ಸೆಕ್ಸ್ ಬಗ್ಗೆ ಜನರಿಗೆ ಈಗ್ಲೂ ಸರಿಯಾದ ಮಾಹಿತಿ ಇಲ್ಲ. ಅದ್ರಲ್ಲೂ ಮಹಿಳೆಯರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕೆಲ ಒತ್ತಡದಿಂದ ಯೋನಿ ಶುಷ್ಕತೆ ಸೇರಿದಂತೆ ಕೆಲ ನೋವು ಅವರನ್ನು ಕಾಡ್ತಿದ್ದು, ಅದಕ್ಕೆ ಪರಿಹಾರ ಇಲ್ಲಿದೆ.
ಮದುವೆಯಾದ ಆರಂಭದ ಕೆಲ ವರ್ಷಗಳನ್ನು ನಂತ್ರ ಅನೇಕ ಮಹಿಳೆಯರಿಗೆ ಸೆಕ್ಸ್ ದಿನಚರಿಯಾಗುತ್ತದೆ. ಅದರಿಂದ ಹೆಚ್ಚಿನ ಆನಂದವನ್ನು ಅವರು ಪಡೆಯೋದಿಲ್ಲ. ಸೆಕ್ಸ್ ಎಂಬುದು ನಮ್ಮ ದೇಶದಲ್ಲಿ ಒಂದು ಮಡಿವಂತಿಕೆ ವಿಷ್ಯವಾದ್ರೆ ಇನ್ನೊಂದು ಅದ್ರ ಬಗ್ಗೆ ಮಹಿಳೆಯರು ಮಾತನಾಡೋದಿಲ್ಲ. ಸೆಕ್ಸ್ ಮಹಿಳೆಗಿಂತ ಪುರುಷನಿಗೆ ಅಗತ್ಯ ಎನ್ನುವ ಒಂದು ತಪ್ಪು ಕಲ್ಪನೆ ಕೂಡ ನಮ್ಮಲ್ಲಿದೆ. ಸಂಭೋಗದಿಂದ ಪುರುಷನ ಸಂತೋಷವೇ ಇಲ್ಲಿ ಮುಖ್ಯವಾಗುತ್ತದೆಯೇ ವಿನಃ ಮಹಿಳೆ ಏನು ಬಯಸ್ತಾಳೆ ಎಂಬುದು ಮಹತ್ವಪಡೆಯೋದಿಲ್ಲ. ಅದ್ರ ಬಗ್ಗೆ ಹಿಂದಿನಿಂದ ಬಂದ ಪದ್ಧತಿಯನ್ನು ಮಹಿಳೆಯರು ಈಗ್ಲೂ ಪಾಲನೆ ಮಾಡ್ತಿದ್ದು, ತಮ್ಮ ಆನಂದದ ಬಗ್ಗೆ ಅವರು ಮಾತನಾಡೋದಿಲ್ಲ.
ಲೈಂಗಿಕ (Sexual) ಆನಂದ ಆನಂದವಾಗದೆ ದಿನಚರಿಯಾದ್ರೆ, ಸೆಪ್ಪೆಯಾದ್ರೆ ಇದು ಮಹಿಳೆಯಲ್ಲಿ ಅನೇಕ ಸಮಸ್ಯೆಯನ್ನು ತಂದೊಡ್ಡುತ್ತದೆ. ಯೋನಿ (Vagina) ಶುಷ್ಕತೆ, ಲೈಂಗಿಕ ಒತ್ತಡ, ಸಂತೋಷದ ಕೊರತೆ, ಯೋನಿಯಲ್ಲಿ ಉರಿ, ನೋವು, ಕಡಿಮೆಯಾಗುವ ಕಾಮಾಸಕ್ತಿ ಇವೆಲ್ಲವೂ ಇದ್ರಲ್ಲಿ ಸೇರಿದೆ. ಮಹಿಳೆಯಾದವಳು ಈ ಎಲ್ಲ ಸಮಸ್ಯೆಯಿಂದ ಮುಕ್ತಿಪಡೆಯಬೇಕೆಂದ್ರೆ ಯೋನಿ ಮಸಾಜ್ (Massage) ಅನಿವಾರ್ಯವಾಗುತ್ತದೆ.ಯೋನಿ ಮಸಾಜ್ ಇಂಥ ಸಂದರ್ಭದಲ್ಲಿ ಹೆಲ್ಪ್ ಆಗಬಹುದು. ಈ ಬಗ್ಗೆ ಇಲ್ಲಿದೆ ಸ್ವಲ್ಪ ಮಾಹಿತಿ.
ಯೋನಿ ಮಸಾಜ್ ಎಂದರೇನು? : ತಜ್ಞರ ಪ್ರಕಾರ ಯೋನಿ ಮಸಾಜ್ ಅನ್ನು ಪೆಲ್ವಿಕ್ ರಿಲೀಸ್ ಮಸಾಜ್ ಎನ್ನಬಹುದು. ಇದು ಇಡೀ ದೇಹ ಉತ್ತಮ ಅನುಭವಪಡೆಯಲು ಸಹಕಾರಿ. ಇದರಲ್ಲಿ ಇಡೀ ದೇಹದ ಸ್ಪರ್ಶ ಹಾಗೂ ಆನಂದ ಸೇರಿದೆ. ಬಟ್, ಬ್ರೆಸ್ಟ್, ಹಿಪ್ಸ್ ಹಾಗೂ ವಜೈನಾ ಒಳ ಹಾಗೂ ಹೊರ ಭಾಗದ ಮಸಾಜ್ ಇದಾಗಿದೆ.
