ಕುದುರೆ ಏರಿ ಬಂದ ವರ..ಹತ್ತಿ ಡ್ಯಾನ್ಸ್ ಮಾಡಲು ಹೋಗಿ ಜಾರಿ ಬಿದ್ದ ವಧು; ವಿಡಿಯೋ ವೈರಲ್

Published : Apr 27, 2023, 12:35 PM IST
ಕುದುರೆ ಏರಿ ಬಂದ ವರ..ಹತ್ತಿ ಡ್ಯಾನ್ಸ್ ಮಾಡಲು ಹೋಗಿ ಜಾರಿ ಬಿದ್ದ ವಧು; ವಿಡಿಯೋ ವೈರಲ್

ಸಾರಾಂಶ

ಮದ್ವೆ ಮನೆ ಅಂದ್ರೆ ಎಲ್ಲರೂ ಎಂಜಾಯ್ ಮಾಡಬೇಕೆಂದು ಬಯಸ್ತಾರೆ. ಮದುಮಕ್ಕಳು ಸಹ ಇದರಲ್ಲಿ ಹಿಂದೆ ಬೀಳೋದಿಲ್ಲ. ಸಾಂಗ್‌, ಡ್ಯಾನ್ಸ್ ಅಂತ ಸಖತ್‌ ಮಸ್ತಿ ಮಾಡ್ತಾರೆ. ಆದ್ರೆ ಇಲ್ಲೊಂದು ಮದ್ವೆ ಮನೆಯಲ್ಲಿ ವಧು-ವರರು ಡ್ಯಾನ್ಸ್‌ ಮಾಡೋಕೆ ಹೋಗಿ ಸ್ಟೇಜ್‌ನಲ್ಲೇ ಬಿದ್ದು ಬಿಟ್ಟಿದ್ದಾರೆ. ಸದ್ಯ ಈ ವೀಡಿಯೋ ಎಲ್ಲೆಡೆ ವೈರಲ್ ಆಗ್ತಿದೆ. 

ಮದುವೆ ಜೀವನದ ಒಂದು ಪ್ರಮುಖ ದಿನ. ಈ ದಿನ ಎಲ್ಲರಿಗಿಂತಲೂ ಭಿನ್ನವಾಗಿರಬೇಕು ಎಂದು ಬಹುತೇಕ ನವಜೋಡಿಗಳು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳುತ್ತಾರೆ. ಮದುವೆಯ ದಿನ ಧರಿಸುವ ಬಟ್ಟೆಯಿಂದ ಹಿಡಿದು ಅಲಂಕಾರ, ಮದುವೆ ನಡೆಯುವ ಸ್ಥಳ, ಊಟ ಎಲ್ಲವೂ ಭಿನ್ನವಾಗಿರಬೇಕೆಂದು ಬಯಸುತ್ತಾರೆ. ಇನ್ನು ಖುಷಿಯ ದಿನ ಡ್ಯಾನ್ಸ್ ಮಾಡದಿದ್ರೆ ಆಗುತ್ತಾ? ಮದ್ವೆ ಕಳೆ ಬರೋಕೆ ಡ್ಯಾನ್ಸ್ ಇರಲೇಬೇಕು. ಮದುವೆ ದಿನ ಮದುವೆಗೆ ಬಂದ ಸ್ನೇಹಿತರು, ಗೆಳೆಯರು, ಕುಟುಂಬದವರು ಕಸಿನ್ಸ್‌ಗಳು ಎಲ್ಲರೂ  ಬಿಂದಾಸ್ ಆಗಿ ಡಾನ್ಸ್ ಮಾಡ್ತಾರೆ. ಇತ್ತೀಚೆಗೆ ವಧುವರರು ಕೂಡ ಡಿಫರೆಂಟ್ ಆಗಿ ಡಾನ್ಸ್ ಮಾಡುವುದನ್ನು ನಾವು ನೋಡಿದ್ದೇವೆ. ಮದುವೆಯ ಇಂತಹ ಹಲವು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತವೆ.

