ಸೆಕ್ಸ್ ಜೀವನ ಸುಖಮಯವಾಗಿರಬೇಕು ಎಂದ್ರೆ ನಿಮ್ಮ ದೇಹ ಕೂಡ ಮುಖ್ಯವಾಗುತ್ತದೆ. ಆರೋಗ್ಯವಂತ, ಸ್ಲಿಮ್ ವ್ಯಕ್ತಿ ಬೊಜ್ಜು ಹೊಂದಿರುವ ವ್ಯಕ್ತಿಗಿಂತ ಹೆಚ್ಚು ಸಂತೋಷ ಅನುಭವಿಸಬಲ್ಲ. ಅದೇ ತೂಕ ಹೆಚ್ಚಿರುವ ವ್ಯಕ್ತಿಗೆ ನಾನಾ ಸಮಸ್ಯೆ ಬೆನ್ನು ಹತ್ತುತ್ತದೆ.
ಸ್ಥೂಲಕಾಯ.. ಈಗಿನ ಸಾಮಾನ್ಯ ಸಮಸ್ಯೆಗಳಲ್ಲಿ ಒಂದು. ಬಹುತೇಕರು ಸ್ಥೂಲಕಾಯದಿಂದ ಬಳಲುತ್ತಿದ್ದಾರೆ. ಇದು ನಿಮ್ಮ ದೈಹಿಕ ಆರೋಗ್ಯದ ಮೇಲೆ ಮಾತ್ರವಲ್ಲ ಮಾನಸಿಕ ಹಾಗೂ ಲೈಂಗಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ದೇಹದಲ್ಲಿ ಹಾರ್ಮೋನ್ ಅಸಮತೋಲನದಿಂದಾಗಿ ನಿಮ್ಮ ತೂಕ ಹೆಚ್ಚಾಗುತ್ತದೆ. ಈ ತೂಕ ಲೈಂಗಿಕ ಆಸಕ್ತಿಯನ್ನು ಕಡಿಮೆ ಮಾಡುತ್ತದೆ. ಇದ್ರಿಂದ ಪರಾಕಾಷ್ಠೆ ತಲುಪೋದು ಕೂಡ ಕಷ್ಟವಾಗುತ್ತದೆ. ಜರ್ನಲ್ ಆಫ್ ಹೆಲ್ತ್ ಅಂಡ್ ಸೆಕ್ಸ್ ಗೈಡ್ ಈ ಬಗ್ಗೆ ಸ್ಪಷ್ಟನೆ ನೀಡಿದೆ. ಅದ್ರ ವರದಿ ಪ್ರಕಾರ, ತೂಕ ಹೆಚ್ಚಾದ ಶೇಕಡಾ 30ರಷ್ಟು ಜನರು ಲೈಂಗಿಕ ಡ್ರೈವ್ ನಲ್ಲಿ ಇಳಿಕೆ, ಕಡಿಮೆ ಕಾಮಾಸಕ್ತಿ ಮತ್ತು ಕಳಪೆ ಲೈಂಗಿಕ ಕಾರ್ಯಕ್ಷಮತೆಯಿಂದ ಬಳಲುತ್ತಿದ್ದಾರೆ.
ಸ್ಥೂಲಕಾಯ (Obesity) ದಿಂದ ಹದಗೆಡುವ ಲೈಂಗಿಕ ಜೀವನ (Sex Life) :
ಕಡಿಮೆ ಆಗುವ ಲೈಂಗಿಕ ಬಯಕೆ : ನಿಮ್ಮ ಲೈಂಗಿಕ ಬಯಕೆ ಕಡಿಮೆ ಆಗ್ತಿದೆ ಎಂದಾದ್ರೆ ಅದಕ್ಕೆ ನಿಮ್ಮ ಬೊಜ್ಜು (Obesity) ಕಾರಣ. ಇದು ಹಾರ್ಮೋನ್ ಮೇಲೆ ಪರಿಣಾಮ ಬೀರುತ್ತದೆ. ಕೊಬ್ಬಿನ ಮಟ್ಟ ಹೆಚ್ಚಾದಂತೆ ಬೈಂಡಿಂಗ್ ಗ್ಲೋಬ್ಯುಲಿನ್ ಎಂಬ ರಾಸಾಯನಿಕದ ಬಿಡುಗಡೆ ಹೆಚ್ಚಾಗುತ್ತದೆ. ಇದು ದೇಹದಲ್ಲಿ ಟೆಸ್ಟೋಸ್ಟೆರಾನ್ ಮೇಲೆ ಪರಿಣಾಮ ಬೀರುತ್ತದೆ. ಇದ್ರಿಂದ ಕಾಮಾಸಕ್ತಿ ಕಡಿಮೆ ಆಗುತ್ತದೆ.
