Extramarital Affairs: ಪತಿಯ ಪ್ರೀತಿ ಮೋಸ ತಿಳಿದ್ರೂ ಪತ್ನಿ ಮಾಡಿದ್ದೇನು?

By Suvarna NewsFirst Published Nov 29, 2022, 3:08 PM IST
Highlights

ವಿಚ್ಛೇದನದ ನಿರ್ಧಾರ ತೆಗೆದುಕೊಳ್ಳುವುದು ಸುಲಭವಲ್ಲ. ಆರ್ಥಿಕವಾಗಿ ಬಲವಿರಬೇಕು, ಜನರನ್ನು ಎದುರಿಸುವ ಧೈರ್ಯ ಬೇಕು. ಕೆಲವೊಮ್ಮೆ ವಿಚ್ಛೇದನದ ಮನಸ್ಸಿದ್ದರೂ ಮಕ್ಕಳು, ಹಣ, ಸಮಾಜದ ಭಯ ಹಿಂದೇಟು ಹಾಕುವಂತೆ ಮಾಡುತ್ತದೆ. 
 

ದಾಂಪತ್ಯದ ಸುಖವನ್ನು ಅಕ್ರಮ ಸಂಬಂಧ ಹಾಳು ಮಾಡುತ್ತದೆ. ಪತಿ ಅಥವಾ ಪತ್ನಿ ಅಕ್ರಮ ಸಂಬಂಧ ಹೊಂದಿದ್ದಾರೆ ಎಂಬ ಸತ್ಯ ತಿಳಿದಾಗ ಅದನ್ನು ಸಹಿಸಿಕೊಳ್ಳೋದು ಸುಲಭವಲ್ಲ. ಅದ್ರಲ್ಲೂ ಪತಿ ಮೋಸ ಮಾಡ್ತಿದ್ದಾನೆ ಎಂಬುದು ತಿಳಿದ ನಂತ್ರವೂ ಆತನ ಜೊತೆ ಸಂಸಾರ ನಡೆಸುವುದು ಮತ್ತೊಂದು ಸವಾಲು. ಯಾವುದೇ ಮಹಿಳೆ ಪತಿಯ ದ್ರೋಹವನ್ನು ಸಹಿಸುವುದಿಲ್ಲ. ಆತನಿಂದ ದೂರವಾಗಿ, ನೆಮ್ಮದಿ ಬದುಕು ಬಯಸ್ತಾಳೆ. ಆದ್ರೆ ಇಲ್ಲೊಬ್ಬ ಮಹಿಳೆ ಪತಿಯ ದಾಂಪತ್ಯ ದ್ರೋಹದ ಕಥೆ ಕೇಳಿದ ಮೇಲೆಯೂ ಆತನ ಜೊತೆ ಸಂಸಾರ ನಡೆಸಿದ್ದಾಳೆ. ಆದ್ರೆ ಗಂಡ ಮಾಡಿದ್ದು ಮಾತ್ರ ಆಕೆಗೆ ಮತ್ತಷ್ಟು ನೋವು ತಂದಿದೆ. 

ದ್ರೋಹದ ಕಥೆ ಹೇಳಿದ ಪತಿ: ಇನ್ಸೈಡರ್ ಡಾಟ್ ಕಾಮ್ (Insider.com)  ನಲ್ಲಿ ಮಹಿಳೆ ತನ್ನ ನೋವ (Pain) ನ್ನು ತೋಡಿಕೊಂಡಿದ್ದಾಳೆ. 2015ರ ಕೊನೆಯಲ್ಲಿ ಕೆಲಸ ಮುಗಿಸಿ ಮನೆಗೆ ಬಂದ ಪತಿ ಮೋಸದ ಕಥೆಯನ್ನು ಹೇಳಿದ್ದಾನಂತೆ. ನಿನ್ನನ್ನು ಪ್ರೀತಿ (Love) ಸುತ್ತಿದ್ದೇನೆ, ಬಿಟ್ಟಿರಲು ಸಾಧ್ಯವಿಲ್ಲ. ಮೋಸ ಮಾಡಿದ್ದಕ್ಕೆ ಕ್ಷಮೆಯಿರಲಿ ಎಂದು ಕೇಳಿದ್ದಾನಂತೆ. ನಿನ್ನ ಜೊತೆ ಬಾಳ್ವೆ ಮಾಡಲು ಬಯಸ್ತೇನೆ ಎಂದ ಪತಿ, ನಿನಗಿಷ್ಟವಿಲ್ಲದೆ ಹೋದ್ರೆ ನೀನು ನ್ಯಾಯಕ್ಕಾಗಿ ಹೋರಾಟ ನಡೆಸಬಹುದು ಎಂದಿದ್ದನಂತೆ. ಆದ್ರೆ ಮಹಿಳೆ ಪತಿಯಿಂದ ದೂರವಾಗಲು ಮುಂದಾಗಲಿಲ್ಲವಂತೆ. ಆತನ ಜೊತೆ ಸಂಸಾರ ಮುಂದುವರೆಸುವ ಕಠಿಣ ನಿರ್ಧಾರ ತೆಗೆದುಕೊಂಡಿದ್ದಳಂತೆ. 