ಭಾರತೀಯ ಮದ್ವೆ (Marriage) ಮನೆಗಳು ಸಾಕಷ್ಟು ಹೈಡ್ರಾಮಗಳಿಗೆ ಸಾಕ್ಷಿಯಾಗುತ್ತಿರುತ್ತವೆ. ಹಾಗೆಯೇ ಇಲ್ಲೊಂದು ಕಡೆ ವಧುವರರು (Bride-groom) ತಮ್ಮ ಮದುವೆಯ ದಿನ ಡಾನ್ಸ್ ಮಾಡಲು ಹೋಗಿದ್ದು, ಈ ವೇಳೆ ಅಲ್ಲೊಂದು ಎಡವಟ್ಟಾಗಿದೆ. ವಧು ಹಾಗೂ ವರ ಇಬ್ಬರೂ ಡಾನ್ಸ್ ಮಾಡಲು ಹೋಗಿ ಕೆಳಗೆ ಬಿದ್ದಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ (Social media) ವೈರಲ್ ಆಗಿದೆ. 

ಸಣ್ಣ ಹಪ್ಪಳಕ್ಕಾಗಿ ರಣರಂಗವಾಯ್ತು ಮದುವೆ ಮನೆ: ಕೇರಳದ ವಿಡಿಯೋ ವೈರಲ್

ಉತ್ತರಭಾರತದಲ್ಲಿ ಮದುಮಕ್ಕಳು ಸಾಮಾನ್ಯವಾಗಿ ಮದುವೆಯ ದಿನ ಕುದುರೆ ಸವಾರಿ (Horse ride) ಮಾಡುತ್ತಾ ಮೆರವಣಿಗೆಯಲ್ಲಿ ಬರುತ್ತಾರೆ. ಖುಷಿಯ ಭಾಗವಾಗಿ ವರನ ಸ್ನೇಹಿತರು (Friends) ಕುದುರೆ ಹತ್ತುವುದನ್ನು ನೋಡುವುದು ಸಾಮಾನ್ಯವಾಗಿದೆ. ಹೀಗೆ ಮಾಡುವಾಗ ಕೆಲವೊಮ್ಮೆ ಎಡವಟ್ಟು ಆಗೋದು ಇದೆ. ಹಾಗೆಯೇ ಇಲ್ಲೊಂದು ಮದುವೆ ಮನೆಯಲ್ಲಿ ಮದುವೆ ದಿಬ್ಬಣದಲ್ಲಿ ಕುದುರೆಯಲ್ಲಿ ವರ ಬರುತ್ತಾನೆ. ಈ ಸಂದರ್ಭದಲ್ಲಿ ವಧು ಸಹ ಕುದುರೆ ಹತ್ತಿ ಡ್ಯಾನ್ಸ್ ಮಾಡುತ್ತಾಳೆ. ಎಲ್ಲರೂ ಈ ಕ್ಷಣವನ್ನು ಎಂಜಾಯ್ ಮಾಡುತ್ತಿರಬೇಕಾದರೆ ವಧು ಆಯತಪ್ಪಿ ಕೆಳಗೆ ಬೀಳುತ್ತಾಳೆ. ಮಾತ್ರವಲ್ಲ ಜೊತೆಗೆ ವರನು ಬೀಳುವುದನ್ನು ವೀಡಿಯೋದಲ್ಲಿ ನೋಡಬಹುದು.

ವೀಡಿಯೊದಲ್ಲಿ, ನರ್ತಕಿ ಕುದುರೆಯ ಮೇಲೆ ನಿಂತು ನೃತ್ಯ ಮಾಡುತ್ತಿರುವುದನ್ನು ಕಾಣಬಹುದು. ಈ ಮಧ್ಯೆ, ವರನು ಮುಂದೆ ಕುಳಿತು ನಗುವಿನೊಂದಿಗೆ ಕ್ಷಣವನ್ನು ಆನಂದಿಸುತ್ತಿರುವುದನ್ನು ಕಾಣಬಹುದು. ಕೆಳಗೆ ಬೀಳದಿರಲು ಆಕೆ ವರನನ್ನು ಗಟ್ಟಿಯಾಗಿ ಹಿಡಿದುಕೊಳ್ಳುತ್ತಾಳೆ. ಇದರಿಂದ ವರ ಸಹ ಕುದುರೆಯಿಂದ ಜಾರಿ ಬೀಳುತ್ತಾನೆ. ಆದರೆ, ತಕ್ಷಣ ಆತನ ಸ್ನೇಹಿತರು ಆತ ಕೆಳಗೆ ಬೀಳದಂತೆ ಗಟ್ಟಿಯಾಗಿ ಹಿಡಿದುಕೊಳ್ಳುತ್ತಾರೆ. ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿರುವ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರನ್ನು ರಂಜಿಸುತ್ತಿದೆ.

