ಲೈಂಗಿಕ ಕ್ರಿಯೆ ಉತ್ತುಂಗದಲ್ಲಿರುವಾಗ ಕಾಂಡೋಮ್ ತೆಗೆದ ವ್ಯಕ್ತಿಗೆ 4 ವರ್ಷ ಜೈಲು ಶಿಕ್ಷೆ!

By Chethan Kumar  |  First Published Jul 3, 2024, 5:29 PM IST

ಇಬ್ಬರು ಒಪ್ಪಿಕೊಂಡು ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾರೆ. ಆದರೆ ಆಕೆಗೆ ಅರಿವಿಲ್ಲದಂತೆ ಕಾಂಡೋಮ್ ತೆಗೆದು ಲೈಂಗಿಕ ಕ್ರಿಯೆ ನಡೆಸಿದ ವ್ಯಕ್ತಿಗೆ ಇದೀಗ 4 ವರ್ಷ ಜೈಲು ಶಿಕ್ಷೆ ನೀಡಲಾಗಿದೆ.
 


ಲಂಡನ್(ಜು.03) ಪರಿಚಯ ಸ್ನೇಹಕ್ಕೆ ತಿರುಗಿ ಆತ್ಮೀಯವಾಗಿದ್ದರು. ಇದರ ಸಮ್ಮತಿ ಲೈಂಗಿಕ ಕ್ರಿಯೆಗೆ ಇಬ್ಬರು ಒಪ್ಪಿಕೊಂಡಿದ್ದಾರೆ. ಆದರೆ ಕಾಂಡೋಮ್ ಬಳಸಬೇಕು ಎಂದು ಮಹಿಳೆ ಕಂಡೀಷನ್ ಹಾಕಿದ್ದಾಳೆ. ಈ ಷರತ್ತಿಗೆ ಒಕೆ ಎಂದಿದ್ದಾನೆ. ಆದರೆ ಲೈಂಗಿಕ ಕ್ರಿಯೆಯ ಉತ್ತುಂಗದಲ್ಲಿರುವಾಗ ಮಹಿಳೆಯ ಒಪ್ಪಿಗೆ ಇಲ್ಲದೆ ಈತ ಕಾಂಡೋಮ್ ತೆಗೆದಿದ್ದಾನೆ. ಬಳಿಕ ಲೈಂಗಿಕ ಕ್ರಿಯೆ ಮುಂದುವರಿಸಿದ್ದಾನೆ. ಇದರ ಪರಿಣಾಮ ಇದೀಗ 4 ವರ್ಷ 3 ತಿಂಗಳು ಜೈಲು ಶಿಕ್ಷೆಗೆ ಗುರಿಯಾದ ಘಟನೆ ಲಂಡನ್‌ನಲ್ಲಿ ನಡೆದಿದೆ.

ದಕ್ಷಿಣ ಲಂಡನ್ ನಿವಾಸಿ 39 ವರ್ಷದ ಗಯ್ ಮುಕೆಂಡಿ ಇದೀಗ ಜೈಲು ಪಾಲಾಗಿದ್ದಾನೆ. ಬ್ರಿಕ್ಸ್‌ಟಾನ್ ಮೂಲಕ ಮಹಿಳೆ ಜೊತೆ ಲೈಂಗಿಕ ಕ್ರಿಯೆಗೆ ಬಯಸಿದ್ದಾನೆ. ಈ ಕುರಿತು ಆಕೆಗೆ ಹೇಳಿದ್ದಾನೆ. ಮಹಿಳೆ ಕೂಡ ಲೈಂಗಿಕ ಕ್ರಿಯೆಗೆ ಒಪ್ಪಿಕೊಂಡಿದ್ದಾಳೆ. ಆದರೆ ಲೈಂಗಿಕ ಕ್ರಿಯೆಗ ಕಾಂಡೋಮ್ ಕಡ್ಡಾಯ ಎಂದು ಷರತ್ತು ಹಾಕಿದ್ದಾಳೆ. ಇಬ್ಬರು ಸಮ್ಮತಿ ಮೇರೆ ಲೈಂಗಿಕ ಕ್ರಿಯೆ ನಡೆಸಿದ್ದಾರೆ.

