ಪತಿ –ಪತ್ನಿ (Husband-Wife) ಮಧ್ಯೆ ಮುಚ್ಚುಮರೆ ಇರಬಾರದು. ಆದ್ರೆ ಮದುವೆ (Marriage)ಗೆ ಮೊದಲು ನಡೆದ ಘಟನೆಗಳನ್ನೆಲ್ಲ ಸಂಗಾತಿ (Partner) ಮುಂದೆ ಹೇಳ್ಬೇಕಾಗಿಲ್ಲ. ಕೆಲವರು ಹಿಂದಿನ ಘಟನೆಯನ್ನು ಮರೆತು ಜೀವನ ನಡೆಸ್ತಾರೆ. ಮತ್ತೆ ಕೆಲವರ ಬಾಳಲ್ಲಿ ಹಿಂದೆ ನಡೆದ ಘಟನೆಗಳೇ ಬಿರುಗಾಳಿ ಎಬ್ಬಿಸುತ್ತವೆ. ಇಲ್ಲಾಗಿದ್ದು ಅದೇ ಹೆಂಡ್ತಿಗೆ ಮೂವರು ಬಾಯ್‌ಫ್ರೆಂಡ್ಸ್ ಇದ್ರು ಅನ್ನೋ ಸುದ್ದಿ ಗಂಡನ ನಿದ್ದೆಗೆಡಿಸಿದೆ.
ತಲೆತಗ್ಗಿಸಿ ಮದುವೆ (Marriage) ಯಾಗ್ತಿದ್ದ ಹಿರಿಯರು ಜೀವ ಇರುವವರೆಗೆ ಅದೇ ಸಂಗಾತಿ (Partner) ಜೊತೆ ಬಾಳ್ವೆ ನಡೆಸುತ್ತಿದ್ದರು. ಇದು ಅವರಿಗೆ ಅನಿವಾರ್ಯವಾಗಿತ್ತು. ಆದ್ರೀಗ ಕಾಲ ಬದಲಾಗಿದೆ. ಇಷ್ಟವಾಗದ ಸಂಗಾತಿಯನ್ನು ದೂರ ಮಾಡುವುದು ಸುಲಭ. ವಿಚ್ಛೇದನ (Divorce) ಹೊಸ ಜೀವನಕ್ಕೆ ನೆರವಾಗುತ್ತದೆ. ಇದೇ ಕಾರಣಕ್ಕೆ ವಿಚ್ಛೇದನಗಳ ಸಂಖ್ಯೆ ಹೆಚ್ಚಾಗ್ತಿದೆ. ಈ ಭಿನ್ನಾಭಿಪ್ರಾಯಗಳ ಮಧ್ಯೆ ಸುಖ ಸಂಸಾರ ನಡೆಸುತ್ತಿರುವ ದಂಪತಿ ಸಂಖ್ಯೆ ಬಹಳ ವಿರಳ. ಪತಿ –ಪತ್ನಿ ಖುಷಿಯಾಗಿ ಜೀವನ ನಡೆಸುತ್ತಿದ್ದರೆ ಅವರನ್ನು ನೋಡಿ ಸಂತೋಷಪಡುವ ಜನರಿಗಿಂತ ಹೊಟ್ಟೆಕಿಚ್ಚು ಪಡುವವರು ಇತ್ತೀಚಿನ ದಿನಗಳಲ್ಲಿ ಹೆಚ್ಚು. ಒಂದಲ್ಲ ಒಂದು ಕಾರಣಕ್ಕೆ ಇಬ್ಬರನ್ನು ಬೇರೆ ಮಾಡುವ ಪ್ರಯತ್ನ ನಡೆಸುವವರೂ ಕೂಡ ನಮ್ಮಲ್ಲಿದ್ದಾರೆ. ಅವರ ಮಾತುಗಳು ಹಾಗೂ ಸಂಗಾತಿಯ ಹಿನ್ನಲೆ ವರ್ಷಾನುವರ್ಷಗಳ ಕಾಲ ಸರಿಯಾಗಿದ್ದ ದಾಂಪತ್ಯವನ್ನು ಹಾಳು ಮಾಡ್ಬಹುದು. ಇದಕ್ಕೆ ಈ ವ್ಯಕ್ತಿ ನಿದರ್ಶನ. ಪತ್ನಿಯ ಹಳೆ ವಿಷ್ಯ ಈತನ ಮನಸ್ಥಿತಿಯನ್ನು ಹಾಳು ಮಾಡಿದೆಯಂತೆ. ಆತನ ಸಮಸ್ಯೆ ಏನು ಎಂಬುದನ್ನು ನಾವು ಹೇಳ್ತೇವೆ.
