ಮದುವೆಯಾಗಿ 3 ವರ್ಷವಾದರೂ ಹತ್ತಿರ ಬಾರದ ಗಂಡ: ಠಾಣೆ ಮೆಟ್ಟಿಲೇರಿದ ಯುವತಿ

By Suvarna News  |  First Published Jul 19, 2022, 3:51 PM IST

ಮದುವೆಯಾಗಿ ಮೂರು ವರ್ಷವಾದರೂ ಹತ್ತಿರ ಬಾರದ ಗಂಡನ ವಿರುದ್ಧ ಈಗ ಯುವತಿ ಮನೆಯವರು ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ. ಮಧ್ಯಪ್ರದೇಶದ ಇಂದೋರ್‌ನಲ್ಲಿ ಈ ಘಟನೆ ನಡೆದಿದೆ.


ಇಂದೋರ್‌: ಮದುವೆಯಾಗಿ ಮೂರು ವರ್ಷವಾದರೂ ಹತ್ತಿರ ಬಾರದ ಗಂಡನ ವಿರುದ್ಧ ಈಗ ಯುವತಿ ಮನೆಯವರು ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ. ಮಧ್ಯಪ್ರದೇಶದ ಇಂದೋರ್‌ನಲ್ಲಿ ಈ ಘಟನೆ ನಡೆದಿದೆ. 2019ರಲ್ಲಿ ಇಂದೋರ್‌ನ ಯುವತಿಯೊಬ್ಬರನ್ನು ಸಾಕಷ್ಟು ವರದಕ್ಷಿಣೆಯೊಂದಿಗೆ ಅದ್ಧೂರಿಯಾಗಿ ಪ್ರೀತೇಶ್ ಎಂಬ ಯುವಕನಿಗೆ ಮದುವೆ ಮಾಡಿ ಕೊಡಲಾಗಿತ್ತು. ಮದುವೆಯಾದ ನಂತರ ಹೆಂಡತಿಯೊಂದಿಗೆ ವಿಚಿತ್ರವಾಗಿ ವರ್ತಿಸುತ್ತಿದ್ದ ಈತ ಹೆಂಡತಿ ಸಮೀಪ ಸುಳಿದರೆ ಮೈಮೇಲೆ ದೆವ್ವ ಬಂದವನಂತೆ ಆಡ್ತಿದ್ದ. 

ಹಲವು ಕನಸುಗಳೊಂದಿಗೆ ಮದುವೆಯಾಗಿ ಗಂಡನ ಮನೆಗೆ ಬಂದಿದ್ದ ಯುವತಿ ಈತನ ವರ್ತನೆಯಿಂದ ಆಘಾತಕ್ಕೊಳಗಾಗಿದ್ದಳು. ಹಲವು ಬಾರಿ ಈಕೆಯ ಗಂಡನ ಸಮೀಪ ಹೋದಾಗಲೂ ಆತ ಆಕೆಯೊಂದಿಗೆ ಗಂಡನಂತೆ ಸಹಜ ಜೀವನ ನಡೆಸಲು ನಿರಾಕರಿಸಿದ್ದಾನೆ. ಇದಾದ ಬಳಿಕ ಯುವತಿ ತನ್ನ ಪೋಷಕರಿಗೆ ಈ ವಿಚಾರ ತಿಳಿಸಿದ್ದಳು. ಜೊತೆಗೆ ಯುವಕನ ಚಿಕ್ಕಮ್ಮನ ಬಳಿ ಈ ವಿಚಾರವನ್ನು ತಿಳಿಸಿದಾಗ ಆಕೆ ತನ್ನ ಮಗ ಮಾನಸಿಕ ಹಾಗೂ ದೈಹಿಕ ಸಮಸ್ಯೆಯಿಂದ ಬಳಲುತ್ತಿದ್ದು ಶೀಘ್ರದಲ್ಲೇ ಸರಿ ಹೋಗಬಹುದು ಎಂದು ಹೇಳಿದ್ದಾಳೆ. 