ಪತಿ ಮೋಸ ಮಾಡಿದ್ದಾನೆ ಎಂಬುದು ಗೊತ್ತಾದ ಮೇಲೂ ಆತನ ಜೊತೆ ಜೀವನ ನಡೆಸಲು ನಾನು ಮುಂದಾಗಿದ್ದಕ್ಕೆ ಮುಖ್ಯ ಕಾರಣವೆಂದ್ರೆ ನಾನು ಗರ್ಭಿಣಿಯಾಗಿರುವುದು ಎನ್ನುತ್ತಾಳೆ ಮಹಿಳೆ. ಪತಿ ಈ ಸಂಗತಿ ಹೇಳುವ ಎರಡು ವಾರದ ಹಿಂದೆ ನಾನು ಎರಡನೇ ಬಾರಿ ತಾಯಿಯಾಗ್ತಿದ್ದೇನೆ ಎಂಬ ವಿಷ್ಯ ನನಗೆ ಗೊತ್ತಾಗಿತ್ತು ಎನ್ನುತ್ತಾಳೆ ಮಹಿಳೆ. 

ಪ್ರೀತಿ ಅಥವಾ ಸೆಕ್ಸ್‌; ಪುರುಷರ ಪ್ರಕಾರ ಜೀವನದಲ್ಲಿ ಯಾವುದು ಮುಖ್ಯ ?

ಎರಡು ಮಕ್ಕಳ ಸಿಂಗಲ್ ಮದರ್ ಆಗಿ ಜೀವನ ನಡೆಸುವುದು ಸುಲಭವಲ್ಲ. ಆರ್ಥಿಕವಾಗಿ ಹಾಗೂ ಮಾನಸಿಕವಾಗಿ ಇದಕ್ಕೆ ಶಕ್ತಿ ಬೇಕು. ಇದನ್ನು ಮಹಿಳೆ ಯಾರ ಬಳಿಯೂ ಹೇಳಿರಲಿಲ್ಲವಂತೆ. ಇಷ್ಟು ದಿನ ಆತನ ಜೊತೆ ಹೇಗೆ ಸಂಸಾರ ಮಾಡಿದೆ ಎಂದು ಕೆಲವರು ಪ್ರಶ್ನೆ ಮಾಡಿದ್ದರಂತೆ. ಮತ್ತೆ ಕೆಲವರು, ಮೋಸ ಮಾಡಿದ ವ್ಯಕ್ತಿಯನ್ನು ಕೊಲ್ಲಬೇಕೆಂದು ತಮಾಷೆ ಮಾಡಿದ್ದರಂತೆ. ಆದ್ರೆ ನಾನು ಮಾತ್ರ ಈ ವಿಷ್ಯದ ಬಗ್ಗೆ ತುಟಿ ಬಿಚ್ಚಲಿಲ್ಲ ಎನ್ನುತ್ತಾಳೆ ಮಹಿಳೆ. ಆದ್ರೆ 2022ರಲ್ಲಿ ನಾನು ಈ ಬಗ್ಗೆ ಮೌನ ಮುರಿದೆ ಎನ್ನುವ ಮಹಿಳೆ, ಈ ಬಗ್ಗೆ ಎಲ್ಲ ಪ್ರಶ್ನೆಗೆ ಉತ್ತರ ನೀಡಲು ನಾನು ಈಗ ಸಮರ್ಥಳಾಗಿದ್ದೆ ಎನ್ನುತ್ತಾಳೆ. 