Tap to resize

Latest Videos

undefined

ಆದರೆ ಲೈಂಹಿಕ ಕ್ರಿಯೆ ವೇಳೆ ಮುಕೆಂಡಿ ಕಾಂಡೋಮ್ ತೆಗೆದಿದ್ದಾನೆ. ಲೈಂಗಿಕ ಕ್ರಿಯೆ ಉತ್ತುಂಗದಲ್ಲಿ ಮಹಿಳೆಗೆ ತಿಳಿಯಲಿಲ್ಲ. ಆದರೆ ಕ್ರಿಯೆ ಬಳಿಕ ಈತ ಕಾಂಡೋಮ್ ಹಾಕಿಲ್ಲ ಅನ್ನೋದು ಗೊತ್ತಾಗಿದೆ. ಪರಿಣಾಮ ಮಹಿಳೆ ಆಕ್ರೋಶಗೊಂಡಿದ್ದಾಳೆ. ಕಾಂಡೋಮ್ ಇಲ್ಲದ ಕ್ರಿಯೆ ಅಪಾಯಕಾರಿ ಎಂದು ಚೀರಾಡಿದ್ದಾಳೆ. ಬಳಿಕ ನೇರವಾಗಿ ಪೊಲೀಸರಿಗೆ ದೂರು ನೀಡಿದ್ದಾಳೆ.

ಸೆಕ್ಸ್‌ಗಾಗಿ ಪದೆ ಪದೇ ಫ್ಲೇವರ್ಡ್ ಕಾಂಡೋಮ್ ಬಳಸ್ತೀರಾ? ಅಪಾಯದ ಬಗ್ಗೆಯೂ ಇರಲಿ ಅರಿವು

ನನ್ನ ಸಮ್ಮತಿ ಇಲ್ಲದೆ ಕಾಂಡೋಮ್ ತೆಗೆದು ಲೈಂಗಿಕ ಕ್ರಿಯೆ ನಡೆಸಿದ್ದಾನೆ ಎಂದು ಮಹಿಳೆ ದೂರು ನೀಡಿದ್ದಾಳೆ. ಈ ಕುರಿತು ಸುದೀರ್ಘ ವಿಚಾರಣೆ ನಡೆದಿದಿ. ಪೊಲೀಸರು ತನಿಖೆ ನಡೆಸಿ ಸಾಕ್ಷ್ಯಗಳನ್ನು ಕಲೆ ಹಾಕಿದ್ದಾರೆ. ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಸಾಕ್ಷ್ಯಧಾರ, ಮುಕೆಂಡಿ ಆರೋಪಗಳನ್ನು ನಿರಾಕರಿಸಿದರೂ ಸಾಕ್ಷಿಗಳು ವಿರುದ್ಧವಾಗಿತ್ತು. ಎಲ್ಲಾ ಸಾಕ್ಷಿಗಳನ್ನು ಕ್ರೋಢಿಕರಿಸಿ ಎಪ್ರಿಲ್ ತಿಂಗಳಲ್ಲಿ ಇಂಗ್ಲೆಂಡ್ ಹಾಗೂ ವೇಲ್ಸ್‌ನ ಕ್ರೌನ್ ಕೋರ್ಟ್ ತೀರ್ಪು ಪ್ರಕಟಿಸಿತ್ತು. 

ಸಮ್ಮತಿಯ ಲೈಂಗಿಕ ಕ್ರಿಯೆ ಆಗಿದ್ದರೂ ಒಪ್ಪಿಗೆ ಇಲ್ಲದೆ ಕಾಂಡೋಮ್ ತೆಗೆದಿರುವುದು ಸಾಬೀತಾಗಿದೆ. ಇದು ಮಹಿಳೆ ಮೇಲೆ ಅತ್ಯಾಚಾರ ಎಸಗಿದಕ್ಕೆ ಸಮ ಎಂದು ಕೋರ್ಟ್ ಹೇಳಿದೆ. ಕಾಂಡೋಮ್ ಇಲ್ಲದ ಕ್ರಿಯೆಯಲ್ಲಿ ಮಹಿಳೆ ಹೆಚ್ಚು ಅಪಾಯ ಎದುರಿಸುತ್ತಾಳೆ. ಹೀಗಾಗೆ 4 ವರ್ಷ 3 ತಿಂಗಳ ಜೈಲು ಶಿಕ್ಷೆ ವಿಧಿಸಲಾಗುತ್ತಿದೆ ಎಂದು ಕೋರ್ಟ್ ತೀರ್ಪು ನೀಡಿತ್ತು.

ರಾಜ್ಯದ ಕಡಲತೀರದಲ್ಲಿ ರಾಶಿ ರಾಶಿ ಕಾಂಡೋಮ್ ಪ್ಯಾಕೇಟ್‌ಗಳು ಪತ್ತೆ
 

click me!