ಹುಡ್ಗೀರ ಸಹವಾಸನೇ ಬೇಡಾಂತ ಕಾರನ್ನೇ ಲವ್‌ ಮಾಡ್ತಿದ್ದಾನೆ ಈ ಭೂಪ, ಲೈಂಗಿಕ ಸಂಬಂಧಾನೂ ಇದ್ಯಂತೆ!

Published : Feb 21, 2023, 09:53 AM IST
ಹುಡ್ಗೀರ ಸಹವಾಸನೇ ಬೇಡಾಂತ ಕಾರನ್ನೇ ಲವ್‌ ಮಾಡ್ತಿದ್ದಾನೆ ಈ ಭೂಪ, ಲೈಂಗಿಕ ಸಂಬಂಧಾನೂ ಇದ್ಯಂತೆ!

ಸಾರಾಂಶ

ಪ್ರೀತಿ ಅದು ಯಾರ ಮೇಲಾದರೂ, ಯಾವಾಗ ಬೇಕಾದರೂ ಆಗಬಹುದು. ಆದ್ರೆ ಇಲ್ಲೊಬ್ಬನಿಗೆ ವ್ಯಕ್ತಿಯ ಮೇಲಲ್ಲ, ಕಾರಿನ ಮೇಲೆ ಸಿಕ್ಕಾಪಟ್ಟೆ ಪ್ರೀತಿಯಾಗಿದೆ. ಅದ್ರ ಜೊತೆ ಲೈಂಗಿಕ ಸಂಬಂಧಾನೂ ಇದ್ಯಂತೆ

ಕಾಲ ಬದಲಾಗುತ್ತಿದೆ. ಜೊತೆಗೆ ಸಂಬಂಧದ ಕುರಿತಾಗಿರುವ ಜನರ ಮನೋಭಾವ ಸಹ ವಿಚಿತ್ರವಾಗಿ ಪರಿವರ್ತನೆಗೊಳ್ಳುತ್ತಿದೆ. ಹಿಂದೆಲ್ಲಾ ಒಬ್ಬ ಗಂಡು, ಒಬ್ಬ ಹೆಣ್ಣು ಮದುವೆಯಾಗುತ್ತಿದ್ದರು. ಪುರುಷ ಹಾಗೂ ಮಹಿಳೆ ಪರಸ್ಪರ ಮದುವೆಯಾಗಿ ಲೈಂಗಿಕ ಕ್ರಿಯೆ ಯಲ್ಲಿ ತೊಡಗಿಕೊಂಡು ಮಕ್ಕಳನ್ನು ಪಡೆದು ಕುಟುಂಬವನ್ನು ಬೆಳೆಸಬಹುದಾಗಿದೆ. ಇದು ಸಮಾಜದಿಂದಲೇ ಅಂಗೀಕೃತಗೊಂಡಿರುವ ಸಂಬಂಧ. ಆದರೆ ಈಗ ಕಾಲ ಬದಲಾಗಿದೆ. ಹೆಣ್ಣು ಗಂಡು ಮದುವೆಯಾಗುವುದು ಹಾಗಿರಲಿ, ಹೆಣ್ಣು ಹೆಣ್ಣನ್ನೇ ಮದುವೆಯಾಗುವುದು, ಗಂಡು ಗಂಡನ್ನೇ ಮದುವೆಯಾಗುವುದು ಅಚ್ಚರಿಯ ವಿಷಯವಾಗಿ ಉಳಿದಿಲ್ಲ. ಮಾತ್ರವಲ್ಲ ಇದು ಜನಸಾಮಾನ್ಯರ ನಡುವೆಯೀಗ ಅಚ್ಚರಿಯ ವಿಷಯವಾಗಿಯೂ ಉಳಿದಿಲ್ಲ. 