Tap to resize

Latest Videos

ಖಾಸಗಿ ವಿಡಿಯೋ ವೈರಲ್, ದೂರು ಕೊಟ್ಟವನೇ ನನ್ನ ಗಂಡ ಎಂದ ಕಾಂಗ್ರೆಸ್ ಯುವ ನಾಯಕಿ ನವ್ಯಶ್ರೀ

ಈ ನಡುವೆ ಪ್ರಿತೇಶ್‌ಗೆ ತನ್ನ ಸತ್ಯ ಎಲ್ಲಿ ಹೊರಬರುವುದೋ ಎಂಬ ಅನುಮಾನ ಶುರುವಾಗಿದ್ದು, ಇದೇ ಕಾರಣಕ್ಕೆ ಹೆಂಡತಿಗೆ ವರದಕ್ಷಿಣೆ ನೀಡುವಂತೆ ಕಿರುಕುಳ ನೀಡಿದ್ದಾನೆ. ಲಕ್ಷಗಟ್ಟಲೇ ವರದಕ್ಷಿಣೆ ತರುವಂತೆ ವರದಕ್ಷಿಣೆ ತಂದ ಬಳಿಕವೇ ಮನೆಗೆ ಬರುವಂತೆ ಹೆಂಡತಿಗೆ ಕಿರುಕುಳ ನೀಡಿ ತವರಿಗೆ ಕಳುಹಿಸಿದ್ದಾನೆ. ಗಂಡ ಇಂದು ಸರಿ ಹೋಗುತ್ತಾನೆ. ನಾಳೆ ಸರಿ ಹೋಗುತ್ತಾನೆ ಎಂದು ತಾಳ್ಮೆಯಿಂದ ಕಾದ ಆಕೆಗೆ ಈತನ ವರದಕ್ಷಿಣೆಯ ಕಿರುಕುಳ ಮತ್ತಷ್ಟು ಆಘಾತ ನೀಡಿದೆ.

ಇದಾದ ಬಳಿಕ ಆಕೆ ತನ್ನ ಪೋಷಕರಿಗೆ ಈ ವಿಚಾರ ತಿಳಿಸಿದ್ದು, ಅವರು ಪ್ರಿತೇಶ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಅಳಿಯನಿಂದ ಅತ್ತೆಯ ಕೊಲೆ