ಪತಿ – ಪತ್ನಿ ಮಧ್ಯೆ ಯಾವುದೇ ಗುಟ್ಟಿರಬಾರದು. ಹಾಗೆ ಸಂಗಾತಿಯನ್ನು ಅತಿಯಾಗಿ ಪ್ರೀತಿಸುತ್ತಿದ್ದರೆ ಅವರ ಫಾಸ್ಟ್ ನಮ್ಮ ಸಂತೋಷಕ್ಕೆ ಅಡ್ಡಿಯಾಗ್ಬಾರದು. 6 ವರ್ಷಗಳಿಂದ ಸುಖ ಸಂಸಾರ ಮಾಡಿರುವ ಈ ವ್ಯಕ್ತಿಗೆ ಪತ್ನಿಯ ಮಾಜಿ ಲವ್ವರ್ ಗಳೇ ಈಗ ಸಮಸ್ಯೆಯಾಗಿದ್ದಾರೆ. ಅಷ್ಟಕ್ಕೂ ಆಕೆಯ ಮಾಜಿಗಳು ಈತನ ಬಳಿ ಬಂದು ತೊಂದರೆ ಕೊಡ್ತಿಲ್ಲ. ಪತ್ನಿಗೆ ಮಾಜಿಗಳಿದ್ದರು ಎಂಬುದೇ ನಿದ್ರೆಗೆಡಿಸಿದೆ.
ಮದುವೆಯಾಗಿ ಆರು ವರ್ಷ ಕಳೆದ ವ್ಯಕ್ತಿಗೆ ಇಂದು ಮಗನಿದ್ದಾನೆ. ಪತಿ –ಪತ್ನಿ ಪರಸ್ಪರ ಅರ್ಥ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಅವರ ದಾಂಪತ್ಯ ಅನೇಕರಿಗೆ ಮಾದರಿಯಾಗಿದೆ. ಮತ್ತೆ ಕೆಲವರ ಕಣ್ಣು ಕುಕ್ಕುತ್ತಿದೆಯಂತೆ. ಸಂಬಂಧಿಕರು ಇವರಿಬ್ಬರ ಮಧ್ಯೆ ಭಿನ್ನಾಭಿಪ್ರಾಯ ಮೂಡಿಸಲು ಸಾಕಷ್ಟು ಪ್ರಯತ್ನ ನಡೆಸಿದ್ದರಂತೆ. ಆದ್ರೆ ಅದನ್ನು ತಲೆಗೆ ಹಾಕಿಕೊಂಡಿರಲಿಲ್ಲವಂತೆ. ಕೆಲ ದಿನಗಳ ಹಿಂದೆ ಪತ್ನಿಯ ಮಾಜಿ ಬಾಯ್ ಫ್ರೆಂಡ್ಸ್ ಬಗ್ಗೆ ಪತಿಗೆ ಗೊತ್ತಾಗಿದೆಯಂತೆ. ಇದು ಆತನ ಮನಸ್ಸು ಚುಚ್ಚುತ್ತಿದೆಯಂತೆ.