ಮದುವೆ ಸುದ್ದಿ ಬೆನ್ನಲ್ಲೇ ವಿಯೆಟ್ನಾಂಗೆ ಹಾರಿದ ರಶ್ಮಿಕಾ-ವಿಜಯ್? ಗುಡ್ ನ್ಯೂಸ್ ಯಾವಾಗ ಕೇಳಿದ ಫ್ಯಾನ್ಸ್!
ದೇಹದಲ್ಲಿ ಶಕ್ತಿ ಕಡಿಮೆ ಆಗುತ್ತದೆ : ನೀವು ಸ್ಥೂಲಕಾಯದಿಂದ ಬಳಲುತ್ತಿರುವ ಜನರನ್ನು ನೋಡಿದ್ರೆ ನಿಮಗೆ ಇದರ ಅರಿವಾಗುತ್ತದೆ. ಅವರು ಸಣ್ಣಪುಟ್ಟ ಕೆಲಸ ಮಾಡಿದ್ರೂ ಬೇಗ ಸುಸ್ತಾಗುತ್ತಾರೆ. ಅವರ ದೇಹದಲ್ಲಿ ಶಕ್ತಿ ಕಡಿಮೆಯಾಗುತ್ತದೆ. ಉಸಿರಾಟದ ತೊಂದರೆ ಮತ್ತು ಆಯಾಸದಂತಹ ರೋಗಲಕ್ಷಣಗಳು ಅವರ ಲೈಂಗಿಕ ಜೀವನವನ್ನು ತೊಂದರೆಗೊಳಿಸುತ್ತವೆ. ಹಾಗಾದಾಗ ಅವರು ದೀರ್ಘಕಾಲ ಲೈಂಗಿಕ ಆನಂದ ಪಡೆಯಲು ಸಾಧ್ಯವಾಗೋದಿಲ್ಲ.
ಕಡಿಮೆಯಾಗುವ ರಕ್ತದ ಹರಿವು : ಸ್ಥೂಲಕಾಯ ನಿಮ್ಮ ರಕ್ತದ ಹರಿವಿನ ಮೇಲೆ ಪ್ರಭಾವ ಬೀರುತ್ತದೆ. ನಿಮ್ಮ ತೂಕ ಹೆಚ್ಚದಂತೆ ಜನನಾಂಗಗಳಲ್ಲಿ ರಕ್ತದ ಹರಿವು ಕಡಿಮೆಯಾಗುತ್ತದೆ. ರಕ್ತನಾಳಗಳು ಕಿರಿದಾಗುತ್ತವೆ. ಇದು ಲೈಂಗಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ.
ರೋಮ್ಯಾನ್ಸ್ ಇಲ್ಲದ ಸಂಭೋಗ : ಲೈಂಗಿಕ ಜೀವನದಲ್ಲಿ ಸ್ಪರ್ಶ ಬಹಳ ಮುಖ್ಯ. ಸಂಗಾತಿ ಬೊಜ್ಜು ಹೊಂದಿದ್ದರೆ ಎಲ್ಲ ಲೈಂಗಿಕ ಭಂಗಿ ಸಾಧ್ಯವಾಗೋದಿಲ್ಲ. ಇದ್ರಿಂದ ಸಂಭೋಗದಲ್ಲಿ ಹೆಚ್ಚಿನ ರೋಮ್ಯಾನ್ಸ್ ಸಿಗೋದಿಲ್ಲ. ಇದ್ರಿಂದ ಲೈಂಗಿಕ ಬಯಕೆ ಕಡಿಮೆಯಾಗುತ್ತದೆ.