 ಅಳಿಯನೊಬ್ಬ ಹೆಣ್ಣು ಕೊಟ್ಟ ಅತ್ತೆಯನ್ನು ಸುತ್ತಿಗೆಯಲ್ಲಿ ಹೊಡೆದು ಕೊಂದಿರುವ ಘಟನೆ ಮಾರತ ಹಳ್ಳಿಯ ಸಂಜಯನಗರದಲ್ಲಿ ನಡೆದಿದೆ. ಕೊಲೆಗಾರನನ್ನು ನಾಗರಾಜ ಎಂದು ಗುರುತಿಸಲಾಗಿದೆ.  ಅಳಿಯನಿಂದಲೇ ಕೊಲೆಯಾದ ದುರ್ದೈವಿ ಅತ್ತೆಯನ್ನು ಸೌಭಾಗ್ಯ ಎಂದು ಗುರುತಿಸಲಾಗಿದೆ.  ಜುಲೈ 13 ರ ಬುಧವಾರ ಸಂಜೆ 7.30 ಕ್ಕೆ ನಡೆದಿರುವ ಘಟನೆ  ತಡವಾಗಿ ಬೆಳಕಿಗೆ ಬಂದಿದೆ.  ಕಳೆದ 6 ವರ್ಷದ ಹಿಂದೆ ನಾಗರಾಜ (35) ಸೌಭಾಗ್ಯ ಅವರ ಮಗಳು  ಭವ್ಯಶ್ರೀಯನ್ನು ಮದುವೆಯಾಗಿದ್ದ, ಈ ದಂಪತಿಗೆ 5 ವರ್ಷದ ಮಗು ಕೂಡ ಇದೆ. ಡ್ರೈವಿಂಗ್ ಕೆಲಸ ಮಾಡ್ಕೊಂಡಿದ್ದ ನಾಗರಾಜ ಕುಡಿತದ ಚಟಕ್ಕೆ ಬಿದ್ದಿದ್ದ.  ಹಾಗಾಗಿ ಆಗಾಗ ಮನೆಯಲ್ಲಿ ಗಲಾಟೆ ಆಗ್ತಾ ಇತ್ತು. ಗಂಡನ ಕಾಟ ತಾಳಲಾರದೆ ಸಂಜಯನಗರದಲ್ಲಿರುವ ತಾಯಿ ಮನೆಗೆ ಭವ್ಯಶ್ರೀ  ಬಂದಿದ್ದಳು.  ಮೂರು ವರ್ಷದಿಂದ ಬಂದು ತಾಯಿ ಮನೆಯಲ್ಲಿಯೇ  ಭವ್ಯಶ್ರೀ ವಾಸವಿದ್ದರು. ಈ ಮಧ್ಯೆ ವಿಚ್ಛೇದನಕ್ಕಾಗಿ ತಯಾರಿ ಕೂಡ ನಡೆಯುತ್ತಿತ್ತು. ಆದರೆ ಕುಡಿದ ಅಮಲಿನಲ್ಲಿದ್ದಾಗ ಮತ್ತೆ ನಾಗರಾಜನಿಗೆ ಪತ್ನಿ ಮತ್ತೆ ಬೇಕು ಅನಿಸಿದೆ  ಹೀಗಾಗಿ ಜುಲೈ 12 ರ ಮಂಗಳವಾರ ಅತ್ತೆ ಮನೆ ಬಳಿ ಬಂದು ನಾಗರಾಜ್ ಗಲಾಟೆ ಮಾಡಿದ್ದ. ಹೆಂಡತಿಯನ್ನು ತನ್ನೊಟ್ಟಿಗೆ ಕಳಿಸಿಕೊಡುವಂತೆ ಗಲಾಟೆಗೆ ಮುಂದಾಗಿದ್ದಾನೆ. ಈ ವೇಳೆ ಭವ್ಯಶ್ರೀ ಕುಟುಂಬಸ್ಥರು  ಬುದ್ಧಿ ಹೇಳಿ ಕಳುಹಿಸಿದ್ದರು. 

ಮದುವೆಯಾದ ನಾಲ್ಕೇ ತಿಂಗಳಿಗೆ ಹಂತಕಿಯಾದ ಹೆಂಡತಿ, ಗಂಡನ ಹತ್ಯೆಗೆ ಕಾರಣವಾಯ್ತು ಜೀನ್ಸ್‌!

HALನ ಸಂಜಯನಗರದಲ್ಲಿ  ಭವ್ಯಶ್ರೀ ತಾಯಿ ಸೌಭಾಗ್ಯ  ಸೊಪ್ಪು ವ್ಯಾಪಾರ ಮಾಡಿ ಜೀವನ ಕಟ್ಟಿಕೊಂಡಿದ್ದರು. ಕೊಲೆಯಾದ ದಿನ ಕೂಡ ಅವರು ಸೊಪ್ಪು ವ್ಯಾಪಾರ ಮಾಡ್ತಿದ್ದರು. ಈ  ಜಾಗಕ್ಕೆ  ಸುತ್ತಿಗೆಯೊಂದಿಗೆ ಬಂದ ನಾಗರಾಜ್  ಸೌಭಾಗ್ಯ ಅವರ ಮೇಲೆ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾನೆ. ಸ್ಥಳದಲ್ಲೇ ರಕ್ತಸ್ರಾವದಿಂದ ಕುಸಿದು ಬಿದ್ದಿದ್ದ ಸೌಭಾಗ್ಯ ಅವರನ್ನು  ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಸೌಭಾಗ್ಯ  ಸಾವನ್ನಪ್ಪಿದ್ದಾರೆ.  ಘಟನೆ ಸಂಬಂಧ ಹೆಚ್ ಎ ಎಲ್ ಠಾಣೆಯಲ್ಲಿ ದೂರು ದಾಖಲಾಗಿದ್ದು,  ಆರೋಪಿ ನಾಗರಾಜ್‌ನನ್ನು ಹೆಚ್ಎಎಲ್ ಪೊಲೀಸರು ಬಂಧಿಸಿದ್ದಾರೆ.

click me!