ಪಾಲಕರ ಈ ತಪ್ಪಿನಿಂದ ಮಕ್ಕಳಲ್ಲಿ ಕಡಿಮೆಯಾಗುತ್ತೆ CONFIDENCE
ಮದುವೆಗೂ ಮುನ್ನ ನನ್ನ ಪತ್ನಿ ಸಂಬಂಧದಲ್ಲಿದ್ದಳು. ಮೂರು ವ್ಯಕ್ತಿಗಳ ಜೊತೆ ಆಕೆ ಸಂಬಂಧ ಬೆಳೆಸಿದ್ದಳು. ಮದುವೆ ಸಂದರ್ಭದಲ್ಲಿಯೂ ಆಕೆ ಪ್ರೀತಿಯಲ್ಲೇ ಇದ್ದಳು. ಆದ್ರೆ ಮದುವೆಯಾದ್ಮೇಲೆ ಯಾರ ಸಂಪರ್ಕವನ್ನೂ ಬೆಳೆಸಿಲ್ಲ. ನನ್ನನ್ನು ಅತಿಯಾಗಿ ಪ್ರೀತಿಸುತ್ತಾಳೆ. ಆಕೆಯ ಹಿಂದಿನ ಜೀವನ ನನಗೆ ಈಗ ಗೊತ್ತಾಗಿದೆ. ಇದು ನೋವಿಗೆ ಕಾರಣವಾಗಿದೆ. ಪ್ರತಿ ದಿನ ಆಕೆಯ ಮಾಜಿಗಳ ಬಗ್ಗೆ ಆಲೋಚನೆ ಮಾಡ್ತಿದ್ದೇನೆ. ಇದ್ರಿಂದ ಸರಿಯಾಗಿ ನಿದ್ರೆ ಬರುತ್ತಿಲ್ಲವೆಂದು ವ್ಯಕ್ತಿ ಸಮಸ್ಯೆ ಹೇಳಿಕೊಂಡಿದ್ದಾನೆ.
ಸಮಸ್ಯೆಗೆ ಪರಿಹಾರವೇನು ? : ತಜ್ಞರ ಪ್ರಕಾರ ಆತನಲ್ಲಿಯೇ ಸಮಸ್ಯೆಗೆ ಪರಿಹಾರವಿದೆ. ಸಣ್ಣ ವಿಷ್ಯವನ್ನು ದೊಡ್ಡದು ಮಾಡಿಕೊಂಡು ನಿದ್ರೆ ಬಿಟ್ಟಿದ್ದಾನೆ ವ್ಯಕ್ತಿ ಎನ್ನುತ್ತಾರೆ ತಜ್ಞರು. ಪತ್ನಿಯ ಮಾಜಿಗಳ ಬಗ್ಗೆ ಅತಿಯಾಗಿ ಆಲೋಚನೆ ಮಾಡುವ ಅಗತ್ಯವಿಲ್ಲ. ಯಾಕೆಂದ್ರೆ ಮದುವೆಯಾದ್ಮೇಲೆ ಪತ್ನಿ ಯಾರ ಜೊತೆಯೂ ಸಂಪರ್ಕದಲ್ಲಿಲ್ಲ. ಹಾಗಾಗಿ ಇದ್ರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಪತ್ನಿ ಈಗ್ಲೂ ಸಂಬಂಧದಲ್ಲಿದ್ದರೆ ನೀವು ಇದನ್ನು ಗಂಭೀರವಾಗಿ ತೆಗೆದುಕೊಳ್ಳಬಹುದಿತ್ತು.
Relationship Tips: ಸಂಗಾತಿಯ ಬೆನ್ನು ಬೀಳ್ಬೇಡಿ
ಪತ್ನಿಯ ಬಗ್ಗೆ ಬೇಸರಗೊಳ್ಳುವ ಬದಲು ಆಕೆ ಜೊತೆ ಮಾತನಾಡಿ. ಆದ್ರೆ ಯಾವುದೇ ಕಾರಣಕ್ಕೂ ಮಾಜಿಗಳ ವಿಷ್ಯ ಹಿಡಿದು ಗಲಾಟೆ ಮಾಡ್ಬೇಡಿ. ಆಕೆಯ ನೆನಪನ್ನು ಮರಳಿಸುವ ಯತ್ನ ಮಾಡ್ಬೇಡಿ ಎಂದು ತಜ್ಞರು ಸಲಹೆ ನೀಡಿದ್ದಾರೆ. ಇಷ್ಟು ಮಾತ್ರವಲ್ಲ, ಎಲ್ಲ ದಂಪತಿಗೆ ಮಾದರಿಯಾಗುವಂತ ಜೀವನ ನೀವು ನಡೆಸುತ್ತಿದ್ದೀರಿ, ಕುಟುಂಬಸ್ಥರ ಕಣ್ಣು ಬೀಳ್ತಿದೆ ಎಂದು ನೀವೇ ಹೇಳಿದ್ದೀರಿ. ಹಾಗಾಗಿ ಎಂದೂ ಆ ಸಂಬಂಧ ಹಾಳಮಾಡಿಕೊಳ್ಬೇಡಿ ಎಂದು ತಜ್ಞರು ಸಲಹೆ ನೀಡಿದ್ದಾರೆ.