷಗಳ ಕಾಲ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಇವರು, ಈಗ ಆಕೆಯ ಮಗಳನ್ನೂ ಕಾಮ ತೃಷೆಗೆ ಬಳಸಿಕೊಳ್ಳಲು ಮುಂದಾಗಿದ್ದಾನೆ. ಈ ವಿಚಾರ ತಿಳಿದ ಮಹಿಳೆ ಇನ್ಸ್‌ಪೆಕ್ಟರ್ ಸಂದೇಶ್‌ ಅವರೊಂದಿಗೆ ಮಾತನಾಡಿದ ಆಡಿಯೋ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದೆ.

ಸಂತ್ರಸ್ತ ಮಹಿಳೆಯೊಂದಿಗೆ ಇನ್ಸ್‌ಪೆಕ್ಟರ್ ಸಂದೇಶ್ ಮಾತನಾಡಿದ್ದಾರೆನ್ನಲಾದ ಆಡಿಯೋದಲ್ಲಿ 'ನೋಡು ಸಂದೇಶ ನಿನ್ನ ಮರ್ಯಾದೆ ಹಾಳಾಗಬಾರದು ಎನ್ನುವ ಉದ್ದೇಶದಿಂದ ಇಷ್ಟು ವರ್ಷ ನಿನ್ನನ್ನ ಸಹಿಸಿಕೊಂಡಿದ್ದೇನೆ. ನೀನು ನನ್ನೊಂದಿಗೆ 8 ವರ್ಷ ಇದ್ದರೂ ನಾನು ಎಲ್ಲಿಯೂ ದೂರು ಕೊಟ್ಟಿಲ್ಲ. ಈಗ ನನ್ನ ಮಗಳ ಮೇಲೆ ಕಣ್ಣಾಕಿರುವುದು ಸರಿಯಲ್ಲ. ನೀನು ಅವಳ ತಂಟೆಗೆ ಬಂದರೆ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ. ನಿನಗೆ ಒಂದು ಗತಿ ಕಾಣಿಸುತ್ತೇನೆ, ಮಗಳ ತಂಟೆಗೆ ಹೋಗಬೇಡ ಎಂದು ಮಹಿಳೆ ಗಟ್ಟಿ ಧ್ವನಿಯಲ್ಲಿ ಮಗಳ ರಕ್ಷಣೆಗಾಗಿ ಕೂಗಾಡುವುದು ಆಡಿಯೋದಲ್ಲಿದೆ.

ಒಬ್ಬಂಟಿ ಮಹಿಳೆಯರ ಮನೆ ಕಾಂಪೌಂಡ್ ಹಾರುವ ಇನ್ಸ್‌ಪೆಕ್ಟರ್

ಇನ್ನು ರಾತ್ರಿಯಾದರೆ ಸಾಕು ಊರಿನಲ್ಲಿ ರಾತ್ರಿ ಗಸ್ತು ತಿರುಗುತ್ತಾ ಜನರಿಗೆ ರಕ್ಷಣೆ ಕೊಡಬೇಕಾದ ಪೊಲೀಸ್ ಇನ್ಸ್‌ಪೆಕ್ಟರ್ ಸಂದೇಶ್ ಅವರು ಒಬ್ಬಂಟಿಯಾಗಿ ವಾಸವಾಗಿರುವ ಮಹಿಳೆಯ ಮನೆಯ ಕಾಂಪೌಂಡ್ ಅನ್ನು ಹಾರಿ ಮನೆಯೊಳಗೆ ನುಗ್ಗುವ ವಿಡಿಯೋ ಕೂಡ ಲಭ್ಯವಾಗಿದೆ. ಈ ಮಹಿಳೆಯ ಗಂಡ ದುಡಿಮೆಗಾಗಿ ದುಬೈಗೆ ಹೋಗಿದ್ದು, ಇಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಮಹಿಳೆಗೆ ಕಿರುಕುಳ ನೀಡುತ್ತಿದ್ದಾರೆ. ಕಳ್ಳನಂತೆ ಕಾಂಪೌಂಡ್ ಎಗರಿ ಮನೆಯೊಳಗೆ ನುಗ್ಗಿ ಕಿರುಕುಳ ನೀಡುತ್ತಾರೆ. ಇದನ್ನು ಪ್ರತಿಭಟಿಸಿದರೆ, ಗಂಡನಿಗೆ ಹೇಳಿದರೆ ಮಹಿಳೆ ಮರ್ಯಾದೆ ಹೋಗುತ್ತದೆ ಎಂದು ಗುಪ್ತವಾಗಿ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದರೆ ಯಾವುದೇ ಕ್ರಮವೂ ಆಗುತ್ತಿಲ್ಲ.