ಇದೆಲ್ಲವನ್ನೂ ಬಿಟ್ಟು ರೋಬೋಟ್, ಕಂಪ್ಯೂಟರೈಸ್ಡ್‌ ವರ್ಷನ್ ವ್ಯಕ್ತಿ, ಹೋಲೋಗ್ರಾಮ್ (ವ್ಯಕ್ತಿಯ ಕಾಲ್ಪನಿಕ ರೂಪ), ಡಾಲ್‌ನ್ನು ಮದುವೆಯಾದವರೂ ಇದ್ದಾರೆ. ಆದರೆ ಇಲ್ಲೊಬ್ಬಾತ ತನ್ನ ಕಾರಿನ ಜೊತೆಯೇ ಸಂಬಂಧ ಇಟ್ಟುಕೊಂಡಿದ್ದಾನೆ. ಮಾತ್ರವಲ್ಲ ತಾನು ಕಾರನ್ನು ತುಂಬಾ ಗಾಢವಾಗಿ ಪ್ರೀತಿಸುತ್ತಿದ್ದು, ಲೈಂಗಿಕ ಸಂಬಂಧವನ್ನೂ ಹೊಂದಿರುವುದಾಗಿ ಹೇಳಿ ಎಲ್ಲರನ್ನೂ ದಿಗ್ಭ್ರಮೆಗೊಳಿಸಿದ್ದಾನೆ.

Weird Wedding: ಇಲ್ಲಿ ವರನಲ್ಲ, ಅವನ ಸಹೋದರಿ ಜೊತೆ ವಧು ಸಪ್ತಪದಿ ತುಳಿಯುತ್ತಾಳೆ !

ಪ್ರೀತಿಸೋ ಕಾರಿನ ಜೊತೆಗೆ ಲೈಂಗಿಕ ಸಂಬಂಧಾನೂ ಇದ್ಯಂತೆ!
ಮದುವೆಯ ಬಗ್ಗೆ ಪ್ರತಿಯೊಬ್ಬರೂ ಚಿತ್ರ-ವಿಚಿತ್ರವಾದ ಆಸಕ್ತಿ, ಅಭಿರುಚಿಯನ್ನು ಹೊಂದಿರುತ್ತಾರೆ. ಅವರಲ್ಲಿ ಕೆಲವರ ಆಸಕ್ತಿ ನಿಜವಾಗಿಯೂ ವಿಲಕ್ಷಣವಾಗಿದೆ ಅನಿಸಬಹುದು. ಅಂಥವರಲ್ಲೊಬ್ಬರು ನಥಾನಿಯಲ್‌. ಇವರು ತಮ್ಮ ಕಾರಿನೊಂದಿಗೇ ಸಂಬಂಧವನ್ನು ಇಟ್ಟುಕೊಂಡಿದ್ದಾರೆ. ನಥಾನಿಯಲ್ 'ಮೈ ಸ್ಟ್ರೇಂಜ್ ಅಡಿಕ್ಷನ್' ಎಂಬ ವೀಡಿಯೋನಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಕಾರು. ಪ್ರದರ್ಶನದಲ್ಲಿ ನಥಾನಿಯಲ್‌ ಕಾರಿನ ಜೊತೆಗೆ ತಮಗಿರುವ ವಿಚಿತ್ರ ಸಂಬಂಧದ ಬಗ್ಗೆ ತಮ್ಮ ತಂದೆಯ ಜೊತೆ ಹೇಳಿದರು. ಅವರು ಚೇಸ್ ಜೊತೆ ಆತ್ಮೀಯ ಸಂಬಂಧದಲ್ಲಿದ್ದಾರೆ ಎಂದು ತಿಳಿಸಿದರು.

ಆರಂಭದಲ್ಲಿ ನಥಾನಿಯಲ್ ತಂದೆ, ತಮ್ಮ ಮಗನ ಮಾತಿನಿಂದ ಅಚ್ಚರಿಗೊಂಡರು. ಕಾರಿನ ಕಡೆಗೆ ಅವನ ಆಕರ್ಷಣೆ ಯಾವಾಗ ಪ್ರಾರಂಭವಾಯಿತು ಎಂದು ಕೇಳಿದರು. ಚಿಕ್ಕವನಾಗಿದ್ದಾಗ ಮತ್ತು ಸ್ನೇಹಿತರನ್ನು ಮಾಡಲು ಹೆಣಗಾಡಿದಾಗ ಕಾರಿನೆಡೆಗೆ ಆಕರ್ಷಣೆ ಆರಂಭವಾಯಿತು ಎಂದು ನೆಥಾನಿಯಲ್ ತನ್ನ ತಂದೆಗೆ ಹೇಳಿದನು. 'ನಾನು ಪ್ರೌಢಾವಸ್ಥೆಗೆ ಬಂದ ನಂತರ ನಾನು ಆ ಭಾವನೆಗಳನ್ನು ಹೆಚ್ಚು ಹೆಚ್ಚು ಹೊಂದಲು ಪ್ರಾರಂಭಿಸಿದೆ ಮತ್ತು ಅದು ಲೈಂಗಿಕ ಭಾಗ ಮತ್ತು ಭಾವನಾತ್ಮಕವಾಗಿ ಮುಂದುವರಿಯಿತು' ಎಂದು ನಥಾನಿಯಲ್ ತಿಳಿಸಿದ್ದಾನೆ.

