Relationship Tips: ಸಂಗಾತಿ ಈ ತಪ್ಪು ಮಾಡ್ತಿದ್ರೆ ಗುಡ್ ಬೈ ಹೇಳೋದೇ ಬೆಸ್ಟ್

By Suvarna NewsFirst Published Nov 29, 2022, 5:34 PM IST
Highlights

ಒಂದು ಸಂಬಂಧದಿಂದ ಹೊರ ಬರೋದು ಸುಲಭವಲ್ಲ. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ನೂರಾರು ಬಾರಿ ಆಲೋಚನೆ ಮಾಡ್ಬೇಕು. ಆದ್ರೆ ಸಂಗಾತಿಯ ಕೆಲವೊಂದು ವರ್ತನೆ ಸಹಿಸಿಕೊಳ್ಳಲು ಅಸಾಧ್ಯವಾಗುತ್ತದೆ. ಅಂಥ ಸಂದರ್ಭದಲ್ಲಿ ಸಂಬಂಧ ಮುರಿದುಕೊಳ್ಳುವುದು ಉತ್ತಮ ಆಯ್ಕೆ.
 

ಸಂಬಂಧ ಬಹಳ ಸೂಕ್ಷ್ಮವಾದದ್ದು. ಅದ್ರಿಂದ ಹೊರ ಬರುವುದು ಸುಲಭದ ಕೆಲಸವಲ್ಲ. ದೀರ್ಘಕಾಲದ ಪ್ರೀತಿ ಸಂಬಂಧ ಮುರಿದುಕೊಳ್ಳುವುದು ಎಲ್ಲರಿಗೂ ಕಷ್ಟ.  ಅನೇಕ ಸಂದರ್ಭಗಳಲ್ಲಿ ಸಂಬಂಧದಲ್ಲಿ ಮುಂದುವರೆಯುವುದು ಸವಾಲಾಗುತ್ತದೆ. ಹಾಗಾಗಿ ಆ ವ್ಯಕ್ತಿ ಸಂಬಂಧದಿಂದ ಹೊರಬರುವ ನಿರ್ಧಾರಕ್ಕೆ ಬರ್ತಾನೆ. ಸಂಬಂಧ ಮುರಿದುಕೊಳ್ತಾನೆ. ಪ್ರೀತಿ ಸಂಬಂಧದಲ್ಲಿ ಮುಂದುವರೆಯಲು, ಅದನ್ನು ಉಳಿಸಿಕೊಳ್ಳಲು ಅನೇಕ ಕಾರಣಗಳಿರುತ್ತವೆ. ಅದೇ ಒಂದು ಸಂಬಂಧ ಬಿರುಕು ಬಿಡಲು ಸಣ್ಣ ಜಗಳ ಸಾಕಾಗುತ್ತದೆ. ಇಬ್ಬರ ಮಧ್ಯೆ ಸಣ್ಣಪುಟ್ಟ ಜಗಳ ಸಾಮಾನ್ಯ. ಇದು ಪದೇ ಪದೇ ಸಂಭವಿಸಿದ್ರೆ, ಹೊಂದಾಣಿಕೆ ಇಲ್ಲವೆಂದಾಗ ಸಂಬಂಧದಲ್ಲಿ ಉಳಿದು ಪ್ರಯೋಜನವಿಲ್ಲ. 

ಅನೇಕ ವರ್ಷಗಳಿಂದ ಅವರ ಜೊತೆಗಿರುವ ಕಾರಣ ಅವರ ಮೇಲೊಂದು ವಿಶೇಷ ಪ್ರೀತಿ (Love) ಹುಟ್ಟಿಕೊಂಡಿರುತ್ತದೆ. ಎಷ್ಟೇ ಕಷ್ಟವೆನಿಸಿದ್ರೂ ಅವರ ತಪ್ಪುಗಳನ್ನು ಕ್ಷಮಿಸಲು ಶುರು ಮಾಡ್ತೇವೆ. ಮನಸ್ಸಿಲ್ಲದ ಮನಸ್ಸಿನಲ್ಲಿ ತಪ್ಪುಗಳನ್ನು ಒಪ್ಪಿ ನಡೆಯುವುದು ಭವಿಷ್ಯ (Future) ಕ್ಕೆ ಮುಳುವಾಗುತ್ತದೆ. ನಿಮ್ಮಿಬ್ಬರ ಮಧ್ಯೆ ಎಲ್ಲವೂ ಮುಗಿದಿದೆ ಎಂಬುದರ ಸಂಕೇತವೇನು ಎಂಬುದನ್ನು ನಾವಿಂದು ಹೇಳ್ತೆವೆ.

