ಅಂದು 15 ಸಾವಿರ ಫೀಸ್​ಗೆ ಅಮ್ಮ ಬಳೆ ಮಾರಿದ್ರು: ಈಗ 1.9 ಕೋಟಿ ಸಂಬಳ- ಬೆಂಗಳೂರು ಯವಕನ ಹೃದಯಸ್ಪರ್ಶಿ ಬರಹ

Published : Jul 06, 2026, 01:14 PM IST
Manu Agarwal

ಸಾರಾಂಶ

ಬೆಂಗಳೂರು ಮೂಲದ ಮೈಕ್ರೋಸಾಫ್ಟ್ ತಂತ್ರಜ್ಞ ಮನು ಅಗರ್ವಾಲ್, ತಮ್ಮ ಯಶಸ್ಸಿನ ಹಿಂದಿನ ಭಾವನಾತ್ಮಕ ಕಥೆಯನ್ನು ಹಂಚಿಕೊಂಡಿದ್ದಾರೆ. ಕಾಲೇಜು ಶುಲ್ಕಕ್ಕಾಗಿ ತಮ್ಮ ತಾಯಿ ಚಿನ್ನದ ಬಳೆಗಳನ್ನು ಮಾರಿದ್ದನ್ನು ನೆನಪಿಸಿಕೊಂಡ ಅವರು, ಇಂದು 1.9 ಕೋಟಿ ರೂಪಾಯಿ ಸಂಬಳ ಗಳಿಸುತ್ತಿದ್ದು, ತಮ್ಮ ಕುಟುಂಬದ ತ್ಯಾಗವೇ ಯಶಸ್ಸಿಗೆ ಕಾರಣ ಎಂದಿದ್ದಾರೆ.

ಕಠಿಣ ಶ್ರಮದ ಜೊತೆಗೆ ಅದೃಷ್ಟವೂ ಮನುಷ್ಯನ ಜೀವನದ ದಿಕ್ಕೇ ಬದಲಾಗಿ ಬಿಡುತ್ತದೆ. ಎಷ್ಟೋ ಬಾರಿ ಎಷ್ಟೇ ಶ್ರಮ ವಹಿಸಿ ದುಡಿದರೂ ಅದೃಷ್ಟ ಒದಗಿ ಬರುವುದಿಲ್ಲ. ಕೆಲವೊಮ್ಮೆ ಅದೃಷ್ಟ ನಮ್ಮ ಜೊತೆ ಇದ್ದರೂ, ಅದಕ್ಕೆ ತಕ್ಕನಾದ ಪ್ರಯತ್ನ ಮಾಡದೇ ಎಲ್ಲವನ್ನೂ ಕಳೆದುಕೊಳ್ಳುವುದು ಇದೆ. ಆದರೆ ಎರಡೂ ಜೊತೆಗಿದ್ದಾಗ ಏನಾಗುತ್ತದೆ ಎನ್ನುವುದಕ್ಕೆ ಬೆಂಗಳೂರಿನ ಈ ಯುವಕನ ಯಶೋಗಾಥೆಯೇ ಸಾಕ್ಷಿಯಾಗಿದೆ. ಬೆಂಗಳೂರು ಮೂಲದ ಮೈಕ್ರೋಸಾಫ್ಟ್ ತಂತ್ರಜ್ಞ ಮನು ಅಗರ್ವಾಲ್ ಅವರ ಸ್ಟೋರಿ ಇದು. ಸದ್ಯ ಅಮೆರಿಕದ ಸಿಯಾಟಲ್‌ನಲ್ಲಿ ಸುಮಾರು 1.9 ಕೋಟಿ ರೂಪಾಯಿ (US$1.9 ಮಿಲಿಯನ್) ಸಂಬಳ ಗಳಿಸುತ್ತಿರುವ ಇವರು ತಮ್ಮ ಪ್ರಯಾಣದ ಹಿಂದಿನ ಭಾವನಾತ್ಮಕ ಕಥೆಯನ್ನು ಹಂಚಿಕೊಂಡಿದ್ದಾರೆ.