ಅರೆ..ಇದೆಂಥಾ ವಿಚಿತ್ರ, ಹುಡುಗರ ಸಹವಾಸಾನೇ ಬೇಡಾಂತ ಹಾಸಿಗೆಯನ್ನೇ ವರಿಸಿದ ಮಹಿಳೆ!

ನಥಾನಿಯಲ್ ಬಾಲ್ಯದಲ್ಲಿ ಒಂಟಿಯಾಗಿದ್ದರು ಎಂಬ ಅಂಶವನ್ನು ತಂದೆ ಒಪ್ಪುಕೊಂಡರು. ಆದರೆ ಕಾರುಗಳೊಂದಿಗೆ ಮನುಷ್ಯ ನಿಕಟ ಸಂಬಂಧವನ್ನು ಹೊಂದಲು ಸಾಧ್ಯವಿಲ್ಲ ಎಂಬುದನ್ನು ನಥಾನಿಯಲ್‌ಗೆ ಅರ್ಥ ಮಾಡಿಸಲು ಯತ್ನಿಸಿದರು. ಆದರೆ ನಥಾನಿಯಲ್ ತನ್ನ ಅಭಿಪ್ರಾಯವನ್ನು ಬಿಟ್ಟು ಕೊಡಲ್ಲಿಲ್ಲ. ಕಾರಿನೊಂದಿಗೆ ತಾನು ಭಾವನಾತ್ಮಕವಾಗಿ, ಲೈಂಗಿಕವಾಗಿಯೂ ಹೆಚ್ಚು ಆಪ್ತವಾಗಿರುವುದಾಗಿ ಹೇಳಿದನು.

ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಿದ ವೀಡಿಯೊಗೆ ಸಾಕಷ್ಟು ಕಾಮೆಂಟ್‌ಗಳು ಬಂದಿವೆ. ಕೆಲವರು ವ್ಯಕ್ತಿಯ ಪ್ರಾಮಾಣಿಕತೆಗೆ ಮೆಚ್ಚುಗೆ ಸೂಚಿಸಿದರೆ, ಕೆಲವರು ಇದೆಂಥಾ ವಿಚಿತ್ರ ಎಂದು ಹೇಳಿದ್ದಾರೆ. ಮತ್ತೂ ಹಲವರು ಕಾರಿನೊಂದಿಗೆ ಸಂಬಂಧ ಇಟ್ಟುಕೊಳ್ಳುವುದು ತುಂಬಾ ಅಸಹ್ಯಕರವಾಗಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. 'ಅವನು ತನ್ನ ಕಾರಿನೊಂದಿಗೆ ಗಂಭೀರವಾದ ಸಂಬಂಧವನ್ನು ಹೊಂದಿರುವುದು ಮಾತ್ರವಲ್ಲ, ಅದು ಪುರುಷ ಕಾರು ಮತ್ತು ಅವನು ಅದರ ಲಿಂಗವನ್ನು ಪುರುಷ ಎಂದು ಸ್ಪಷ್ಟವಾಗಿ ಹೇಳುತ್ತಾನೆ ಎಂಬ ಅಂಶವನ್ನು ನಾನು ಪ್ರೀತಿಸುತ್ತೇನೆ' ಎಂದು ಹೇಳಿದ್ದಾರೆ.

ಮದುವೆಗೆ ಮೊದಲೇ ಮಕ್ಕಳನ್ನು ಹೆರಬೇಕು! ಬುಡಕಟ್ಟು ಜನಾಂಗದಲ್ಲಿದೆ ವಿಚಿತ್ರ ಸಂಪ್ರದಾಯ

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Abhishek Bachchan: ಮಗಳು ಆರಾಧ್ಯಾ ಗೂಗಲ್‌ನಲ್ಲಿ ಈ ಡಿವೋರ್ಸ್ ಸುದ್ದಿ ಓದಿದರೇ ಏನಾಗುವುದೋ ಏನೋ..!?
40 ದಿನಗಳಲ್ಲಿ 150 ಮದುವೆ ಕ್ಯಾನ್ಸಲ್, ಸೋಶಿಯಲ್ ಮೀಡಿಯಾ ವಿಲನ್