ದಾಂಪತ್ಯ ಹಳಿ ತಪ್ಪಿದೆ ಎಂಬುದರ ಸಂಕೇತ ಇದು :

ಸುಳ್ಳಿನ ಮನೆ: ಸಂಗಾತಿ (Spouse ) ಮಧ್ಯೆ ಸುಳ್ಳು ಬರಬಾರದು. ಸಂಗಾತಿ ಅನೇಕ ಬಾರಿ ನಿಮ್ಮ ಬಳಿ ಸುಳ್ಳು ಹೇಳಿ ಸಿಕ್ಕಿಬೀಳ್ತಿದ್ದರೆ, ನೀವು ಮುಂದೆ ಕ್ಷಮಿಸುವ ಅಗತ್ಯವಿಲ್ಲ. ತಪ್ಪನ್ನು ಕ್ಷಮಿಸಿದ್ರೆ ಮತ್ತೆ ಅದೇ ಸುಳ್ಳು ರಿಪಿಟ್ ಆಗ್ಬಹುದು. ಇದ್ರಿಂದ ಸಂಬಂಧ ಹಳಸಬಹುದು. ಹಾಗಾಗಿ ಆರಂಭದಲ್ಲಿಯೇ ನೇರವಾಗಿ ಮಾತನಾಡಿ. ಇದ್ರಿಂದಲೂ ಸಮಸ್ಯೆ ಬಗೆಹರಿದಿಲ್ಲವೆಂದ್ರೆ ಆ ಸಂಬಂಧದಿಂದ ಹೊರಗೆ ಬನ್ನಿ. ಇಲ್ಲವೆಂದ್ರೆ ನಿಮ್ಮ ಸಂಗಾತಿ ಸುಳ್ಳಿನ ಮನೆಯಲ್ಲಿ ನಿಮ್ಮನ್ನು ನಾಶ ಮಾಡಬಹುದು. 

ಕರೆ –ಸಂದೇಶಕ್ಕೆ ನಿರ್ಲಕ್ಷ್ಯ: ಕೆಲಸ (Work) ದ ಒತ್ತಡದಲ್ಲಿ ಜನರು ಫೋನ್ ಕರೆ ಸ್ವೀಕರಿಸಲು ಸಾಧ್ಯವಾಗುವುದಿಲ್ಲ. ಅನೇಕ ಬಾರಿ ಸಂದೇಶಗಳನ್ನು ಓದಲು ಸಮಯವಿರುವುದಿಲ್ಲ. ಸಂಬಂಧದಲ್ಲಿ ಈ ಸಮಸ್ಯೆ ಸಾಂದರ್ಭಿಕವಾಗಿ ಸಂಭವಿಸಿದರೆ ಅದು ಸರಿ. ಆದರೆ ನಿಮ್ಮ ಸಂಗಾತಿ ಇದನ್ನು ನಿರಂತರವಾಗಿ ಮಾಡುತ್ತಿದ್ದರೆ, ಮೊದಲು ಕಾರಣವನ್ನು ತಿಳಿಯಲು ಪ್ರಯತ್ನಿಸಿ. ನಿಮ್ಮ ಸಂಗಾತಿಯ ದಿನಚರಿ ಮತ್ತು ಕೆಲಸದ ಬಗ್ಗೆ ನೀವು ತಿಳಿದಿರುವುದು ಬಹಳ ಮುಖ್ಯ. ಕೆಲಸದ ಸಮಯದಲ್ಲಿ ಅವರಿಗೆ ತೊಂದರೆ ನೀಡಬೇಡಿ. ಹಾಗೆ ಅವರಿಗಾಗಿ ಸ್ವಲ್ಪ ಸಮಯ ನೀಡಿ. ಇಷ್ಟಾದ್ಮೇಲೂ ಸಂಗಾತಿ ನಿಮ್ಮ ಸಂದೇಶಗಳು ಮತ್ತು ಕರೆಗಳನ್ನು ನಿರ್ಲಕ್ಷಿಸುತ್ತಾರೆ ಎಂದಾದ್ರೆ, ನಿಮ್ಮ ಜೊತೆ ಮಾತನಾಡುವುದನ್ನು ಮುಂದೂಡುತ್ತಾರೆ ಎಂದಾದ್ರೆ ಎಲ್ಲವೂ ಸರಿಯಿಲ್ಲ ಎಂದೇ ಅರ್ಥ.