ಪತಿ ತನ್ನ ಮೋಸದ ಬಗ್ಗೆ ಹೇಳಿದ ಸಂದರ್ಭದಲ್ಲಿ ನನಗೆ ಬೇರೆ ಯಾವುದೇ ಆಯ್ಕೆ ಕಾಣಿಸಲಿಲ್ಲ. ಕಣ್ಣ ಮುಂದಿದ್ದ ಕೆಟ್ಟ ಆಯ್ಕೆಗಿಂತ ಪತಿ ಜೊತೆ ಜೀವನ ನಡೆಸುವುದು ಯೋಗ್ಯವೆನ್ನಿಸಿತ್ತು. ನನ್ನ ಹಾಗೂ ನನ್ನ ಮಕ್ಕಳ ಸುರಕ್ಷತೆಗಾಗಿ ನಾನು ಈ ನಿರ್ಧಾರ ತೆಗೆದುಕೊಂಡೆ ಎನ್ನುತ್ತಾಳೆ ಮಹಿಳೆ. ಸಮಾಜ, ಆರ್ಥಿಕ ಸ್ಥಿತಿ, ಮಕ್ಕಳು ಎಲ್ಲರೂ ನನಗೆ ಮುಖ್ಯವಾಗಿದ್ದರು. ದ್ರೋಹವಾಗಿದೆ ಎಂದಾಗ ವಿಚ್ಛೇದನ ಪಡೆಯಬೇಕು ಎಂಬುದು ಸುಲಭ. ಆದ್ರೆ ನಿನ್ನನ್ನು ಪ್ರೀತಿಸ್ತೇನೆ ಎಂದಾಗ ವಿಚ್ಛೇದನ ಪಡೆಯದೆ ಬದುಕೋದು ಕಷ್ಟ ಎನ್ನುತ್ತಾಳೆ ಮಹಿಳೆ. 

Sex Life: ಸೆಕ್ಸ್‌ ಲೈಫ್‌ ಚೆನ್ನಾಗಿರಲು ಈ ನ್ಯಾಚುರಲ್ ಟಿಪ್ಸ್ ಟ್ರೈ ಮಾಡಿ

ಪತಿಯ ಮೋಸವನ್ನು ಮುಚ್ಚಿಟ್ಟು ಬದುಕುತ್ತಿದ್ದ ನನ್ನ ಮನಸ್ಸಿಗೆ 2020ರಲ್ಲಿ ಮತ್ತೊಂದು ಆಘಾತವಾಯ್ತು. ಪತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ. ನನ್ನ ಜೀವನದಲ್ಲಿ ಸ್ಥಿರತೆಯಿಲ್ಲ ಎಂಬುದು ನನಗೆ ಅರ್ಥವಾಗಿತ್ತು ಎನ್ನುತ್ತಾಳೆ ಮಹಿಳೆ. ಇದರ ನಂತರ ನಾನು ವಿಷಯಗಳನ್ನು ಹೆಚ್ಚು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲು ಪ್ರಾರಂಭಿಸಿದೆ ಮತ್ತು ನಾನು ಇಲ್ಲಿಯವರೆಗೆ ಮುಚ್ಚಿಟ್ಟ ವಿಷಯಗಳನ್ನು ಬಹಿರಂಗಪಡಿಸಲು ಪ್ರಾರಂಭಿಸಿದೆ ಎನ್ನುತ್ತಾಳೆ ಮಹಿಳೆ. ಹಿಂದಿನ ನನ್ನ ನಿರ್ಧಾರ ಬದಲಿಸಲು ಸಾಧ್ಯವಿಲ್ಲ. ಆದ್ರೆ ನಾನು ಆಗ್ಲೆ ಬೇರೆ ಆಯ್ಕೆ ಆಯ್ದುಕೊಂಡಿದ್ದರೆ ಕಳೆದುಕೊಳ್ಳುವುದು ಕಡಿಮೆಯಾಗಿರುತ್ತಿತ್ತು, ಒಂಟಿತನದ ನೋವು ಕೂಡ ಕಡಿಮೆಯಾಗಿರುತ್ತಿತ್ತು ಎನ್ನುತ್ತಾಳೆ ಆಕೆ.  ನನ್ನ ದುಃಖವನ್ನು ಸ್ನೇಹಿತರ ಜೊತೆ ಹಂಚಿಕೊಳ್ಳದೆ ನಾನು ದೊಡ್ಡ ತಪ್ಪು ಮಾಡಿದೆ. ನನ್ನ ಬಳಿ ಯಾರೇ ಪ್ರಶ್ನೆ ಕೇಳಿದ್ರೂ ಸ್ನೇಹಿತರ ಬಳಿ ನೋವು ಹಂಚಿಕೊಳ್ಳುವ ಸಲಹೆ ನೀಡ್ತೆನೆ. ಆ ಸಂದರ್ಭದಲ್ಲಿ ನನ್ನ ಪತಿಯನ್ನು ನಾನು ನಂಬಿದ್ದರ ಜೊತೆಗೆ ಮೌನವಾಗಿದ್ದು ದೊಡ್ಡ ತಪ್ಪು ಎನ್ನುತ್ತಾಳೆ ಆಕೆ. 

click me!