ಆತ್ಮವಿಶ್ವಾಸದ ಕೊರತೆ : ಸ್ಥೂಲಕಾಯತೆ ನಿಮ್ಮ ಆತ್ಮವಿಶ್ವಾಸವನ್ನು ಕಡಿಮೆ ಮಾಡುತ್ತದೆ. ನಿಮ್ಮ ದೇಹದ ಮೇಲೆ ನಿಮಗೆ ಕೀಳರಿಮೆ ಶುರುವಾಗುತ್ತದೆ. ಸಂಗಾತಿ ನಿಮ್ಮ ದೇಹದ ಬಗ್ಗೆ ತಮಾಷೆ ಮಾಡಿದ್ರೆ ಎನ್ನುವ ಭಯ ನಿಮಗಿರುತ್ತದೆ. ಇದು ನಿಮ್ಮ ಸಂತೋಷ ಹಾಳುಮಾಡಿ, ಸೆಕ್ಸ್ ಸುಖವನ್ನು ಕಸಿದುಕೊಳ್ಳುತ್ತದೆ.
ಸ್ಥೂಲಕಾಯದಲ್ಲೂ ಸೆಕ್ಸ್ ಆನಂದ ಹೀಗೆ ಪಡೆಯಿರಿ :
ನಿಮ್ಮ ಸಂಗಾತಿ ಅಥವಾ ನೀವು ಸ್ಥೂಲಕಾಯದಿಂದ ಬಳಲುತ್ತಿದ್ದರೆ ಸೆಕ್ಸ್ ಜೀವನದಿಂದ ದೂರ ಓಡಬೇಕಾಗಿಲ್ಲ. ಅದಕ್ಕೆ ತಕ್ಕಂತೆ ನಿಮ್ಮ ಸಂಭೋಗದ ವಿಧಾನವನ್ನು ಬದಲಿಸಿಕೊಳ್ಳಿ. ನಿಮಗೆ ಅನುಕೂಲವಾಗುವ ರೀತಿಯಲ್ಲಿ ಇಬ್ಬರೂ ವರ್ತಿಸಿ. ಲೈಂಗಿಕ ಆಟಿಕೆ, ಪರಸ್ಪರ ಮಾತು ಎಲ್ಲದಕ್ಕೂ ಆದ್ಯತೆ ನೀಡಿ.
ಈ ಆರು ಅಭ್ಯಾಸಗಳು ಶೀಘ್ರದಲ್ಲೇ ನಿಮ್ಮನ್ನ ಶ್ರೀಮಂತರನ್ನಾಗಿಸುತ್ತೆ…
ತೂಕ ಇಳಿಸಿಕೊಳ್ಳಲು ಹೀಗೆ ಮಾಡಿ : ಸ್ಥೂಲಕಾಯ ನಿಮ್ಮ ದೈಹಿಕ ಹಾಗೂ ಲೈಂಗಿಕ ಜೀವನ ಎರಡನ್ನೂ ಹಾಳು ಮಾಡ್ತಿದೆ ಎಂದಾದ್ರೆ ನೀವು ತೂಕ ಇಳಿಸಿಕೊಳ್ಳಲು ಮೊದಲ ಆಧ್ಯತೆ ನೀಡಬೇಕು. ನಿತ್ಯ ವ್ಯಾಯಾಮ, ಯೋಗ, ವಾಕಿಂಗ್, ಆರೋಗ್ಯಕರ ಆಹಾರ, ಆತ್ಮವಿಶ್ವಾಸ ಇಲ್ಲಿ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ನೀವು ಆರೋಗ್ಯಕರವಾಗಿ ತೂಕ ಇಳಿಸಿಕೊಂಡಲ್ಲಿ ನಿಮ್ಮ ಲೈಂಗಿಕ ಜೀವನ ಕೂಡ ಸುಖಮಯವಾಗಿರುತ್ತದೆ.