ಮದುವೆಯಲ್ಲಿ ವೃದ್ಧ ಸಹೋದರರ ಕಮಾಲ್: ಬಡೇ ಮಿಯಾ ಚೋಟ ಮೀಯಾ ವೈರಲ್

ರೋಮ್ಯಾಂಟಿಕ್ ಡ್ಯಾನ್ಸ್ ಮಾಡಲು ಹೋಗಿ ಜಾರಿಬಿದ್ದಿದ್ದ ವಧು-ವರರು
ಈ ಹಿಂದೆಯೂ ಉತ್ತರಭಾರತದಲ್ಲಿ ಇಂಥದ್ದೇ ಘಟನೆಯೊಂದು ನಡೆದಿತ್ತು. ವಿಡಿಯೋವನ್ನು ಜೈಪುರ ಪ್ರೀವೆಡ್ಡಿಂಗ್ ಎಂಬ ಇನ್ಸ್ಟಾಗ್ರಾಮ್ ಪೇಜ್‌ನಲ್ಲಿ ಶೇರ್ ಮಾಡಲಾಗಿತ್ತು. ವಧು ಹಾಗೂ ವರನ ರೋಮ್ಯಾಂಟಿಕ್ ಕ್ಷಣ ನೋಡುಗರಿಗೆ ಹಾಸ್ಯಮಯವಾಗಿ ಬದಲಾಗಿತ್ತು. ಡಾನ್ಸ್ ಮಾಡಲು ಹೋಗಿ ವಧು-ವರರು ಕೆಳಗೆ ಬಿದ್ದಿದ್ದರು. ಇಬ್ಬರು ಹಾಡೊಂದಕ್ಕೆ ಡಾನ್ಸ್ ಮಾಡುತ್ತ ಕೈ ಕೈ ಹಿಡಿದುಕೊಂಡ ರೋಮ್ಯಾಂಟಿಕ್ ಆಗಿ ವರನ ತೋಳಲ್ಲಿ ವಧು ಬೆಂಡಾಗಲು ಹೋಗಿದ್ದಾಳೆ. ಅಷ್ಟೊತ್ತಿಗೆ ವರ ಬ್ಯಾಲೆನ್ಸ್ ಕಳೆದುಕೊಂಡಿದ್ದಾನೆ. ಪರಿಣಾಮ ವಧು ಕೆಳಗೆ ಬಿದ್ದಿದ್ದಾಳೆ. ವರನ್ನು ಬೀಳುವಂತೆ ಬಾಗಿ ಬೀಳುವುದರಿಂದ ಸ್ವಲ್ಪದರಲ್ಲಿ ಪಾರಾಗಿದ್ದಾನೆ.  ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಅಪ್‌ಲೋಡ್ ಮಾಡಿದ್ದ ಈ ವೀಡಿಯೋವನ್ನು, 12. 6 ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದರು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮೋಸ ಮಾಡುವ ಗಂಡನನ್ನು ಕಂಡು ಹಿಡಿಯೋದು ಹೇಗೆ?
ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ: ಸಮಂತಾ ಬಾಳಲ್ಲಿ ನಿಜವಾಯ್ತು, ಆದ್ರೆ ರಶ್ಮಿಕಾ ಲೈಫಲ್ಲಿ ಸುಳ್ಳಾಗಲಿ ಅಂತಿರೋ ಫ್ಯಾನ್ಸ್!