ಮದುವೆ ಸ್ವರ್ಗದಲ್ಲಿ ನಿಗದಿಯಾಗಿ ಭೂಮಿ ಮೇಲೆ ನಡೆಯುತ್ತದೆಯಂತೆ. ಈ ಕಂಕಣಭಾಗ್ಯವೆನ್ನುವುದು ಯಾರಿಗೆ ಯಾವಾಗ ಕೂಡಿ ಬರುವುದು ಎಂದು ಹೇಳಲಾಗದು. ಕೆಲವರಿಗೆ ನಿರೀಕ್ಷೆಯೂ ಮಾಡಿರದ ರೀತಿಯಲ್ಲಿ ಮದುವೆಯಾಗಿ ಬಿಡುತ್ತದೆ.
ಮದುವೆ ಸ್ವರ್ಗದಲ್ಲಿ ನಿಗದಿಯಾಗಿ ಭೂಮಿ ಮೇಲೆ ನಡೆಯುತ್ತದೆಯಂತೆ. ಈ ಕಂಕಣಭಾಗ್ಯವೆನ್ನುವುದು ಯಾರಿಗೆ ಯಾವಾಗ ಕೂಡಿ ಬರುವುದು ಎಂದು ಹೇಳಲಾಗದು. ಕೆಲವರಿಗೆ ನಿರೀಕ್ಷೆಯೂ ಮಾಡಿರದ ರೀತಿಯಲ್ಲಿ ಮದುವೆಯಾಗಿ ಬಿಡುತ್ತದೆ. ಮತ್ತೆ ಕೆಲವರಿಗೆ ಎಷ್ಟೇ ಹುಡುಕಾಡಿದರೂ ಹುಡುಗಿ/ಹುಡುಗ ಸಿಗದಂತಹ ಸಂಕಟದ ಸ್ಥಿತಿ. ಇನ್ನು ಪ್ರೀತಿಸಿದವರದ್ದಂತೂ ಬೇರೆಯದೇ ಲೋಕ. ಅದೇ ರೀತಿ ಇಲ್ಲಿ ಹುಡುಗ ಹುಡುಗಿ ಜೋಡಿಗೆ ಚಲಿಸುವ ರೈಲಲ್ಲೇ ಮದುವೆಯಾಗಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆಕಾಶದಲ್ಲಿ ಚಲಿಸುವ ವಿಮಾನದೊಳಗೆ, ನೀರ ಮೇಲೆ ಚಲಿಸುವ ಬೋಟ್ ಒಳಗೆ, ಕೆಲವರೂ ನೀರಿನಾಳದಲ್ಲಿ, ಮತ್ತೆ ಕೆಲವರು ಮರದ ಕೆಳಗೆ, ಹೀಗೆ ವಿಭಿನ್ನವಾದ ಹಲವು ಮದುವೆಗಳನ್ನು ಅವುಗಳ ವೀಡಿಯೋಗಳನ್ನು ನೀವು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ನೋಡಿರುತ್ತೀರಿ. ಅದೇ ರೀತಿ ಪ್ರೇಮಿಗಳಿಬ್ಬರಿಗೆ ಈಗ ಚಲಿಸುವ ರೈಲಿನೊಳಗೆ ಮದುವೆಯಾಗಿದ್ದಾರೆ. ರೈಲಿನ ಜನರಲ್ ಬೋಗಿಯೊಳಗೆ ಈ ವಿಶೇಷ ಮದುವೆ ನಡೆದಿದ್ದು, ಬೋಗಿಯಲ್ಲಿದ್ದವರೆಲ್ಲಾ ಈ ಮದುವೆಗೆ ಸಾಕ್ಷಿಯಾಗಿದ್ದಾರೆ.
ಅಯ್ಯೋ ವಿಧಿಯೇ... ಚಲಿಸುವ ರೈಲು ಹತ್ತಲು ಹೋಗಿ ಕೆಳಗೆ ಬಿದ್ದು ಅಪ್ಪ, 5 ವರ್ಷದ ಮಗಳು ಸಾವು
Yadav Max Sudama ಎಂಬುವವರು ಈ ವೀಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದು, ನೋಡುಗರು ವೆರೈಟಿಯಾಗಿ ಕಾಮೆಂಟ್ ಮಾಡಿದ್ದಾರೆ. ವೀಡಿಯೋದಲ್ಲಿ ಕಾಣಿಸುವಂತೆ ಚಲಿಸುವ ರೈಲಿನಲ್ಲಿ ತುಂಬಿರುವ ಜನಸಂದಣಿಯ ನಡುವೆಯೇ ಜೋಡಿಯೊಂದು ಪರಸ್ಪರ ಹಾರ ಬದಲಾಯಿಸಿಕೊಂಡು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ರೈಲಿನಲ್ಲೇ ಹುಡುಗ ತನ್ನ ಪ್ರೇಯಸಿಗೆ ತಾಳಿ ಕಟ್ಟಿದ್ದಾನೆ. ಅಲ್ಲಿದ್ದ ಅನೇಕರು ಈ ಭಾವುಕ ಕ್ಷಣದ ವೀಡಿಯೋವನ್ನು ತಮ್ಮ ಫೋನ್‌ಗಳಲ್ಲಿ ಸೆರೆ ಹಿಡಿದಿದ್ದಾರೆ.
ಬೆಂಗಾಲ್ ದಿಂದ ಜಾರ್ಖಂಡ್ ಮಧ್ಯೆ ಸಂಚರಿಸುವ ಅಸನ್ಸೊಲ್-ಜಸಿದಿಹ್ ರೈಲಿನಲ್ಲಿ ಈ ವಿಶೇಷ ಮದುವೆ ನಡೆದಿದೆ. ಬಹುಶಃ ಬಜೆಟ್ ಕಡಿಮೆ ಇದೆ ಎನಿಸುತ್ತಿದೆ. ಇಲ್ಲದಿದ್ದರೆ ಈ ಜೋಡಿ ವಿಮಾನದಲ್ಲಿ ಆಕಾಶದಲ್ಲೇ ಮದುವೆಯಾಗುತ್ತಿದ್ದರು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಮದ್ವೆಯಲ್ಲಿ ಭಾಗಿಯಾದ ದಿಬ್ಬಣದವರೂ ಅಪರಿಚಿತರಾದರೂ ಸೂಪರ್ ಆಗಿದ್ದಾರೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಈ ಜೋಡಿಯನ್ನು ಬೆಂಬಲಿಸಿದ್ದು, ತಮಾಷೆ ಮಾಡಬೇಡಿ ಅವರ ಕಷ್ಟ ಅವರಿಗೆ ಎಂದು ಕಾಮೆಂಟ್ ಮಾಡಿದ್ದಾರೆ. ಇಂತಹದ್ದೆಲ್ಲಾ ಭಾರತದಲ್ಲಿ ಮಾತ್ರ ಸಾಧ್ಯ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಒಂದು ಭೋಗಿಯನ್ನು ಖಾಲಿ ಮಾಡಿ ಅವರಿಗೆ ಬಿಟ್ಟು ಕೊಡಿ ಅಲ್ಲೇ ಮೊದಲ ರಾತ್ರಿಯೂ ನಡೆಯಲಿ ಎಂದು ವ್ಯಂಗ್ಯವಾಡಿದ್ದಾರೆ.
ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಹೋಗಿ ಕೆಳಗೆ ಬಿದ್ದ ಯುವಕ: ಭಯಾನಕ ವಿಡಿಯೋ