ಕುಟುಂಬವು ತಮ್ಮ ಒಂದು ಸೆಮಿಸ್ಟರ್ ಶುಲ್ಕವನ್ನು ಸಹ ಭರಿಸಲು ಸಾಧ್ಯವಾಗದ ಪರಿಸ್ಥಿತಿಯನ್ನು ಅವರು ನೆನಪಿಸಿಕೊಂಡಿದ್ದಾರೆ. ಶುಲ್ಕ ಭರಿಸುವುದಕ್ಕಾಗಿ ತಮ್ಮ ತಂದೆ ಅಮ್ಮನ ಚಿನ್ನದ ಬಳೆಗಳನ್ನು ಮಾರಾಟ ಮಾಡಿದ್ದನ್ನು ಅವರು ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದೀಗ ಸಾಕಷ್ಟು ವೈರಲ್ ಆಗುತ್ತಿದೆ. ಲಿಂಕ್ಡ್‌ಇನ್ ಪೋಸ್ಟ್‌ನಲ್ಲಿ, ಮೈಕ್ರೋಸಾಫ್ಟ್‌ನ ಹಿರಿಯ ಸಾಫ್ಟ್‌ವೇರ್ ಎಂಜಿನಿಯರ್ ಮನು ಅಗರ್ವಾಲ್ ಅವರು ತಮ್ಮ ಕಾಲೇಜು ದಿನಗಳಲ್ಲಿ ತಮ್ಮ ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ಹಂಚಿಕೊಂಡಿದ್ದಾರೆ. 15,000 ರೂಪಾಯಿಗಾಗಿ ಸೆಮಿಸ್ಟರ್ ಶುಲ್ಕವನ್ನು ಸಹ ಭರಿಸುವುದು ತುಂಬಾ ಕಷ್ಟಕರವಾಗಿತ್ತು ಎಂದು ಹೇಳಿದ್ದಾರೆ.

ಅಮ್ಮನ ಬಳೆ ಮಾರಿದ್ರು

"ನನ್ನ ತಂದೆ ನನ್ನ ಬಿಸಿಎ ಶುಲ್ಕವನ್ನು ಪಾವತಿಸಲು ನನ್ನ ತಾಯಿಯ ಬಳೆಗಳನ್ನು ಮಾರಿದರು. ಪ್ರತಿ ಸೆಮಿಸ್ಟರ್‌ಗೆ 15 ಸಾವಿರ ರೂಪಾಯಿ ಅಷ್ಟೇ ಬೇಕಾಗಿತ್ತು. ಆದರೆ ನಮ್ಮ ಬಳಿ ಅಷ್ಟೊಂದು ಹಣವಿರಲಿಲ್ಲ. ನನ್ನ ಶಿಕ್ಷಣಕ್ಕಾಗಿ ನನ್ನಮ್ಮ ಮೌನವಾಗಿ ತಮ್ಮ ಚಿನ್ನದ ಬಳೆಗಳನ್ನು ತಂದೆಯ ಕೈಗೆ ಇತ್ತರು. ಇರುವ ಒಂದೇ ಆಭರಣವನ್ನು ಕೊಡುವಾಗ ನನ್ನಮ್ಮ ಅಳಲಿಲ್ಲ. ಅವರು ನನ್ನನ್ನು ನೋಡುತ್ತಿದ್ದರು ಅಷ್ಟೇ. ಆ ರಾತ್ರಿ ನನಗೆ ನಿದ್ರೆ ಬರಲಿಲ್ಲ ಎಂದು ಅಂದಿನ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