50 ಲಕ್ಷ ರೂ. ಹಣ ಕೊಟ್ಟು ಪೋಸ್ಟಿಂಗ್

ಈಗಾಗಲೇ ರಾಜ್ಯದಲ್ಲಿ ಹಲವು ಪೊಲೀಸ್ ಅಧಿಕಾರಿಗಳು ಮಹಿಳೆಯೊಂದಿಗೆ ರಾಸಲೀಲೆ ನಡೆಸಿದ ವಿಡಿಯೋಗಳು ವೈರಲ್ ಆಗಿವೆ. ಇದರ ಬೆನ್ನಲ್ಲಿಯೇ ಇದೀಗ ಮೂಡುಬಿದಿರೆ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ಸಂದೇಶ್ ವಿರುದ್ಧವೂ ಮಹಿಳೆರಿಗೆ ಕಿರುಕುಳ ನೀಡುವ ಗಂಭೀರ ಆರೋಪ ಕೇಳಿಬಂದಿದೆ. ಇದೀಗ ಮೂರ್ನಾಲ್ಕು ಮಹಿಳೆಯರು ಇನ್ಸ್‌ಪೆಕ್ಟರ್ ಸಂದೇಶ್ ವಿರುದ್ಧ ದೂರು ನೀಡಿದರೂ ಯಾವುದೇ ಕ್ರಮವೂ ಆಗಿಲ್ಲ. ಈ ಬಗ್ಗೆ ದೂರು ನೀಡಿದ ಮಹಿಳೆಯರಿಗೆ ನೀವು ಪೊಲೀಸ್ ಕಮಿಷನರ್, ಗೃಹ ಸಚಿವರು ಅಥವಾ ಯಾರಿಗೇ ದೂರು ನೀಡಿದರೂ ನನ್ನನ್ನು ಏನೂ ಮಾಡಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ನಾನು ಗೃಹ ಸಚಿವರಿಗೆ 50 ಲಕ್ಷ ರೂ. ಹಣವನ್ನು ಕೊಟ್ಟು ಇಲ್ಲಿಗೆ ಪೋಸ್ಟಿಂಗ್ ಹಾಕಿಸಿಕೊಂಡು ಬಂದಿದ್ದೇನೆ ಎಂದು ಬೆದರಿಕೆ ಹಾಕಿದ್ದಾರೆ. ದೂರು ನೀಡಿದ ಮಹಿಳೆಯರು ರಕ್ಷಣೆ ನೀಡುವ ಪೊಲೀಸ್ ಇಲಾಖೆಯ ಸಿಬ್ಬಂದಿಯಿಂದಲೇ ಲೈಂಗಿಕ ಕಿರುಕುಳ ಅನುಭವಿಸುತ್ತಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಎಲ್ಲರ ಕ್ಷಮಿಸಿ ಬಿಡು: ದಯಾಮರಣಕ್ಕೆ ಅನುಮತಿ ಪಡೆದ ಹರೀಶ್ ರಾಣಾಗೆ ಕುಟುಂಬದ ಕಣ್ಣೀರಿನ ವಿದಾಯ
ಐಶ್ವರ್ಯಾ ರೈ ತರಹ ಇರೋದಕ್ಕೇ ಸಲ್ಮಾನ್ ಖಾನ್ ಚಾನ್ಸ್ ಕೊಟ್ರಾ? ಇಷ್ಟು ವರ್ಷದ ಬಳಿಕ ಸೀಕ್ರೆಟ್ ಬಿಚ್ಚಿಟ್ಟ ಸ್ನೇಹಾ ಉಲ್ಲಾಳ್!