
ತಮ್ಮ ಕುಟುಂಬ (Family) ದ ಮೇಲೆ ಪ್ರತಿಯೊಬ್ಬರಿಗೂ ವಿಶೇಷ ಪ್ರೀತಿ (Love) ಯಿರುತ್ತದೆ. ಪ್ರತಿಯೊಂದು ವಿಷ್ಯವನ್ನು ಎಲ್ಲರ ಮುಂದೆ ಹಂಚಿಕೊಳ್ಳಲು ಇಷ್ಟಪಡ್ತಾರೆ. ಆದ್ರೆ ಮದುವೆಯ ನಂತ್ರ ಹುಡುಗನಾಗಿರಲಿ ಅಥವಾ ಹುಡುಗಿಯಾಗಿರಲಿ ಕೆಲವೊಂದು ಸೂಕ್ಷ್ಮಗಳನ್ನು ತಿಳಿದುಕೊಂಡಿರಬೇಕು. ಕುಟುಂಬ ಸದಸ್ಯರೊಂದಿಗೆ ಎಲ್ಲವನ್ನೂ ಹಂಚಿಕೊಳ್ಳಬಾರದು. ಇದು ದಾಂಪತ್ಯದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಅದರಲ್ಲೂ ಹೆಣ್ಣುಮಕ್ಕಳು, ಕುಟುಂಬದ ಎಲ್ಲ ವಿಷ್ಯಗಳನ್ನು ಹೇಳುವ ಮೊದಲು ನೂರು ಬಾರಿ ಯೋಚಿಸಬೇಕು. ಹೆಣ್ಮಕ್ಕಳು ತಾಯಿ ಮನೆ ತೊರೆದು ಅತ್ತೆ ಮನೆಗೆ ಬಂದಿರುತ್ತಾರೆ. ಹೊಸ ಜನರ ಜೊತೆ ವಾಸ ಮಾಡುವುದು ಸ್ವಲ್ಪ ಸಮಯ ಕಷ್ಟವಾಗುತ್ತದೆ. ಅವರನ್ನು ಅರ್ಥ ಮಾಡಿಕೊಳ್ಳಲು ಸಮಯ ಬೇಕಾಗುತ್ತದೆ. ಅತ್ತೆ ಹಾಗೂ ಸಂಬಂಧಿಕರ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸಬೇಕು. ಆದ್ರೆ ಅವರೆಲ್ಲರ ವಿಷ್ಯವನ್ನು ತಾಯಿಗೆ ಹೇಳಿದ್ರೆ ಇದು ದಾಂಪತ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿರುತ್ತದೆ.
ಈ ವಿಷ್ಯಗಳನ್ನು ಕುಟುಂಬಸ್ಥರಿಗೆ ಹೇಳ್ಬೇಡಿ :
ಅಮ್ಮನನ್ನು ಕೇಳಿ ಎಲ್ಲ ಕೆಲಸ ಮಾಡ್ಬೇಡಿ : ಮದುವೆ ನಂತ್ರ ತಾಯಿ ಸಹಾಯ ಪಡೆಯುವುದು ತಪ್ಪಲ್ಲ. ಆದ್ರೆ ಯಾವುದಕ್ಕೆ ಸಹಾಯ ಪಡೆಯಬೇಕು, ಯಾವುದಕ್ಕೆ ಪಡೆಯಬಾರದು ಎಂಬುದನ್ನು ತಿಳಿದಿರಬೇಕು. ಎಲ್ಲ ವಿಷ್ಯದ ಬಗ್ಗೆ ತಾಯಿ ಅಭಿಪ್ರಾಯ ಕೇಳುವ ಅಗತ್ಯವಿರುವುದಿಲ್ಲ. ಪತಿ ಹಾಗೂ ಅತ್ತೆ ಜೊತೆ ಹೇಗಿರಬೇಕೆಂದು ಕುಟುಂಬಸ್ಥರನ್ನು ಕೇಳುವ ಅಗತ್ಯವಿಲ್ಲ. ಅದು ನಿಮಗೆ ತಿಳಿದಿರಬೇಕು. ಪೋಷಕರು ತಮ್ಮ ಮಗಳನ್ನು ಆರಾಮದಾಯಕ ವಾತಾವರಣದಲ್ಲಿ ನೋಡಲು ಬಯಸುತ್ತಾರೆ. ಕೆಲವೊಮ್ಮೆ ಅವರು ನೀಡುವ ಸೂಚನೆ ಅತ್ತೆಯ ಮನೆಯವರ ವಿರೋಧಕ್ಕೆ ಕಾರಣವಾಗಬಹುದು.
Father's day: ಲೈಫಿನ ಹೀರೋ ಅಪ್ಪನಿಂಗೆ ಏನು ಗಿಫ್ಟ್ ಕೊಡುತ್ತೀರಿ?