ಪ್ರೀತಿ ಅಥವಾ ಸೆಕ್ಸ್‌; ಪುರುಷರ ಪ್ರಕಾರ ಜೀವನದಲ್ಲಿ ಯಾವುದು ಮುಖ್ಯ ?  

ಮಾಜಿ ಬಗ್ಗೆ ನಿರಂತರ ಮಾತು: ನಿಮ್ಮ ಸಂಗಾತಿ ಇದ್ದಕ್ಕಿದ್ದಂತೆ ಮಾಜಿ ಬಗ್ಗೆ ಮಾತನಾಡಲು ಪ್ರಾರಂಭಿಸಿದರೆ ಎಚ್ಚೆತ್ತುಕೊಳ್ಳಿ. ನಿಮ್ಮ ಸಂಗಾತಿಗೆ ನೀವು ಇಷ್ಟವಾಗ್ತಿಲ್ಲ ಎಂದೇ ಇದರ ಅರ್ಥ. ಸಂಗಾತಿ ನಿಮ್ಮನ್ನು ನಿರ್ಲಕ್ಷಿಸುತ್ತಿರುವ ಕಾರಣಕ್ಕೆ ಮಾಜಿ ಹೆಸರು ಬರ್ತಿದೆ. ಈ ಸಂಬಂಧದಲ್ಲಿ ಮುಂದುವರೆದ್ರೆ ಪ್ರಯೋಜನವಿಲ್ಲ.

ಪುಟ್ಟ ವಿಷ್ಯಕ್ಕೆ ದೊಡ್ಡ ಜಗಳ: ನಿಮ್ಮ ಸಂಗಾತಿ ಪುಟ್ಟ ವಿಷ್ಯಕ್ಕೂ ನಿಮ್ಮ ಜೊತೆ ಜಗಳವಾಡ್ತಿದ್ದಾರೆ ಎಂದಾದ್ರೆ ನಿಮ್ಮ ಮೇಲೆ ಅವರಿಗಿರುವ ಭಾವನೆ ಬದಲಾಗಿದೆ ಎಂಬ ಸೂಚನೆಯಾಗಿದೆ. ಸಂಗಾತಿ ಮನಸ್ಸಿನಲ್ಲಿ ಬೇರೆ ಏನೋ ನಡೆಯುತ್ತಿದೆ ಎಂಬ ಸಂಕೇತವಿದು. ಆದಷ್ಟು ಬೇಗ ಪಾಲುದಾರರ ಜೊತೆ ಮಾತನಾಡಿ. ಜಗಳದ ಹಿಂದಿನ ಕಾರಣ ಅಥವಾ ಸಮಸ್ಯೆ ತುಂಬಾ ಸೌಮ್ಯವಾಗಿರುತ್ತದೆ, ಇಬ್ಬರೂ ಕುಳಿತು ಅದನ್ನು ಪರಿಹರಿಸಬಹುದು. ಆದರೆ ಮಾತುಕತೆ ನಂತ್ರವೂ ಇದು ಬಗೆಹರಿಯುತ್ತಿಲ್ಲ, ಸಂಗಾತಿ ವರ್ತನೆ ಬದಲಾಗ್ತಿಲ್ಲ ಎಂದಾದ್ರೆ ದೂರವಾಗುವ ಬಗ್ಗೆ ಆಲೋಚನೆ ಮಾಡೋದು ಒಳ್ಳೆಯದು.

Relationship Tips: ದಾಂಪತ್ಯ ಜೀವನ ಇತರರೊಂದಿಗೆ ಕಂಪೇರ್ ಮಾಡೋದನ್ನು ಬಿಟ್ಬಿಡಿ

ಸಂಗಾತಿಗೆ ದ್ರೋಹ: ನಂಬಿಕೆ ಮೇಲೆ ಸಂಬಂಧ ನಿಂತಿರುತ್ತದೆ. ಸಂಬಂಧದಲ್ಲಿ ನಂಬಿಕೆ ಕಳೆದು ಹೋದ್ರೆ ಅದ್ರಲ್ಲಿ ಮುಂದುವರೆಯುವುದು ಕಷ್ಟ. ಪದೇ ಪದೇ ನಿಮ್ಮ ನಂಬಿಕೆಗೆ ಪೆಟ್ಟು ಬೀಳ್ತಿದ್ದರೆ, ಸಂಗಾತಿ ನಿಮ್ಮನ್ನು ಮೋಸ ಮಾಡ್ತಿದ್ದರೆ ನೀವು ಅವರಿಂದ ದೂರವಾಗುವುದು ಒಳ್ಳೆಯದು. 

click me!