"ನೀವು ನಿಮ್ಮ ಶಿಕ್ಷಣಕ್ಕಾಗಿ ತ್ಯಾಗ ಮಾಡಿದ ಕುಟುಂಬದಿಂದ ಬಂದಿದ್ದರೆ, ಈ ಪೋಸ್ಟ್ ನಿಮಗಾಗಿ" ಎಂದು ಶೀರ್ಷಿಕೆಯಲ್ಲಿ ಈ ಪೋಸ್ಟ್​ ಹಂಚಿಕೊಂಡಿದ್ದಾರೆ. ಇಂದು ನನ್ನ ವಾರ್ಷಿಕ ಆದಾಯ 1.9 ಕೋಟಿಯದ್ದಾಗಿದೆ. ಇದಾಗಲೇ ನನ್ನ ಅಮ್ಮನಿಗೆ ಬೇಕಾದ ಎಲ್ಲಾ ಆಭರಣಗಳನ್ನೂ ಖರೀದಿಸಲು ಹೇಳಿದ್ದೇನೆ. ಏಕೆಂದರೆ, ನನ್ನ ಇಂದಿನ ಈ ಸ್ಥಿತಿಗೆ ಅಂದು ನನ್ನಮ್ಮ ಕೊಟ್ಟ ಆ ಬಂಗಾರದ ಬಳೆಗಳೇ ಕಾರಣ ಎಂದಿದ್ದಾರೆ ಮನು. ಅವರ ಲಿಂಕ್ಡ್‌ಇನ್ ಪ್ರೊಫೈಲ್ ಪ್ರಕಾರ, ಅಗರ್ವಾಲ್ 2016 ರಲ್ಲಿ ಮೈಕ್ರೋಸಾಫ್ಟ್ ಹೈದರಾಬಾದ್‌ನಲ್ಲಿ ಬೇಸಿಗೆ ಇಂಟರ್ನ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಮೈಕ್ರೋಸಾಫ್ಟ್‌ಗೆ ಪೂರ್ಣ ಸಮಯ ಸೇರುವ ಮೊದಲು, ಅವರು ಬೆಂಗಳೂರಿನ ಜಿಇ ಹೆಲ್ತ್‌ಕೇರ್‌ನಲ್ಲಿಯೂ ಇಂಟರ್ನ್‌ ಆಗಿದ್ದರು.

ಮನು ಅವರ ಹಿನ್ನೆಲೆ

2017 ರಲ್ಲಿ, ಅವರು ಮೈಕ್ರೋಸಾಫ್ಟ್ ಹೈದರಾಬಾದ್‌ನಲ್ಲಿ ಸಾಫ್ಟ್‌ವೇರ್ ಡೆವಲಪ್‌ಮೆಂಟ್ ಎಂಜಿನಿಯರ್ ಆಗಿ ಸೇರಿದರು, ನಂತರ ಅವರು ವಾಷಿಂಗ್ಟನ್‌ನ ರೆಡ್‌ಮಂಡ್‌ಗೆ ತೆರಳಿದರು, ಅಲ್ಲಿ ಅವರು 2020 ರವರೆಗೆ ಕೆಲಸ ಮಾಡಿದರು. ನಂತರ ಅವರು ಗೂಗಲ್ ಬೆಂಗಳೂರಿನಲ್ಲಿ ಎರಡು ವರ್ಷಗಳಿಗೂ ಹೆಚ್ಚು ಕಾಲ ಕಳೆದರು ಮತ್ತು 2025 ರಲ್ಲಿ ಬೆಂಗಳೂರಿನ ಮೈಕ್ರೋಸಾಫ್ಟ್‌ನಲ್ಲಿ ಹಿರಿಯ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಮತ್ತೆ ಸೇರಿದರು. ಇವರ ಈ ಹೃದಯಸ್ಪರ್ಶಿ ಬರಹಕ್ಕೆ ಸಹಸ್ರಾರು ಮಂದಿ ಕಮೆಂಟ್ಸ್​ ಮಾಡುತ್ತಿದ್ದಾರೆ.

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮದುವೆಯಾಗದೇ ಚುಂಬಿಸಿದ್ದಕ್ಕಾಗಿ ಜೋಡಿಗೆ 21 ಛಡಿಯೇಟಿನ ಕ್ರೂರ ಶಿಕ್ಷೆ- ನಾಲ್ಕು ತಿಂಗಳು ಜೈಲು
ಟೀಂ ಇಂಡಿಯಾದ ಈ ಆಟಗಾರನ ಗರ್ಲ್‌ಫ್ರೆಂಡ್‌ ಜತೆ ವೈಭವ್ ಹೆಸರು ಥಳುಕು..! ಏನೋ ಮಾಡಲು ಹೋಗಿ ಇನ್ನೇನೋ ಮಾಡಿದ್ನಾ 15 ವರ್ಷದ ಪೋರಾ?