ಅಮ್ಮನಾದ್ಮೇಲೆ ಕಾಡೋ ಅಪರಾಧಿ ಭಾವ, ಹಿಂಗ್ಯಾಕೆ ಮನಸ್ಸಿಗೆ ಕೋಪ, ಕಂಟ್ರೋಲ್ ಮಾಡ್ಕೊಳ್ಳಿ!
ಯೋನಿ ಮಸಾಜ್ ನಿಂದ ಆಗುವ ಲಾಭವೇನು? :
ಕಡಿಮೆ ಆಗುವ ಒತ್ತಡ : ಯೋನಿ ಮಸಾಜ್ ನಿಂದ ಒತ್ತಡ ಕಡಿಮೆ ಆಗುತ್ತದೆ. ಯೋನಿ ಮಸಾಜ್ ನಿಂದ ಉತ್ತಮ ಭಾವನೆ ನೀಡುವ ಹಾರ್ಮೋನ್ ಗಳು ಬಿಡುಗಡೆ ಆಗುತ್ತವೆ. ಇವು ವಿಭಿನ್ನ ರೀತಿಯ ಅನುಭವವನ್ನು ನೀಡುತ್ತದೆ. ಈ ಭಾವನೆಗಳು ಮಹಿಳೆಗೆ ಆನಂದ ನೀಡುತ್ತವೆ. ಒತ್ತಡ ಕಡಿಮೆ ಆಗುತ್ತದೆ.
ಲೈಂಗಿಕ ಆರೋಗ್ಯಕ್ಕೆ (Sexual Health) ಒಳ್ಳೆಯದು : ಯೋನಿ ಮಸಾಜ್ ಲೈಂಗಿಕ ಆರೋಗ್ಯಕ್ಕೆ ಒಳ್ಳೆಯದು ಎನ್ನುತ್ತಾರೆ ತಜ್ಞರು. ದೇಹದ ಜೊತೆ ಸಕಾರಾತ್ಮಕ ಭಾವನೆಯನ್ನು ಇದು ಬೆಳೆಸುತ್ತದೆ. ಸಂಭೋಗದ ವೇಳೆ ಯೋನಿ ಶುಷ್ಕವಾಗಿದ್ದರೆ ಲೈಂಗಿಕ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಯೋನಿ ಮಸಾಜ್ ನಿಂದ ಈ ಶುಷ್ಕತೆ ಕಡಿಮೆ ಆಗುವ ಜೊತೆಗೆ ಸಂಭೋಗದ ವೇಳೆ ನೋವು ಕಡಿಮೆಯಾಗುವುದ್ರಿಂದ ಲೈಂಗಿಕ ಆನಂದವನ್ನೂ ಪಡೆಯಬಹುದು.
ನಿಮ್ಮ ದೇಹವನ್ನು ತಿಳಿಯಲು ಸಹಕಾರಿ : ಇದು ವ್ಯಕ್ತಿಗಳಿಗೆ ದೇಹದ ಬಗ್ಗೆ ಜ್ಞಾನ ನೀಡುತ್ತದೆ. ಸ್ವಂತ ಅಂಗರಚನಾಶಾಸ್ತ್ರ, ಸಂವೇದನೆಗಳು ಮತ್ತು ಪ್ರತಿಕ್ರಿಯೆಗಳನ್ನು ಅನ್ವೇಷಿಸಲು ಮತ್ತು ಅರ್ಥಮಾಡಿಕೊಳ್ಳಲು ಪ್ರೋತ್ಸಾಹಿಸುತ್ತದೆ. ಸ್ವಯಂ ಸ್ವೀಕಾರದ ಪ್ರಜ್ಞೆಯನ್ನು ಹೆಚ್ಚಿಸುತ್ತದೆ ಎನ್ನುತ್ತಾರೆ ತಜ್ಞರು.
ಶಕ್ತಿ ಬಿಡುಗಡೆ (Energy Released) : ಯೋನಿ ಮಸಾಜ್ ತಂತ್ರಗಳು ಮನಸ್ಸು, ದೇಹ ಮತ್ತು ಆತ್ಮದೊಂದಿಗೆ ಉತ್ತಮ ಸಂಪರ್ಕ ಸಾಧಿಸಲು ನೆರವಾಗುತ್ತದೆ. ಇದರ ನಂತರ ಅನೇಕ ಜನರು ತಮ್ಮ ಮನಸ್ಸು ಮತ್ತು ದೇಹದೊಂದಿಗೆ ಹೆಚ್ಚು ಸಂಪರ್ಕ ಹೊಂದುತ್ತಾರೆ. ಅವರಲ್ಲಿ ಹೊಸ ಶಕ್ತಿಯ ಉತ್ಪಾದನೆಯಾಗುತ್ತದೆ ಎನ್ನುತ್ತಾರೆ ತಜ್ಞರು.
ಹೆಣ್ಣನ್ನು ನಿಯಂತ್ರಿಸುವುದೇ ಹಾರ್ಮೋನ್, ಗಂಡು ಅಂತ ಹೇಳ್ತಾರೆ ಅಷ್ಟೇ!
ಕಡಿಮೆಯಾಗುವ ನೋವು (Painless) : ದೇಹದ ಯಾವುದೇ ಭಾಗದಲ್ಲಿ ಮಸಾಜ್ ಮಾಡಿದರೆ ಅದು ನಿಮಗೆ ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ. ಇತರ ಪ್ರದೇಶಗಳಿಗೆ ಮಸಾಜ್ ಮಾಡುವಂತೆಯೇ ಯೋನಿ ಮಸಾಜ್ ವಿಶ್ರಾಂತಿಗೆ ಸಹಕಾರಿ. ಇದು ಯಾವುದೇ ರೀತಿಯ ನೋವಿನಿಂದ ನಿಮಗೆ ಆರಾಮ ನೀಡುತ್ತದೆ.