ಅತ್ತೆ ಮನೆ ಬಗ್ಗೆ ವಿವರ : ಪ್ರತಿಯೊಬ್ಬರ ಮನೆಯಲ್ಲೂ, ಮನೆ ಮಂದಿಗೆ ಮಾತ್ರ ತಿಳಿದಿರುವ ಕೆಲ ವಿಷ್ಯಗಳಿರುತ್ತವೆ. ನೀವು ಮದುವೆಯಾಗಿ ಆ ಮನೆಗೆ ಹೋದಾಗ ಅದು ನಿಮಗೂ ತಿಳಿಯುತ್ತದೆ. ಅದನ್ನು ನೀವು ಗುಪ್ತವಾಗಿಯೇ ಇಟ್ಟುಕೊಳ್ಳಬೇಕು. ಅದನ್ನು ನಿಮ್ಮ ತಾಯಿ ಮನೆಯವರಿಗೆ ಹೇಳ್ಬಾರದು. ಯಾಕೆಂದ್ರೆ ಇದ್ರಿಂದ ನಿಮ್ಮ ತಾಯಿ ಮನೆಯವರ ಭಾವನೆ ಬದಲಾಗಬಹುದು. ಅವರು ನಿಮ್ಮ ಅತ್ತೆ ಮನೆಯವರನ್ನು ನೋಡುವ ದೃಷ್ಟಿ ಬದಲಾಗಬಹುದು. ಅತ್ತೆ-ಮಾವಂದಿರು ನಿಮ್ಮ ಮನೆಗೆ ಭೇಟಿ ನೀಡಿದಾಗ ಅವರ ಜೊತೆ ಚೆನ್ನಾಗಿ ವರ್ತಿಸದಿರಬಹುದು. ಹಾಗಾಗಿ ಎಂದಿಗೂ ಅತ್ತೆ ಮನೆ ವಿಷ್ಯವನ್ನು ತಾಯಿ ಮನೆಗೆ ಹೇಳ್ಬೇಡಿ.
ಪ್ರತಿ ದಿನದ ವರದಿ : ಮದುವೆಯಾದ ಕೂಡಲೇ ಅತ್ತೆಯ ಮನೆಗೆ ಹೋದಾಗ ಹೊಸ ವಾತಾವರಣ ಸಿಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಅನೇಕ ಬಾರಿ ನೀವು ಅನೇಕ ವಿಷಯಗಳನ್ನು ನೋಡಿದ ನಂತರ ಅಸಮಾಧಾನಗೊಳ್ಳುತ್ತೀರಿ ಮತ್ತು ನಿಮ್ಮ ಮನೆಗೆ ಕರೆ ಮಾಡಿ ಒಂದೊಂದಾಗಿ ಹೇಳಲು ಪ್ರಾರಂಭಿಸುತ್ತೀರಿ. ಆದ್ರೆ ಇದು ಉತ್ತಮ ಅಭ್ಯಾಸವೆಂದು ಪರಿಗಣಿಸಲಾಗುವುದಿಲ್ಲ. ಕೆಲವೊಂದು ವಿಷ್ಯವನ್ನು ನೀವು ಹೇಳ್ಬಹುದು. ಆದ್ರೆ ಪ್ರತಿ ದಿನ ನಡೆಯುವ ಸಂಗತಿಯನ್ನು ಹೇಳ್ಬೇಕೆಂದೇನಿಲ್ಲ. ಪ್ರತಿದಿನ ಒಂದೊಂದು ಅಪ್‌ಡೇಟ್ ನೀಡಿದರೆ ಅದು ನಿಮ್ಮ ಸಂಬಂಧಕ್ಕೆ ಒಳ್ಳೆಯದಲ್ಲ. ಕೆಲವು ವಿಷಯಗಳನ್ನು ಕೇಳಿದ ತಾಯಿ ನಿಮ್ಮ ಪತಿ ಅಥವಾ ಅತ್ತೆ ಮೇಲೆ ಕೋಪಗೊಳ್ಳಬಹುದು. ಅವರ ವಿರುದ್ಧ ಮಾತನಾಡಬಹುದು. ಅಥವಾ ಅವರ ವಿರುದ್ಧ ವರ್ತಿಸುವಂತೆ ನಿಮಗೆ ಹೇಳಬಹುದು. ಅವರ ಈ ವರ್ತನೆ ನಿಮ್ಮ ಸಂಬಂಧದ ಮೇಲೆ ಪರಿಣಾಮ ಬೀರುತ್ತದೆ.
ಮದ್ವೆಯಾಗಿ 13 ವರ್ಷ ಆಯ್ತು, ಗಂಡ ಬೋರಿಂಗ್ ಅನಿಸ್ತಿದ್ದಾನೆ, ಏನ್ಮಾಡ್ಲಿ?
ಪತಿ ಜೊತೆ ಬೆಡ್ ರೂಮ್ ವಿಷ್ಯ : ದಾಂಪತ್ಯದ ಶುರುವಾದ ಆರಂಭ ದಿನಗಳಲ್ಲಿ ಪ್ರತಿಯೊಂದಕ್ಕೂ ಸಮಯ ಹಿಡಿಯುತ್ತದೆ. ಇಂಟರ್ಕೋರ್ಸ್ ಗೆ ಕೂಡ ಸಮಯ ಹಿಡಿಯುತ್ತದೆ. ಅನ್ಯೋನ್ಯತೆಯ ವಿಷಯ ಗಂಡ ಮತ್ತು ಹೆಂಡತಿ ನಡುವೆ ಮಾತ್ರ ಉಳಿಯಬೇಕು. ಇಂಟರ್ಕೋರ್ಸ್ ವಿಷ್ಯವನ್ನು ನಿಮ್ಮ ತಾಯಿ ಅಥವಾ ಸಹೋದರಿ ಜೊತೆ ಹಂಚಿಕೊಳ್ಳುವುದು ತಪ್ಪು. ನೀವು ಮತ್ತು ನಿಮ್ಮ ಪತಿ ಒಬ್ಬರಿಗೊಬ್ಬರು ಎಷ್ಟು ಆರಾಮದಾಯಕವಾಗಿದ್ದೀರಿ ಎಂದು ಇಬ್ಬರಿಗೆ ಮಾತ್ರ ತಿಳಿದಿರಬೇಕು. ಇದರಲ್ಲಿ ಕುಟುಂಬದವರನ್ನು ಸೇರಿಸಬಾರದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.